ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು, ರೂ. 25.00 (ದೊಡ್ಡ ಸೈಜ್ ರೂ. 45.00)ರ ಕಾಣಿಕೆಗೆ ಅಥವಾ ಅರ್ಧ ದರ ಅಥವಾ ವಿಶೇಷ ದರದ ಪುಸ್ತಕಗಳಾಗಿ ಸೊಸೈಟಿಯಿಂದ ಪಟ್ಟಿಮಾಡಲ್ಪಟ್ಟಿರುವ ಯಾವುದೇ ಹಳೆಯ 192 ಪುಟದ ಪುಸ್ತಕಗಳು. ಸ್ಥಳಿಕ ಭಾಷೆಯಲ್ಲಿ ಅಂಥ ಪುಸ್ತಕಗಳು ಲಭ್ಯವಿರದಿದ್ದಲ್ಲಿ, ಜ್ಞಾನ ಅಥವಾ ಕುಟುಂಬ ಸಂತೋಷ ಪುಸ್ತಕಗಳಲ್ಲಿ ಪ್ರತಿಯೊಂದನ್ನು ರೂ. 20.00ಕ್ಕೆ ನೀಡಸಾಧ್ಯವಿದೆ. ಮಾರ್ಚ್: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು, ರೂ. 20ರ ಕಾಣಿಕೆಗೆ. ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರ ಮೇಲೆ ಕೇಂದ್ರೀಕರಿಸಿರಿ. ಎಪ್ರಿಲ್ ಮತ್ತು ಮೇ: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗಾಗಿ ಚಂದಾಗಳು.
◼ 1998, ಮೇ 4ರ ವಾರದಿಂದ ಆರಂಭಿಸಿ, 1998, ಸೆಪ್ಟೆಂಬರ್ 14ರ ವಾರದ ವರೆಗೆ, ಸಕಲ ಜನರಿಗಾಗಿರುವ ಒಂದು ಗ್ರಂಥ, ದೇವರು ನಿಜವಾಗಿಯೂ ನಮ್ಮ ಕುರಿತು ಚಿಂತಿಸುತ್ತಾನೊ?, ಮತ್ತು ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್‌ಗಳು, ಸಭಾ ಪುಸ್ತಕ ಅಭ್ಯಾಸದಲ್ಲಿ ಒಂದೊಂದಾಗಿ ಪರಿಗಣಿಸಲ್ಪಡುವವು.
◼ ಎಲ್ಲ ಕ್ರಮದ ಪಯನೀಯರರ ಚಟುವಟಿಕೆಯನ್ನು ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕರು ಪುನರ್ವಿಮರ್ಶಿಸಬೇಕು. ತಾಸಿನ ಆವಶ್ಯಕತೆಯನ್ನು ಮುಟ್ಟುವುದರಲ್ಲಿ ಯಾರಿಗಾದರೂ ಕಷ್ಟವಿರುವುದಾದರೆ, ನೀಡಲ್ಪಡಬೇಕಾಗಿರುವ ನೆರವಿಗಾಗಿ ಹಿರಿಯರು ಏರ್ಪಾಡನ್ನು ಮಾಡಬೇಕು. ಸಲಹೆಗಳಿಗಾಗಿ, ಅಕ್ಟೋಬರ್ 1, 1993 ಮತ್ತು ಅಕ್ಟೋಬರ್ 1, 1992ರ ಸೊಸೈಟಿಯ ಪತ್ರಗಳನ್ನು (S-201) ಪುನರ್ವಿಮರ್ಶಿಸಿರಿ. ಅಕ್ಟೋಬರ್ 1986ರ ನಮ್ಮ ರಾಜ್ಯದ ಸೇವೆಯ ಪುರವಣಿಯ, 12-20ನೆಯ ಪ್ಯಾರಗ್ರಾಫ್‌ಗಳನ್ನು ಸಹ ನೋಡಿರಿ.
◼ ಸಭೆಯು ಸ್ಥಳಿಕ ಸಮ್ಮೇಳನಗಳಿಗೆ ಹಾಜರಾಗುವಾಗ, ಈ ಮುಂದಿನ ಅಳವಡಿಸುವಿಕೆಗಳು ಅಗತ್ಯವೆಂಬುದು ಹಿರಿಯರ ಮಂಡಲಿಗೆ ತಿಳಿದಿರಬೇಕು: ಒಂದು ವಿಶೇಷ ಸಮ್ಮೇಳನ ದಿನವು ಶೆಡ್ಯೂಲ್‌ಮಾಡಲ್ಪಟ್ಟಿರುವಾಗ, ಸಭೆಯು ವಾರದಾದ್ಯಂತವಿರುವ ಎಲ್ಲ ಸಾಮಾನ್ಯ ಕೂಟಗಳನ್ನು ನಡಿಸಬೇಕು. ಸಾರ್ವಜನಿಕ ಕೂಟ ಮತ್ತು ಕಾವಲಿನಬುರುಜು ಅಭ್ಯಾಸವು ಮಾತ್ರ ರದ್ದುಗೊಳಿಸಲ್ಪಡುವುದು. ಒಂದು ಸರ್ಕಿಟ್ ಸಮ್ಮೇಳನವನ್ನು ಹಾಜರಾಗಲು ಗೊತ್ತುಮಾಡಲ್ಪಟ್ಟಿರುವಾಗ, ಸಭೆಯು ದೇವಪ್ರಭುತ್ವ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟವನ್ನು ಕೂಡ ರದ್ದುಗೊಳಿಸುವುದು; ಆ ವಾರದಲ್ಲಿ ಕೇವಲ ಸಭಾ ಪುಸ್ತಕ ಅಭ್ಯಾಸವು ಸ್ಥಳಿಕವಾಗಿ ನಡಿಸಲ್ಪಡುವುದು.