ಪ್ರಕಟನೆಗಳು
◼ ಫೆಬ್ರವರಿ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಕುಟುಂಬ ಸಂತೋಷದ ರಹಸ್ಯ. ಮಾರ್ಚ್: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ವಿಶೇಷ ಪ್ರಯತ್ನಗಳು ಮಾಡಲ್ಪಡುವವು. ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಬಿಡಿ ಪ್ರತಿಗಳು. ಆಸಕ್ತ ಜನರಿಗೆ ನೀಡಲಿಕ್ಕಾಗಿ ಅಪೇಕ್ಷಿಸು ಬ್ರೋಷರನ್ನು ನಿಮ್ಮ ಬಳಿ ಇಟ್ಟುಕೊಂಡಿರಿ ಮತ್ತು ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಿಸಿರಿ.
◼ ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕನು ಎಲ್ಲಾ ರೆಗ್ಯುಲರ್ ಪಯನೀಯರರ ಚಟುವಟಿಕೆಯನ್ನು ಪರಿಶೀಲಿಸಬೇಕು. ಆವಶ್ಯಕ ತಾಸುಗಳನ್ನು ಮುಟ್ಟಲು ಯಾರಿಗಾದರೂ ಕಷ್ಟವಾಗುತ್ತಿರುವುದಾದರೆ, ಅಂಥವರಿಗೆ ಸಹಾಯವು ಸಿಗುವಂತೆ ಹಿರಿಯರು ಏರ್ಪಾಡನ್ನು ಮಾಡಬೇಕು. ಸಲಹೆಗಳಿಗಾಗಿ ಸೊಸೈಟಿಯ ಅಕ್ಟೋಬರ್ 1, 1998ರ S-201 ವಾರ್ಷಿಕ ಪತ್ರಗಳನ್ನು ಪರಿಶೀಲಿಸಿರಿ. ಅದರೊಂದಿಗೆ, ಅಕ್ಟೋಬರ್ 1986ರ ನಮ್ಮ ರಾಜ್ಯದ ಸೇವೆಯ (ಇಂಗ್ಲಿಷ್) ಪುರವಣಿಯ 12-20 ಪ್ಯಾರಗ್ರಾಫ್‌ಗಳನ್ನೂ ನೋಡಿರಿ.
◼ ಏಪ್ರಿಲ್ 17, 2000ದಿಂದ ಆರಂಭಿಸಿ, ಸಭಾ ಪುಸ್ತಕ ಅಭ್ಯಾಸದಲ್ಲಿ ನಾವು ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕವನ್ನು ಅಭ್ಯಾಸಿಸುವೆವು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!—ಇಂಗ್ಲಿಷ್, ಕನ್ನಡ, ಗುಜರಾಥಿ, ತಮಿಳು, ಪಂಜಾಬಿ ಮತ್ತು ಮಲೆಯಾಳಂ.
ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ—ಅಸ್ಸಾಮಿ, ಇಂಗ್ಲಿಷ್, ಕನ್ನಡ, ತಮಿಳು, ಬಂಗಾಲಿ ಮತ್ತು ಮಲೆಯಾಳಂ.
ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ?—ಮಲೆಯಾಳಂ.