ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ ಜನವರಿ: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಬದಲಿ ನೀಡುವಿಕೆಯಾಗಿ, ಬೈಬಲ್ ಕಥೆಗಳ ನನ್ನ ಪುಸ್ತಕ, ಬೈಬಲ್—ದೇವರ ವಾಕ್ಯವೊ ಮನುಷ್ಯನದ್ದೊ?a ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳನ್ನು ಉಪಯೋಗಿಸಬಹುದು. ಈ ಬದಲಿ ನೀಡುವಿಕೆಗಳಲ್ಲಿ ಯಾವುದರ ಸರಬರಾಯಿಯೂ ನಿಮ್ಮ ಸಭೆಯಲ್ಲಿ ಇಲ್ಲದಿರುವಲ್ಲಿ, ನೀವು ಉಪಯೋಗಿಸಬಹುದಾದ ಹೆಚ್ಚಿನ ಸರಬರಾಯಿ ಸಮೀಪದಲ್ಲಿರುವ ಯಾವುದೇ ಸಭೆಗಳಲ್ಲಿ ಇವೆಯೋ ಎಂಬುದನ್ನು ದಯವಿಟ್ಟು ವಿಚಾರಿಸಿ. ಫೆಬ್ರವರಿ: ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!, ಅಥವಾ 32-ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,b ನಿತ್ಯಕ್ಕೂ ಬಾಳುವ ದೈವಿಕ ನಾಮ,c ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ,d ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ?,e ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ?f ಎಂಬ ಬ್ರೋಷರುಗಳನ್ನು ನೀಡಬಹುದು. ಮಾರ್ಚ್: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ವಿಶೇಷ ಪ್ರಯತ್ನವು ಮಾಡಲ್ಪಡುವುದು. ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತ್ಯೇಕ ಪ್ರತಿಗಳನ್ನು ನೀಡಿರಿ. ಪುನರ್ಭೇಟಿಗಳಲ್ಲಿ ಆಸಕ್ತಿಯು ಕಂಡುಕೊಳ್ಳಲ್ಪಟ್ಟಾಗ, ಆ ವ್ಯಕ್ತಿಯನ್ನು ಪತ್ರಿಕಾ ಮಾರ್ಗದಲ್ಲಿ ಒಳಗೂಡಿಸಿರಿ. ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಉದ್ದೇಶದಿಂದ ಅಪೇಕ್ಷಿಸು ಬ್ರೋಷರನ್ನು ನೀಡಿರಿ.
◼ ಫೆಬ್ರವರಿಯಿಂದ ಮಾರ್ಚ್ 2ರೊಳಗೆ ಪ್ರಾರಂಭಿಸುತ್ತಾ, ಸರ್ಕಿಟ್ ಮೇಲ್ವಿಚಾರಕರು ಕೊಡಲಿರುವ ಹೊಸ ಬಹಿರಂಗ ಭಾಷಣವು, “ಅಂಧಕಾರದ ಲೋಕದಿಂದ ಬಿಡುಗಡೆ,” ಎಂದಾಗಿರುವುದು.
◼ ಈ ವರ್ಷ ಏಪ್ರಿಲ್ 16ರ ಬುಧವಾರದಂದು, ಸೂರ್ಯಾಸ್ತಮಾನದ ಬಳಿಕ ಜ್ಞಾಪಕಾಚರಣೆಯನ್ನು ಆಚರಿಸಲಿಕ್ಕಾಗಿ ಸಭೆಗಳು ಅನುಕೂಲಕರವಾದ ಏರ್ಪಾಡುಗಳನ್ನು ಮಾಡಿಕೊಳ್ಳತಕ್ಕದ್ದು. ಭಾಷಣವು ಸ್ವಲ್ಪ ಬೇಗನೆ ಪ್ರಾರಂಭವಾಗಬಹುದಾದರೂ, ಜ್ಞಾಪಕದ ಕುರುಹುಗಳನ್ನು ಸೂರ್ಯಾಸ್ತಮಾನದ ಮುಂಚೆ ದಾಟಿಸಬಾರದು. ನಿಮ್ಮ ಪ್ರದೇಶದಲ್ಲಿ ಸೂರ್ಯಾಸ್ತಮಾನವು ಯಾವಾಗ ಆಗುತ್ತದೆ ಎಂಬುದರ ಬಗ್ಗೆ ಸ್ಥಳಿಕ ಮೂಲಗಳನ್ನು ಸಂಪರ್ಕಿಸಿ ತಿಳಿದುಕೊಳ್ಳಿರಿ. ಒಂದೇ ರಾಜ್ಯ ಸಭಾಗೃಹವನ್ನು ಹಲವಾರು ಸಭೆಗಳು ಉಪಯೋಗಿಸುತ್ತಿರುವಾಗ, ಆ ಸಂಜೆಯಂದು ಒಂದು ಅಥವಾ ಹೆಚ್ಚಿನ ಸಭೆಗಳು ಜ್ಞಾಪಕಾಚರಣೆಯನ್ನು ಬೇರೆಲ್ಲಾದರೂ ನಡೆಸುವುದು ಒಳ್ಳೆಯದು. ಸಾಧ್ಯವಿರುವಲ್ಲಿ, ಆ ಸಂದರ್ಭದಿಂದ ಎಲ್ಲರೂ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಕಾರ್ಯಕ್ರಮಗಳ ನಡುವೆ ಕಡಿಮೆಪಕ್ಷ 40 ನಿಮಿಷಗಳಷ್ಟು ಸಮಯವನ್ನು ಅನುಮತಿಸುವಂತೆ ನಾವು ಸಲಹೆ ನೀಡುತ್ತೇವೆ. ಪ್ರಯಾಣಿಕರನ್ನು ಇಳಿಸುವುದು, ಹತ್ತಿಸಿಕೊಳ್ಳುವುದನ್ನು ಸೇರಿಸಿ, ಟ್ರ್ಯಾಫಿಕ್ ಮತ್ತು ಪಾರ್ಕಿಂಗ್ ವಿಷಯಗಳ ಕುರಿತು ಗಮನಕೊಡಬೇಕು. ಸ್ಥಳಿಕವಾಗಿ ಯಾವ ಏರ್ಪಾಡುಗಳು ಉತ್ತಮವಾಗಿರುವವು ಎಂಬುದನ್ನು ಹಿರಿಯರ ಮಂಡಲಿಯು ನಿರ್ಧರಿಸಬೇಕು.
[ಅಧ್ಯಯನ ಪ್ರಶ್ನೆಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.
d ಕನ್ನಡದಲ್ಲಿ ಲಭ್ಯವಿಲ್ಲ.
e ಕನ್ನಡದಲ್ಲಿ ಲಭ್ಯವಿಲ್ಲ.
f ಕನ್ನಡದಲ್ಲಿ ಲಭ್ಯವಿಲ್ಲ.