ನೀವು ಯಾವ ವಿಧದ ವ್ಯಕ್ತಿಗಳಾಗಿರತಕ್ಕದ್ದು?
1 ಎಲ್ಲಾ ಮಾನವಕುಲಕ್ಕಾಗಿ ಲೆಕ್ಕತೆರುವ ಒಂದು ಸಮಯವು ಸಮೀಪಿಸುತ್ತಿದೆ. ಬೈಬಲ್ ಅದನ್ನು “ದೇವರ [“ಯೆಹೋವನ,” NW] ದಿನ” ವೆಂದು ಕರೆಯುತ್ತದೆ. ದುಷ್ಟರ ವಿರುದ್ಧ ದೈವಿಕ ನ್ಯಾಯತೀರ್ಪು ವಿಧಿಸಲ್ಪಡುವ ಸಮಯ ಅದಾಗಿದೆ; ಅದು ನೀತಿವಂತರಿಗೆ ವಿಮೋಚನೆಯ ಸಮಯವೂ ಆಗಿದೆ. ಆಗ ಜೀವಿಸುತ್ತಿರುವ ಎಲ್ಲಾ ವ್ಯಕ್ತಿಗಳು, ತಾವು ತಮ್ಮ ಜೀವಿತಗಳನ್ನು ಉಪಯೋಗಿಸಿರುವ ರೀತಿಯ ಕುರಿತಾಗಿ ಲೆಕ್ಕತೆರಬೇಕಾಗುವುದು. ಅದನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ, ಪೇತ್ರನು ಒಂದು ಶೋಧಿಸುವ ಪ್ರಶ್ನೆಯನ್ನು ಎಬ್ಬಿಸುತ್ತಾನೆ: “ನೀವು ಯಾವ ವಿಧದ ವ್ಯಕ್ತಿಗಳಾಗಿರತಕ್ಕದ್ದು?” ‘ನಡತೆಯ ಪವಿತ್ರ ಕಾರ್ಯಗಳು, ದೇವಭಕ್ತಿಯ ಕ್ರಿಯೆಗಳು, ಮತ್ತು ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಡುವುದನ್ನು,’ ಹಾಗೂ ‘ನಿಷ್ಕಳಂಕರೂ, ನಿರ್ದೋಷಿಗಳು, ಶಾಂತರೂ’ ಆಗಿರುವ ಪ್ರಾಮುಖ್ಯವನ್ನು ಅವನು ಒತ್ತಿಹೇಳುತ್ತಾನೆ.—2 ಪೇತ್ರ 3:11-14, NW.
2 ನಡತೆಯ ಪವಿತ್ರ ಕಾರ್ಯಗಳು ಮತ್ತು ದೇವಭಕ್ತಿಯ ಕ್ರಿಯೆಗಳು: ಬೈಬಲ್ ಸೂತ್ರಗಳಿಗಾಗಿ ಗೌರವವನ್ನು ತೋರಿಸುವ ಆದರ್ಶಪ್ರಾಯ ಕೆಲಸಗಳನ್ನು ಪವಿತ್ರ ನಡತೆಯು ಒಳಗೊಳ್ಳುತ್ತದೆ. (ತೀತ 2:7, 8) ಸ್ವಾರ್ಥ, ದೈಹಿಕ ಆಶೆಗಳಿಂದ ಪ್ರಚೋದಿಸಲ್ಪಟ್ಟಿರುವ ಲೌಕಿಕ ನಡತೆಯನ್ನು ಒಬ್ಬ ಕ್ರೈಸ್ತನು ವರ್ಜಿಸಬೇಕು.—ರೋಮಾ. 13:11, 14.
3 “ದೇವರ ಆಕರ್ಷಕ ಗುಣಗಳಿಗಾಗಿ ಆಳವಾದ ಗಣ್ಯತೆಯಿಂದ ಕೆರಳಿಸಲ್ಪಟ್ಟ ಒಂದು ಹೃದಯದಿಂದ ಹೊಮ್ಮುವ, ಆತನೊಂದಿಗಿನ ಒಂದು ವೈಯಕ್ತಿಕ ಅಂಟಿಕೆ” ಆಗಿ “ದೇವಭಕ್ತಿ” ಯನ್ನು ವರ್ಣಿಸಲಾಗಿದೆ. ಶುಶ್ರೂಷೆಯಲ್ಲಿ ನಮ್ಮ ಹುರುಪು, ನಾವು ಈ ಗುಣವನ್ನು ತೋರ್ಪಡಿಸುವ ಒಂದು ಗಮನಾರ್ಹ ವಿಧವಾಗಿದೆ. ಸಾರುವಿಕೆಯಲ್ಲಿ ನಮ್ಮ ಹೇತುವು ಒಂದು ಬರಿಯ ಕರ್ತವ್ಯಪ್ರಜ್ಞೆಯನ್ನು ಮೀರಿ ಹೋಗುತ್ತದೆ; ಅದು ಯೆಹೋವನಿಗಾಗಿ ಆಳವಾಗಿ ಬೇರೂರಿಸಲ್ಪಟ್ಟಿರುವ ಒಂದು ಪ್ರೀತಿಯಿಂದ ಹೊಮ್ಮುತ್ತದೆ. (ಮಾರ್ಕ 12:29, 30) ಅಂತಹ ಪ್ರೀತಿಯಿಂದ ಪ್ರಚೋದಿಸಲ್ಪಟ್ಟವರಾಗಿ, ನಮ್ಮ ಶುಶ್ರೂಷೆಯನ್ನು ನಾವು ನಮ್ಮ ದೇವಭಕ್ತಿಯ ಒಂದು ಅರ್ಥಭರಿತ ಅಭಿವ್ಯಕ್ತಿಯಾಗಿ ದೃಷ್ಟಿಸುತ್ತೇವೆ. ನಮ್ಮ ಭಕ್ತಿಯು ನಿರಂತರವಾಗಿರಬೇಕಾದುದರಿಂದ, ಸಾರುವ ಕಾರ್ಯದಲ್ಲಿ ನಮ್ಮ ಪಾಲು ಸುಸಂಗತವಾಗಿರಬೇಕು. ಅದು ನಮ್ಮ ಚಟುವಟಿಕೆಯ ಸಾಪ್ತಾಹಿಕ ಕಾರ್ಯತಖ್ತೆಯ ಒಂದು ಆವಶ್ಯಕವಾದ ಭಾಗವಾಗಿರಬೇಕು.—ಇಬ್ರಿ. 13:15.
4 ಯೆಹೋವನ ದಿನವನ್ನು “ಮನಸ್ಸಿನಲ್ಲಿ ನಿಕಟವಾಗಿಡುವುದು” ಎಂದರೆ, ಅದನ್ನು ಹಿನ್ನೆಲೆಯಲ್ಲಿ ಒಂದು ಕ್ಷುಲ್ಲಕ ಸ್ಥಾನಕ್ಕೆ ಎಂದೂ ತಳ್ಳಿಬಿಡದೆ, ಅದನ್ನು ನಮ್ಮ ದೈನಂದಿನ ವಿಚಾರಗಳಲ್ಲಿ ಅಗ್ರಗಣ್ಯವಾಗಿಡುವುದು ಎಂದಾಗಿದೆ. ರಾಜ್ಯಾಭಿರುಚಿಗಳನ್ನು ನಮ್ಮ ಜೀವಿತಗಳಲ್ಲಿ ಪ್ರಥವಾಗಿಡುವುದೆಂದು ಅದರರ್ಥ.—ಮತ್ತಾ. 6:33.
5 ನಿಷ್ಕಳಂಕರು, ನಿರ್ದೋಷಿಗಳು ಮತ್ತು ಶಾಂತರು: ಮಹಾ ಸಮೂಹದ ಭಾಗವಾಗಿ, ನಾವು ‘ಯಜ್ಞದ ಕುರಿಯಾದಾತನ ರಕ್ತದಲ್ಲಿ ನಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದೇವೆ.’ (ಪ್ರಕ. 7:14) ಹಾಗಾದರೆ, “ನಿಷ್ಕಳಂಕ” ರಾಗಿರುವುದೆಂದರೆ ನಮ್ಮ ಶುದ್ಧ, ಸಮರ್ಪಿಸಲ್ಪಟ್ಟ ಜೀವಿತಗಳು ಲೋಕದ ಅಶುದ್ಧತೆಗಳೊಂದಿಗೆ ಚಿಮುಕಿಸಲ್ಪಡುವುದರ ವಿರುದ್ಧವಾಗಿ ದೃಢಚಿತ್ತರಾಗಿ ಕಾಪಿಡುವುದೆಂದರ್ಥ. ಭಕ್ತಿಹೀನ, ಪ್ರಾಪಂಚಿಕ ಬೆನ್ನಟ್ಟುವಿಕೆಗಳು ನಮ್ಮ ಕ್ರೈಸ್ತ ವ್ಯಕ್ತಿತ್ವವನ್ನು ವಿಕಾರಗೊಳಿಸುವುದನ್ನು ನಿರಾಕರಿಸುವ ಮೂಲಕ ನಾವು ನಮ್ಮನ್ನು “ನಿರ್ದೋಷಿ” ಗಳಾಗಿ ಇಟ್ಟುಕೊಳ್ಳುತ್ತೇವೆ. (ಯಾಕೋ. 1:27; 1 ಯೋಹಾನ 2:15-17) ಇತರರೊಂದಿಗಿನ ನಮ್ಮ ಎಲ್ಲಾ ವ್ಯವಹಾರಗಳಲ್ಲಿ “ದೇವಶಾಂತಿ” ಯನ್ನು ಪ್ರತಿಬಿಂಬಿಸುವ ಮೂಲಕ ನಾವು ‘ಶಾಂತಿ’ ಯಲ್ಲಿ ಜೀವಿಸುತ್ತಿದ್ದೇವೆಂಬದನ್ನು ನಾವು ಪ್ರದರ್ಶಿಸುತ್ತೇವೆ.—ಫಿಲಿ. 4:7; ರೋಮಾ. 12:18; 14:19.
6 ನಾವು ಲೋಕದ ಮಾಲಿನ್ಯದ ವಿರುದ್ಧ ಯಶಸ್ವಿಯಾಗಿ ಕಾಪಿಡುವಲ್ಲಿ, ಯೆಹೋವನಿಂದ ಖಂಡಿಸಲ್ಪಟ್ಟಿರುವ “ಇಹಲೋಕದ ನಡವಳಿಕೆಯನ್ನು” ನಾವು ಎಂದೂ “ಅನುಸರಿಸ” ದಿರುವೆವು. ಬದಲಾಗಿ, ನಮ್ಮ ಉತ್ತಮ ಕಾರ್ಯಗಳು “ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ” ತಾರತಮ್ಯವನ್ನು ಕಾಣುವಂತೆ ಇತರರಿಗೆ ಸಹಾಯಮಾಡುವುವು.—ರೋಮಾ. 12:2; ಮಲಾ. 3:18.
7 ಯೆಹೋವನು, ನಂಬಿಗಸ್ತನೂ ವಿವೇಕಿಯೂ ಆದ ಆಳಿನ ಮೂಲಕ, ನಮಗೆ ಚೈತನ್ಯಕರವಾದ ಆತ್ಮಿಕಾಹಾರವನ್ನು ಒದಗಿಸುವುದನ್ನು ಮುಂದುವರಿಸುತ್ತಾನೆ ಮತ್ತು ಇದು ನಮ್ಮ ದೇವಭಕ್ತಿಯನ್ನು ಪ್ರದರ್ಶಿಸುವ ನಮ್ಮ ಅಭಿಲಾಷೆಯನ್ನು ತೀವ್ರಗೊಳಿಸುತ್ತದೆ. ಅನೇಕ ಹೊಸಬರು ಈ ಅಭಿಲಾಷೆಯಲ್ಲಿ ಪಾಲಿಗರಾಗುತ್ತಾರೆ. ಆಗಸ್ಟ್ನಲ್ಲಿ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ಅವರಿಗೆ ಸಹಾಯ ಮಾಡುವ ಮೂಲಕ ನಾವು ಒಂದು ಆಶೀರ್ವಾದವಾಗಿರಸಾಧ್ಯವಿದೆ.
8 ನಾವು ಆತ್ಮನಿಷ್ಠೆಯಿಂದ “ಸತ್ಕ್ರಿಯೆಗಳ”ನ್ನು ಕಾಪಾಡಿಕೊಂಡು ಹೋಗುವಾಗ, ಯೆಹೋವನ ಹೆಸರು ಉತ್ಪ್ರೇಕ್ಷಿಸಲ್ಪಡುತ್ತದೆ, ಸಭೆಯು ಬಲಗೊಳಿಸಲ್ಪಡುತ್ತದೆ ಮತ್ತು ಇತರರು ಪ್ರಯೋಜನಹೊಂದುತ್ತಾರೆ. (1 ಪೇತ್ರ 2:12) ನಾವು ಯಾವಾಗಲೂ ಆ ವಿಧದ ವ್ಯಕ್ತಿಯಾಗಿರೋಣ.