ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ ಫೆಬ್ರವರಿ: ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!, ಅಥವಾ 32-ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,a ನಿತ್ಯಕ್ಕೂ ಬಾಳುವ ದೈವಿಕ ನಾಮ,b ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ,c ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ?,d ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ?e ಎಂಬ ಬ್ರೋಷರುಗಳನ್ನು ನೀಡಬಹುದು. ಮಾರ್ಚ್: ಜ್ಞಾನ ಪುಸ್ತಕವನ್ನು ನೀಡಿರಿ, ಮತ್ತು ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ವಿಶೇಷ ಪ್ರಯತ್ನವನ್ನು ಮಾಡಿರಿ. ಏಪ್ರಿಲ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತ್ಯೇಕ ಪ್ರತಿಗಳನ್ನು ನೀಡಿರಿ. ಆಸಕ್ತ ಜನರನ್ನು ಪುನಃ ಭೇಟಿಮಾಡುವಾಗ—ಜ್ಞಾಪಕಾಚರಣೆಗೆ ಹಾಗೂ ಇತರ ದೇವಪ್ರಭುತ್ವಾತ್ಮಕ ಘಟನೆಗಳಿಗೆ ಹಾಜರಾಗುತ್ತಾರಾದರೂ, ಸಭೆಯೊಂದಿಗೆ ಕ್ರಿಯಾಶೀಲವಾಗಿ ಸಹವಾಸಮಾಡದಿರುವಂಥ ಜನರನ್ನು ಪುನರ್ಭೇಟಿ ಮಾಡುವುದೂ ಇದರಲ್ಲಿ ಒಳಗೂಡಿರಬಹುದು—ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿf ಎಂಬ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ವಿಶೇಷವಾಗಿ ಕೆಲವು ವ್ಯಕ್ತಿಗಳ ಬಳಿ ಈಗಾಗಲೇ ಜ್ಞಾನ ಪುಸ್ತಕ ಮತ್ತು ಅಪೇಕ್ಷಿಸು ಬ್ರೋಷರಿನ ಅಧ್ಯಯನ ಮಾಡಿರುವಲ್ಲಿ, ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲಿಕ್ಕಾಗಿ ಪ್ರತಿಯೊಂದು ಪ್ರಯತ್ನವನ್ನೂ ಮಾಡತಕ್ಕದ್ದು. ಮೇ: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಒಂದು ಬದಲಿ ನೀಡುವಿಕೆಯೋಪಾದಿ ನೀವು ಬೈಬಲ್ ಕಥೆಗಳ ನನ್ನ ಪುಸ್ತಕ, ಬೈಬಲು ದೇವರ ವಾಕ್ಯವೋ ಅಥವಾ ಮಾನವನದ್ದೋ?g ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳನ್ನು ಉಪಯೋಗಿಸಬಹುದು. ಈ ಬದಲಿ ನೀಡುವಿಕೆಗಳಲ್ಲಿ ಯಾವುದರ ಸರಬರಾಯಿಯೂ ನಿಮ್ಮ ಸಭೆಯಲ್ಲಿ ಇಲ್ಲದಿರುವಲ್ಲಿ, ನೀವು ಉಪಯೋಗಿಸಬಹುದಾದ ಹೆಚ್ಚಿನ ಸರಬರಾಯಿ ಸಮೀಪದಲ್ಲಿರುವ ಯಾವುದೇ ಸಭೆಗಳಲ್ಲಿ ಇವೆಯೋ ಎಂಬುದನ್ನು ದಯವಿಟ್ಟು ವಿಚಾರಿಸಿರಿ.
◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸ್ ಅನ್ನು ಮಾರ್ಚ್ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್ ವರದಿಯು ಓದಲ್ಪಡುವಾಗ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ. ಲೋಕವ್ಯಾಪಕ ಕೆಲಸಕ್ಕಾಗಿ ಮತ್ತು ಸಂಸ್ಥೆಯಿಂದ ಪ್ರಾಯೋಜಿಸಲ್ಪಡುವ ಇತರ ಯಾವುದೇ ನಿಧಿಗಾಗಿ ಸಭೆಯು ಮಾಡಿರುವ ಹಣಕಾಸಿನ ದಾನಗಳ ಪಾವತಿಯ ಕುರಿತು ಓದಿಹೇಳಿರಿ.
◼ ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕನು ಎಲ್ಲಾ ರೆಗ್ಯುಲರ್ ಪಯನೀಯರರ ಚಟುವಟಿಕೆಯನ್ನು ಪರಿಶೀಲಿಸಬೇಕು. ಆವಶ್ಯಕ ತಾಸುಗಳನ್ನು ಮುಟ್ಟಲು ಯಾರಿಗಾದರೂ ಕಷ್ಟವಾಗುತ್ತಿರುವುದಾದರೆ, ಅಂಥವರಿಗೆ ಸಹಾಯವು ಸಿಗುವಂತೆ ಹಿರಿಯರು ಏರ್ಪಾಡನ್ನು ಮಾಡಬೇಕು. ಸಲಹೆಗಳಿಗಾಗಿ S-201 ವಾರ್ಷಿಕ ಪತ್ರಗಳನ್ನು ಪರಿಶೀಲಿಸಿರಿ. ಅದರೊಂದಿಗೆ, ಅಕ್ಟೋಬರ್ 1986ರ ನಮ್ಮ ರಾಜ್ಯದ ಸೇವೆಯ (ಇಂಗ್ಲಿಷ್) ಪುರವಣಿಯ 12-20ನೆಯ ಪ್ಯಾರಗ್ರಾಫ್‌ಗಳನ್ನೂ ನೋಡಿರಿ.
◼ 2003ರ ಜ್ಞಾಪಕಾಚರಣೆಯ ಕಾಲಾವಧಿಗಾಗಿರುವ ವಿಶೇಷ ಬಹಿರಂಗ ಭಾಷಣವು ಏಪ್ರಿಲ್ 27ರ ಭಾನುವಾರದಂದು ಕೊಡಲ್ಪಡುವುದು. “ಬಾಬೆಲಿನ ನ್ಯಾಯತೀರ್ಪಿನ ಗಳಿಗೆಯು ಬಂದಿದೆಯೋ?” ಎಂಬುದು ಆ ಭಾಷಣದ ಮುಖ್ಯ ವಿಷಯವಾಗಿರುವುದು. ಇದಕ್ಕಾಗಿ ಒಂದು ಹೊರಮೇರೆಯು ಒದಗಿಸಲ್ಪಡುವುದು. ಆ ವಾರಾಂತ್ಯದಲ್ಲಿ ಸರ್ಕಿಟ್ ಸಂದರ್ಶಕರ ಭೇಟಿ ಅಥವಾ ಒಂದು ಸಮ್ಮೇಳನವಿರುವಂಥ ಸಭೆಗಳು, ಅದರ ಮುಂದಿನ ವಾರದಂದು ವಿಶೇಷ ಭಾಷಣವನ್ನು ನೀಡುವವು. ಯಾವ ಸಭೆಯೂ 2003ರ ಏಪ್ರಿಲ್ 27ಕ್ಕೆ ಮುಂಚೆ ಈ ವಿಶೇಷ ಭಾಷಣವನ್ನು ನೀಡಬಾರದು.
◼ ಅಂಚೆಯ ಮೂಲಕ ವೈಯಕ್ತಿಕ ಚಂದಾಗಳಿಗಾಗಿರುವ ಏರ್ಪಾಡು ನಿಲ್ಲಿಸಲ್ಪಟ್ಟಿರುವುದರಿಂದ, ಕಾವಲಿನಬುರುಜು ಮತ್ತು ಎಚ್ಚರ!ದ ಪ್ರಚಲಿತ ಸಂಚಿಕೆಗಳನ್ನು ಪಡೆದುಕೊಂಡ ಕೂಡಲೆ ಅವುಗಳನ್ನು ಸಭೆಗಳು ಇತರರಿಗೆ ನೀಡುವುದು ಪ್ರಾಮುಖ್ಯವಾಗಿದೆ. ಇದು ಪ್ರಚಾರಕರು ತಮ್ಮ ವೈಯಕ್ತಿಕ ಪ್ರತಿಗಳನ್ನು ಪಡೆದುಕೊಳ್ಳಲು ಮತ್ತು ಕ್ಷೇತ್ರ ಸೇವೆಯಲ್ಲಿ ಆ ಪತ್ರಿಕೆಗಳನ್ನು ನೀಡುವ ಮೊದಲು ಅವುಗಳಲ್ಲಿರುವ ವಿಷಯಗಳೊಂದಿಗೆ ಚಿರಪರಿಚಿತರಾಗಲು ಸಹಾಯಮಾಡುವುದು.
[ಅಧ್ಯಯನ ಪ್ರಶ್ನೆಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.
d ಕನ್ನಡದಲ್ಲಿ ಲಭ್ಯವಿಲ್ಲ.
e ಕನ್ನಡದಲ್ಲಿ ಲಭ್ಯವಿಲ್ಲ.
f ಕನ್ನಡದಲ್ಲಿ ಲಭ್ಯವಿಲ್ಲ.
g ಕನ್ನಡದಲ್ಲಿ ಲಭ್ಯವಿಲ್ಲ.