ನಾವು ಮಹತ್ತಾದ ಕ್ರಿಯೆಗಳನ್ನು ಮಾಡಬಲ್ಲೆವು
1 ಯೇಸು ಕ್ರಿಸ್ತನ ಶುಶ್ರೂಷೆಯಲ್ಲಿ ಗಮನಾರ್ಹವಾದ ಕ್ರಿಯೆಗಳು ಸೇರಿದ್ದವು. ಅವನು ಅದ್ಭುತಕರವಾದ ರೀತಿಯಲ್ಲಿ ಸಾವಿರಾರು ಜನರನ್ನು ಉಣಿಸಿದನು, ಅನೇಕರನ್ನು ಗುಣಪಡಿಸಿದನು ಮತ್ತು ಕೆಲವರನ್ನು ಮರಣದಿಂದ ಪುನರುತ್ಥಾನಗೊಳಿಸಿದನು. (ಮತ್ತಾ. 8:1-17; 14:14-21; ಯೋಹಾ. 11:38-44) ಅವನ ಚಟುವಟಿಕೆಯು, ಒಂದು ಇಡೀ ಜನಾಂಗದ ಗಮನವನ್ನು ಸೆಳೆಯಿತು. ಆದರೂ, ತನ್ನ ಮರಣದ ಹಿಂದಿನ ಸಂಜೆಯಂದು, ಅವನು ತನ್ನ ನಂಬಿಗಸ್ತ ಹಿಂಬಾಲಕರಿಗೆ ಹೇಳಿದ್ದು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು.” (ಯೋಹಾ. 14:12) ನಾವು “ಮಹತ್ತಾದ” ಕ್ರಿಯೆಗಳನ್ನು ಹೇಗೆ ಮಾಡಬಲ್ಲೆವು?
2 ಹೆಚ್ಚಿನ ಟೆರಿಟೊರಿಯನ್ನು ಆವರಿಸುವ ಮೂಲಕ: ಯೇಸುವಿನ ಚಟುವಟಿಕೆಯು ಕೇವಲ ಪ್ಯಾಲೆಸ್ಟೀನ್ಗೆ ಸೀಮಿತವಾಗಿತ್ತು. ಆದರೆ ಅವನ ಆದಿ ಶಿಷ್ಯರಿಗೆ, ಯೇಸು ಸಾರಿದಂತಹ ಕ್ಷೇತ್ರಕ್ಕಿಂತಲೂ ವ್ಯಾಪಕವಾಗಿ, “ಭೂಲೋಕದ ಕಟ್ಟಕಡೆಯ ವರೆಗೂ” ಸಾಕ್ಷಿಕೊಡುವಂತೆ ಹೇಳಲಾಯಿತು. (ಅ. ಕೃ. 1:8) ಅವನು ಆರಂಭಿಸಿದಂತಹ ಸಾರುವ ಕಾರ್ಯವು, ಈಗ 232 ದೇಶಗಳಲ್ಲಿ ನಡೆಯುತ್ತಿದ್ದು ಭೌಗೋಲಿಕವಾಗಿದೆ. (ಮತ್ತಾ. 24:14) ನಿಮ್ಮ ಸಭೆಗೆ ನೇಮಿಸಲ್ಪಟ್ಟಿರುವ ಟೆರಿಟೊರಿಯಲ್ಲಿ ಕೆಲಸಮಾಡುವುದರಲ್ಲಿ ನೀವು ಪೂರ್ಣವಾಗಿ ಪಾಲನ್ನು ತೆಗೆದುಕೊಳ್ಳುತ್ತಿದ್ದೀರೊ?
3 ಹೆಚ್ಚಿನ ಜನರನ್ನು ತಲಪುವ ಮೂಲಕ: ಸಾರುವ ಕೆಲಸವನ್ನು ಮುಂದುವರಿಸಲಿಕ್ಕಾಗಿ, ಯೇಸು ತುಲನಾತ್ಮಕವಾಗಿ ಕೆಲವೇ ಶಿಷ್ಯರನ್ನು ಹಿಂದೆ ಬಿಟ್ಟುಹೋದನು. ಆದರೆ ಸಾ.ಶ. 33ರ ಪಂಚಾಶತ್ತಮದಂದು, ಅವರು ಹುರುಪಿನಿಂದ ಸಾಕ್ಷಿನೀಡಿದ ಕಾರಣ, ಆ ದಿನ ಸತ್ಯವನ್ನು ಅಂಗೀಕರಿಸಿ, ದೀಕ್ಷಾಸ್ನಾನ ಮಾಡಿಸಿಕೊಂಡವರ ಸಂಖ್ಯೆಯು ಸುಮಾರು ಮೂರು ಸಾವಿರ ಮಂದಿ ಆಗಿತ್ತು. (ಅ. ಕೃ. 2:1-11, 37-41) “ನಿತ್ಯಜೀವಕ್ಕಾಗಿ ಯೋಗ್ಯ ಪ್ರವೃತ್ತಿಯುಳ್ಳವರ” ಒಟ್ಟುಗೂಡಿಸುವಿಕೆಯು, ನಮ್ಮ ಸಮಯದ ವರೆಗೂ ಮುಂದುವರಿದಿದೆ. ಈಗ ನಾವು ಒಂದು ದಿನದಲ್ಲಿ ಸರಾಸರಿ 1,000ಕ್ಕಿಂತಲೂ ಹೆಚ್ಚು ವ್ಯಕ್ತಿಗಳಿಗೆ ದೀಕ್ಷಾಸ್ನಾನ ಮಾಡಿಸುತ್ತಾ ಇದ್ದೇವೆ. (ಅ. ಕೃ. 13:48, NW) ಪ್ರಾಮಾಣಿಕ ಹೃದಯದ ಜನರನ್ನು ಕಂಡುಕೊಳ್ಳುವಲ್ಲೆಲ್ಲ ಅವರ ಬಳಿಹೋಗಿ, ಆಸಕ್ತಿಯನ್ನು ಸಾಧ್ಯವಿರುವಷ್ಟು ಬೇಗನೆ ಮುಂದುವರಿಸಿಕೊಂಡು ಹೋಗಲು, ನಿಮ್ಮಿಂದ ಸಾಧ್ಯವಿರುವುದೆಲ್ಲವನ್ನು ನೀವು ಮಾಡುತ್ತಿದ್ದೀರೊ?
4 ಹೆಚ್ಚು ದೀರ್ಘ ಸಮಯ ಸಾರುವ ಮೂಲಕ: ಯೇಸುವಿನ ಭೂಶುಶ್ರೂಷೆಯು, ಮೂರುವರೆ ವರ್ಷಗಳಿಗೆ ಸೀಮಿತವಾಗಿತ್ತು. ನಮ್ಮಲ್ಲಿ ಹೆಚ್ಚಿನವರು, ಅದಕ್ಕಿಂತಲೂ ಹೆಚ್ಚು ಸಮಯದಿಂದ ಸಾರುತ್ತಿದ್ದೇವೆ. ಈ ಕೆಲಸವನ್ನು ಮುಂದುವರಿಸಲು ನಾವು ಎಷ್ಟು ದೀರ್ಘ ಸಮಯಕ್ಕಾಗಿ ಅನುಮತಿಸಲ್ಪಡುವೆವು ಎಂಬುದನ್ನು ಲೆಕ್ಕಿಸದೆ, ಪ್ರತಿಯೊಬ್ಬ ಹೊಸ ಶಿಷ್ಯನು ಜೀವಕ್ಕೆ ನಡಿಸುವ ಮಾರ್ಗದಲ್ಲಿ ನಡೆಯಲು ಆರಂಭಿಸುವಂತೆ ಸಹಾಯಮಾಡಲು ನಾವು ಆನಂದಿಸುತ್ತೇವೆ. (ಮತ್ತಾ. 7:14) ಕರ್ತನ ಕೆಲಸದಲ್ಲಿ ಪ್ರತಿ ತಿಂಗಳು ಮಾಡಲಿಕ್ಕಾಗಿ ನಿಮಗೆ ಬಹಳಷ್ಟು ಇದೆಯೊ?—1 ಕೊರಿಂ. 15:58.
5 ಯೇಸು ನಮ್ಮನ್ನು ಬೆಂಬಲಿಸುತ್ತಿರುವುದರಿಂದ, ಅವನ ನಿಜ ಶಿಷ್ಯರೋಪಾದಿ ನಾವು ಇನ್ನೂ ಮಹತ್ತಾದ ಕ್ರಿಯೆಗಳನ್ನು ನಡಿಸುವೆವೆಂಬ ಭರವಸೆಯು ನಮಗಿರಸಾಧ್ಯವಿದೆ.—ಮತ್ತಾ. 28:19, 20.