ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ನವೆಂಬರ್: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಅಥವಾ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಇವು ಜನರ ಬಳಿ ಈಗಾಗಲೇ ಇರುವುದಾದರೆ, ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಪುಸ್ತಕವನ್ನು ಅಥವಾ ಹಳೆಯ ಪ್ರಕಾಶನವೊಂದನ್ನು ನೀಡಿರಿ. ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಒಂದು ಬದಲಿ ನೀಡುವಿಕೆಯಾಗಿ, ಬೈಬಲ್ ಕಥೆಗಳ ನನ್ನ ಪುಸ್ತಕ, ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳನ್ನು ಉಪಯೋಗಿಸಬಹುದು. ಜನವರಿ: ಸಭೆಯ ಸ್ಟಾಕ್‌ನಲ್ಲಿರುವ 1988ಕ್ಕೆ ಮುಂಚೆ ಪ್ರಕಾಶಿಸಲ್ಪಟ್ಟಿರುವ ಯಾವುದೇ ಪುಸ್ತಕವನ್ನು ನೀಡಬಹುದು. ಇವುಗಳಲ್ಲಿ ಯಾವುದೇ ಪುಸ್ತಕವು ಸ್ಟಾಕ್‌ನಲ್ಲಿಲ್ಲವಾದರೆ, ಹತ್ತಿರದ ಸಭೆಗಳಲ್ಲಿ ನೀವು ಉಪಯೋಗಿಸಬಹುದಾದ ಹಳೆಯ ಪ್ರಕಾಶನಗಳು ಅವರ ಸ್ವಂತ ಉಪಯೋಗಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆಯೋ ಎಂದು ದಯವಿಟ್ಟು ಕೇಳಿನೋಡಿ. ಹಳೆಯ ಪುಸ್ತಕಗಳನ್ನು ಹೊಂದಿರದ ಸಭೆಗಳು ಕುಟುಂಬ ಸಂತೋಷದ ರಹಸ್ಯ, ಅಥವಾ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಪುಸ್ತಕಗಳನ್ನು ನೀಡಬಹುದು. ಫೆಬ್ರವರಿ: ಯೆಹೋವನ ಸಮೀಪಕ್ಕೆ ಬನ್ನಿರಿ.a ಈ ಪ್ರಕಾಶನವು ಲಭ್ಯವಿಲ್ಲವಾದರೆ, ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ?b ಅಥವಾ ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕಗಳನ್ನು ನೀವು ಉಪಯೋಗಿಸಬಹುದು.
◼ ಅಧ್ಯಕ್ಷ ಮೇಲ್ವಿಚಾರಕರು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸನ್ನು ಡಿಸೆಂಬರ್ 1ರಂದು ಅಥವಾ ತದನಂತರ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್ ವರದಿಯನ್ನು ಓದಿದ ನಂತರ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.
◼ ಸಭೆಗಳ ಲೈಬ್ರರಿಗಳಿಗೆ ಬೇಕಾಗಿರುವ ವಿನಂತಿಯನ್ನು ಪೂರೈಸಿದ ನಂತರವೂ ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ 2001ರ ಸೀಮಿತವಾದ ಪ್ರತಿಗಳು ಇಂಗ್ಲಿಷ್‌ನಲ್ಲಿ ಲಭ್ಯವಿವೆ. ಈ ಇಂಡೆಕ್ಸ್ ಅನ್ನು ತಮ್ಮ ವೈಯಕ್ತಿಕ ಉಪಯೋಗಕ್ಕಾಗಿ ಪಡೆದುಕೊಳ್ಳಲು ಬಯಸುವ ಪ್ರಚಾರಕರು ಈಗ ತಮ್ಮ ವಿನಂತಿಗಳನ್ನು ಸಭೆಯ ಮೂಲಕ ಕಳುಹಿಸಬಹುದು.
◼ ಸಭೆಗಳಿಂದ ಕಳುಹಿಸಲ್ಪಡುವ ವಿನಂತಿಗಳನ್ನು ಬ್ರಾಂಚ್ ಆಫೀಸು ಪ್ರತಿ ತಿಂಗಳು ಈ ಸರದಿಯಲ್ಲಿ ಪೂರೈಸುವುದು: ಮೊದಲನೆಯ ವಾರದಲ್ಲಿ, ಕರ್ನಾಟಕ ಮತ್ತು ತಮಿಳು ನಾಡಿನ ವಿನಂತಿಗಳನ್ನು ಪೂರೈಸಲ್ಪಡುವುದು; ಆಂದ್ರ ಪ್ರದೇಶ್ ಮತ್ತು ಮಹಾರಾಷ್ಟ್ರದ ಸಭೆಗಳಿಂದ ಬರುವ ವಿನಂತಿಗಳನ್ನು ಎರಡನೆಯ ವಾರದಲ್ಲಿ ಕಳುಹಿಸಲಾಗುವುದು; ಕೇರಳದಿಂದ ಬರುವ ವಿನಂತಿಗಳು ಮೂರನೆಯ ವಾರದಲ್ಲಿ ನಿರ್ವಹಿಸಲ್ಪಡುವುದು; ಮತ್ತು ಭಾರತದ ಉಳಿದ ಎಲ್ಲಾ ರಾಜ್ಯಗಳ ಬೇಡಿಕೆಗಳನ್ನು ತಿಂಗಳಿನ ನಾಲ್ಕನೆಯ ವಾರದಲ್ಲಿ ಪೂರೈಸಲಾಗುವುದು. ಸಾಹಿತ್ಯ ಸಂಯೋಜಕನು (ಅಥವಾ ಸೇವಕನು), ನಿಮ್ಮ ಸಭೆಗೆ ನೇಮಿಸಲ್ಪಟ್ಟಿರುವ ವಾರಕ್ಕೆ ಮುಂಚಿತವಾಗಿ ಸಾಹಿತ್ಯದ ವಿನಂತಿಯು ಬ್ರಾಂಚ್ ಆಫೀಸಿಗೆ ತಲಪಲು ಏರ್ಪಾಡುಗಳನ್ನು ಮಾಡಬೇಕು.
◼ ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ 2002ರ ಪ್ರತಿಗಳು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿವೆ. ಪ್ರತಿಯೊಂದು ಸಭೆಯು ಅದರ ಸಭಾ ಲೈಬ್ರರಿಗಾಗಿ ಒಂದು ಪ್ರತಿಯನ್ನು ಮಾತ್ರ ವಿನಂತಿಸಿಕೊಳ್ಳಸಾಧ್ಯವಿದೆ ಮತ್ತು ಇದನ್ನು ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ “Cong. Use” ಎಂಬ ಅಂಕಣದ ಕೆಳಗೆ ಸ್ಪಷ್ಟವಾಗಿ ನಮೂದಿಸಬೇಕು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ 2002 —ಇಂಗ್ಲಿಷ್
ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ —ಕನ್ನಡ, ತೆಲುಗು
◼ ಪುನಃ ಲಭ್ಯವಿರುವ ಪ್ರಕಾಶನಗಳು:
ನಿಮ್ಮ ಕುರಿತು ಕಾಳಜಿವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೋ? —ಇಂಗ್ಲಿಷ್
ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಚಿಕ್ಕ ಸೈಸ್) —ಇಂಗ್ಲಿಷ್
ನಿತ್ಯಜೀವಕ್ಕೆ ನಡೆಸುವ ಜ್ಞಾನ —ನೇಪಾಲಿ, ಬಂಗಾಲಿ
ವಾಚನಕ್ಕೂ ಬರವಣಿಗೆಗೂ ಶ್ರದ್ಧಾಪೂರ್ವಕವಾದ ಗಮನವನ್ನು ಕೊಡಿರಿ —ಇಂಗ್ಲಿಷ್
[ಅಧ್ಯಯನ ಪ್ರಶ್ನೆಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.