ಸಕಾರಾತ್ಮಕ ಮನೋಭಾವವನ್ನಿಡಿರಿ
1 ಅನೇಕ ದೇಶಗಳಲ್ಲಿ ಬೆರಗುಗೊಳಿಸುವ ಅಭಿವೃದ್ಧಿಯಾಗುವಿಕೆಯ ಕುರಿತು ಓದಲು ನಾವು ಎಷ್ಟೊಂದು ರೋಮಾಂಚಿತರಾಗುತ್ತೇವೆ! ಆದರೂ, ಕೆಲವು ಕ್ಷೇತ್ರಗಳಲ್ಲಿ ರಾಜ್ಯ ಪ್ರಚಾರಕರು ನಮ್ಮ ಸಾರುವಿಕೆಗೆ ಅನೇಕ ಬಾರಿ ನಿರಾಸಕ್ತಿ, ಅನಾದರ, ಯಾ ನೇರ ಪ್ರತಿಭಟನೆಯನ್ನು ಕೂಡ ಎದುರಿಸುತ್ತಾರೆ ಎಂದು ನಾವು ಅರಿಯುತ್ತೇವೆ. ನಮ್ಮ ಟೆರಿಟೊರಿಯಲ್ಲಿ ವಿಷಯವು ಹೀಗಿರುವಲ್ಲಿ ನಾವು ಹೇಗೆ ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳಬಲ್ಲೆವು? ಶಿಷ್ಯರನ್ನಾಗಿ ಮಾಡುವುದಕ್ಕಾಗಿರುವ ನಮ್ಮ ಆಸಕ್ತಿಯನ್ನು ಕುಗ್ಗಿಸುವ ಯಾ ನಮ್ಮ ಸಂತೋಷವನ್ನು ಅಪಹರಿಸುವ ನಕಾರಾತ್ಮಕ ಮನೋಭಾವವನ್ನು ನಾವು ಹೇಗೆ ತಡೆಯಬಲ್ಲೆವು?
2 ನಮ್ಮ ಸಮತೂಕವನ್ನು ಕಾಪಾಡಿಕೊಳ್ಳಲು ಒಂದು ಸಕಾರಾತ್ಮಕ ಮನೋಭಾವವು ಸಹಾಯಿಸುವುದು. ಕಷ್ಟಕರ ಪರಿಸ್ಥಿತಿಗಳಲ್ಲಿಯೂ, ನಕಾರಾತ್ಮಕ ಆಲೋಚನೆಗಳು ನಮ್ಮ ಹೊರನೋಟವನ್ನು ಆಳುವಂತೆ ನಾವು ಬಿಡಬಾರದು. ಯೇಸುವು ನಮಗಾಗಿ ಪರಿಪೂರ್ಣ ಮಾದರಿಯನ್ನು ಇಟ್ಟನು. ಅವನು ಕಲಿಸಿದ್ದನ್ನು ಸಾಪೇಕ್ಷವಾಗಿ ಕೆಲವೇ ಜನರು ಸ್ವೀಕರಿಸಿದರು. ಅವನ ಬೋಧನೆಯ ಮೇಲೆ ಅನೇಕರು ಮುಗ್ಗರಿಸಿದರು. ಅವನ ತಾಳ್ಮೆಯನ್ನು ತೀಕ್ಷೈವಾಗಿ ಪರೀಕ್ಷಿಸಿದ್ದ ಪರಿಸ್ಥಿತಿಗಳನ್ನು ಅವನು ಎದುರಿಸಿದನು. ಧಾರ್ಮಿಕ ಮುಖಂಡರು ಅವನ ಕೆಲಸವನ್ನು ಖಂಡಿಸಿದರು ಮತ್ತು ಅವನನ್ನು ಕೊಲ್ಲಲು ಒಳಸಂಚು ಮಾಡಿದರು. ಅವನ ಮೇಲೆ ಉಗುಳಲಾಯಿತು, ಮುಖದ ಮೇಲೆ ಏಟು ತಿಂದನು, ಅಪಹಾಸ್ಯಕ್ಕೊಳಗಾದನು, ಹೊಡೆಯಲ್ಪಟ್ಟನು, ಮತ್ತು ಕಟ್ಟಕಡೆಗೆ ಮರಣಕ್ಕೆ ಒಪ್ಪಿಸಲ್ಪಟ್ಟನು. ಆದರೂ, ತಾನು ಮಾಡುವ ಕೆಲಸದಲ್ಲಿ ಅವನು ಸಂತೋಷವನ್ನು ಕಂಡುಕೊಂಡನು. ಯಾಕೆ? ಅವನು ದೇವರ ಚಿತ್ತವನ್ನು ಮಾಡುವ ಪ್ರಮುಖತೆಯನ್ನು ಗುರುತಿಸಿದನು, ಮತ್ತು ಅವನದನ್ನು ಬಿಟ್ಟುಕೊಡಲಿಲ್ಲ.—ಯೋಹಾನ 4:34; 13:17; ಇಬ್ರಿ. 12:2.
3 ನಮ್ಮ ಶುಶ್ರೂಷೆಯ ಯೋಗ್ಯ ಮನೋಭಾವವನ್ನು ಕಾಪಾಡಿಕೊಳ್ಳಿರಿ: ಇದನ್ನು ಮಾಡಲು, ನಾವು ಅನೇಕ ಅಂಶಗಳನ್ನು ಮನಸ್ಸಿನಲ್ಲಿ ಇಡುವ ಅಗತ್ಯವಿದೆ. ಹೆಚ್ಚಿನ ಜನರು ಕಡೆಗಣಿಸುವ ಯಾ ವಿರೋಧಿಸುವ ಸಂದೇಶವನ್ನು ನಾವು ಹೊಂದಿರುತ್ತೇವೆಂದು ಜ್ಞಾಪಕದಲ್ಲಿಡಿರಿ. (ಮತ್ತಾ. 13:14, 15) ಯೇಸುವಿನ ಹೆಸರಿನಲ್ಲಿ ಬೋಧಿಸುವುದನ್ನು ನಿಲ್ಲಿಸಬೇಕೆಂದು ಅಪೊಸ್ತಲರು ಅಧಿಕಾರಯುಕ್ತವಾಗಿ ಆಜ್ಞಾಪಿಸಲ್ಪಟಿದ್ಟರ್ದೂ, ಅವರು ತಮ್ಮ ಸಾರುವ ಆಜೆಗ್ಞೆ ನಂಬಿಗಸ್ತರಾಗಿ ಉಳಿದರು, ಮತ್ತು ಕೊಯ್ಲು ಸಂಗ್ರಹವಾಗುತ್ತಲಿತ್ತು. (ಅ. ಕೃತ್ಯಗಳು 5:28, 29; 6:7) ಕೆಲವು ಟೆರಿಟೊರಿಗಳಲ್ಲಿ ತುಲನಾತ್ಮಕವಾಗಿ ಕೇವಲ ಕೆಲವು ಜನರು ಆಲಿಸುವರು ಎಂದು ನಾವು ಮುಂಚೆಯೆ ತಿಳಿದಿದ್ದೇವೆ. (ಮತ್ತಾ. 7:14) ಆದುದರಿಂದ, ಕೇವಲ ಒಬ್ಬನೇ ಒಬ್ಬ ವ್ಯಕ್ತಿ ನಮ್ಮ ಸಂದೇಶಕ್ಕೆ ಕಿವಿಗೊಡುವಲ್ಲಿ ನಾವು ಸಂತೋಷಿಸಲು ಕಾರಣವಿದೆ. ವಿರೋಧಿಸುವವರಿಗೆ ಕೂಡ ಕೇಳಲು ಸಂದರ್ಭ ಕೊಡಬೇಕೆಂಬದನ್ನೂ ನೆನಪಿನಲ್ಲಿಡಿರಿ. (ಯೆಹೆ. 33:8) ಕೆಲವು ವಿರೋಧಿಗಳು ಕಟ್ಟಕಡೆಗೆ ಬದಲಾಗುತ್ತಾರೆ ಮತ್ತು ಯೆಹೋವನ ಆರಾಧಕರಾಗುತ್ತಾರೆ. ಯೋಗ್ಯವಾಗಿ ವೀಕ್ಷಿಸಲ್ಪಟ್ಟಾಗ, ಕೆಲವರು ಮಾತ್ರ ಆಲಿಸುವಾಗಲೂ, ನಮ್ಮ ಶುಶ್ರೂಷೆಯು ನಮಗೆ ಪೂರೈಕೆಯ ಭಾವನೆಯನ್ನು ತರುತ್ತದೆ. ದೇವರ ರಾಜ್ಯದ ಸಂದೇಶದೊಂದಿಗೆ ಮನೆಬಾಗಿಲುಗಳಲ್ಲಿ ನಮ್ಮ ಇರವೇ ಒಂದು ಸಾಕ್ಷಿಯಾಗಿ ಇದೆ.—ಯೆಹೆ. 2:4, 5.
4 ನಮ್ಮ ಮನೋಭಾವದಲ್ಲಿ ಸಕಾರಾತ್ಮಕವಾಗಿ ಭಾವಿಸುವುದಕ್ಕೆ ಉತ್ತಮ ಕಾರಣ ನಮಗಿದೆ. ಲೋಕವ್ಯಾಪಕ ಕೆಲಸದ ಅಭಿವೃದ್ಧಿ ಮತ್ತು ಮಹಾ ಸಂಕಟದ ಹತ್ತಿರವಾಗುವಿಕೆಯ ಹೆಚ್ಚುತ್ತಿರುವ ರುಜುವಾತು ನಮ್ಮೆಲ್ಲರನ್ನು ದೇವಭಕ್ತಿಯೊಂದಿಗೆ ಸೇವಿಸುವುದರಲ್ಲಿ ನಮ್ಮಿಂದಾದಷ್ಟನ್ನು ಮಾಡುವಂತೆ ಪ್ರೇರೇಪಿಸಬೇಕು. (2 ಪೇತ್ರ 3:11, 14) ಆಗಸ್ಟ್ನಲ್ಲಿ ಹುರುಪಿನ ಚಟುವಟಿಕೆಯು ನಾವು ಕಲಿತಿರುವುದಕ್ಕೆ ನಮ್ಮ ಗಣ್ಯತೆಯನ್ನು ತೋರಿಸುವ ಒಂದು ಉತ್ತಮ ವಿಧಾನವಾಗಿರುವುದು. ಹೊಸತಾಗಿ ಸಹವಾಸಿಸುವವರು ಕೂಡ ತಾವು ಕಲಿಯುತ್ತಿರುವುದನ್ನು ಉಪಯೋಗಿಸುವುದರ ಮೂಲಕ ಸಕಾರಾತ್ಮಕ ಮನೋಭಾವವನ್ನು ತೋರಿಸುವಂತೆಯೂ ನಾವು ಬಯಸುತ್ತೇವೆ. ನಮ್ಮ ಬೈಬಲ್ ವಿದ್ಯಾರ್ಥಿಗಳಲ್ಲಿ ಕೆಲವರು ಅಸ್ನಾತ ಪ್ರಚಾರಕರಾಗಲು ತಯಾರಾಗುವಷ್ಟು ಬೆಳವಣಿಗೆ ಮಾಡಿರುವಲ್ಲಿ, ಅವರು ಆರಂಭಿಸುವವರಾಗಲು ಆಗಸ್ಟ್ ತಿಂಗಳು ಒಂದು ಅತ್ಯುತ್ತಮ ಸಮಯವಾಗಿರುವುದು.
5 ನಾವು ಪ್ರಚಾರಕರಾಗಿಯೆ ಸೇವಿಸಲಿ ಯಾ ಪಯನೀಯರರಾಗಿಯೆ ಸೇವಿಸಲಿ, ಯೆಹೋವನು ನಮ್ಮಿಂದ ಕೇಳಿಕೊಳ್ಳುವುದು ಭಾರವಾದುದಲ್ಲವೆಂಬುದನ್ನು ನಾವು ಮನಸ್ಸಿನಲ್ಲಿಡುವಲ್ಲಿ ನಮಗೆಲ್ಲರಿಗೆ ಸಹಾಯವಾಗುವುದು. (1 ಯೋಹಾನ 5:3) ಆತನು ನಮ್ಮನ್ನು ಪೋಷಿಸುವನೆಂದು ವಾಗ್ದಾನಿಸುತ್ತಾನೆ. (ಇಬ್ರಿ. 13:5ಬಿ, 6) ಸಾರ್ವಜನಿಕ ಅನಾದರ, ನಿರಾಸಕ್ತಿ, ಯಾ ಪ್ರತಿಭಟನೆಯಿದ್ದರೂ, ನಾವು ಸಕಾರಾತ್ಮಕವಾಗಿರಬೇಕು ಮತ್ತು ಸಾರುತ್ತಾ ಇರಬೇಕು ಯಾಕಂದರೆ ನಾವು ಹಾಗೆ ಮಾಡುವುದು ದೇವರ ಚಿತ್ತವಾಗಿದೆ.—1 ತಿಮೊ. 2:3, 4.