ಪ್ರಕಟನೆಗಳು
◼ ಜನವರಿ: ಹಳೆಯ 192 ಪುಟದ ಪುಸ್ತಕಗಳ ವಿಶೇಷ ನೀಡಿಕೆ, ಪ್ರತಿಯೊಂದೂ ರೂ. 10.00ರ ಕಾಣಿಕೆಗೆ. ನೇಪಾಲಿ ಅಥವಾ ಬಂಗಾಲಿಯನ್ನು ಓದಲು ಇಷ್ಟಪಡುವ ವ್ಯಕ್ತಿಗಳಿಗೆ 32-ಪುಟದ ಒಂದು ಬ್ರೋಷರನ್ನು ನೀಡಸಾಧ್ಯವಿದೆ. ಮಲೆಯಾಳಂ ಭಾಷೆಯನ್ನು ಆರಿಸಿಕೊಳ್ಳುವ ವ್ಯಕ್ತಿಗಳಿಗೆ, ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕವನ್ನು ರೂ. 20.00ರ ಕಾಣಿಕೆಗೆ ನೀಡಸಾಧ್ಯವಿದೆ ಮತ್ತು ಪಂಜಾಬಿ ಭಾಷೆಯನ್ನು ಇಷ್ಟಪಡುವ ವ್ಯಕ್ತಿಗಳಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ರೂ. 20.00ಕ್ಕೆ ನೀಡಸಾಧ್ಯವಿದೆ. ಕೊನೆಯಲ್ಲಿ ತಿಳಿಸಲ್ಪಟ್ಟಿರುವ ಈ ಎರಡು ಪುಸ್ತಕಗಳು ವಿಶೇಷ ದರದಲ್ಲಿ ನೀಡಲ್ಪಡಬಾರದೆಂಬುದನ್ನು ದಯವಿಟ್ಟು ಗಮನಿಸಿರಿ.
ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ರೂ. 25.00ರ ಕಾಣಿಕೆಗೆ (ದೊಡ್ಡ ಸೈಸ್ ರೂ. 45.00) ಅಥವಾ ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕ ರೂ. 20.00ರ ಕಾಣಿಕೆಗೆ. ಪರ್ಯಾಯವಾಗಿ, ವಿಶೇಷ ನೀಡಿಕೆಯ ಯಾವುದೇ 192 ಪುಟಗಳ ಹಳೆಯ ಪುಸ್ತಕಗಳನ್ನು ರೂ. 10.00ರ ಕಾಣಿಕೆಗೆ ನೀಡಸಾಧ್ಯವಿದೆ.
ಮಾರ್ಚ್: “ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನದಲ್ಲಿ ಬಿಡುಗಡೆ ಮಾಡಲ್ಪಟ್ಟ ಹೊಸ ಪುಸ್ತಕ. ಸಭೆಗಳು ತಮ್ಮ ಅಧಿವೇಶನವು ಮುಗಿದ ನಂತರ ಕೂಡಲೇ ಈ ಪುಸ್ತಕದ ಸರಬರಾಯಿಗಾಗಿ ತಮ್ಮ ವಿನಂತಿಗಳನ್ನು ಕಳುಹಿಸತಕ್ಕದ್ದು.
ಎಪ್ರಿಲ್ ಮತ್ತು ಮೇ: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗಾಗಿ ಚಂದಾಗಳು.
◼ ಈ ವರ್ಷ ಆದಿತ್ಯವಾರ, ಮಾರ್ಚ್ 23ರಂದು, ಸೂರ್ಯಾಸ್ತಮಾನದ ನಂತರ ಜ್ಞಾಪಕವನ್ನು ಆಚರಿಸಲು ಸಭೆಗಳು ಅನುಕೂಲಕರವಾದ ಏರ್ಪಾಡುಗಳನ್ನು ಮಾಡತಕ್ಕದ್ದು. ಭಾಷಣವನ್ನು ಬೇಗ ಆರಂಭಿಸಬಹುದಾದರೂ, ಜ್ಞಾಪಕದ ಕುರುಹುಗಳ ದಾಟಿಸುವಿಕೆಯು, ಸೂರ್ಯಾಸ್ತಮಾನದ ನಂತರದ ತನಕ ಆರಂಭಿಸಲ್ಪಡಬಾರದು. ನಿಮ್ಮ ಕ್ಷೇತ್ರದಲ್ಲಿ ಯಾವಾಗ ಸೂರ್ಯಾಸ್ತಮಾನವಾಗುತ್ತದೆಂಬುದನ್ನು ನಿರ್ಧರಿಸಲು ಸ್ಥಳಿಕ ಮೂಲಗಳಿಂದ ತಿಳಿದುಕೊಳ್ಳಿರಿ. ಆ ದಿನದಂದು, ಕ್ಷೇತ್ರ ಸೇವೆಗಾಗಿರುವ ಕೂಟಗಳನ್ನು ಬಿಟ್ಟು ಇನ್ಯಾವ ಕೂಟಗಳೂ ನಡಿಸಲ್ಪಡಬಾರದು. ಆದುದರಿಂದ ಕಾವಲಿನಬರುಜು ಅಭ್ಯಾಸವು ಬೇರೊಂದು ಸಮಯದಲ್ಲಿ ನಡಿಸಲ್ಪಡಲು ಸೂಕ್ತವಾದ ಅಳವಡಿಸುವಿಕೆಗಳು ಮಾಡಲ್ಪಡಬೇಕು. ಸರ್ಕಿಟ್ ಮೇಲ್ವಿಚಾರಕರು, ಸ್ಥಳಿಕ ಪರಿಸ್ಥಿತಿಗಳಿಗನುಸಾರ, ಆ ವಾರಕ್ಕಾಗಿರುವ ತಮ್ಮ ಕೂಟದ ಕಾರ್ಯತಖ್ತೆಯನ್ನು ಅಳವಡಿಸುವ ಅಗತ್ಯವಿರುವುದು. ಪ್ರತಿಯೊಂದು ಸಭೆಯು ತನ್ನ ಸ್ವಂತ ಜ್ಞಾಪಕಾಚರಣೆಯನ್ನು ನಡೆಸುವುದು ಅಪೇಕ್ಷಣೀಯವಾಗಿರುವುದಾದರೂ, ಇದು ಯಾವಾಗಲೂ ಸಾಧ್ಯವಾಗಲಿಕ್ಕಿಲ್ಲ. ಹಲವಾರು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸುವ ಕಡೆಗಳಲ್ಲಿ, ಪ್ರಾಯಶಃ ಒಂದು ಅಥವಾ ಹೆಚ್ಚು ಸಭೆಗಳು, ಆ ಸಾಯಂಕಾಲಕ್ಕಾಗಿ ಇನ್ನೊಂದು ಸೌಕರ್ಯದ ಉಪಯೋಗವನ್ನು ಮಾಡಿಕೊಳ್ಳಬಹುದು. ಜ್ಞಾಪಕವು, ಹೊಸದಾಗಿ ಆಸಕ್ತರಾದ ಜನರಿಗೆ ಹಾಜರಾಗಲು ಅನನುಕೂಲವಾಗುವಷ್ಟು ತಡವಾಗಿ ಆರಂಭವಾಗಬಾರದು. ಅಲ್ಲದೆ, ಕಾಲತಖ್ತೆಯು, ಸಂದರ್ಶಕರಿಗೆ ಅಭಿವಂದಿಸಲು, ಆಸಕ್ತ ವ್ಯಕ್ತಿಗಳಿಗೆ ಇನ್ನೂ ಹೆಚ್ಚಿನ ಆತ್ಮಿಕ ನೆರವಿಗಾಗಿ ಏರ್ಪಾಡುಗಳನ್ನು ಮಾಡಲು ಅಥವಾ ಉತ್ತೇಜನದ ಒಂದು ಸಾಮಾನ್ಯ ಪರಸ್ಪರ ವಿನಿಮಯವನ್ನು ಅನುಭವಿಸಲು, ಆಚರಣೆಯ ಮುಂಚೆ ಅಥವಾ ನಂತರ ಸಮಯವಿರಲಾರದಷ್ಟು ಬಿಗಿಯಾಗಿರಬಾರದು. ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಿದ ನಂತರ, ಜ್ಞಾಪಕವನ್ನು ಹಾಜರಾಗುವವರು ಆ ಸಂದರ್ಭದಿಂದ ಪೂರ್ಣವಾಗಿ ಲಾಭವನ್ನು ಪಡೆಯಲು ಯಾವ ಏರ್ಪಾಡುಗಳು ಅತ್ಯುತ್ತಮವಾಗಿ ಸಹಾಯ ಮಾಡುವವೆಂಬುದನ್ನು ಹಿರಿಯರು ನಿರ್ಣಯಿಸಬೇಕು.
◼ ಈ ಸಂದರ್ಭದ ಪ್ರಮುಖತೆಯ ಕಾರಣದಿಂದ, ಒಬ್ಬ ಜ್ಞಾಪಕ ಭಾಷಣಕರ್ತನನ್ನು ನೇಮಿಸುವಾಗ, ಹಿರಿಯರ ಮಂಡಲಿಯು, ಸರದಿಗಳನ್ನು ತೆಗೆದುಕೊಳ್ಳುವ ಅಥವಾ ಪ್ರತಿ ವರ್ಷ ಒಬ್ಬ ಸಹೋದರನನ್ನೇ ಉಪಯೋಗಿಸುವ ಬದಲಿಗೆ, ಹೆಚ್ಚು ಅರ್ಹರಾದ ಹಿರಿಯರಲ್ಲಿ ಒಬ್ಬನನ್ನು ಆಯ್ದುಕೊಳ್ಳಬೇಕು.
◼ 1997ರ ಜ್ಞಾಪಕ ಕಾಲಕ್ಕಾಗಿರುವ ವಿಶೇಷ ಬಹಿರಂಗ ಭಾಷಣವು, ಭಾನುವಾರ, ಎಪ್ರಿಲ್ 6ರಂದು ಕೊಡಲ್ಪಡುವುದು. ಒಂದು ಹೊರಮೇರೆಯು ಒದಗಿಸಲ್ಪಡುವುದು. ಆ ವಾರಾಂತ್ಯದಲ್ಲಿ, ಸರ್ಕಿಟ್ ಮೇಲ್ವಿಚಾರಕನ ಭೇಟಿ, ಒಂದು ಸರ್ಕಿಟ್ ಸಮ್ಮೇಳನ ಅಥವಾ ವಿಶೇಷ ಸಮ್ಮೇಳನ ದಿನ ಇರುವ ಸಭೆಗಳಿಗೆ, ವಿಶೇಷ ಭಾಷಣವು ಮುಂದಿನ ವಾರದಲ್ಲಿರುವುದು. ಯಾವುದೇ ಸಭೆಯು, ವಿಶೇಷ ಭಾಷಣವನ್ನು ಎಪ್ರಿಲ್ 6ರ ಮುಂಚೆ ನೀಡಬಾರದು.
◼ ಜನವರಿ 1, 1997ರಿಂದ, ಈ ಮುಂದಿನ ಹೊಸ ದರಗಳು ಕಾರ್ಯರೂಪಕ್ಕೆ ಬರುವವು:
ಪಯನೀಯರ್ ಸಭೆಗೆ/ ಸಾರ್ವಜನಿಕರಿಗೆ
32-ಪುಟಗಳ ಪುಸ್ತಿಕೆಗಳು 1.50 2.00
ಎಲ್ಲಾ ಬ್ರೋಷರುಗಳು 4.00 6.00
ಯುವ ಜನರ ಪ್ರಶ್ನೆಗಳು,
ಬೈಬಲ್ ಕಥೆಗಳು (ಇಂಗ್ಲಿಷ್,
ಚಿಕ್ಕದು),
ಸೃಷ್ಟಿ (ಇಂಗ್ಲಿಷ್,
ಚಿಕ್ಕದು),
ಸಾಂಗ್‌ಬುಕ್ (ಚಿಕ್ಕದ್ದು) 20.00 30.00
ಮ್ಯಾನ್‌ಕೈಂಡ್ಸ್ ಸರ್ಚ್ 40.00 60.00
ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್
(ರೆಫರೆನ್ಸ್‌ಗಳೊಂದಿಗೆ ಬಿಐ12) 60.00 80.00
ಪ್ರತಿನಿತ್ಯ ಶಾಸ್ತ್ರಗಳನ್ನು
ಪರೀಕ್ಷಿಸುವುದು* 6.00 10.00
ಆಡಿಯೊಕ್ಯಾಸೆಟ್ (ಒಂದಕ್ಕೆ) 55.00 65.00
ಈ ದರಗಳು ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು—1997 ಪುಸ್ತಕವು, ಜನವರಿ 1, 1997ರ ಮೊದಲೇ ವಿತರಿಸಲ್ಪಡುವುದಾದರೂ, ಅದಕ್ಕೆ ಅನ್ವಯವಾಗುವವು.
◼ ಜನವರಿ 6ರ ವಾರದ ಸೇವಾ ಕೂಟದಲ್ಲಿ ಹಾಜರಾಗಿರುವ ಎಲ್ಲಾ ದೀಕ್ಷಾಸ್ನಾನಿತ ಪ್ರಚಾರಕರು, ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡ್ ಮತ್ತು ತಮ್ಮ ಮಕ್ಕಳಿಗಾಗಿ ಐಡೆಂಟಿಟಿ ಕಾರ್ಡನ್ನು ಲಿಟರೇಚರ್ ಕೌಂಟರ್‌ನಿಂದ ಪಡೆದುಕೊಳ್ಳತಕ್ಕದ್ದು.
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಜೀವನಕ್ಕೆ ಅಧಿಕ ಹೆಚ್ಚಿನದ್ದು ಇ—ಗುಜರಾಥಿ, ತಮಿಳು, ತೆಲುಗು, ಮಲೆಯಾಳಂ
ಶಾಂತಿಭರಿತ ಹೊಸ ಲೋಕದಲ್ಲಿ ಜೀವ (ಟ್ರಾಕ್ಟ್ ನಂಬ್ರ15)—ಟಿಬೆಟನ್