ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/95 ಪು. 3
  • ಮಳೆಗಾಲವು ಪುನಃ ಇಲ್ಲಿದೆ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಳೆಗಾಲವು ಪುನಃ ಇಲ್ಲಿದೆ!
  • 1995 ನಮ್ಮ ರಾಜ್ಯದ ಸೇವೆ
1995 ನಮ್ಮ ರಾಜ್ಯದ ಸೇವೆ
km 6/95 ಪು. 3

ಮಳೆಗಾಲವು ಪುನಃ ಇಲ್ಲಿದೆ!

(There is no corresponding article in English)

1 ಮಳೆಗಾಲವು ಬೇಸಿಗೆಯ ಉಷ್ಣದಿಂದ ಬಿಡುಗಡೆಯನ್ನು ತರುತ್ತದೆ, ಆದರೆ ಸಂಚರಿಸುವ ಮತ್ತು ಶುಶ್ರೂಷೆಯಲ್ಲಿ ಪಾಲನ್ನು ತೆಗೆದುಕೊಳ್ಳುವ ಸಂಬಂಧಿತ ಸಮಸ್ಯೆಗಳನ್ನು ಸಹ ತರುತ್ತದೆ. ಹಾಗಿದ್ದರೂ, ದೇವಪ್ರಭುತ್ವ ಚಟುವಟಿಕೆಗಳು ನಮ್ಮ ಆದ್ಯತೆಯ ಪಟ್ಟಿಯಲ್ಲಿನ ಅತ್ಯುನ್ನತ ಸ್ಥಾನದಲ್ಲೇ ಉಳಿಯಬೇಕೆಂಬುದನ್ನು ನಾವು ಸ್ವತಃ ಜ್ಞಾಪಕಮಾಡಿಕೊಳ್ಳುತ್ತಾ ಇರುವ ಆವಶ್ಯಕತೆಯಿದೆ. ಕ್ಷೇತ್ರ ಸೇವೆಯಲ್ಲಿ ಒಂದು ಕ್ರಮವಾದ ಪಾಲನ್ನು ತೆಗೆದುಕೊಳ್ಳಲು ಮತ್ತು ಅದು ಸಭೆಗೆ ತಡವಿಲ್ಲದೆ ವರದಿ ಮಾಡಲ್ಪಡುವುದನ್ನು ಖಚಿತಪಡಿಸಿಕೊಳ್ಳಲು ನಾವು ಇನ್ನೂ ಬಯಸುತ್ತೇವೆ. ಇದು ಮಳೆಗಾಲದ ಅವಧಿಯಲ್ಲಿ ಶುಶ್ರೂಷೆಗೆ ಸುಸಜ್ಜಿತರಾಗಿರುವುದನ್ನು, ಅಂದರೆ ಒಂದು ಒಳ್ಳೆಯ ಕೊಡೆ ಅಥವಾ ಮಳೆಯಂಗಿ ಮತ್ತು ಒಂದು ಜಲಾಭೇದ್ಯ ಸೇವಾ ಬ್ಯಾಗ್‌ನ್ನು ಹೊಂದಿರುವುದನ್ನು ಅವಶ್ಯಪಡಿಸುತ್ತದೆ. ಎಲ್ಲ ಸಮಯಗಳಲ್ಲಿ ಸಾಹಿತ್ಯದ ಕೆಲವು ತಕ್ಕದಾದ ಐಟಮ್‌ಗಳನ್ನು ನಾವು ತೆಗೆದುಕೊಂಡು ಹೋಗುವುದಾದರೆ, ಅನೌಪಚಾರಿಕ ಸೇವೆಯನ್ನು ಮಾಡಲು ಸಂದರ್ಭವು ಒದಗಿದಾಗ ಏನನ್ನಾದರೂ ನೀಡಲು ನಾವು ಶಕ್ತರಾಗಬಹುದು.

2 ಶಾಲೆಗೆ ಹಿಂದಿರುಗುವ ಯುವ ಜನರು ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿರುತ್ತಾ ಮುಂದುವರಿಯಲು ಜಾಗರೂಕರಾಗಿರುವ ಅಗತ್ಯವಿದೆ. ಬೈಬಲ್‌ ವಾಚನ ಮತ್ತು ಕೂಟಗಳಲ್ಲಿ ಪ್ರತಿ ವಾರ ಆವರಿಸಲ್ಪಡುವ ವಿಷಯಗಳನ್ನು ಒಳಗೊಳ್ಳುವ, ವೈಯಕ್ತಿಕ ಅಧ್ಯಯನದ ನಮ್ಮ ಕಾಲತಖ್ತೆಯನ್ನು ಕಾಪಾಡಿಕೊಳ್ಳಲು ನಾವೆಲ್ಲರು ಪ್ರಯತ್ನಿಸಬೇಕು. ಮಳೆಗಾಲದ ತಿಂಗಳುಗಳು ನಮ್ಮ ನಿಯತಕ್ರಮದಲ್ಲಿ ಬದಲಾವಣೆಯನ್ನು ತರಬಹುದಾದರೂ, ‘ಅಧಿಕ ಪ್ರಾಮುಖ್ಯವಾದ ಆತ್ಮಿಕ ವಿಷಯಗಳೊಂದಿಗೆ’ ಸಮಹೆಜ್ಜೆಹಾಕುವಂತೆ ನಾವು ಯಾವಾಗಲೂ ಬಯಸುತ್ತೇವೆ.—ಫಿಲಿ. 1:10.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ