ಪ್ರಕಟನೆಗಳು
▪ ಸಾಹಿತ್ಯ ನೀಡುವಿಕೆಗಳು
ದಶಂಬರ: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ರೂ. 40ರ ಕಾಣಿಕೆಗೆ. ಇದು ಎಲ್ಲಿ ಲಭ್ಯವಿಲ್ಲವೊ ಅಲ್ಲಿ, ಮೈ ಬುಕ್ ಆಫ್ ಬೈಬಲ್ ಸ್ಟೋರಿಸ್ ಯಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ರೂ. 40ರ ಕಾಣಿಕೆಗೆ ನೀಡಸಾಧ್ಯವಿದೆ (ಸದಾ ಜೀವಿಸಬಲ್ಲಿರಿ ಪುಸ್ತಕದ ಚಿಕ್ಕ ಸೈಜ್ ರೂ. 20ರ ಕಾಣಿಕೆಗೆ).
ಜನವರಿ: ದೇವರು ನಿಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರ್ ರೂ. 4ರ ಕಾಣಿಕೆಗೆ. ಇದು ದೊರೆಯದಿದ್ದಲ್ಲಿ, ಹಳೆಯ 192 ಪುಟ ಪುಸ್ತಕಗಳ ವಿಶೇಷ ನೀಡಿಕೆಯನ್ನು ರೂ. 6ರ ಕಾಣಿಕೆಗೆ ಮಾಡಸಾಧ್ಯವಿದೆ. ಈ ವಿಭಾಗದಲ್ಲಿ ಕೆಳಗೆ ಸೂಚಿಸಲಾದ ಪುಸ್ತಕಗಳು ನಮ್ಮಲ್ಲಿವೆ: ಇಂಗ್ಲಿಷ್: ಡಿಡ್ ಮ್ಯಾನ್ ಗೆಟ್ ಹೀಯರ್ ಬೈ ಎವಲ್ಯೂಷನ್ ಆರ್ ಬೈ ಕ್ರಿಯೇಷನ್? ಮತ್ತು ಈಸ್ ದಿಸ್ ಲೈಫ್ ಆಲ್ ದೇರ್ ಈಸ್? ಗುಜರಾಥಿ: ಗುಡ್ ನ್ಯೂಸ್—ಟು ಮೇಕ್ ಯೂ ಹ್ಯಾಪಿ, “ಲೆಟ್ ಯೂವರ್ ಕಿಂಗ್‌ಡಮ್ ಕಮ್” ಮತ್ತು ದ ಟ್ರುಥ್ ದ್ಯಾಟ್ ಲೀಡ್ಸ್ ಟು ಇಟರ್ನಲ್ ಲೈಫ್; ಹಿಂದಿ: ಗುಡ್ ನ್ಯೂಸ್—ಟು ಮೇಕ್ ಯೂ ಹ್ಯಾಪಿ, ಮತ್ತು “ಲೆಟ್ ಯೂವರ್ ಕಿಂಗ್‌ಡಮ್ ಕಮ್”; ಕನ್ನಡ: ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆ, “ನಿನ್ನ ರಾಜ್ಯವು ಬರಲಿ,” ಮತ್ತು “ದೇವರು ಸುಳ್ಳಾಡ ಸಾಧ್ಯವಿರದ ವಿಷಯಗಳು”; ಮರಾಠಿ: “ಲೆಟ್ ಯೂವರ್ ಕಿಂಗ್‌ಡಮ್ ಕಮ್,” ಮತ್ತು ಲಿಸನಿಂಗ್ ಟು ದ ಗ್ರೇಟ್ ಟೀಚರ್; ತಮಿಳು: ಈಸ್ ದಿಸ್ ಲೈಫ್ ಆಲ್ ದೇರ್ ಈಸ್? ಮತ್ತು “ಲೆಟ್ ಯೂವರ್ ಕಿಂಗ್‌ಡಮ್ ಕಮ್”; ತೆಲುಗು: ಈಸ್ ದಿಸ್ ಲೈಫ್ ಆಲ್ ದೇರ್ ಈಸ್? ಮತ್ತು ಮೇಕಿಂಗ್ ಯುವರ್ ಫ್ಯಾಮಿಲಿ ಲೈಫ್ ಹ್ಯಾಪ್ಪಿ. ಬಂಗಾಲಿ ಯಾ ನೆಪಾಲಿ ಭಾಷೆ ಗೊತ್ತಿರುವ ವ್ಯಕ್ತಿಗಳಿಗೆ ನಮ್ಮ ಸಮಸ್ಯೆಗಳು ಬ್ರೋಷರನ್ನು ಮತ್ತು ಪಂಜಾಬಿ ಗೊತ್ತಿರುವ ವ್ಯಕ್ತಿಗಳಿಗೆ “ಇಗೋ!” ಬ್ರೋಷರನ್ನು ನೀಡಸಾಧ್ಯವಿದೆ. ಮಲೆಯಾಳಂ ಭಾಷೆಯಲ್ಲಿ ಯೂವರ್ ಯೂತ್—ಗೆಟ್ಟಿಂಗ್ ದ ಬೆಸ್ಟ್ ಔಟ್ ಆಫ್ ಇಟ್! ಎಂಬ ಪುಸ್ತಕವನ್ನು ರೂ. 12ರ ಕಾಣಿಕೆಗೆ ನೀಡಸಾಧ್ಯವಿದೆ. ಈ ಪುಸ್ತಕವು ವಿಶೇಷ ದರದಲ್ಲಿ ನೀಡಲ್ಪಡಬಾರದೆಂದು ದಯವಿಟ್ಟು ಗಮನಿಸಿರಿ.
ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ. ದೊಡ್ಡ ಸೈಜ್ ರೂ. 40ರ ಕಾಣಿಕೆಗೆ ಮತ್ತು ಚಿಕ್ಕ ಸೈಜ್ ರೂ. 20ರ ಕಾಣಿಕೆಗೆ ನೀಡಬಹುದು.
ಮಾರ್ಚ್: ಕ್ವೆಸ್ಟ್ಯನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದ್ಯಾಟ್ ವರ್ಕ್ (ಅದು ಇಂಗ್ಲಿಷ್, ಮಲೆಯಾಳಂ ಮತ್ತು ತಮಿಳು ಭಾಷೆಗಳಲ್ಲಿ ದೊರೆಯುತ್ತದೆ) ರೂ. 20ರ ಕಾಣಿಕೆಗೆ ನೀಡಸಾಧ್ಯವಿದೆ. ಇದು ಎಲ್ಲಿ ಲಭ್ಯವಿಲ್ಲವೊ ಅಲ್ಲಿ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ರೂ. 40ರ ಕಾಣಿಕೆಗೆ ನೀಡಸಾಧ್ಯವಿದೆ (ಚಿಕ್ಕ ಸೈಜ್ ರೂ. 20.00). ಇದಕ್ಕೆ ಕೂಡಿಸಿ ಹಳೆಯ 192 ಪುಟ ಪುಸ್ತಕಗಳ ವಿಶೇಷ ನೀಡಿಕೆಯನ್ನು ರೂ. 6ರ ಕಾಣಿಕೆಗೆ ಮಾಡಸಾಧ್ಯವಿದೆ.
ಸೂಚ: ಯಾವ ಸಭೆಗಳು ಮೇಲೆ ಸೂಚಿಸಲಾದ ಕ್ಯಂಪೇನ್ ಸಾಹಿತ್ಯಗಳನ್ನು ಇನ್ನೂ ಆರ್ಡರ್ ಮಾಡಿಲ್ಲವೋ, ಆ ಸಭೆಗಳು ಅವುಗಳ ಮುಂದಿನ ಲಿಟರೇಚರ್ ಆರ್ಡರ್ ಫಾರ್ಮಿನಲ್ಲಿ (S-14) ಆರ್ಡರ್ ಮಾಡತಕ್ಕದ್ದು.
▪ ದಶಂಬರ 1 ಯಾ ಅದರ ಅನಂತರ ಆದಷ್ಟು ಬೇಗನೆ ಸಭೆಯ ಅಕೌಂಟ್ಸ್‌ನ್ನು ಅಧ್ಯಕ್ಷ ಮೇಲ್ವಿಚಾರಕನಾಗಲಿ ಯಾ ಅವನಿಂದ ನೇಮಿತನಾದವನಾಗಲಿ ಲೆಕ್ಕ ತಪಾಸಣೆ (ಆಡಿಟ್) ಮಾಡತಕ್ಕದ್ದು. ಇದನ್ನು ಮಾಡಿಯಾದ ಮೇಲೆ ಸಭೆಗೊಂದು ಪ್ರಕಟನೆಯನ್ನು ಮಾಡಿರಿ.
▪ ಇಸವಿ 1995 ಕ್ಕಾಗಿರುವ ಸ್ಮಾರಕಾಚರಣೆಯು ಏಪ್ರಿಲ್ 14, ಶುಕ್ರವಾರ, ಸೂರ್ಯಾಸ್ತಮಾನದ ಅನಂತರ ಆಚರಿಸಲಾಗುವುದು. ಸಭಾಮಂದಿರಗಳ ಸೌಕರ್ಯಗಳ ಆವಶ್ಯಕತೆ ಇರುವುದಾದರೆ ಲಭ್ಯವಿರುವ ಸಭಾಮಂದಿರಗಳ ಬೇಕಾದ ಕಾದಿರಿಸುವಿಕೆಯನ್ನು ಸಹೋದರರು ಮಾಡಬಹುದು ಎಂಬ ಕಾರಣದಿಂದ 1995ರ ಸ್ಮಾರಕಾಚರಣೆಯ ತಾರೀಖಿನ ಈ ಮುಂಗಡ ಸೂಚನೆ ನೀಡಲಾಗುತ್ತಿದೆ.
▪ ಎಲ್ಲಾ ಪಾವತಿಗಳು ನಮಗೆ ಲೊನಾವ್ಲಾ ದಲ್ಲಿ ಪಾವತಿ ಮಾಡಬಹುದಾದ ಅಕೌಂಟ್ ಪೇಯಿ ಡಿಮಾಂಡ್ ಡ್ರಾಫ್ಟ್ ಮೂಲಕ ಕಳುಹಿಸಲ್ಪಡಬೇಕು. ಇಂಥ ಡ್ರಾಫ್ಟ್‌ಗಳನ್ನು ಒದಗಿಸಬಲ್ಲ ಬ್ಯಾಂಕ್‌ಗಳು: ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ವಿಜಯಾ ಬ್ಯಾಂಕ್, ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದ ಖಂಡಾಲಾ ಶಾಖೆಯ ಮೂಲಕ ಹೊರಡಿಸಲಾದ ಡಿಮಾಂಡ್ ಡ್ರಾಫ್ಟ್ ಕೂಡ ಅಂಗೀಕಾರಾರ್ಹ.
▪ ನಮ್ಮೊಂದಿಗೆ ಪತ್ರವ್ಯವಹಾರ ಮಾಡುವಾಗ, ನೀವು ಕ್ವಾರ್ಟೊ ಹಾಳೆಯನ್ನು (8 1⁄2” x 11”) ಅಥವಾ A4 ಸೈಜ್ ಹಾಳೆಯನ್ನು (8 1⁄4” x 11 1⁄2”) ಉಪಯೋಗಿಸುವುದಾದರೆ, ನಾವು ಅದನ್ನು ಗಣ್ಯಮಾಡುವೆವು. ಬೇರೆ ಮಾತುಗಳಲ್ಲಿ, ವಾಚ್‌ಟವರ್ ಸೊಸೈಟಿಯ ಲೆಟರ್ ಹೆಡ್ ನಂತಹ ಅದೇ ಸೈಜಿನ ಹಾಳೆಯನ್ನು ಯಾ ಆ ಸೈಜಿಗೆ ಸಾಧ್ಯವಾದಷ್ಟು ನಿಕಟವಾದ ಹಾಳೆಯನ್ನು ಉಪಯೋಗಿಸುವಂತೆ ನಾವು ವಿನಂತಿಸಿಕೊಳ್ಳುತ್ತಾ ಇದ್ದೇವೆ. ಹಾಳೆಯ ವಿಭಿನ್ನ ಸೈಜ್‌ಗಳಲ್ಲಿ ನಾವು ಪಡೆಯುವ ಪತ್ರಗಳನ್ನು ಫೈಲ್ ಮಾಡುವಾಗ ನಾವು ಎದುರಿಸುವ ಸಮಸ್ಯೆಯನ್ನು ಇದು ತೆಗೆದುಹಾಕುವುದು.
▪ ಇದಕ್ಕೆ ಜೊತೆಯಾಗಿ, ಟಪಾಲನ್ನು ಸೊಸೈಟಿಗೆ ಕಳುಹಿಸುವಾಗ, ಬಲವಾದ ಲಕೋಟೆಗಳನ್ನು ದಯವಿಟ್ಟು ಉಪಯೋಗಿಸಿರಿ. ಸಭೆಗಳು ಅನೇಕ ವೇಳೆ ಟಪಾಲನ್ನು, ಡಿಮಾಂಡ್ ಡ್ರಾಫ್ಟ್‌ಗಳನ್ನು ಸೇರಿಸಿ, ಬಹಳ ತೆಳುವಾದ ಹಾಳೆಯಿಂದ ಮಾಡಲಾದ ಲಕೋಟೆಯಲ್ಲಿ ಕಳುಹಿಸುತ್ತವೆ. ಹೀಗೆ ಅವು ಲೊನಾವ್ಲಾವನ್ನು ತಲಪುವ ಸಮಯದೊಳಗೆ, ಶೋಚನೀಯ ಸ್ಥಿತಿಯಲ್ಲಿ ಇರುತ್ತವೆ. ಕೆಲವೊಮ್ಮೆ ನಮಗೆ ಲಕೋಟೆಯನ್ನು ಕೊಡುವ ಮುಂಚೆ ಅದರ ಎಲ್ಲಾ ಒಳವಿಷಯವನ್ನು ಒಂದು ದಾರದಿಂದ ಕಟ್ಟುವಷ್ಟು ದಯೆಯನ್ನು ಪೋಸ್ಟ್ ಆಫೀಸಿನವರು ತೋರಿಸಿದ್ದಾರೆ.
▪ ಮತ್ತು ಕೊನೆಯದಾಗಿ, ನೀವು ತಕ್ಕಷ್ಟು ಅಂಚೆಯ ಹಾಸಲನ್ನು ಅಂಟಿಸಿದ್ದೀರೊ ಎಂಬುದನ್ನು ದಯವಿಟ್ಟು ಪರೀಕ್ಷಿಸಿರಿ. ತಕ್ಕಷ್ಟು ಅಂಚೆಯ ಹಾಸಲು ಇಲ್ಲದ ಯಾ ಯಾವುದೇ ಅಂಚೆಯ ಹಾಸಲು ಇಲ್ಲದ ಲಕೋಟೆಗಳನ್ನು ನಾವು ಪಡೆಯುವುದರಿಂದ ಅನೇಕ ವೇಳೆ ಇಮ್ಮಡಿ ಅಂಚೆಯ ಹಾಸಲನ್ನು ಕೊಡಬೇಕಾಗುತ್ತದೆ.
▪ ಇಸವಿ 1992ರ ದ ವಾಚ್‌ಟವರ್ ಮತ್ತು ಎವೇಕ್! ಪತ್ರಿಕೆಗಳಿಗಾಗಿ ಕಟ್ಟು ಹಾಕಲಾದ ಸಂಪುಟಗಳು ಈಗ ಲಭ್ಯವಿವೆ ಮತ್ತು ಇವುಗಳನ್ನು ನಮ್ಮಿಂದ ಆರ್ಡರ್ ಮಾಡಬಹುದು. ಅಂತಹ ಸಂಪುಟಗಳಿಗೆ ಒಂದು ‘ಸ್ಟ್ಯಾಂಡಿಂಗ್ ಆರ್ಡರನ್ನು’ ಇರಿಸಲು ಸಭೆಗಳು ಬಯಸಿದರೆ, ಅವರು ಹಾಗೆ ಮಾಡಬಹುದು. ಅವರು ಸಂಪುಟಗಳನ್ನು ಪ್ರತಿ ವರ್ಷ, ಅವುಗಳನ್ನು ಮತ್ತೆ ಆರ್ಡರ್ ಮಾಡದೆ ಪಡೆಯುವರು ಎಂಬುದನ್ನು ಇದು ಖಚಿತಪಡಿಸುವುದು.
▪ ಹಿಂದಿ, ಮರಾಠಿ ಮತ್ತು ನೆಪಾಲಿ ಭಾಷೆಗಳಲ್ಲಿ, ಪ್ರತಿನಿತ್ಯ ಶಾಸ್ತ್ರವಚನಗಳನ್ನು ಪರಿಶೀಲಿಸುವುದು—1994, ಪುಸ್ತಿಕೆಯ ಮುದ್ರಣವನ್ನು, ಆಡಳಿತ ಮಂಡಲಿಯು ಒಪ್ಪಿದೆ ಎಂಬುದನ್ನು ತಿಳಿಸಲು ನಾವು ಸಂತೋಷಿಸುತ್ತೇವೆ. ಈಗಾಗಲೇ ಹಾಗೆ ಮಾಡದೆ ಇದ್ದಲ್ಲಿ, ಎಲ್ಲಾ ಸಭೆಗಳು ತಮ್ಮ ಆರ್ಡರ್‌ಗಳನ್ನು ಕೂಡಲೇ ಕಳುಹಿಸಬೇಕೆಂದು ನಾವು ಬಯಸುತ್ತೇವೆ.
▪ ಮತ್ತೆ ದೊರೆಯುವ ಪ್ರಕಾಶನಗಳು:
ಇಂಗ್ಲಿಷ್: ಜೆಹೋವಾಸ್ ವಿಟ್ನೆಸೆಸ್ಸ್ ಇನ್ ದ ಟ್ವೆಂಟಿಯತ್ ಸೆಂಚುರಿ; ಹಿಂದಿ: ದೇರ್ ಈಸ್ ಮಚ್ ಮೋರ್ ಟು ಲೈಫ್.
▪ ದೊರೆಯುವ ಹೊಸ ಪ್ರಕಾಶನಗಳು:
ಕೊಂಕಣಿ ಮತ್ತು ನೆಪಾಲಿ: ಡಸ್ ಗಾಡ್ ರಿಯಲಿ ಕೇರ್ ಅಬೌಟ್ ಅಸ್?