ಪ್ರಶ್ನಾ ರೇಖಾಚೌಕ
◼ ಒಬ್ಬನ ಪುನಃಸ್ಥಾಪನೆಯ ಪ್ರಕಟನೆಯು ಮಾಡಲ್ಪಡುವಾಗ, ಚಪ್ಪಾಳೆ ತಟ್ಟುವ ಮೂಲಕ ಸಮ್ಮತಿಯನ್ನು ವ್ಯಕ್ತಪಡಿಸುವುದು ಯೋಗ್ಯವಾಗಿದೆಯೋ?
ಯೆಹೋವನು ತನ್ನ ಪ್ರೀತಿಪೂರ್ವಕದಯೆಯ ಮೂಲಕ, ಪಶ್ಚಾತ್ತಾಪಿ ತಪ್ಪಿತಸ್ಥರು ತನ್ನ ಅನುಗ್ರಹವನ್ನು ಪುನಃ ಪಡೆದುಕೊಳ್ಳುವಂತೆ ಮತ್ತು ಕ್ರೈಸ್ತ ಸಭೆಯಲ್ಲಿ ಪುನಃಸ್ಥಾಪನೆಯನ್ನು ಹೊಂದುವಂತೆ ಒಂದು ಶಾಸ್ತ್ರೀಯ ಮಾರ್ಗವನ್ನು ಒದಗಿಸಿದ್ದಾನೆ. (ಕೀರ್ತ. 51:12, 17) ಇಂತಹ ಸಂದರ್ಭವು ಒದಗಿಬರುವಾಗ, ಪ್ರಾಮಾಣಿಕವಾಗಿ ಪಶ್ಚಾತ್ತಾಪವನ್ನು ತೋರಿಸಿದ ವ್ಯಕ್ತಿಗಳ ಕಡೆಗೆ ನಮ್ಮ ಪ್ರೀತಿಯನ್ನು ನಿಶ್ಚಯಪಡಿಸುವಂತೆ ನಾವೆಲ್ಲರೂ ಪ್ರೋತ್ಸಾಹಿಸಲ್ಪಟ್ಟಿದ್ದೇವೆ.—2 ಕೊರಿಂ. 2:6-8.
ಒಬ್ಬ ಸಂಬಂಧಿಕನು ಇಲ್ಲವೆ ಪರಿಚಯಸ್ಥನು ಪುನಃಸ್ಥಾಪಿಸಲ್ಪಡುವಾಗ ನಮಗೆ ತುಂಬ ಸಂತೋಷವಾಗುತ್ತದಾದರೂ, ಒಬ್ಬ ವ್ಯಕ್ತಿಯ ಪುನಃಸ್ಥಾಪನೆಯ ಕುರಿತು ಪ್ರಕಟನೆ ಮಾಡಲ್ಪಡುವಾಗ, ಸಭೆಯಲ್ಲಿ ಗಂಭೀರತೆಯಿಂದ ಕೂಡಿದ ನಿಶಬ್ದ ವಾತಾವರಣವಿರಬೇಕು. ಅಕ್ಟೋಬರ್ 1, 1998ರ ಕಾವಲಿನಬುರುಜು ಪತ್ರಿಕೆಯು, ಅದರ 17ನೇ ಪುಟದಲ್ಲಿ ವಿಷಯಗಳನ್ನು ಹೀಗೆ ವ್ಯಕ್ತಪಡಿಸಿತು: “ಒಬ್ಬ ವ್ಯಕ್ತಿಯ ಬಹಿಷ್ಕಾರ ಹಾಗೂ ಅವನ ಪುನಸ್ಸ್ಥಾಪನೆಗೆ ನಡಿಸಿದ ನಿರ್ದಿಷ್ಟ ಕಾರಣವು ಸಭೆಯಲ್ಲಿರುವ ಹೆಚ್ಚಿನವರಿಗೆ ತಿಳಿದಿರುವುದಿಲ್ಲ ಎಂಬುದನ್ನು ನಾವು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಇದಲ್ಲದೆ, ಪಶ್ಚಾತ್ತಾಪಪಟ್ಟಿರುವ ವ್ಯಕ್ತಿಯಿಂದ ನಡಿಸಲ್ಪಟ್ಟ ತಪ್ಪಿನಿಂದ ವೈಯಕ್ತಿಕವಾಗಿ, ಬಹುಶಃ ದೀರ್ಘ ಸಮಯದ ವರೆಗೆ ತೊಂದರೆಗೊಳಗಾಗಿರುವ ಅಥವಾ ನೋವಿಗೊಳಗಾಗಿರುವಂತಹ ಕೆಲವರು ಸಭೆಯಲ್ಲಿ ಇರಬಹುದು. ಅವರಿಗೆ ಆ ನೋವಿನ ಅನಿಸಿಕೆಗಳು ಪ್ರಬಲವಾಗಿರುತ್ತವೆ. ಆದುದರಿಂದ, ಪುನಸ್ಸ್ಥಾಪನೆಯ ಪ್ರಕಟನೆಯು ಮಾಡಲ್ಪಟ್ಟಾಗ, ಅಂತಹವರ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ವೈಯಕ್ತಿಕವಾಗಿ ಸ್ವಾಗತದ ಅಭಿವ್ಯಕ್ತಿಗಳನ್ನು ಹೇಳುವ ಸಂದರ್ಭ ಸಿಗುವ ವರೆಗೆ ಸುಮ್ಮನಿರಬೇಕು.”
ಒಬ್ಬನು ಸತ್ಯಕ್ಕೆ ಪುನಃ ಹಿಂದಿರುಗಿರುವುದನ್ನು ನೋಡಲು ನಾವು ತುಂಬಾ ಸಂತೋಷಿಸುತ್ತೇವಾದರೂ, ಅವನ ಇಲ್ಲವೆ ಅವಳ ಪುನಃಸ್ಥಾಪನೆಯ ಸಮಯದಲ್ಲಿ ಚಪ್ಪಾಳೆ ತಟ್ಟುವುದು ಯೋಗ್ಯವಾಗಿರುವುದಿಲ್ಲ.