ಯೆಹೋವನಿಂದ ಪರೀಕ್ಷಿಸಲ್ಪಟ್ಟಿರುವುದು—ಏಕೆ ಉಪಯುಕ್ತ?
1 ಎಲ್ಲರೂ ಒಳ್ಳೇ ಆರೋಗ್ಯವನ್ನು ಬಯಸುತ್ತಾರೆ. ಅದು ಜೀವನವನ್ನು ಹೆಚ್ಚು ಆನಂದಮಯವಾಗಿ ಮಾಡುತ್ತದೆ. ಆದರೂ, ಒಳ್ಳೇ ಆರೋಗ್ಯವನ್ನು ಅನುಭೋಗಿಸುವವರು ಇನ್ನೂ ಆಗಾಗ ಒಂದು ತಪಾಸಣೆಯನ್ನು ಮಾಡಿಸಿಕೊಳ್ಳುತ್ತಾರೆ. ಯಾಕೆ? ಬೆಳೆಯುತ್ತಿರುವ ಯಾವುದೇ ಆರೋಗ್ಯದ ಸಮಸ್ಯೆಗಳನ್ನು ಪತ್ತೆಹಚ್ಚಲು ಅವರು ಪ್ರಯತ್ನಿಸುತ್ತಾರೆ, ಇದರಿಂದ ಅವುಗಳನ್ನು ಪರಿಹರಿಸಲು ಅವರು ಕ್ರಮಗಳನ್ನು ತೆಗೆದುಕೊಳ್ಳಸಾಧ್ಯವಾಗುತ್ತದೆ. ನಮ್ಮ ಆತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇನ್ನೂ ಹೆಚ್ಚು ಪ್ರಾಮುಖ್ಯವಾಗಿದೆ. “ನಂಬಿಕೆಯಲ್ಲಿ ಸ್ವಸ್ಥ” ರಾಗಿರುವುದರ ಮೇಲೆ ಯೆಹೋವನ ಮೆಚ್ಚಿಕೆಯು ಹೊಂದಿಕೊಂಡಿದೆ.—ತೀತ 1:13.
2 ಯೆಹೋವನಿಂದ ಪರೀಕ್ಷಿಸಲ್ಪಡಲು ಈಗ ತಕ್ಕದಾದ್ದ ಸಮಯವಾಗಿದೆ. ಹಾಗೆ ಯಾಕೆ? ಯಾಕಂದರೆ ಯೆಹೋವನು ತನ್ನ ಪವಿತ್ರ ಆಲಯದಲ್ಲಿದ್ದಾನೆ, ಮತ್ತು ಆತನು ಎಲ್ಲಾ ಮನುಷ್ಯರ ಹೃದಯಗಳನ್ನು ಪರೀಕ್ಷಿಸುತ್ತಿದ್ದಾನೆ. (ಕೀರ್ತ. 11:4, 5; ಜ್ಞಾನೋ. 17:3) ದಾವೀದನಂತೆ, ನಮ್ಮನ್ನು ಪೂರ್ಣವಾಗಿ ಪರೀಕ್ಷಿಸುವಂತೆ ನಾವು ಯೆಹೋವನನ್ನು ಕೇಳಿಕೊಳ್ಳುತ್ತೇವೆ: “ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು; ನನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸು.”—ಕೀರ್ತ. 26:2.
3 ನಮ್ಮ ಅಪರಿಪೂರ್ಣ ಶರೀರದಿಂದಾಗಿ, ನಮ್ಮೊಳಗಿಂದ ನಮ್ಮ ಆತ್ಮಿಕ ಆರೋಗ್ಯಕ್ಕೆ ಬರಬಹುದಾದ ಬೆದರಿಕೆಗಳ ವಿರುದ್ಧ ನಾವು ಕಾದುಕೊಳ್ಳಬೇಕು. ಜ್ಞಾನೋಕ್ತಿ 4:23 ಸಲಹೆ ಕೊಡುವುದು: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.”
4 ನಮ್ಮನ್ನು ಸುತ್ತುವರಿಯುವ ಭ್ರಷ್ಟ, ಅನೈತಿಕ ಲೋಕದಿಂದಲೂ ನಮ್ಮ ಆತ್ಮಿಕ ಆರೋಗ್ಯವು ಬೆದರಿಸಲ್ಪಡಸಾಧ್ಯವಿದೆ. ಈ ದುಷ್ಟ ವ್ಯವಸ್ಥೆಗೆ ಹೆಚ್ಚು ನಿಕಟವಾಗುವಂತೆ ನಾವು ನಮ್ಮನ್ನೇ ಬಿಟ್ಟುಕೊಡುವಲ್ಲಿ, ಅದು ಯೋಚಿಸುವಂತೆ ಯೋಚಿಸಲು ಮತ್ತು ಲೌಕಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳಲು ನಾವು ಆರಂಭಿಸಸಾಧ್ಯವಿದೆ. ಅಥವಾ ನಾವು ಒಂದು ಲೌಕಿಕ ಜೀವನ-ಶೈಲಿಯನ್ನು ಸ್ವೀಕರಿಸಿ, ಲೋಕದ ಆತ್ಮದಿಂದ ಜಯಿಸಲ್ಪಡಬಹುದು.—ಎಫೆ. 2:2, 3.
5 ನಮ್ಮನ್ನು ಆತ್ಮಿಕವಾಗಿ ಧ್ವಂಸಗೊಳಿಸುವ ಒಂದು ಪ್ರಯತ್ನದಲ್ಲಿ ಸೈತಾನನು, ಹಿಂಸೆ ಅಥವಾ ನೇರವಾದ ವಿರೋಧವನ್ನು ಉಪಯೋಗಿಸಬಹುದು. ಆದಾಗಲೂ, ತೀರ ಹೆಚ್ಚಾಗಿ, ಅವನು ನಮ್ಮನ್ನು ಸೆಳೆಯಲು ಲೌಕಿಕ ಆಕರ್ಷಣೆಗಳನ್ನು ಕುಟಿಲವಾಗಿ ಉಪಯೋಗಿಸುತ್ತಾನೆ. ಸೈತಾನನು “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ” ಇರುವುದರಿಂದ, ಪೇತ್ರನು ನಮ್ಮನ್ನು ‘ಸ್ವಸ್ಥಚಿತ್ತರು ಮತ್ತು ಎಚ್ಚರಿಕೆಯುಳ್ಳವರು’ ಆಗಿರುವಂತೆ ಪ್ರೇರೇಪಿಸುತ್ತಾನೆ. ‘ನಂಬಿಕೆಯಲ್ಲಿ ದೃಢರಾಗಿದ್ದು ಅವನನ್ನು ಎದುರಿಸುವಂತೆ’ ನಾವು ಪ್ರೇರೇಪಿಸಲ್ಪಡುತ್ತೇವೆ.—1 ಪೇತ್ರ 5:8, 9.
6 ನಮ್ಮ ನಂಬಿಕೆಯನ್ನು ಬಲವಾಗಿರಿಸುತ್ತಾ, ಪ್ರತಿ ದಿನವೂ ಅದನ್ನು ಬಲಪಡಿಸುತ್ತಾ ಇರುವ ಮೂಲಕ ನಮ್ಮ ಆತ್ಮಿಕ ಆರೋಗ್ಯವನ್ನು ಸಂರಕ್ಷಿಸುವ ಅಗತ್ಯವಿದೆ. ನಾವು ನಮ್ಮ ನಂಬಿಕೆಯನ್ನು ಸತತವಾಗಿ ಪರೀಕ್ಷಿಸುವಂತೆ ಅಪೊಸ್ತಲ ಪೌಲನು ಶಿಫಾರಸ್ಸು ಮಾಡುತ್ತಾನೆ. ಒಬ್ಬ ಸಮರ್ಥ ವೈದ್ಯನಿಂದ ನಮಗೆ ಕೊಡಲ್ಪಟ್ಟ ವ್ಯಾವಹಾರಿಕ ಸಲಹೆಯನ್ನು ನಾವು ವಿವೇಕದಿಂದ ಪಾಲಿಸುವಂತೆಯೇ, ಆತನ ಆತ್ಮಿಕ ಪರೀಕ್ಷೆಯು, ತಿದ್ದಲ್ಪಡಬೇಕಾದ ಒಂದು ಸಮಸ್ಯೆಯನ್ನು ಪ್ರಕಟಪಡಿಸುವಾಗ ನಾವು ಯೆಹೋವನಿಗೂ ಕಿವಿಗೊಡುತ್ತೇವೆ. ಇದು ನಾವು “ಕ್ರಮಪಡಿಸಿ” ಕೊಳ್ಳುವಂತೆ ನಮಗೆ ಸಾಧ್ಯಮಾಡುತ್ತದೆ.—2 ಕೊರಿಂ. 13:5, 11.
7 ಯೆಹೋವನು ನಿಜವಾಗಿಯೂ ಮಹಾನ್ ಪರೀಕ್ಷಕನಾಗಿದ್ದಾನೆ. ಆತನ ರೋಗನಿರ್ಣಯವು ಯಾವಾಗಲೂ ನಿಷ್ಕೃಷ್ಟವಾಗಿದೆ. ನಮಗೆ ಏನು ಆವಶ್ಯಕವೆಂದು ಆತನಿಗೆ ನಿಖರವಾಗಿ ತಿಳಿದಿದೆ. ಆತನ ವಾಕ್ಯ ಮತ್ತು ‘ನಂಬಿಗಸ್ತ ಆಳಿನ’ ಮೂಲಕ, ಆತನು ಒಂದು ಸ್ವಸ್ಥಕರ ಆತ್ಮಿಕ ಪಥ್ಯವನ್ನು ಗೊತ್ತುಮಾಡುತ್ತಾನೆ. (ಮತ್ತಾ. 24:45; 1 ತಿಮೊ. 4:6) ಮನೆಯಲ್ಲಿ ಮತ್ತು ಸಭಾ ಕೂಟಗಳಲ್ಲಿ ಪುಷ್ಟಿದಾಯಕವಾದ ಆತ್ಮಿಕ ಆಹಾರದ ಈ ಪಥ್ಯದ ಮೇಲೆ ಕ್ರಮವಾದ ಉಣ್ಣುವಿಕೆಯು, ನಮ್ಮನ್ನು ಆತ್ಮಿಕವಾಗಿ ಸ್ವಸ್ಥರಾಗಿರಲು ಶಕ್ತರನ್ನಾಗಿ ಮಾಡುತ್ತದೆ. ಶುಶ್ರೂಷೆಯಲ್ಲಿ ಮತ್ತು ಇತರ ಕ್ರೈಸ್ತ ಚಟುವಟಿಕೆಯಲ್ಲಿ ಕ್ರಮವಾದ ಆತ್ಮಿಕ ವ್ಯಾಯಾಮವು ಸಹ ಉಪಯುಕ್ತವಾಗಿದೆ. ಆದುದರಿಂದ, ಆತನು ನಮ್ಮನ್ನು ಅತ್ಯುತ್ತಮ ಆತ್ಮಿಕ ಆರೋಗ್ಯದಲ್ಲಿ ಇಡುವನೆಂಬ ಭರವಸೆಯಿಂದಿರುತ್ತಾ, ನಾವು ಯೆಹೋವನಿಂದ ಒಂದು ಕ್ರಮವಾದ ಪರೀಕ್ಷೆಯನ್ನು ಸ್ವಾಗತಿಸುತ್ತೇವೆ.