ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/96 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1996 ನಮ್ಮ ರಾಜ್ಯದ ಸೇವೆ
1996 ನಮ್ಮ ರಾಜ್ಯದ ಸೇವೆ
km 11/96 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ನವೆಂಬರ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು ರೂ. 20.00ರ ಕಾಣಿಕೆಗೆ. ಮನೆ ಬೈಬಲ್‌ ಅಭ್ಯಾಸಗಳನ್ನು ಪ್ರಾರಂಭಿಸುವ ಉದ್ದೇಶದೊಂದಿಗೆ, ಎಲ್ಲ ಕೊಡಿಕೆಗಳನ್ನು ಅನುಸರಿಸಿಕೊಂಡು ಹೋಗಲು ಒಂದು ವಿಶೇಷವಾದ ಪ್ರಯತ್ನವು ಮಾಡಲ್ಪಡುವುದು.

ಡಿಸೆಂಬರ್‌: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು ರೂ. 25.00ರ ಕಾಣಿಕೆಗೆ (ದೊಡ್ಡ ಸೈಸ್‌ ರೂ. 45.00 ಆಗಿದೆ). ಪರ್ಯಾಯವಾಗಿ, ಸೂಕ್ತವಾಗಿರುವಲ್ಲಿ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಎಂಬ ಪುಸ್ತಕ ಅಥವಾ ಬೈಬಲ್‌ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್‌)ವು, ರೂ. 45.00ರ ಕಾಣಿಕೆಗೆ ನೀಡಲ್ಪಡಬಹುದು.

ಜನವರಿ: ಹಳೆಯ 192 ಪುಟದ ಪುಸ್ತಕಗಳ ವಿಶೇಷ ನೀಡಿಕೆ, ಪ್ರತಿಯೊಂದೂ ರೂ. 10.00ರ ಕಾಣಿಕೆಗೆ. ಈ ವಿಭಾಗದಲ್ಲಿರುವ ಮುಂದಿನ ಪುಸ್ತಕಗಳು ನಮ್ಮಲ್ಲಿ ಇನ್ನೂ ಲಭ್ಯವಿವೆ: ಇಂಗ್ಲಿಷ್‌: ಮಾನವನು ಇಲ್ಲಿ ವಿಕಾಸದ ಮೂಲಕ ಬಂದನೋ, ಸೃಷ್ಟಿಯ ಮೂಲಕವೋ? ಮತ್ತು ಇರುವುದು ಈ ಜೀವಿತವು ಮಾತ್ರವೋ?; ಕನ್ನಡ: “ನಿನ್ನ ರಾಜ್ಯವು ಬರಲಿ,” ಮತ್ತು “ದೇವರು ಸುಳ್ಳಾಡ ಸಾಧ್ಯವಿರದ ವಿಷಯಗಳು;” ಗುಜರಾಥಿ: ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು, “ನಿನ್ನ ರಾಜ್ಯವು ಬರಲಿ,” ಮತ್ತು ನಿತ್ಯಜೀವಕ್ಕೆ ನಡಿಸುವ ಸತ್ಯವು; ತಮಿಳು ಮತ್ತು ಹಿಂದಿ: “ನಿನ್ನ ರಾಜ್ಯವು ಬರಲಿ;” ತೆಲುಗು: ಇರುವುದು ಈ ಜೀವಿತ ಮಾತ್ರವೂ? ಮರಾಠಿ: “ನಿನ್ನ ರಾಜ್ಯವು ಬರಲಿ” ಮತ್ತು ಮಹಾ ಬೋಧಕನಿಗೆ ಕಿವಿಗೊಡುವುದು. ನೇಪಾಲಿ ಅಥವಾ ಬಂಗಾಲಿಯನ್ನು ಓದಲು ಇಷ್ಟಪಡುವ ವ್ಯಕ್ತಿಗಳಿಗೆ 32-ಪುಟದ ಯಾವುದೇ ಬ್ರೋಷರುಗಳನ್ನು ನೀಡಸಾಧ್ಯವಿದೆ. ಮಲೆಯಾಳಂ ಭಾಷೆಯನ್ನು ಆರಿಸಿಕೊಳ್ಳುವ ವ್ಯಕ್ತಿಗಳಿಗೆ ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕವನ್ನು ರೂ. 20.00ರ ಕಾಣಿಕೆಗೆ ನೀಡಸಾಧ್ಯವಿದೆ ಮತ್ತು ಪಂಜಾಬಿ ಇಷ್ಟಪಡುವ ವ್ಯಕ್ತಿಗಳಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ರೂ. 20.00ಕ್ಕೆ ನೀಡಸಾಧ್ಯವಿದೆ. ಕೊನೆಯಲ್ಲಿ ತಿಳಿಸಲ್ಪಟ್ಟಿರುವ ಈ ಎರಡು ಪುಸ್ತಕಗಳು ವಿಶೇಷ ದರದಲ್ಲಿ ನೀಡಲ್ಪಡಬಾರದೆಂಬುದನ್ನು ದಯವಿಟ್ಟು ಗಮನಿಸಿರಿ.

ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 25.00ರ ಕಾಣಿಕೆಗೆ (ದೊಡ್ಡ ಸೈಸ್‌ ರೂ. 45.00) ಅಥವಾ ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕ ರೂ. 20.00ರ ಕಾಣಿಕೆಗೆ. ಪಂಜಾಬಿ ಭಾಷೆಯನ್ನು ಇಷ್ಟಪಡುವ ವ್ಯಕ್ತಿಗಳಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ರೂ. 20.00ಕ್ಕೆ ನೀಡಸಾಧ್ಯವಿದೆ. ಪರ್ಯಾಯವಾಗಿ, ವಿಶೇಷ ನೀಡಿಕೆಯ ಯಾವುದೇ 192 ಪುಟಗಳ ಹೆಳೆಯ ಪುಸ್ತಕಗಳನ್ನು ರೂ. 10.00ರ ಕಾಣಿಕೆಗೆ ನೀಡಸಾಧ್ಯವಿದೆ.

◼ ರಾಜ್ಯ ವಾರ್ತೆ ನಂ. 34ರ ಸರಬರಾಯಿಯನ್ನು ಇನ್ನೂ ಹೊಂದಿರುವ ಸಭೆಗಳು, ಮನೆಯಿಂದ ಮನೆಯಲ್ಲಾಗಲಿ ಇನ್ನೆಲ್ಲಿಯೂ ಆಗಲಿ ಇತರ ಕಿರುಹೊತ್ತಗೆಗಳು ಉಪಯೋಗಿಸಲ್ಪಡುವ ರೀತಿಯಲ್ಲೇ ಇವುಗಳನ್ನು ನೀಡಲು, ಪ್ರಚಾರಕರನ್ನು ಉತ್ತೇಜಿಸಬಹುದು. ಅನುಮತಿಯಿರುವಲ್ಲಿ, ದಾರಿಹೋಕರ ದೃಷ್ಟಿಯಿಂದ ಸಂಪೂರ್ಣವಾಗಿ ಮರೆಯಾಗಿರುವ ರೀತಿಯಲ್ಲಿ ಇಡಲ್ಪಟ್ಟಿರುವುದನ್ನು ಖಚಿತಪಡಿಸಿಕೊಳ್ಳುತ್ತಾ, ಪ್ರಚಾರಕರು ಕಿರುಹೊತ್ತಗೆಯೊಂದನ್ನು ಜನರು ಮನೆಯಲ್ಲಿರದಿರುವ ಪ್ರತಿಯೊಂದು ಮನೆಯಲ್ಲಿ ಬಿಟ್ಟುಹೋಗಬಹುದು. ಈ ಅಮೂಲ್ಯವಾದ ಸಂದೇಶದ ಎಲ್ಲಾ ಉಳಿದ ಪ್ರತಿಗಳನ್ನು ವಿತರಿಸಲಿಕ್ಕಾಗಿ ಪ್ರಯತ್ನವು ಮಾಡಲ್ಪಡಬೇಕು.

◼ 1951ರಿಂದ 1959ರ ವರ್ಷಗಳ ಇಂಗ್ಲಿಷ್‌ ಭಾಷೆಯ ಕಾವಲಿನಬುರುಜು ಪತ್ರಿಕೆಯ ಬೌಂಡ್‌ ವಾಲ್ಯೂಮ್‌ಗಳನ್ನು, ಅವುಗಳನ್ನು ಆರ್ಡರ್‌ ಮಾಡಿರುವ ಸಭೆಗಳಿಗೆ ಪ್ರಸ್ತುತ ಕಳುಹಿಸಲಾಗುತ್ತಿದೆ. ಪ್ರಚಾರಕರು ಮತ್ತು ಪಯನೀಯರರಿಗಾಗಿ ಈ ವಾಲ್ಯೂಮ್‌ಗಳಲ್ಲಿ ಪ್ರತಿಯೊಂದಕ್ಕೆ ರೂ. 90.00 ಆಗಿದೆ—ಒಂಬತ್ತು ವಾಲ್ಯೂಮ್‌ಗಳ ಒಂದು ಸೆಟ್‌ ರೂ. 810.00 ಆಗಿದೆ. ವಾಲ್ಯೂಮ್‌ಗಳನ್ನು ದಾಸ್ತಾನು ಮಾಡಬಾರದು ಬದಲಾಗಿ ಅವುಗಳನ್ನು ಅರ್ಡರ್‌ ಮಾಡಿರುವ ವ್ಯಕ್ತಿಗಳಿಗೆ ಬೇಗನೇ ರವಾನಿಸಲ್ಪಡಬೇಕು ಮತ್ತು ತಡವಿಲ್ಲದೆ ಹಣವನ್ನು ಸೊಸೈಟಿಗೆ ಕಳುಹಿಸಬೇಕು. ಬೌಂಡ್‌ ವಾಲ್ಯೂಮ್‌ಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆ ಮತ್ತು ನಿಮಗೊಂದು ನಿರ್ದಿಷ್ಟ ಬೇಡಿಕೆಯಿರುವಾಗ ಮಾತ್ರ ಆರ್ಡರ್‌ ಮಾಡಲ್ಪಡಬೇಕೆಂಬುದನ್ನು ದಯವಿಟ್ಟು ನೆನಪಿನಲ್ಲಿಡಿರಿ. ಎಲ್ಲಾ ವಿಶೇಷ ವಿನಂತಿಯ ಐಟಮ್‌ಗಳಂತೆ, ಅವುಗಳ ಮೌಲ್ಯವು ಮುಂದಿನ ಹಣದ ರವಾನೆಯೊಂದಿಗೆ ಸೊಸೈಟಿಗೆ ಕಳುಹಿಸಲ್ಪಡಬೇಕು.

ಈ ವಾಲ್ಯೂಮ್‌ಗಳ ಕಳುಹಿಸುವಿಕೆಯೊಂದಿಗೆ, ಹಳೆಯ ವಾಲ್ಯೂಮ್‌ಗಳ ಯಾವುದೇ ಬಾಕಿ ಉಳಿದ ಆರ್ಡರ್‌ಗಳು ನಮ್ಮಲ್ಲಿರುವುದಿಲ್ಲ—ಎಲ್ಲಾ ಸಭೆಗಳು ಅವು ಇಷ್ಟರ ವರೆಗೆ ಆರ್ಡರ್‌ ಮಾಡಿರುವ ಎಲ್ಲಾ ಹಳೆಯ ವಾಲ್ಯೂಮ್‌ಗಳನ್ನು ಪಡೆದಿರುವವು. ಹಾಗಿದ್ದರೂ, ನಮ್ಮಲ್ಲಿ ಈ ವಾಲ್ಯೂಮ್‌ಗಳ ಒಂದು ಚಿಕ್ಕ ದಾಸ್ತಾನು ಉಳಿದಿರುವುದು. ಆದುದರಿಂದ, ಈ ವಾಲ್ಯೂಮ್‌ಗಳನ್ನು ಬಯಸುವ ಯಾರಾದರೂ, ಅವುಗಳನ್ನು ತತ್‌ಕ್ಷಣವೇ ತಮ್ಮ ಸಭೆಯ ಮೂಲಕ ವಿನಂತಿಸಬೇಕು. ಈ ದಾಸ್ತಾನು ಒಮ್ಮೆ ಮುಗಿಯಿತೆಂದರೆ, ಹಳೆಯ ವಾಲ್ಯೂಮ್‌ಗಳಿಗಾಗಿರುವ ಇನ್ನೂ ಹೆಚ್ಚಿನ ವಿನಂತಿಗಳಿಗೆ ನಾವು ಎಡೆಗೊಡುವುದಿಲ್ಲ—ಹೊಸ ವಾಲ್ಯೂಮ್‌ಗಳಿಗಾಗಿ ಸದ್ಯದ ಸ್ಥಾಯಿ ಆರ್ಡರ್‌ಗಳು ತುಂಬಿಸಲ್ಪಡುವುದು ಮುಂದುವರಿಯಲಿರುವಾಗ, ಭವಿಷ್ಯತ್ತಿನ ವಾಲ್ಯೂಮ್‌ಗಳಿಗಾಗಿ ಸ್ಥಾಯಿ ಆರ್ಡರ್‌ಗಳು ಸ್ವೀಕರಿಸಲ್ಪಡುವವು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ