“ಸ್ವಲ್ಪವನ್ನು ಪ್ರತ್ಯೇಕಿಸಿಡಿ”
ಆದಿ ಕ್ರೈಸ್ತ ಸಭೆಯಲ್ಲಿ, ಗಮನಕ್ಕೆ ಅರ್ಹವಾದಂಥ ಐಹಿಕ ಅಗತ್ಯಗಳಿದ್ದವು. ಪ್ರತಿಯೊಬ್ಬ ವ್ಯಕ್ತಿಯು ಸಾಫಲ್ಯವನ್ನು ಪಡೆದುಕೊಂಡಾಗ, ಆ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಒಂದು ಕಾಣಿಕೆಯೋಪಾದಿ “ಸ್ವಲ್ಪವನ್ನು ಪ್ರತ್ಯೇಕಿಸಿ”ಡುವಂತೆ ಉತ್ತೇಜಿಸಲ್ಪಟ್ಟನು. (1 ಕೊರಿಂ. 16:1-3, NW) ಅವರ ಧಾರಾಳ ಮನಸ್ಸಿನಿಂದಾಗಿ, ಎಲ್ಲರೂ “ದೇವರಿಗೆ ಕೃತಜ್ಞತಾಸ್ತುತಿಯನ್ನು” ನೀಡುವುದರಲ್ಲಿ ಆನಂದಿಸಿದರು.—2 ಕೊರಿಂ. 9:11, 12.
ಇಂದು ಯೆಹೋವನ ಜನರ ಲೋಕವ್ಯಾಪಕ ಕೆಲಸವು ವಿಸ್ತರಿಸುತ್ತಾ ಇದೆ, ಮತ್ತು ಇದು ಹೆಚ್ಚೆಚ್ಚು ಹಣಕಾಸಿನ ಬೆಂಬಲವನ್ನು ಅವಶ್ಯಪಡಿಸುತ್ತದೆ. ಈ ಅಗತ್ಯವನ್ನು ಪೂರೈಸುವುದರಲ್ಲಿ ನಾವು ಕೂಡ “ಸ್ವಲ್ಪವನ್ನು ಪ್ರತ್ಯೇಕಿಸಿ”ಡುವುದು ಯೋಗ್ಯವಾದದ್ದಾಗಿದೆ. (2 ಕೊರಿಂ. 8:3, 4) ಕಳೆದ ವರ್ಷ ಸೊಸೈಟಿಯ ಮೇಲೆ ವಿಧಿಸಲ್ಪಟ್ಟ ಹಣಕಾಸಿನ ನಿರ್ಬಂಧಗಳ ಕುರಿತಾಗಿ ಕೇಳಿಸಿಕೊಂಡ ನಂತರ, ಅನೇಕರು ಸ್ವಲ್ಪ ಹೆಚ್ಚನ್ನು “ಪ್ರತ್ಯೇಕಿಸಿ”ಡಲು ಏರ್ಪಾಡುಗಳನ್ನು ಮಾಡಿದರು. ಇಂತಹ ಪ್ರಯತ್ನಗಳು ತುಂಬ ಗಣ್ಯಮಾಡಲ್ಪಡುತ್ತವೆ ಮತ್ತು ಯೆಹೋವನ ಸಮೃದ್ಧವಾದ ಆಶೀರ್ವಾದಗಳನ್ನು ತರುತ್ತವೆ.—ಮಲಾ. 3:10.
ಕ್ಷೇತ್ರ ಸೇವೆಗಾಗಿರಲಿ ಅಥವಾ ವೈಯಕ್ತಿಕ ಉಪಯೋಗಕ್ಕಾಗಿರಲಿ, ಪ್ರತಿ ಬಾರಿ ನಾವು ಪತ್ರಿಕೆಗಳು ಅಥವಾ ಸಾಹಿತ್ಯವನ್ನು ಪಡೆದುಕೊಳ್ಳುವಾಗ, ಕಾಣಿಕೆಗೆಂದು ಸ್ವಲ್ಪ ಹಣವನ್ನು ಪ್ರತ್ಯೇಕಿಸಿಡುವುದು ಒಂದು ಒಳ್ಳೆಯ ರೂಢಿಯಾಗಿದೆ. ನಮ್ಮ ಉದಾರ ಮನಸ್ಸಿನ ಕೊಡುವಿಕೆಯು ಸೊಸೈಟಿಗೆ ಸಹಾಯಕಾರಿಯಾಗಿದೆ; ಕೇವಲ ಪ್ರಕಾಶನಗಳ ಉತ್ಪಾದನೆ ಹಾಗೂ ವಿತರಣೆಯಲ್ಲಿ ಒಳಗೂಡಿರುವ ವೆಚ್ಚವನ್ನು ನೋಡಿಕೊಳ್ಳುವುದರಲ್ಲಿ ಮಾತ್ರವಲ್ಲದೆ, ಲೋಕವ್ಯಾಪಕವಾಗಿ ನಡೆಸಲ್ಪಡುವ ಇನ್ನಿತರ ಚಟುವಟಿಕೆಗಳಿಗಾಗಿಯೂ ಸಹಾಯಕಾರಿಯಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಇದರಲ್ಲಿ ಪಾಲ್ಗೊಳ್ಳುವಂತೆ ಮಕ್ಕಳನ್ನು ಕೂಡ ಪ್ರೋತ್ಸಾಹಿಸಬಹುದು. ತಮ್ಮ ಖರ್ಚುವೆಚ್ಚಗಳಿಗಾಗಿ ಹೆತ್ತವರು ತಮಗೆ ಕೊಡುವಂತಹ ಹಣದಿಂದ ಅವರು ವೈಯಕ್ತಿಕವಾಗಿ ಸ್ವಲ್ಪ ಮೊತ್ತವನ್ನು ‘ಪ್ರತ್ಯೇಕಿಸಿಡಲು’ ಶಕ್ತರಾಗಿರುವಾಗ, ಅದು ಎಷ್ಟೇ ಚಿಕ್ಕ ಮೊತ್ತವಾಗಿರುವುದಾದರೂ ಅದು ಅವರಿಗೆ ಅಪಾರ ಆನಂದವನ್ನು ನೀಡುತ್ತದೆ.
ಆದರೂ, ಇದನ್ನು ಮರೆತುಬಿಡುವುದು ಬಹಳ ಸುಲಭ. ಒಂದು ಸಭೆಯಲ್ಲಿ, ಸೊಸೈಟಿಗೆ ಕಳುಹಿಸಲ್ಪಟ್ಟ ಒಟ್ಟು ಮೊತ್ತವು ಈ ಮುಂಚಿನ ವರ್ಷಗಳ ಮೊತ್ತಕ್ಕಿಂತ ತುಂಬ ಕಡಿಮೆಯಾಗಿತ್ತು, ಆದರೆ ಸಭೆಯ ಬ್ಯಾಲೆನ್ಸ್ ಮಾತ್ರ ಏಕಪ್ರಕಾರವಾಗಿ ಬೆಳೆಯುತ್ತಿತ್ತು ಎಂಬುದನ್ನು ಹಿರಿಯರು ಗಮನಿಸಿದರು. ಈ ಕೆಲಸಕ್ಕಾಗಿರುವ ಖರ್ಚುವೆಚ್ಚಗಳನ್ನು ಪೂರೈಸಸಾಧ್ಯವಾಗುವಂತೆ, ತಮ್ಮ ದೇಶದಲ್ಲಿರುವ ಪ್ರತಿಯೊಬ್ಬ ಪ್ರಚಾರಕನು ಅವರ ಎಣಿಕೆಗನುಸಾರ ಪ್ರತಿ ತಿಂಗಳು ಎಷ್ಟು ಹಣವನ್ನು ಕಳುಹಿಸುವ ಅಗತ್ಯವಿದೆ ಎಂಬುದನ್ನು ಅವರು ಲೆಕ್ಕಹಾಕಿದರು. ಸಹೋದರರು ಇದಕ್ಕೆ ಪ್ರತಿಕ್ರಿಯಿಸಿದರು ಮತ್ತು ಲೋಕವ್ಯಾಪಕ ಕೆಲಸಕ್ಕಾಗಿ ಮಾಸಿಕ ಕಾಣಿಕೆಯೋಪಾದಿ ಕಡಿಮೆಪಕ್ಷ ಅಷ್ಟು ಮೊತ್ತವನ್ನು ತಮ್ಮ ಸಭೆಯಿಂದ ಕಳುಹಿಸಲು ಒಪ್ಪಿಕೊಂಡರು. ಮತ್ತು ಕಾಣಿಕೆ ಪೆಟ್ಟಿಗೆಗಳಲ್ಲಿ ಒಂದುವೇಳೆ ಕಡಿಮೆ ಹಣವಿರುವಲ್ಲಿ, ಸಭೆಯ ನಿಧಿಯಿಂದ ಅದನ್ನು ಸರಿದೂಗಿಸಲು ನಿರ್ಧರಿಸಿದರು.
ಅನೇಕ ಪತ್ರಿಕೆಗಳು ಉಪಯೋಗಿಸಲ್ಪಡದೆ ಹಾಗೆಯೇ ಬಿದ್ದಿವೆ ಮತ್ತು ಹೀಗೆ ಅಮೂಲ್ಯ ಸಂಪತ್ತು ಹಾಳಾಗುತ್ತಿದೆ ಎಂಬುದನ್ನು ಇನ್ನೊಂದು ಸಭೆಯು ಗಮನಿಸಿತು. ಅಲ್ಲಿನ ಹಿರಿಯರು, ಸ್ಥಳಿಕ ದೋಣಿ (ಫೆರಿ ಬೋಟ್)ಗಳು ಹೊರಡುವಂತಹ ಸ್ಥಳದಲ್ಲಿ ವಿಶೇಷವಾದ ಪತ್ರಿಕಾ ಚಟುವಟಿಕೆಯನ್ನು ಏರ್ಪಡಿಸಿದರು. ಕಾಣಿಕೆಯನ್ನು ನೀಡಲು ತಮಗಿರುವ ಸುಯೋಗದ ಕುರಿತು ಸಾರ್ವಜನಿಕರಲ್ಲಿ ಹೇಗೆ ಅರಿವನ್ನು ಮೂಡಿಸಬೇಕು ಎಂಬುದರ ಕುರಿತು ಪ್ರಚಾರಕರಿಗೆ ಸೂಚನೆಗಳನ್ನು ನೀಡಿದರು. ಇದರ ಫಲಿತಾಂಶವಾಗಿ, ಆ ತಿಂಗಳಿನಲ್ಲಿ ಆ ಸಭೆಯು 15,000 ರೂಪಾಯಿಗಳನ್ನು ಸೊಸೈಟಿಗೆ ಕಳುಹಿಸಲು ಶಕ್ತವಾಯಿತು.
ನೀವು ಹಾಗೂ ನಿಮ್ಮ ಕುಟುಂಬದವರು ‘ಸ್ವಲ್ಪವನ್ನು ಪ್ರತ್ಯೇಕಿಸಿಡು’ವುದರ ಕುರಿತು ಆಲೋಚಿಸಿದ್ದೀರೋ? ಐಹಿಕ ದಾನವನ್ನು ಅನೇಕ ರೀತಿಗಳಲ್ಲಿ ಮಾಡಬಹುದು. (2001, ನವೆಂಬರ್ 1ರ ಕಾವಲಿನಬುರುಜುವಿನ 28-9ನೆಯ ಪುಟಗಳನ್ನು ನೋಡಿರಿ.) ಇದನ್ನು ನಾವು ಸೂಕ್ತವಾಗಿಯೇ ನಿಜವಾದ ಸಂತೋಷವನ್ನು ತರುವ ಒಂದು ಸುಯೋಗವಾಗಿ ವೀಕ್ಷಿಸುತ್ತೇವೆ.—ಅ. ಕೃ. 20:35.