ಪ್ರಕಟನೆಗಳು
▪ ಸಾಹಿತ್ಯ ನೀಡುವಿಕೆಗಳು
ಮಾರ್ಚ್: ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧ್ಯ ಉತ್ತರಗಳು (ಇಂಗ್ಲಿಷ್, ತಮಿಳು ಮತ್ತು ಮಲೆಯಾಳಂನಲ್ಲಿ ಲಭ್ಯವಿದೆ) ರೂ. 25ರ ಕಾಣಿಕೆಗೆ. ಇತರ ಭಾಷೆಗಳಲ್ಲಿ 192 ಪುಟಗಳ ಯಾವುದೇ ಹೊಸ ಪುಸ್ತಕಗಳನ್ನು ರೂ. 15ರ ಕ್ರಮವಾದ ಕಾಣಿಕೆಗೆ ನೀಡಬಹುದು.
ಎಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 70. ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾ ಮತ್ತು ಪಾಕ್ಷಿಕ ಮುದ್ರಣಗಳ ಆರು ತಿಂಗಳಿನ ಚಂದಾ ರೂ. 35. ಮಾಸಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾ ಇರುವುದಿಲ್ಲ.
ಜೂನ್: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೊ? (ಇಂಗ್ಲಿಷ್) ಪುಸ್ತಕವನ್ನು ರೂ. 45ರ ಕಾಣಿಕೆಗೆ ನೀಡಬಹುದು. ದೇಶೀಯ ಭಾಷೆಗಳಲ್ಲಿ ಯಾವುದೆ 192 ಪುಟದ ಪುಸ್ತಕವನ್ನು ರೂ. 15ರ ಕ್ರಮವಾದ ಬೆಲೆಗೆ ನೀಡಬಹುದು.
▪ ಜನವರಿ 1995 ರಿಂದ ಬಂಗಾಲಿ, ಗುಜರಾತಿ, ಹಿಂದಿ ಮತ್ತು ನೇಪಾಲಿ ಭಾಷೆಯ ಕಾವಲಿನಬುರುಜುಗಳ ನಿಯತಕಾಲಿಕತೆಯಲ್ಲಿ ಮಾಸಿಕದಿಂದ ಪಾಕ್ಷಿಕವಾಗುವ ಬದಲಾವಣೆಯಿಂದಾಗಿ, ಈ ಭಾಷೆಗಳಲ್ಲಿ ಈಗ ಮುಂದುವರಿಯುತ್ತಿರುವ ಚಂದಾಗಳು ನಿರೀಕ್ಷಿಸಲ್ಪಟ್ಟದಕ್ಕಿಂತ ಮುಂಚೆ ಮುಗಿಯುವವು. ಹೀಗಾದರೂ, ಚಂದಾದಾರರು ತಾವು ನಿರೀಕ್ಷಿಸುತ್ತಿರುವ ಸಂಚಿಕೆಗಳ ಪೂರ್ಣ ಸಂಖ್ಯೆಯನ್ನು ಪಡೆಯುವರು.
▪ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟವನೊಬ್ಬನು ಸಭೆಯ ಅಕೌಂಟ್ಸನ್ನು ಮಾರ್ಚ್ 1 ಯಾ ಅದರ ಅನಂತರ ಸಾಧ್ಯವಾದಷ್ಟು ಬೇಗನೇ ಲೆಕ್ಕ ತಪಾಸಣೆ (ಆಡಿಟ್) ಮಾಡಬೇಕು. ಇದನ್ನು ಮಾಡಿಯಾದ ಅನಂತರ ಸಭೆಯಲ್ಲಿ ಒಂದು ಪ್ರಕಟನೆಯನ್ನು ಮಾಡಿರಿ.