ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಜುಲೈ ಮತ್ತು ಆಗಸ್ಟ್: ಈ ಮುಂದೆ ತಿಳಿಸಲ್ಪಟ್ಟಿರುವ ಯಾವುದೇ 32 ಪುಟಗಳ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ನಿತ್ಯಕ್ಕೂ ಬಾಳುವ ದೈವಿಕ ನಾಮ,a ಪರದೈಸನ್ನು ತರಲಿರುವ ಸರಕಾರ,b ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,c ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಸೆಪ್ಟೆಂಬರ್: ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ. ಈ ಬ್ರೋಷರ್ ನಿಮ್ಮ ಭಾಷೆಯಲ್ಲಿ ಲಭ್ಯವಿಲ್ಲದಿರುವಲ್ಲಿ, ಬೈಬಲ್ ಕಥೆಗಳ ನನ್ನ ಪುಸ್ತಕ ಇಲ್ಲವೆ ಮಹಾನ್ ಪುರುಷ ಪುಸ್ತಕವನ್ನು ನೀಡಿರಿ.
◼ ಸೆಪ್ಟೆಂಬರ್‌ನಿಂದ ಆರಂಭಿಸುತ್ತಾ ಸರ್ಕಿಟ್ ಮೇಲ್ವಿಚಾರಕರು, “ನಂಬಿಕೆ ಹಾಗೂ ಧೈರ್ಯದಿಂದ ಭವಿಷ್ಯವನ್ನು ಎದುರಿಸುವುದು” ಎಂಬ ಶೀರ್ಷಿಕೆಯುಳ್ಳ ಬಹಿರಂಗ ಭಾಷಣವನ್ನು ಕೊಡುವರು.
◼ ನೇಮಿಸಲ್ಪಟ್ಟಿರದಂಥ ಟೆರಿಟೊರಿಯಲ್ಲಿ ಕೆಲಸಮಾಡುವಾಗ ಪ್ರಚಾರಕರು, ಅಪೇಕ್ಷಿಸು ಬ್ರೋಷರ್ ಇಲ್ಲವೆ ಜ್ಞಾನ ಪುಸ್ತಕವನ್ನು ನೀಡಬಹುದು. ಮನೆಯವನ ಬಳಿ ಈಗಾಗಲೇ ಈ ಎರಡು ಪ್ರಕಾಶನಗಳಿರುವಲ್ಲಿ ಬೇರಾವುದೇ ಪ್ರಕಾಶನವನ್ನು ನೀಡಬಹುದು. ಮನೆಯಲ್ಲಿ ಯಾರೂ ಇಲ್ಲದಿರುವಲ್ಲಿ, ಇಲ್ಲವೆ ಸಾಹಿತ್ಯವನ್ನು ಸ್ವೀಕರಿಸದ ವ್ಯಕ್ತಿಗಳಿಗಾಗಿ ಎಲ್ಲರೂ ತಮ್ಮೊಂದಿಗೆ ವೈವಿಧ್ಯಮಯ ಟ್ರ್ಯಾಕ್ಟ್‌ಗಳನ್ನು ಕೊಂಡೊಯ್ಯಬೇಕು. ಆಸಕ್ತಿಯು ತೋರಿಸಲ್ಪಟ್ಟಲ್ಲೆಲ್ಲಾ ಅದನ್ನು ಅನುಸರಿಸಿಕೊಂಡು ಹೋಗಲು ಪ್ರಯತ್ನಗಳನ್ನು ಮಾಡತಕ್ಕದ್ದು, ಮತ್ತು ನೇಮಿಸಲ್ಪಟ್ಟಿರದಂಥ ಈ ಟೆರಿಟೊರಿಗಳಿಗೆ ಹೋಗಲು ಅನುಕೂಲವಾಗಿರುವ ಸಭೆಗಳು ಹತ್ತಿರವಿರುವಾಗ ವಿಶೇಷವಾಗಿ ಇದನ್ನು ಮಾಡತಕ್ಕದ್ದು.
◼ ಸಭಾ ಸೆಕ್ರಿಟರಿಗಳ ಬಳಿ ಆ್ಯಪ್ಲಿಕೇಷನ್ ಫಾರ್ ರೆಗ್ಯುಲರ್ ಪಯನೀಯರ್ ಸರ್ವಿಸ್ (S-205) ಮತ್ತು ಆ್ಯಪ್ಲಿಕೇಷನ್ ಫಾರ್ ಆಕ್ಸಿಲಿಯರಿ ಪಯನೀಯರ್ ಸರ್ವಿಸ್ (S-205b) ಎಂಬ ಫಾರ್ಮ್‌ಗಳ ಸಾಕಷ್ಟು ಸರಬರಾಯಿ ಇರಬೇಕು. ಇವುಗಳನ್ನು ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನಲ್ಲಿ ಆರ್ಡರ್ ಮಾಡಸಾಧ್ಯವಿದೆ. ಕಡಿಮೆಪಕ್ಷ ಒಂದು ವರ್ಷಕ್ಕಾಗಿ ಬೇಕಾಗಿರುವ ಸರಬರಾಯಿಯನ್ನು ಇಟ್ಟುಕೊಳ್ಳಿ.
◼ ರೆಗ್ಯುಲರ್ ಪಯನೀಯರ್ ಸೇವೆಗಾಗಿರುವ ಅರ್ಜಿಗಳನ್ನು ಬ್ರಾಂಚ್ ಆಫೀಸಿಗೆ ಕಳುಹಿಸುವ ಮುನ್ನ, ಆ ಫಾರ್ಮ್‌ಗಳು ಪೂರ್ಣವಾಗಿ ಭರ್ತಿಮಾಡಲಾಗಿದೆಯೊ ಎಂಬುದನ್ನು ಸಭಾ ಸೆಕ್ರಿಟರಿಯು ಪರಿಶೀಲಿಸಬೇಕು. ಅರ್ಜಿದಾರರಿಗೆ ತಮ್ಮ ದೀಕ್ಷಾಸ್ನಾನದ ಸರಿಯಾದ ತಾರೀಖು ಜ್ಞಾಪಕವಿಲ್ಲದಿರುವಲ್ಲಿ, ಅವರು ಅಂದಾಜಿಗನುಸಾರ ಹಾಕಿ, ಅದರ ಒಂದು ದಾಖಲೆಯನ್ನು ಇಡಬೇಕು. ಸೆಕ್ರಿಟರಿಯು ಈ ತಾರೀಖನ್ನು ಕಾಂಗ್ರಿಗೇಷನ್ ಪಬ್ಲಿಷರ್ ರೆಕಾರ್ಡ್ ಕಾರ್ಡ್‌ನಲ್ಲಿ ದಾಖಲಿಸಬೇಕು.
◼ ವೈಯಕ್ತಿಕ ಪ್ರಯಾಣದ ಯೋಜನೆಗಳಲ್ಲಿ, ಬೇರೊಂದು ದೇಶದಲ್ಲಿ ಸಭಾ ಕೂಟಗಳಿಗೊ, ಒಂದು ಸಮ್ಮೇಳನಕ್ಕೊ, ಇಲ್ಲವೆ ಜಿಲ್ಲಾ ಅಧಿವೇಶನಕ್ಕೊ ಹಾಜರಾಗುವುದು ಸೇರಿರುವಾಗ, ಇವುಗಳ ತಾರೀಖುಗಳು, ಸಮಯಗಳು, ಮತ್ತು ಸ್ಥಳಗಳ ಕುರಿತಾದ ಮಾಹಿತಿಗಾಗಿ ನಿಮ್ಮ ವಿನಂತಿಯನ್ನು, ಆ ದೇಶದಲ್ಲಿನ ಕೆಲಸವನ್ನು ನೋಡಿಕೊಳ್ಳುತ್ತಿರುವ ಬ್ರಾಂಚ್ ಆಫೀಸಿಗೆ ಕಳುಹಿಸಬೇಕು. ಬ್ರಾಂಚ್ ಆಫೀಸುಗಳ ವಿಳಾಸಗಳು, ಸದ್ಯದ ವರ್ಷಪುಸ್ತಕದ ಕೊನೆಯ ಪುಟದಲ್ಲಿವೆ.
◼ ಎಲ್ಲಾ ಅಧ್ಯಕ್ಷ ಮೇಲ್ವಿಚಾರಕರು ಮತ್ತು ಸೆಕ್ರಿಟರಿಗಳ ಸದ್ಯದ ಟೆಲಿಫೋನ್ ನಂಬರುಗಳು ಮತ್ತು ವಿಳಾಸಗಳ ದಾಖಲೆಯನ್ನು ಬ್ರಾಂಚ್ ಆಫೀಸು ಇಟ್ಟುಕೊಳ್ಳುವುದು ಬಹಳ ಅಗತ್ಯವಾಗಿದೆ. ಯಾವುದೇ ಸಮಯದಲ್ಲಿ ಇದರಲ್ಲಿ ಬದಲಾವಣೆಗಳಿರುವುದಾದರೆ, ಸಭೆಯ ಸರ್ವಿಸ್ ಕಮಿಟಿಯು ಪ್ರಿಸೈಡಿಂಗ್ ಓವರ್‌ಸೀಯರ್/ಸೆಕ್ರಿಟರಿ ಚೇಂಜ್ ಆಫ್ ಆ್ಯಡ್ರೆಸ್ (S-29) ಫಾರ್ಮ್ ಅನ್ನು ಭರ್ತಿಮಾಡಿ, ತಡಮಾಡದೆ ಬ್ರಾಂಚ್ ಆಫೀಸಿಗೆ ಕಳುಹಿಸತಕ್ಕದ್ದು. ಇದರಲ್ಲಿ ಟೆಲಿಫೋನ್ ಏರಿಯಾ ಕೋಡ್‌ಗಳಲ್ಲಾಗುವ ಯಾವುದೇ ಬದಲಾವಣೆಗಳೂ ಒಳಗೂಡಿದೆ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಈ ಲೋಕವು ಪಾರಾಗುವುದೋ? (ಟ್ರ್ಯಾಕ್ಟ್ ನಂ. 19) —ಒರಿಯ, ಸಿಂಧಿ
ಮನಗುಂದಿದವರಿಗೆ ಸಾಂತ್ವನ (ಟ್ರ್ಯಾಕ್ಟ್ ನಂ. 20) —ಸಿಂಧಿ
ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ? (ಟ್ರ್ಯಾಕ್ಟ್ ನಂ. 22) —ಸಿಂಧಿ
ಯೇಸು ಕ್ರಿಸ್ತ—ಅವನು ಯಾರು? (ಟ್ರ್ಯಾಕ್ಟ್ ನಂ. 24) —ಕೊಂಕಣಿ (ಕನ್ನಡ), ಉರ್ದು
[ಪಾದಟಿಪ್ಪಣಿಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.