ಕೆಲವರನ್ನು ರಕ್ಷಿಸಲಿಕ್ಕಾಗಿ ಪುನರ್ಭೇಟಿಗಳನ್ನು ಮಾಡಿರಿ
1 “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ. (1 ತಿಮೊ. 2:4) ಸಹಾಯ ಮಾಡಲಿಕ್ಕಾಗಿ ನಾವು ಏನು ಮಾಡಬಲ್ಲೆವು? ಸತ್ಯವನ್ನು ಕಲಿಸುವ ಉದ್ದೇಶದೊಂದಿಗೆ ಪುನರ್ಭೇಟಿಗಳನ್ನು ಮಾಡಿರಿ. ನೀವೇನು ಹೇಳುವಿರಿ? ಮುಂದಿನ ಸಲಹೆಗಳು ನಿಮಗೆ ಸಹಾಯ ಮಾಡಬಹುದು.
2 “ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು” ಎಂಬ ಪುಸ್ತಕವನ್ನು ಸ್ವೀಕರಿಸಿದ ಯಾರನ್ನಾದರೂ ಪುನಃ ಭೇಟಿಮಾಡುವಾಗ, 5ನೆಯ ಪುಟದಲ್ಲಿರುವ ಚಿತ್ರಕ್ಕೆ ಪುನಃ ನಿರ್ದೇಶಿಸಿ, ನೀವು ಮನೆಯವನನ್ನು ಹೀಗೆ ಕೇಳಬಹುದು:
◼ “ನಾನು ನಿಮ್ಮೊಂದಿಗೆ ಬಿಟ್ಟುಹೋದ ಪುಸ್ತಕದ ಇನ್ನೂ ಹೆಚ್ಚಿನ ಪರಿಶೀಲನೆಯ ಬಳಿಕ ಮತ್ತು ಪ್ರಮೋದವನ ಭೂಮಿಯೊಂದರ ದೇವರ ವಾಗ್ದಾನದ ಕುರಿತು ಆಲೋಚಿಸಿದ ಬಳಿಕ, ಮಾನವಕುಲಕ್ಕಾಗಿ ದೇವರು ಮಾಡಿರುವ ಅದ್ಭುತಕರವಾದ ಈ ವಾಗ್ದಾನಗಳ ಕುರಿತು ನಿಮಗೆ ಹೇಗನಿಸುತ್ತದೆ?” ಮನೆಯವನ ಪ್ರತಿಕ್ರಿಯೆಯನ್ನು ಅಂಗೀಕರಿಸಿ, ಅದರ ಕುರಿತು ಸಂಕ್ಷಿಪ್ತವಾಗಿ ಹೇಳಿಕೆಯನ್ನು ಮಾಡಿದ ಬಳಿಕ, ನೀವು 2ನೆಯ ಅಧ್ಯಾಯಕ್ಕೆ ಗಮನವನ್ನು ಸೆಳೆಯಬಹುದು ಮತ್ತು ಈ ವಾಗ್ದಾನಗಳು ವಿಶ್ವಾಸಾರ್ಹವಾಗಿ ನಮಗೆ ರವಾನಿಸಲ್ಪಟ್ಟಿರುವ ವಿಧವನ್ನು ಪರಿಗಣಿಸುವಂತೆ ಸೂಚಿಸಬಹುದು. ಪುನಃ ಭೇಟಿ ಮಾಡಲಿಕ್ಕಾಗಿ ಕಾರ್ಯನಿಶ್ಚಯ ಮಾಡಿಕೊಳ್ಳಿರಿ.
3 “ಇರುವುದು ಈ ಜೀವಿತ ಮಾತ್ರವೋ?” ಎಂಬ ಪುಸ್ತಕವನ್ನು ನೀವು ಬಿಟ್ಟುಬಂದಿರುವಲ್ಲಿ, ಹೀಗೆ ಹೇಳುವ ಮೂಲಕ ನೀವು ಸಂಭಾಷಣೆಯನ್ನು ಮತ್ತೆ ಆರಂಭಿಸಬಹುದು:
◼ “ಈ ಹಿಂದೆ ನಾನು ಇಲ್ಲಿಗೆ ಬಂದಿದ್ದಾಗ, ಎಲ್ಲಿ ಮರಣವಿರುವುದಿಲ್ಲವೊ ಅಂತಹ ಒಂದು ಶಾಂತಿಭರಿತ ಹೊಸ ಲೋಕವನ್ನು ಸೃಷ್ಟಿಸುವ ದೇವರ ಉದ್ದೇಶದ ಕುರಿತಾಗಿ ನಾವು ಮಾತಾಡಿದೆವು. ಅಂತಹ ಒಂದು ನಿರೀಕ್ಷೆಯು ನಮ್ಮ ಜೀವಿತಗಳಿಗೆ ನಿಜ ಉದ್ದೇಶ ಮತ್ತು ಅರ್ಥವನ್ನು ಹೇಗೆ ತರಸಾಧ್ಯವಿದೆಯೆಂಬುದನ್ನು ನಾವು ಪರಿಗಣಿಸಿದೆವು. ಈಗ ಪ್ರಶ್ನೆಯೇನೆಂದರೆ, ಈ ಆಶೀರ್ವಾದಗಳಿಗೆ ಅರ್ಹರಾಗಲು ನಾವೇನು ಮಾಡಬೇಕು? ಆ ಪ್ರಶ್ನೆಗೆ ನೀವು ಹೇಗೆ ಉತ್ತರಿಸುವಿರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. 189ನೆಯ ಪುಟಕ್ಕೆ ತಿರುಗಿಸಿರಿ ಮತ್ತು ದೇವರ ವಾಕ್ಯದ ಅಭ್ಯಾಸವೊಂದರ ಮೂಲಕವಾಗಿ ಬಲವಾದ ನಂಬಿಕೆಯನ್ನು ಕಟ್ಟುವ ಅಗತ್ಯವನ್ನು ಒತ್ತಿಹೇಳುತ್ತಾ, 2ನೆಯ ಪ್ಯಾರಗ್ರಾಫ್ನಲ್ಲಿರುವ ವಿಚಾರಗಳನ್ನು ಚರ್ಚಿಸಿರಿ. ನಮ್ಮ ಬೈಬಲ್ ಅಭ್ಯಾಸ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯುವ ಮೂಲಕವಾಗಿ ಇದನ್ನು ಹೇಗೆ ಮಾಡಸಾಧ್ಯವಿದೆ ಎಂಬುದನ್ನು ವಿವರಿಸಿರಿ.
4 ಈ ಪ್ರಸ್ತಾವನೆಯೊಂದಿಗೆ ನೀವು, “ನಿನ್ನ ರಾಜ್ಯವು ಬರಲಿ” ಎಂಬ ಪುಸ್ತಕದ ಕೊಡಿಕೆಯನ್ನು ಅನುಸರಿಸಿಕೊಂಡು ಹೋಗಬಹುದು:
◼ “ಈ ಮುಂಚೆ ನಾನು, ಲೋಕದಲ್ಲಿರುವ ಕಷ್ಟಾನುಭವ ಮತ್ತು ಹಿಂಸಾಕೃತ್ಯಕ್ಕೆ, ತನ್ನ ರಾಜ್ಯದ ಮೂಲಕ ಅಂತ್ಯವನ್ನು ತರುವ ದೇವರ ವಾಗ್ದಾನದ ಕಡೆಗೆ ನಿಮ್ಮ ಗಮನವನ್ನು ಸೆಳೆದೆ. ಇಂದು ಮಾನವಕುಲಕ್ಕೆ ಇಷ್ಟೊಂದು ಸಂಕಟವನ್ನು ಉಂಟುಮಾಡುತ್ತಿರುವ ಧಾರ್ಮಿಕ ಹಾಗೂ ರಾಜಕೀಯ ಸಂಸ್ಥೆಗಳಿಗೆ, ದೇವರು ಅಂತ್ಯವನ್ನು ತರುವನೆಂಬುದಾಗಿ ನೀವು ಆಲೋಚಿಸುತ್ತೀರೊ? ‘ರಾಜನು ಅರ್ಮಗೆದ್ದೋನಿನಲ್ಲಿ ಹೋರಾಡುತ್ತಾನೆ’ ಎಂಬ 17ನೆಯ ಅಧ್ಯಾಯವನ್ನು ನೀವು ಓದಿರಬಹುದು. ಆ ಅಧ್ಯಾಯದಲ್ಲಿ ಉದಾಹರಿಸಲ್ಪಟ್ಟಿರುವ ಶಾಸ್ತ್ರವಚನಗಳಲ್ಲಿ ಕೆಲವನ್ನು ನಿಮ್ಮೊಂದಿಗೆ ಪರಿಗಣಿಸಲಿಕ್ಕಾಗಿ, ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳಲು ನಾನು ಬಯಸುತ್ತೇನೆ.” ಆ ವ್ಯಕ್ತಿಯು ಒಪ್ಪಿಕೊಳ್ಳುವುದಾದರೆ, ನೀವು ಶಾಸ್ತ್ರವಚನಗಳನ್ನು ತೆರೆದು ನೋಡಲು ಮತ್ತು 170-3ನೆಯ ಪುಟಗಳಲ್ಲಿನ 17-24 ಪ್ಯಾರಗ್ರಾಫ್ಗಳಲ್ಲಿ ರೇಖಿಸಲ್ಪಟ್ಟಿರುವ ವಸ್ತುವಿಷಯವನ್ನು ಚರ್ಚಿಸಲು ಶಕ್ತರಾಗಬಹುದು.
5 ಹೀಗೆ ಹೇಳುವ ಮೂಲಕ ನೀವು, “ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು” ಎಂಬ ಪುಸ್ತಕದ ಕೊಡಿಕೆಯನ್ನು ಅನುಸರಿಸಿಕೊಂಡು ಹೋಗಸಾಧ್ಯವಿದೆ:
◼ “ಒಂದು ಶಾಶ್ವತವಾದ ಭವಿಷ್ಯತ್ತಿಗಾಗಿ ನಿಮ್ಮ ಕುಟುಂಬವನ್ನು ನೀವು ಸಿದ್ಧಗೊಳಿಸಬಲ್ಲ ವಿಧಾನದ ಕುರಿತು ಹೆಚ್ಚಿನ ವಿಷಯವನ್ನು ನಿಮಗೆ ತೋರಿಸಲಿಕ್ಕಾಗಿ ನಾನು ಹಿಂದಿರುಗಿ ಬರಲು ಬಯಸಿದೆ.” 189ನೆಯ ಪುಟದಲ್ಲಿರುವ ಚಿತ್ರಕ್ಕೆ ತಿರುಗಿಸಿರಿ, 188ನೆಯ ಪುಟದಲ್ಲಿರುವ 15-17 ಪ್ಯಾರಗ್ರಾಫ್ಗಳನ್ನು ಓದಿರಿ, ಮತ್ತು ತದನಂತರ ದೇವರ ರಾಜ್ಯವು ಈ ವಾಗ್ದಾನವನ್ನು ಹೇಗೆ ನೆರವೇರಿಸುವುದೆಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ. ಒಂದು ಉಚಿತ ಮನೆ ಬೈಬಲ್ ಅಭ್ಯಾಸವನ್ನು ಮಾಡುವ ಪ್ರಸ್ತಾಪಮಾಡಿರಿ.
6 ಪುನರ್ಭೇಟಿಗಳನ್ನು ಮಾಡುವುದರಲ್ಲಿನ ಗುರಿಯು, ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದಾಗಿದೆ ಎಂಬುದನ್ನು ನೆನಪಿನಲ್ಲಿಡಿರಿ. ಅಭ್ಯಾಸಗಳನ್ನು ನಡೆಸಲಿಕ್ಕಾಗಿ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವು ವಿಶೇಷವಾಗಿ ವಿನ್ಯಾಸಿಸಲ್ಪಟ್ಟಿದೆ. ಹಳೆಯ ಪುಸ್ತಕಗಳ ಕೊಡಿಕೆಯನ್ನು ನಾವು ಅನುಸರಿಸಿಕೊಂಡು ಹೋಗಿ, ವಾಸ್ತವವಾಗಿ ಒಂದು ಅಭ್ಯಾಸವನ್ನು ಆರಂಭಿಸುವಾಗ, ಈ ಪುಸ್ತಕದ ಕಡೆಗೆ ಗಮನವನ್ನು ನಿರ್ದೇಶಿಸುವುದು ಒಳಿತಾಗಿರುವುದು. ಅಭ್ಯಾಸಿಸುವವರು, ರಕ್ಷಣೆಗಾಗಿ ಯೆಹೋವನನ್ನು ಬೇಡಿಕೊಳ್ಳಲು ಕಲಿಯುವಾಗ, ನಾವು ಅಧಿಕ ಆನಂದವನ್ನು ಕಂಡುಕೊಳ್ಳುವೆವು.—ಅ. ಕೃ. 2:21.