ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು
ಜೂನ್: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ ರೂ. 15.00ರ ಕಾಣಿಕೆಗೆ. ಪರ್ಯಾಯವಾಗಿ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ರೂ. 25.00ರ ಕಾಣಿಕೆಗೆ ನೀಡಸಾಧ್ಯವಿದೆ (ದೊಡ್ಡ ಸೈಸ್ ರೂ. 45.00ಕ್ಕೆ). ಸೂಕ್ತವಾಗಿರುವಲ್ಲಿ ಕುಟುಂಬ ಪುಸ್ತಕವನ್ನು, ಈ ಪುಸ್ತಕಗಳಲ್ಲಿ ಒಂದರೊಂದಿಗೆ ಸಹ ನೀಡಸಾಧ್ಯವಿದೆ.
ಜುಲೈ ಮತ್ತು ಆಗಸ್ಟ್: ಈ ಮುಂದಿರುವ 32 ಪುಟದ ಯಾವುದಾದರೂ ಬ್ರೋಷರ್‌ಗಳನ್ನು ರೂ. 5.00ರ ಕಾಣಿಕೆಗೆ ನೀಡಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರುವ ಸರಕಾರ (ಇಂಗ್ಲಿಷ್), ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!
ಸೆಪ್ಟಂಬರ್: ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕ, ರೂ. 15.00ರ ಕಾಣಿಕೆಗೆ. ಪರ್ಯಾಯವಾಗಿ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಅಥವಾ ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? (ಇಂಗ್ಲಿಷ್) ಎಂಬ ಎರಡು ಪುಸ್ತಕಗಳಲ್ಲಿ ಯಾವುದನ್ನಾದರೂ ರೂ. 25.00ರ ಕಾಣಿಕೆಗೆ ನೀಡಿರಿ (ದೊಡ್ಡ ಸೈಸ್ ರೂ. 45.00 ಆಗಿದೆ).
ಸೂಚನೆ: ಕುಟುಂಬ ಮತ್ತು ಸದಾ ಜೀವಿಸಬಲ್ಲಿರಿ ಪುಸ್ತಕಗಳ ಸದುಪಯೋಗವನ್ನು ಮಾಡುವಂತೆ ನಾವು ಎಲ್ಲ ಸಭೆಗಳಿಗೆ ಉತ್ತೇಜನ ನೀಡುತ್ತೇವೆ. ಪ್ರಚಾರಕರು ತಮ್ಮೊಂದಿಗೆ ಈ ಪುಸ್ತಕಗಳ ಪ್ರತಿಗಳನ್ನು ಎಲ್ಲ ಸಮಯಗಳಲ್ಲಿ, ವರ್ಷದಾದ್ಯಂತ ಇಟ್ಟುಕೊಳ್ಳುವಂತೆ ಮತ್ತು ಸೂಕ್ತವಾದ ಪ್ರತಿಯೊಂದು ಸಂದರ್ಭದಲ್ಲಿ ಅವುಗಳನ್ನು ನೀಡುವಂತೆ ಪ್ರೋತ್ಸಾಹಿಸಲ್ಪಡಬಲ್ಲರು. ಮೇಲೆ ಉಲ್ಲೇಖಿಸಲ್ಪಟ್ಟ ಯಾವುದೇ ಕ್ಯಾಂಪೇನ್ ಐಟಂಗಳನ್ನು ಇನ್ನೂ ವಿನಂತಿಸಿಕೊಂಡಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ (S-AB-14)ನಲ್ಲಿ ಹಾಗೆ ಮಾಡತಕ್ಕದ್ದು.
◼ 1996, ಸೆಪ್ಟಂಬರ್ 9ರ ವಾರದಿಂದ ಆರಂಭಿಸಿ, 1997, ಸೆಪ್ಟಂಬರ್ 29ರ ವಾರದ ತನಕ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವು, ಸಭಾ ಪುಸ್ತಕ ಅಭ್ಯಾಸದಲ್ಲಿ ಪರಿಗಣಿಸಲ್ಪಡುವುದು.
◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನಿಯುಕ್ತಿಸಲ್ಪಟ್ಟ ಯಾರಾದರೊಬ್ಬರು ಸಭೆಯ ಅಕೌಂಟ್ಸ್ ಅನ್ನು ಜೂನ್ 1ರಂದು ಅಥವಾ ಅದರ ನಂತರ ಸಾಧ್ಯವಾದಷ್ಟು ಬೇಗನೆ ಆಡಿಟ್ ಮಾಡತಕ್ಕದ್ದು. ಇದು ಮಾಡಲ್ಪಟ್ಟ ತರುವಾಯ ಸಭೆಗೆ ತಿಳಿಸಿರಿ.
◼ ಇನ್ನುಮುಂದೆ, ಸೊಸೈಟಿಯ ಮೂಲಕ ಸರಬರಾಯಿ ಮಾಡಲ್ಪಡುವ ಎಲ್ಲ ದೇಶೀಯ ಭಾಷೆಯ ಬೈಬಲುಗಳ ಬೆಲೆಯು ರೂ. 60.00 ಆಗಿರುವುದು.
◼ ಪುನಃ ಲಭ್ಯವಿರುವ ಪ್ರಕಾಶನಗಳು:
ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?—ನೇಪಾಲಿ, ಪಂಜಾಬಿ, ಹಿಂದಿ