ಪ್ರಕಟನೆಗಳು
◼ ಜನವರಿ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಸಭೆಯ ಸ್ಟಾಕ್‌ನಲ್ಲಿರುವ ಯಾವುದೇ 192 ಪುಟದ ಹಳೆಯ ಪುಸ್ತಕ. ಕುಟುಂಬ ಸಂತೋಷದ ರಹಸ್ಯ ಪುಸ್ತಕಗಳು ಇರುವ ಸಭೆಗಳು ಅದನ್ನು ಕೂಡ ನೀಡಬಹುದು. ಫೆಬ್ರವರಿ: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಅಥವಾ ಸೃಷ್ಟಿಯಿಂದಲೋ?, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ, ಅಥವಾ ಸಭೆಯ ಸ್ಟಾಕ್‌ನಲ್ಲಿರುವ ಯಾವುದೇ 192 ಪುಟದ ಹಳೆಯ ಪುಸ್ತಕ. ಮಾರ್ಚ್: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ವಿಶೇಷವಾದ ಪ್ರಯತ್ನವು ಮಾಡಲ್ಪಡುವುದು. ಏಪ್ರಿಲ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಯಾರಾದರೂ ಆಸಕ್ತಿಯನ್ನು ತೋರಿಸುವಲ್ಲಿ ಪತ್ರಿಕಾ ಮಾರ್ಗಗಳನ್ನು ಆರಂಭಿಸಲು ಪುನರ್ಭೇಟಿಗಳನ್ನು ಮಾಡಿ. ಪತ್ರಿಕಾ ಮಾರ್ಗವು ಪ್ರಾಯೋಗಿಕವಾಗಿಲ್ಲದಿದ್ದರೆ ಮಾತ್ರ ಒಂದು ಚಂದಾವನ್ನು ನೀಡಬಹುದು. ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಸಲುವಾಗಿ, ಅಪೇಕ್ಷಿಸು ಬ್ರೋಷರನ್ನು ನೀಡಿರಿ.
◼ ಜನವರಿ 14ರ ವಾರದ ಸೇವಾ ಕೂಟಕ್ಕೆ ಹಾಜರಿರುವ ಎಲ್ಲ ದೀಕ್ಷಾಸ್ನಾನ ಪಡೆದುಕೊಂಡ ಪ್ರಚಾರಕರು ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡನ್ನು ಮತ್ತು ಅವರ ಮಕ್ಕಳಿಗಾಗಿ ಐಡೆಂಟಿಟಿ ಕಾರ್ಡನ್ನು ಪಡೆದುಕೊಳ್ಳಬಹುದು.
◼ ಫೆಬ್ರವರಿಯಿಂದ ಮಾರ್ಚ್ 3ರೊಳಗೆ ಪ್ರಾರಂಭಿಸುತ್ತಾ, ಸರ್ಕಿಟ್ ಮೇಲ್ವಿಚಾರಕರು ಕೊಡುವ ಹೊಸ ಬಹಿರಂಗ ಭಾಷಣವು, “ಅಪಾಯಕರ ಲೋಕದಲ್ಲಿ ಭದ್ರತೆಯನ್ನು ಕಂಡುಕೊಳ್ಳುವುದು” ಎಂದಾಗಿರುವುದು.
◼ ಈ ವರ್ಷ, ಮಾರ್ಚ್ 28ರ ಗುರುವಾರದಂದು ಸೂರ್ಯಾಸ್ತಮಾನದ ನಂತರ ಜ್ಞಾಪಕಾಚರಣೆಯನ್ನು ಆಚರಿಸಲಿಕ್ಕಾಗಿ ಸಭೆಗಳು ತಮಗೆ ಅನುಕೂಲಕರವಾದಂಥ ಏರ್ಪಾಡುಗಳನ್ನು ಮಾಡಿಕೊಳ್ಳಬೇಕು. ಭಾಷಣವು ಸ್ವಲ್ಪ ಬೇಗನೆ ಪ್ರಾರಂಭವಾಗಬಹುದಾದರೂ, ಜ್ಞಾಪಕದ ಕುರುಹುಗಳನ್ನು ಸೂರ್ಯಾಸ್ತಮಾನಕ್ಕೆ ಮುಂಚೆ ದಾಟಿಸಬಾರದು. ನಿಮ್ಮ ಪ್ರದೇಶದಲ್ಲಿ ಸೂರ್ಯಾಸ್ತಮಾನವು ಯಾವಾಗ ಆಗುತ್ತದೆ ಎಂಬುದರ ಬಗ್ಗೆ ಸ್ಥಳಿಕ ಮೂಲಗಳನ್ನು ಸಂಪರ್ಕಿಸಿ ತಿಳಿದುಕೊಳ್ಳಿರಿ. ಪ್ರತಿ ಸಭೆಯು ತನ್ನ ಸ್ವಂತ ಜ್ಞಾಪಕಾಚರಣೆಯನ್ನು ನಡೆಸುವುದು ಒಳ್ಳೆಯದಾಗಿರುವುದಾದರೂ, ಇದು ಯಾವಾಗಲೂ ಸಾಧ್ಯವಾಗದೇ ಇರಬಹುದು. ಒಂದೇ ರಾಜ್ಯ ಸಭಾಗೃಹವನ್ನು ಹಲವಾರು ಸಭೆಗಳು ಉಪಯೋಗಿಸುತ್ತಿರುವುದಾದರೆ, ಒಂದು ಅಥವಾ ಹೆಚ್ಚಿನ ಸಭೆಗಳು ಆ ಸಂಜೆಗಾಗಿ ಉಪಯೋಗಿಸಲು ಬೇರೊಂದು ಸೌಕರ್ಯವನ್ನು ಪಡೆದುಕೊಳ್ಳಬಹುದು. ಸಾಧ್ಯವಿರುವಲ್ಲಿ, ಹಾಜರಿರುವವರನ್ನು ಅಭಿವಂದಿಸಲು, ಹೊಸದಾಗಿ ಆಸಕ್ತಿ ತೋರಿಸುತ್ತಿರುವವರನ್ನು ಪ್ರೋತ್ಸಾಹಿಸಲು ಮತ್ತು ಆ ಸಂದರ್ಭದಿಂದ ಪೂರ್ಣ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಕಾರ್ಯಕ್ರಮಗಳ ನಡುವೆ ಕಡಿಮೆಪಕ್ಷ 40 ನಿಮಿಷಗಳಷ್ಟು ಸಮಯವನ್ನು ಅನುಮತಿಸುವಂತೆ ನಾವು ಸಲಹೆ ನೀಡುತ್ತೇವೆ. ಸ್ಥಳಿಕವಾಗಿ ಯಾವ ಏರ್ಪಾಡುಗಳು ಉತ್ತಮವಾಗಿರುವವು ಎಂಬುದನ್ನು ಹಿರಿಯರ ಮಂಡಲಿಯು ನಿರ್ಧರಿಸಬೇಕು.
◼ ಅಧ್ಯಕ್ಷ ಮೇಲ್ವಿಚಾರಕನು ಪ್ರತಿ ತಿಂಗಳು ಷಿಪ್ಪಿಂಗ್ ಅಕ್ನಾಲಿಜ್‌ಮಂಟ್‌ಗಳನ್ನು ಪಡೆದುಕೊಳ್ಳುವಾಗ, ಸೊಸೈಟಿ ಕಿಂಗ್‌ಡಮ್ ಹಾಲ್ ಫಂಡ್‌ನ ಮತ್ತು ಲೋಕವ್ಯಾಪಕ ಕೆಲಸಕ್ಕಾಗಿ ಕೊಡಲ್ಪಟ್ಟ ಕಾಣಿಕೆಗಳ ಅಕ್ನಾಲಿಜ್‌ಮಂಟ್‌ಗಳನ್ನು, ಮುಂದಿನ ಅಕೌಂಟ್ಸ್ ವರದಿಯೊಂದಿಗೆ ಸೇರಿಸಿ ಇವು ಸಭೆಗೆ ಓದಲ್ಪಡುವುದನ್ನು ಖಚಿತಪಡಿಸಿಕೊಳ್ಳಬೇಕು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II —ಇಂಗ್ಲಿಷ್, ಕನ್ನಡ, ತಮಿಳು, ಮಲೆಯಾಳಂ
ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಅಥವಾ ಸೃಷ್ಟಿಯಿಂದಲೋ? (ಚಿಕ್ಕ ಸೈಸ್) —ತಮಿಳು
ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ —ಇಂಗ್ಲಿಷ್, ತಮಿಳು, ಮರಾಠಿ, ಮಲೆಯಾಳಂ, ಹಿಂದಿ
ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ (ಟ್ರ್ಯಾಕ್ಟ್ ನಂ. 13) —ನಿಕೊಬರೀಸ್
ಯೆಹೋವನ ಸಾಕ್ಷಿಗಳ ನಂಬಿಕೆ ಏನು? (ಟ್ರ್ಯಾಕ್ಟ್ ನಂ. 14) —ನಿಕೊಬರೀಸ್
ಶಾಂತಿಭರಿತ ಹೊಸ ಲೋಕದಲ್ಲಿ ಜೀವನ (ಟ್ರ್ಯಾಕ್ಟ್ ನಂ. 15) —ನಿಕೊಬರೀಸ್
ನಿಮ್ಮಲ್ಲಿ ಅಮರ ಆತ್ಮವಿದೆಯೋ? (ಟ್ರ್ಯಾಕ್ಟ್ ನಂ. 25) —ಇಂಗ್ಲಿಷ್, ತಮಿಳು, ಮೀಸೊ
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಅಥವಾ ಸೃಷ್ಟಿಯಿಂದಲೋ? (ಚಿಕ್ಕ ಸೈಸ್) —ಮಲೆಯಾಳಂ
ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (29 ಗೀತೆಗಳು) —ಹಿಂದಿ
ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! —ತಮಿಳು, ತೆಲುಗು, ನೇಪಾಲಿ
ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ (ಟ್ರ್ಯಾಕ್ಟ್ ನಂ. 13) —ಬಂಗಾಲಿ
ಯೆಹೋವನ ಸಾಕ್ಷಿಗಳ ನಂಬಿಕೆ ಏನು? (ಟ್ರ್ಯಾಕ್ಟ್ ನಂ. 14) —ಬಂಗಾಲಿ
ಶಾಂತಿಭರಿತ ಹೊಸ ಲೋಕದಲ್ಲಿ ಜೀವನ (ಟ್ರ್ಯಾಕ್ಟ್ ನಂ. 15) —ಅಸ್ಸಾಮಿ, ಇಂಗ್ಲಿಷ್, ಒರಿಯಾ, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮರಾಠಿ, ಮಲೆಯಾಳಂ, ಹಿಂದಿ
ಕುಟುಂಬ ಜೀವನವನ್ನು ಆನಂದಿಸಿರಿ (ಟ್ರ್ಯಾಕ್ಟ್ ನಂ. 21) ಇಂಗ್ಲಿಷ್, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮರಾಠಿ, ಮಲೆಯಾಳಂ, ಹಿಂದಿ
ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ? (ಟ್ರ್ಯಾಕ್ಟ್ ನಂ. 22) —ಇಂಗ್ಲಿಷ್, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮರಾಠಿ, ಮಲೆಯಾಳಂ, ಹಿಂದಿ
◼ ಮೇಲೆ ಕೊಡಲ್ಪಟ್ಟಿರುವ ಐಟಮ್‌ಗಳಿಗಾಗಿ ನಿಮ್ಮ ಲಿಟ್‌ರೇಚರ್ ರಿಕ್ವೆಸ್ಟ್‌ಗಳನ್ನು (S-14) ಕಳುಹಿಸಿಕೊಡುವ ಮುನ್ನ, ನಿಮ್ಮ ಹಿಂದಿನ ವಿನಂತಿಯ ಬಾಕಿ ಉಳಿದಿರುವ ಐಟಮ್‌ಗಳು ನಿಮ್ಮ ಸಭೆಗೆ ಕಳುಹಿಸಲ್ಪಡುವುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ.