ಹೆತ್ತವರೇ—ನಿಮ್ಮ ಮಕ್ಕಳಲ್ಲಿ ಸದಾಚಾರವನ್ನು ತುಂಬಿಸಿರಿ
1 ಸದಾಚಾರವು ಸ್ವಾಭಾವಿಕವಾಗಿಯೋ ಇಲ್ಲವೆ, ಆಕಸ್ಮಿಕವಾಗಿಯೋ ಬರುವುದಿಲ್ಲ. ಮೇಲಾಗಿ, ಮಕ್ಕಳಲ್ಲಿ ಸದಾಚಾರವನ್ನು ತುಂಬಿಸುವುದಕ್ಕೆ ಸಮಯ ಹಿಡಿಯುತ್ತದೆ. ‘ತುಂಬಿಸು’ ಎಂಬುದರ ಅರ್ಥ, ‘ಕ್ರಮೇಣ ಮುಟ್ಟಿಸು’ ಅಥವಾ ‘ಹನಿ ಹನಿಯಾಗಿ ಹಾಕು’ ಎಂಬುದಾಗಿದೆ. ‘ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಮಕ್ಕಳನ್ನು ಸಾಕಿಸಲಹಲು,’ ಹೆತ್ತವರಿಂದ ಸತತವಾದ ಪ್ರಯತ್ನದ ಅಗತ್ಯವಿದೆ.—ಎಫೆ. 6:4.
2 ಶೈಶವದಿಂದ ಪ್ರಾರಂಭಿಸಿರಿ: ಕಲಿಯಲು ಹಾಗೂ ಹೊಸ ವಿಷಯಗಳನ್ನು ಮಾಡುವುದರಲ್ಲಿ ಎಳೆಯ ಮಕ್ಕಳು ತೋರಿಸುವ ಸಾಮರ್ಥ್ಯವು ಗಮನಾರ್ಹವಾದದ್ದಾಗಿದೆ. ಅನೇಕ ವೇಳೆ, ಯುವಕರು ಒಂದು ಹೊಸ ಭಾಷೆಯನ್ನು ಕಲಿಯಲು ಕಷ್ಟ ಪಡುತ್ತಾರಾದರೂ, ಇನ್ನೂ ಶಾಲೆಗೆ ಸೇರಿಲ್ಲದ ಮಕ್ಕಳು ಎರಡು ಅಥವಾ ಮೂರು ಭಾಷೆಗಳನ್ನು ಒಂದೇ ಸಮಯದಲ್ಲಿ ಕಲಿತುಕೊಳ್ಳುತ್ತಾರೆ. ಒಳ್ಳೆಯ ಪ್ರವೃತ್ತಿಗಳನ್ನು ಕಲಿತುಕೊಳ್ಳಲು ನಿಮ್ಮ ಮಗು ತುಂಬ ಎಳೆಯವನಾಗಿದ್ದಾನೆ ಎಂದು ನಿಮಗೆ ಎಂದಿಗೂ ಅನಿಸದಿರಲಿ. ಬೈಬಲ್ ಸತ್ಯಗಳ ಬೋಧನೆಯನ್ನು ಬೇಗನೆ ಆರಂಭಿಸಿ ಮುಂದುವರಿಸುವುದಾದರೆ, ಮಗುವಿನ ಮನಸ್ಸು ಕೆಲವೇ ವರ್ಷಗಳೊಳಗೆ, “ರಕ್ಷಣೆಹೊಂದಿಸುವ ಜ್ಞಾನ”ದಿಂದ ತುಂಬಿರುವುದು.—2 ತಿಮೊ. 3:14ಬಿ, 15.
3 ಕ್ಷೇತ್ರ ಸೇವೆಯನ್ನು ರೂಢಿಯಾಗಿ ಮಾಡಿಕೊಳ್ಳಿ: ದೇವರ ರಾಜ್ಯದ ಕುರಿತಾದ ಶುಭವರ್ತಮಾನವನ್ನು ಕ್ರಮಬದ್ಧವಾಗಿ ಸಾರುವುದು, ಒಂದು ಮಗು ರೂಪುಗೊಳ್ಳುತ್ತಿರುವ ವರುಷಗಳಲ್ಲಿ ತುಂಬಿಸಬೇಕಾದ ಉಪಯುಕ್ತವುಳ್ಳ ಅಭ್ಯಾಸಗಳಲ್ಲಿ ಒಂದಾಗಿದೆ. ಇದನ್ನು ಅನೇಕ ಹೆತ್ತವರು, ತಮ್ಮ ಮಕ್ಕಳು ಇನ್ನೂ ಶಿಶುಗಳಾಗಿರುವಾಗಲೇ ಮನೆಯಿಂದ ಮನೆಯ ಸೇವೆಗೆ ಕೊಂಡೊಯ್ಯುವುದರ ಮೂಲಕ ಪ್ರಾರಂಭಿಸುತ್ತಾರೆ. ಸಾಕ್ಷಿ ಕಾರ್ಯದಲ್ಲಿ ಕ್ರಮವಾಗಿ ಪಾಲ್ಗೊಳ್ಳುತ್ತಿರುವ ಹೆತ್ತವರನ್ನು ನೋಡುವ ಮಕ್ಕಳಿಗೆ, ಕ್ಷೇತ್ರ ಸೇವೆಗೆ ಗಣ್ಯತೆ ಹಾಗೂ ಹುರುಪನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಶುಶ್ರೂಷೆಯ ಪ್ರತಿಯೊಂದು ಕ್ಷೇತ್ರದಲ್ಲಿ ಹೇಗೆ ಭಾಗವಹಿಸುವುದು ಎಂಬುದನ್ನು ಹೆತ್ತವರು ಮಕ್ಕಳಿಗೆ ತೋರಿಸಬಹುದು.
4 ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಸೇರಿಕೊಳ್ಳುವುದು ಕೂಡ ಮಕ್ಕಳಿಗೆ ನೆರವು ನೀಡುವುದು. ಒಳ್ಳೆಯ ಅಭ್ಯಾಸದ ಪ್ರವೃತ್ತಿಗಳನ್ನು ಹಾಗೂ ಅರ್ಥಭರಿತ ವಾಚನವನ್ನು ಹೇಗೆ ಮಾಡುವುದು ಎಂಬುದನ್ನು ಇದು ಅವರಿಗೆ ಕಲಿಸುವುದು. ಬೈಬಲಿನ ಕುರಿತು ಸಂಭಾಷಿಸಲು, ಪುನರ್ಭೇಟಿಗಳನ್ನು ಮಾಡಲು, ಮತ್ತು ಬೈಬಲ್ ಅಭ್ಯಾಸಗಳನ್ನು ನಡೆಸಲು ಅವರು ಕಲಿತುಕೊಳ್ಳುವರು. ಇಂತಹ ತರಬೇತಿ, ಅವರು ಪಯನೀಯರರಾಗಿ ನಂತರ ಸೇವೆಯ ವಿಶೇಷ ಸುಯೋಗಗಳನ್ನು ಪಡೆದುಕೊಳ್ಳಲು ಅವರನ್ನು ಪ್ರೇರೇಪಿಸಬಹುದು. ಅನೇಕ ಬೆತೆಲ್ ಸೇವಕರು ಹಾಗೂ ವಿಶೇಷ ಪಯನೀಯರರು ತಾವು ಶಾಲೆಯಲ್ಲಿ ಪಾಲ್ಗೊಂಡ ಆ ಮಧುರವಾದ ದಿನಗಳನ್ನು ನೆನಪಿಗೆ ತಂದು, ತಾವು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಸಹಾಯವನ್ನು ಒದಗಿಸಿದ್ದು ಅದೇ ಆಗಿದೆ ಎಂಬುದನ್ನು ಜ್ಞಾಪಿಸಿಕೊಳ್ಳುತ್ತಾರೆ.
5 ನಾವು ಮಹಾ ಕುಂಬಾರನಾದ ಯೆಹೋವನ ಕೈಯಲ್ಲಿ ಜೇಡಿಮಣ್ಣಿನಂತಿದ್ದೇವೆ. (ಯೆಶಾ. 64:8) ಜೇಡಿಮಣ್ಣು ಹಸಿಯಾಗಿರುವಾಗ ಅದನ್ನು ಸರಿಯಾದ ರೂಪಕ್ಕೆ ತರುವುದು ಸುಲಭ. ಒಂದುವೇಳೆ ಆ ಮಣ್ಣು ಒಣಗುವಲ್ಲಿ ಅದು ಗಟ್ಟಿಯಾಗುವುದು. ಜನರ ವಿಷಯದಲ್ಲೂ ಇದು ನಿಜ. ಅವರು ಎಳೆಯವರಾಗಿರುವಾಗ ಬೇಗ ಮಣಿಯುತ್ತಾರೆ—ಎಷ್ಟು ಎಳೆಯರೋ, ಅಷ್ಟು ಉತ್ತಮವಾಗಿ ಮಣಿಯುತ್ತಾರೆ. ಅವರ ಎಳೆಯ ಕೋಮಲವಾದ ವರುಷಗಳು ರೂಪುಗೊಳ್ಳುವ ವರುಷಗಳಾಗಿವೆ. ಆಗ ಅವರು, ಒಂದೇ ಒಳ್ಳೆಯದಕ್ಕೆ ಇಲ್ಲವೆ ಕೆಟ್ಟದ್ದಕ್ಕೆ ರೂಪಿಸಲ್ಪಡುವರು. ಕಾಳಜಿ ವಹಿಸುವ ಹೆತ್ತವರಾಗಿ, ಕ್ರೈಸ್ತ ಶುಶ್ರೂಷೆಯಲ್ಲಿ ಬೇಕಾದ ಉಪಯುಕ್ತವಾದ ಅಭ್ಯಾಸವನ್ನು ನಿಮ್ಮ ಮಕ್ಕಳಲ್ಲಿ ತುಂಬಿಸಲು, ಅವರು ಶಿಶುಗಳಾಗಿರುವಾಗಲೇ ಪ್ರಾರಂಭಿಸಿ.