ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp20 ನಂ. 1 ಪು. 12-13
  • ದೇವರ ಸರ್ಕಾರದ ಬಗ್ಗೆ ಸತ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಸರ್ಕಾರದ ಬಗ್ಗೆ ಸತ್ಯ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ಅನುರೂಪ ಮಾಹಿತಿ
  • ಯೇಸು ದೇವರ ರಾಜ್ಯದ ಕುರಿತು ಏನು ಕಲಿಸಿದನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ದೇವರ ರಾಜ್ಯದ ಕುರಿತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ದೇವರ ರಾಜ್ಯವು ಆಳುತ್ತದೆ
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
wp20 ನಂ. 1 ಪು. 12-13
ಬಾಹ್ಯಾಕಾಶದಿಂದ ನೋಡಿದಾಗ ಭೂಮಿ ಹೀಗೆ ಕಾಣುತ್ತೆ. ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುತ್ತಿದೆ

ದೇವರ ಸರ್ಕಾರದ ಬಗ್ಗೆ ಸತ್ಯ

ದೇವರಿಗೆ ಹೇಗೆ ಪ್ರಾರ್ಥಿಸಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿಕೊಟ್ಟನು. ಅದು, “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ದೇವರ ಸರ್ಕಾರ ಅಂದ್ರೆ ಏನು? ಅದ್ರಿಂದ ನಮಗೆ ಏನು ಪ್ರಯೋಜನ? ಅದು ಯಾಕೆ ಬೇಗ ಬರಬೇಕು?

ದೇವರ ಸರ್ಕಾರಕ್ಕೆ ರಾಜ ಯೇಸು.

ಲೂಕ 1:31-33: “ನೀನು ಅವನಿಗೆ ಯೇಸು ಎಂದು ಹೆಸರಿಡಬೇಕು. ಅವನು ಮಹಾಪುರುಷನಾಗಿ ಮಹೋನ್ನತನ ಪುತ್ರನೆಂದು ಕರೆಯಲ್ಪಡುವನು; ಯೆಹೋವ ದೇವರು ಅವನ ತಂದೆಯಾದ ದಾವೀದನ ಸಿಂಹಾಸನವನ್ನು ಅವನಿಗೆ ಕೊಡುವನು ಮತ್ತು ಅವನು ಯಾಕೋಬನ ಮನೆತನದ ಮೇಲೆ ಸದಾಕಾಲಕ್ಕೂ ರಾಜನಾಗಿ ಆಳುವನು, ಅವನ ರಾಜ್ಯಕ್ಕೆ ಅಂತ್ಯವೇ ಇರದು.”

ಯೇಸು ಸಾರಿದ ಮುಖ್ಯ ವಿಷಯ ದೇವರ ಸರ್ಕಾರ.

ಮತ್ತಾಯ 9:35: “ಯೇಸು ಎಲ್ಲ ಪಟ್ಟಣಗಳಲ್ಲಿಯೂ ಹಳ್ಳಿಗಳಲ್ಲಿಯೂ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುತ್ತಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರ ಎಲ್ಲ ರೀತಿಯ ರೋಗಗಳನ್ನೂ ದೇಹದೌರ್ಬಲ್ಯಗಳನ್ನೂ ಗುಣಪಡಿಸುತ್ತಾ ಬಂದನು.”

ದೇವರ ಸರ್ಕಾರ ಯಾವಾಗ ಬರುತ್ತೆ ಅಂತ ಯೇಸು ಸೂಚನೆ ಕೊಟ್ಟನು.

ಮತ್ತಾಯ 24:7: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆಯೂ ಭೂಕಂಪಗಳೂ ಆಗುವವು.”

ಯೇಸುವಿನ ಶಿಷ್ಯರು ಇಂದು ದೇವರ ಸರ್ಕಾರದ ಬಗ್ಗೆ ಭೂಮಿಯ ಎಲ್ಲಾ ಕಡೆ ಹೇಳುತ್ತಿದ್ದಾರೆ.

ಮತ್ತಾಯ 24:14: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”

ದೇವರ ಸರ್ಕಾರದ ಬಗ್ಗೆ ಚುಟುಕು ಮಾಹಿತಿ

ಎಲ್ಲಿಂದ ಆಳುತ್ತೆ? ಈ ಸರ್ಕಾರದ ರಾಜಧಾನಿ ಸ್ವರ್ಗ ಅಂದ್ರೆ ಅದು ಸ್ವರ್ಗದಿಂದ ಆಳುತ್ತೆ. ದೇವರೇ ಇದರ ಸ್ಥಾಪಕ.—ದಾನಿಯೇಲ 2:44; ಮತ್ತಾಯ 4:17.

ಗುರಿ ಏನು? ದೇವರ ಸರ್ಕಾರ ಈ ಭೂಮಿಯನ್ನು ಒಂದು ಸುಂದರ ತೋಟವನ್ನಾಗಿ ಮಾಡುತ್ತೆ. ಆಗ ನಾವೆಲ್ಲರೂ ಒಂದು ಕುಟುಂಬವಾಗಿ ಶಾಂತಿ ಸಂತೋಷದಿಂದ ಜೀವಿಸಬಹುದು. ಅಲ್ಲಿ ಕಾಯಿಲೆ ಸಾವು ಯಾವುದೂ ಇರಲ್ಲ.—ಕೀರ್ತನೆ 37:11, 29.

ಆಳುವವರು ಯಾರು? ದೇವರು ಈ ಸರ್ಕಾರದ ರಾಜನಾಗಿ ಯೇಸುವನ್ನು ನೇಮಿಸಿದ್ದಾನೆ. ಭೂಮಿಯಿಂದ ಆರಿಸಲ್ಪಟ್ಟ 1,44,000 ಜನರು ಯೇಸುವಿನೊಂದಿಗೆ ರಾಜರಾಗಿ ಆಳುತ್ತಾರೆ.—ಲೂಕ 1:30-33; 12:32; ಪ್ರಕಟನೆ 14:1, 3.

ಪ್ರಜೆಗಳು ಯಾರು? ಯೇಸುವಿನ ಮಾತನ್ನು ಕೇಳುತ್ತಾ ದೇವರ ಸರ್ಕಾರದ ನಿಯಮಗಳನ್ನು ಪಾಲಿಸುವ ಜನರೇ ಅದರ ಪ್ರಜೆಗಳು.—ಮತ್ತಾಯ 7:21.

ಯೇಸುವಿನ ಅರ್ಹತೆಗಳು

ಒಳ್ಳೇ ರಾಜನಾಗಿ ಆಳುವ ಅರ್ಹತೆ ತನಗಿದೆ ಅಂತ ಯೇಸು ಭೂಮಿಯಲ್ಲಿ ಜೀವಿಸಿದ್ದಾಗಲೇ ತೋರಿಸಿಕೊಟ್ಟಿದ್ದಾನೆ. ಕೆಲವು ಉದಾಹರಣೆಗಳನ್ನು ನೋಡಿ:

  • ಬಡವರ ಬಗ್ಗೆ ಕಾಳಜಿ ಇತ್ತು.—ಲೂಕ 14:13, 14.

  • ಭ್ರಷ್ಟಾಚಾರ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದನು.—ಮತ್ತಾಯ 21:12, 13.

  • ಪ್ರಕೃತಿಯ ಮೇಲೆ ಹಿಡಿತವಿತ್ತು.—ಮಾರ್ಕ 4:39.

  • ಸಾವಿರಾರು ಜನರ ಹಸಿವನ್ನು ನೀಗಿಸಿದನು.—ಮತ್ತಾಯ 14:19-21.

  • ಎಲ್ಲಾ ರೀತಿಯ ರೋಗಗಳನ್ನು ವಾಸಿಮಾಡಿದನು.—ಮತ್ತಾಯ 8:16.

  • ಸತ್ತವರನ್ನು ಬದುಕಿಸಿದನು.—ಯೋಹಾನ 11:43, 44.

ದೇವರ ಸರ್ಕಾರದಿಂದ ಈಗಲೂ ಸಿಗುವ ಪ್ರಯೋಜನಗಳು

ಇಂದು ಸಹ, ಈ ಸರ್ಕಾರದ ಪ್ರಜೆಗಳು ಸಂತೋಷದ ಜೀವನ ನಡೆಸುತ್ತಿದ್ದಾರೆ. ಅವರಂತೆ ನೀವೂ ಈ ಸರ್ಕಾರದ ಪ್ರಜೆಗಳಾದರೆ ಸಂತೋಷದ ಜೀವನ ನಡೆಸಬಹುದು! ಉದಾಹರಣೆಗೆ,

  • ನೀವು ‘ಎಲ್ಲಾ ಜನರೊಂದಿಗೆ ಶಾಂತಿಯಿಂದ ಇರ್ತೀರ.’—ಇಬ್ರಿಯ 12:14.

  • ನಿಮ್ಮ ಸಂಸಾರ ಹಾಲೂ ಜೇನಿನಂತಿರುತ್ತೆ. ಯಾಕೆಂದರೆ ನೀವು ಗಂಡ ಹೆಂಡತಿ ಒಬ್ಬರಿಗೊಬ್ಬರು ಪ್ರೀತಿ ಗೌರವ ತೋರಿಸ್ತೀರ.—ಎಫೆಸ 5:22, 23, 33.

  • ನಿಮ್ಮ ಜೀವನಕ್ಕೆ ಅರ್ಥ ಇರುತ್ತೆ ಮತ್ತು ನೀವು ಖುಷಿಯಾಗಿರ್ತೀರ. ಯಾಕೆಂದರೆ ನೀವು ದೇವರು ಹೇಳಿದ ಹಾಗೆ ಜೀವನ ಮಾಡ್ತೀರ.—ಲೂಕ 11:28.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ