ದೇವಪ್ರಭುತ್ವ ವಾರ್ತೆಗಳು
(There is no corresponding article in English)
ಭಾರತ: ಎರಡು ವರುಷಗಳಲ್ಲಿ ಪುಸ್ತಕ ಮತ್ತು ಪತ್ರಿಕೆ ನೀಡುವಿಕೆಗಳಲ್ಲಿ ಮೊದಲ ಉಚ್ಚಾಂಕ ಮತ್ತು ಮೂರು ವರುಷಗಳಲ್ಲಿ ಚಂದಾಗಳಲ್ಲಿ ಮೊದಲ ಉಚ್ಚಾಂಕವನ್ನೊಳಗೂಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಉಚ್ಚಾಂಕದೊಂದಿಗೆ, ಎಪ್ರಿಲ್‌ನಲ್ಲಿ ಚಟುವಟಿಕೆಯ ಒಂದು ಅತ್ಯುತ್ತಮ ತಿಂಗಳು ನಮ್ಮದಾಗಿತ್ತು. ಹದಿನೈದು ತಿಂಗಳುಗಳಲ್ಲಿ (14,194) ಮೊತ್ತ ಪ್ರಚಾರಕರಲ್ಲಿ ನಮ್ಮ ಹನ್ನೆರಡನೆಯ ಉಚ್ಚಾಂಕವಲ್ಲದೆ, ಕ್ರಮದ ಪಯನೀಯರರ (818), ಮಾಡಲ್ಪಟ್ಟ ಪುನರ್ಭೇಟಿಗಳ (79,871), ಮತ್ತು ನಡೆಸಲ್ಪಟ್ಟ ಬೈಬಲ್ ಅಧ್ಯಯನಗಳ (12,963) ಸಂಖ್ಯೆಯಲ್ಲಿ ಹೊಸ ಎಲ್ಲಾ ಸಮಯದ ಉಚ್ಚಾಂಕಗಳು ಕೂಡ ಇದ್ದವು.
ಸಾಮಾನ್ಯವಾಗಿರುವಂತೆ, ಆಕ್ಸಿಲಿಯರಿ ಪಯನೀಯರರ ನಮ್ಮ ವಾರ್ಷಿಕ ಉಚ್ಚಾಂಕವು ಎಪ್ರಿಲ್‌ನಲ್ಲಿ ಬಂತು (1,801)—ಕಳೆದ ವರ್ಷಕ್ಕಿಂತ 41 ಪ್ರತಿಶತ ಹೆಚ್ಚು! ಶುಶ್ರೂಷೆಯಲ್ಲಿ ಕಳೆದ ತಾಸುಗಳು 3,33,489ಕ್ಕೆ ಏರಿದವು, ಕಳೆದ ಉಚ್ಚಾಂಕದ ಮೇಲೆ 18 ಪ್ರತಿಶತ ಅಭಿವೃದ್ಧಿ. ಪತ್ರಿಕೆ ಮತ್ತು ಪುಸ್ತಕ ನೀಡುವಿಕೆಗಳು 12 ಮತ್ತು 10 ಪ್ರತಿಶತದಿಂದ, ಅನುಕ್ರಮವಾಗಿ 1,33,292 ಮತ್ತು 7,838ಕ್ಕೆ ಏರಿದವು; 3,235 ಚಂದಾಗಳು ದೊರಕಿದವು, ಕಳೆದ ಉಚ್ಚಾಂಕದ ಮೇಲೆ 26 ಪ್ರತಿಶತ ಅಭಿವೃದ್ಧಿ ಮತ್ತು ಆ ತಿಂಗಳಲ್ಲಿ 71,998 ಪುಸ್ತಿಕೆಗಳು ನೀಡಲ್ಪಟ್ಟವು, ಕೇವಲ ಫೆಬ್ರವರಿಯಲ್ಲಿ ಸ್ಥಾಪಿಸಲಾದ ಕಳೆದ ಉಚ್ಚಾಂಕದ ಮೇಲೆ ಒಂದು ಅಚ್ಚರಿಗೊಳಿಸುವ 97 ಪ್ರತಿಶತ ಅಭಿವೃದ್ಧಿ!
ನಮ್ಮ ಜ್ಞಾಪಕದ ಹಾಜರಿಯು, 1994 ರಲ್ಲಿ, 38,192 ಆಗಿತ್ತು ಮತ್ತು ನಾಲ್ಕು ಮಂದಿ ಚಿಹ್ನೆಗಳಲ್ಲಿ ಭಾಗಿಗಳಾದರು. ಇದು ಕಳೆದ ವರ್ಷದ ಹಾಜರಿಯ ಮೇಲೆ 9.2 ಪ್ರತಿಶತ ಅಭಿವೃದ್ಧಿಯನ್ನು ಪ್ರತಿನಿಧೀಕರಿಸಿತು ಮತ್ತು ಪ್ರತಿಯೊಂದು ಸಭೆಯಲ್ಲಿ ಸರಾಸರಿ 79ರ ಹಾಜರಿಯನ್ನು ಪ್ರತಿನಿಧೀಕರಿಸಿತು.