ಪ್ರಕಟನೆಗಳು
◼ ನವೆಂಬರ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ರಾಜ್ಯ ವಾರ್ತೆ ನಂ. 36ರ ವಿತರಣೆ. ಸಭೆಗಳು ತಮ್ಮ ಟೆರಿಟೊರಿಯಲ್ಲಿರುವ ಪ್ರತಿಯೊಂದು ಮನೆಯಲ್ಲಿ ರಾಜ್ಯ ವಾರ್ತೆ ನಂ. 36ನ್ನು ನೀಡಿದ ಬಳಿಕ, ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕವನ್ನು ನೀಡಬಹುದು. ಈ ಬ್ರೋಷರ್ ಅಥವಾ ಪುಸ್ತಕವು ಜನರ ಬಳಿ ಈಗಾಗಲೇ ಇರುವುದಾದರೆ, ಸದಾ ಜೀವಿಸಬಲ್ಲಿರಿ ಅಥವಾ ಸೃಷ್ಟಿ (ಇಂಗ್ಲಿಷ್) ಪುಸ್ತಕವನ್ನು ಕೊಡಬಹುದು. ಡಿಸೆಂಬರ್: ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್‌ನೊಂದಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ. ಜನವರಿ: ಬ್ರೋಷರುಗಳು: ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಮತ್ತು ಯೆಹೋವನ ಸಾಕ್ಷಿಗಳು—ಲೋಕವ್ಯಾಪಕವಾಗಿ ದೇವರ ಚಿತ್ತವನ್ನು ಐಕ್ಯವಾಗಿ ಮಾಡುತ್ತಿರುವುದು (ಇಂಗ್ಲಿಷ್). 192 ಪುಟದ ಹಳೆಯ ಪುಸ್ತಕಗಳನ್ನು ಸಹ ನೀಡಬಹುದು. ಫೆಬ್ರವರಿ: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್), ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಅಥವಾ ಸಭೆಯ ಸ್ಟಾಕಿನಲ್ಲಿರುವ ಯಾವುದಾದರೂ 192 ಪುಟದ ಪುಸ್ತಕ.
◼ ರಾಜ್ಯ ವಾರ್ತೆ ನಂ. 36 ಹಲವಾರು ಭಾಷೆಗಳಲ್ಲಿ ಲಭ್ಯವಿದೆ. ಇನ್ನೂ ಹೆಚ್ಚಿನ ಪ್ರತಿಗಳ ಆವಶ್ಯಕತೆಯಿರುವ ಸಭೆಗಳು ತಮ್ಮ ವಿನಂತಿಗಳನ್ನು ತುರ್ತಾಗಿ ಕಳುಹಿಸತಕ್ಕದ್ದು. ರಾಜ್ಯ ವಾರ್ತೆ ಕಾರ್ಯಾಚರಣೆಯು ಮುಗಿದ ನಂತರ, ಸಭೆಗಳು ಇನ್ನೂ ರಾಜ್ಯ ವಾರ್ತೆ ನಂ. 36ನ್ನು ಹೊಂದಿರುವುದಾದರೆ, ಪ್ರಚಾರಕರು ಮನೆಯಿಂದ ಮನೆಯ ಸೇವೆಯಲ್ಲಿ ಮತ್ತು ಬೇರೆ ಯಾವುದೇ ರೀತಿಯ ಸಾಕ್ಷಿಕಾರ್ಯದಲ್ಲಿ, ಟ್ರ್ಯಾಕ್ಟನ್ನು ಹೇಗೆ ಉಪಯೋಗಿಸುತ್ತಾರೋ ಅದೇ ರೀತಿಯಲ್ಲಿ ಇದನ್ನು ಸಹ ಉಪಯೋಗಿಸುವಂತೆ ಅವರಿಗೆ ಉತ್ತೇಜಿಸಬಹುದು. ಮನೆಯಲ್ಲಿ ಯಾರೂ ಇಲ್ಲದಿದ್ದರೆ, ದಾರಿಹೋಕರ ಕಣ್ಣಿಗೆ ಬೀಳದಂತಹ ಜಾಗದಲ್ಲಿ ಟ್ರ್ಯಾಕ್ಟನ್ನು ಹಾಕುವುದು ಒಳ್ಳೆಯದಾಗಿರುವುದು. ಇಷ್ಟೊಂದು ಪ್ರಾಮುಖ್ಯವಾದ ಸಂದೇಶವನ್ನು ಹೊಂದಿರುವ ಉಳಿದ ಎಲ್ಲ ಪ್ರತಿಗಳನ್ನು ವಿತರಿಸಲು ಪ್ರಯತ್ನಗಳು ಮಾಡಲ್ಪಡಬೇಕು.
◼ ಅಧ್ಯಕ್ಷ ಮೇಲ್ವಿಚಾರಕರು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸನ್ನು ಡಿಸೆಂಬರ್ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್ ವರದಿಯ ನಂತರ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ನಾವು ಮೃತಪಟ್ಟಾಗ ನಮಗೆ ಏನು ಸಂಭವಿಸುತ್ತದೆ? —ಉರ್ದು
◼ ಲಭ್ಯವಿರುವ ಹೊಸ ವಿಡಿಯೋಕ್ಯಾಸೆಟ್:
ಯುವ ಜನರ ಪ್ರಶ್ನೆ—ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ? —ಇಂಗ್ಲಿಷ್
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಕುರುಕ್ಷೇತ್ರದಿಂದ ಅರ್ಮಗೆದೋನಿಗೆ—ಮತ್ತು ನಿಮ್ಮ ಪಾರಾಗುವಿಕೆ —ಕನ್ನಡ, ತಮಿಳು ಹಾಗೂ ತೆಲುಗು
◼ ಲಭ್ಯವಿರುವ ಆಡಿಯೋಕ್ಯಾಸೆಟ್‌ಗಳು:
ಮ್ಯೂಸಿಕ್-ಆರ್ಕೆಸ್ಟ್ರಾ: ಕಿಂಗ್‌ಡಮ್ ಮೆಲಡೀಸ್, 1ರಿಂದ 8 ಸಂಖ್ಯೆಗಳು (ಎಂಟು ಕ್ಯಾಸೆಟ್‌ಗಳು)
(ಮೇಲೆ ಉಲ್ಲೇಖಿಸಲ್ಪಟ್ಟಿರುವ ಕ್ಯಾಸೆಟ್‌ಗಳಿಗೆ ಆ್ಯಲ್ಬಮ್‌ಗಳು ಸಿಗುವುದಿಲ್ಲ)