ಪ್ರಕಟನೆಗಳು
◼ ಏಪ್ರಿಲ್ ಮತ್ತು ಮೇ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಬಿಡಿ ಪ್ರತಿಗಳು. ಆಸಕ್ತ ಜನರಿಗೆ ನೀಡಲಿಕ್ಕಾಗಿ ಅಪೇಕ್ಷಿಸು ಬ್ರೋಷರನ್ನು ನಿಮ್ಮ ಬಳಿ ಇಟ್ಟುಕೊಂಡಿರಿ ಮತ್ತು ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಿಸಿರಿ. ಜೂನ್: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಜುಲೈ ಮತ್ತು ಆಗಸ್ಟ್: ಈ ಕೆಳಗೆ ಉಲ್ಲೇಖಿಸಲ್ಪಟ್ಟಿರುವ ಯಾವುದೇ 32-ಪುಟದ ಬ್ರೋಷರುಗಳನ್ನು ಉಪಯೋಗಿಸಬಹುದು: ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರಲಿರುವ ಸರಕಾರ (ಇಂಗ್ಲಿಷ್), ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ಸದಾಕಾಲ ಬಾಳಲಿರುವ ಆ ದೈವಿಕ ನಾಮ (ಇಂಗ್ಲಿಷ್). ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ?, ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? ಎಂಬ ಬ್ರೋಷರುಗಳನ್ನು ನೀಡಬಹುದು.
◼ ಸೊಸೈಟಿಯಲ್ಲಿ ಇಸವಿಗಳು 1951ರಿಂದ 1959, 1982ರಿಂದ 1984, 1992, ಮತ್ತು 1997-98ರ ದ ವಾಚ್‌ಟವರ್ ಹಾಗೂ 1992, ಮತ್ತು 1997-98ನೇ ಇಸವಿಯ ಅವೇಕ್! ಪತ್ರಿಕೆಯ ಸಂಪುಟಗಳು ಲಭ್ಯವಿವೆ. ಈ ಪ್ರಕಾಶನಗಳನ್ನು ಪಡೆದುಕೊಳ್ಳಲು ಬಯಸುವ ಪ್ರಚಾರಕರು ಇಲ್ಲವೆ ಹೊಸ ಸಭೆಗಳು, ತಮ್ಮ ಸಭೆಯ ಸಾಹಿತ್ಯ ಸೇವಕ (ಲಿಟರೇಚರ್ ಸರ್ವಂಟ್)ನ ಮೂಲಕ ಈಗ ಇವುಗಳನ್ನು ವಿನಂತಿಸಿಕೊಳ್ಳಬಹುದು.
◼ ಬೇಗನೆ ವಾಚ್‌ಟವರ್ ಲೈಬ್ರರಿ—1999 ಎಡಿಷನ್‌ನ CD-ROM ಲಭ್ಯವಾಗುವುದು. ಸಭೆಗಳು ಲಿಟರೇಚರ್ ರಿಕ್ವೆಸ್ಟ ಫಾರ್ಮ್ (S-14)ನಲ್ಲಿ ತಮ್ಮ ವಿನಂತಿಗಳನ್ನು ತುಂಬಿಸಿ ಕಳುಹಿಸಬಹುದು. ಇದನ್ನು ಸಾರ್ವಜನಿಕ ವಿತರಣೆ, ಶಾಲೆಯ ಲೈಬ್ರರಿಗಳು, ಇಲ್ಲವೆ ಯೆಹೋವನ ಸಾಕ್ಷಿಗಳ ಕುರಿತು ಕೇವಲ ಆಸಕ್ತಿಯನ್ನು ತೋರಿಸುವವರಿಗೆ ಲಭ್ಯಗೊಳಿಸಬಾರದೆಂಬುದನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿರಿ. ವಾಚ್‌ಟವರ್ ಲೈಬ್ರರಿ—1999, ಸಭೆಯ ಸದಸ್ಯರಿಗಾಗಿರುವ ಒಂದು ಒದಗಿಸುವಿಕೆಯಾಗಿದೆ ಅಷ್ಟೇ. ಮತ್ತು ಇದನ್ನು ಸಭೆಯ ಮೂಲಕ ಮಾತ್ರ ಲಭ್ಯಗೊಳಿಸಲಾಗುವುದು. ಕಾಂಪ್ಯಾಕ್ಟ್ ಡಿಸ್ಕ್‌ಗಳು ಲಭ್ಯವಾಗಿ, ಅವುಗಳನ್ನು ರವಾನಿಸುವ ವರೆಗೂ, ಸಭೆಯ ಪ್ಯಾಕಿಂಗ್ ಲಿಸ್ಟಿನ ಮೇಲೆ “ಪೆಂಡಿಂಗ್” ಎಂಬುದಾಗಿ ಬರೆದಿರಲಾಗಿರುವುದು.
◼ ವಾರ್ಷಿಕ ಐಟಮ್‌ಗಳಿಗಾಗಿ ವಿಶೇಷ ರಿಕ್ವೆಸ್ಟ್ ಫಾರ್ಮ್‌ಗಳನ್ನು ಜನವರಿ ಸ್ಟೇಟ್‌ಮೆಂಟ್‌ಗಳ ಜೊತೆಗೆ ಪ್ರತಿಯೊಂದು ಸಭೆಗೆ ಕಳುಹಿಸಲಾಯಿತು. ಇಸವಿ 2000ದಲ್ಲಿ ನಡೆಯಲಿರುವ ಅಧಿವೇಶನದ ಬ್ಯಾಡ್ಜ್ ಕಾರ್ಡುಗಳನ್ನು ಮತ್ತು 2001ನೆಯ ಇಸವಿಗಾಗಿರುವ ಇತರ ವಾರ್ಷಿಕ ಐಟಮ್‌ಗಳನ್ನು ಇನ್ನೂ ಆರ್ಡರ್ ಮಾಡಿರದ ಸಭೆಗಳು, ಅದನ್ನು ತತ್‌ಕ್ಷಣವೇ ಮಾಡತಕ್ಕದ್ದು. ನಿಮಗೆ (ಪ್ಲ್ಯಾಸ್ಟಿಕ್) ಬ್ಯಾಡ್ಜ್ ಕಾರ್ಡ್ ಹೋಲ್ಡರ್ಸ್ ಬೇಕಾದಲ್ಲಿ, ಇವುಗಳನ್ನು ನಿಮ್ಮ ಕ್ರಮದ ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನಲ್ಲಿ ಆರ್ಡರ್ ಮಾಡಬೇಕು. ಇವು ಸಾಹಿತ್ಯದ ಇನ್ನೂ ಇತರ ಐಟಮ್‌ಗಳ ಜೊತೆಗೆ ಆರ್ಡರ್ ಮಾಡಲ್ಪಟ್ಟರೆ ಒಳ್ಳೇದು, ಏಕೆಂದರೆ ಚಿಕ್ಕ ಪ್ಯಾಕೆಟುಗಳು ಸಾಗಿಸುವಾಗ ಅನೇಕ ವೇಳೆ ಕಳೆದುಹೋಗುತ್ತವೆ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಯೆಹೋವನು—ಯಾರು? (ಟ್ರ್ಯಾಕ್ಟ್ ನಂ. 23)—ಅಸ್ಸಾಮಿ, ಇಂಗ್ಲಿಷ್, ಒರಿಯಾ, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮರಾಠಿ, ಮಲೆಯಾಳಂ ಮತ್ತು ಮಿಸೊ.
ನಸೀಬ್ ನಮ್ಮ ಜೀವಿತಗಳನ್ನು ಆಳುತ್ತದೊ? ಅಥವಾ ಖುದಾ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾನೊ? (ಟ್ರ್ಯಾಕ್ಟ್ ನಂ. 71)—ಅಸ್ಸಾಮಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ.
ಸರ್ವಶ್ರೇಷ್ಠ ಹೆಸರು (ಟ್ರ್ಯಾಕ್ಟ್ ನಂ. 72)—ಅಸ್ಸಾಮಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ.
ಯೆಹೋವನ ಸಾಕ್ಷಿಗಳು ಯಾರು? (ಟ್ರ್ಯಾಕ್ಟ್ ನಂ. 73)—ಅಸ್ಸಾಮಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ.
ಜಹನ್ನುಮ್—ದೈವಿಕ ನ್ಯಾಯದ ಒಂದು ಭಾಗವೊ? (ಟ್ರ್ಯಾಕ್ಟ್ ನಂ. 74)—ಅಸ್ಸಾಮಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮತ್ತು ಮಲೆಯಾಳಂ.