ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ—ಜನವರಿ: ಹಳದಿ ಬಣ್ಣಕ್ಕೆ ತಿರುಗುವ ಇಲ್ಲವೆ ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕವನ್ನು ಅಥವಾ 1991ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಯಾವುದೇ ಪುಸ್ತಕವನ್ನು ನೀಡಬಹುದು. ಇಂಥ ಯಾವುದೇ ಹಳೇ ಪುಸ್ತಕಗಳ ಸ್ಟಾಕ್ ಇಲ್ಲದಿರುವ ಸಭೆಗಳು ಜ್ಞಾನ ಪುಸ್ತಕ ಇಲ್ಲವೆ ಎಚ್ಚರಿಕೆಯಿಂದಿರಿ! ಬ್ರೋಷರನ್ನು ಬಳಸಬಹುದು. ಫೆಬ್ರವರಿ: ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವನ್ನು ನೀಡಲಾಗುವುದು. ಈ ಪುಸ್ತಕವು ಲಭ್ಯವಿರದಿದ್ದಲ್ಲಿ, ಪ್ರಕಟನೆ ಪರಮಾವಧಿ ಪುಸ್ತಕ ಅಥವಾ ಸ್ಟಾಕ್‌ನಲ್ಲಿ ಹೆಚ್ಚು ಪ್ರಮಾಣದಲ್ಲಿರುವ ಇನ್ನಾವುದೇ ಹಳೇ ಪ್ರಕಾಶನವನ್ನು ನೀಡಬಹುದು. ಮಾರ್ಚ್: ಬೋಧಿಸು ಪುಸ್ತಕವನ್ನು ನೀಡಿರಿ. ಬೈಬಲ್ ಅಧ್ಯಯನವನ್ನು ಆರಂಭಿಸಲು ವಿಶೇಷ ಪ್ರಯತ್ನವನ್ನು ಮಾಡಿರಿ. ಬೋಧಿಸು ಪುಸ್ತಕದೊಂದಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಟ್ರ್ಯಾಕ್ಟ್ ಅನ್ನು ಸಹ ನೀಡಿರಿ. ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪತ್ರಿಕೆಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಅಥವಾ ಇತರ ದೇವಪ್ರಭುತ್ವಾತ್ಮಕ ಘಟನೆಗಳಿಗೆ ಹಾಜರಾದರೂ, ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವವರನ್ನು ಸೇರಿಸಿ ಎಲ್ಲ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಒಂದು ಮನೆ ಬೈಬಲ್ ಅಧ್ಯಯನವನ್ನು ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು.
◼ ಫೆಬ್ರವರಿ ತಿಂಗಳಿನಿಂದ ಅಥವಾ ಮಾರ್ಚ್ 4ರಿಂದ ಆರಂಭವಾಗುವ ಸರ್ಕಿಟ್ ಮೇಲ್ವಿಚಾರಕರ ಸಂದರ್ಶನಗಳಲ್ಲಿ ನೀಡಲಿರುವ ಹೊಸ ಬಹಿರಂಗ ಭಾಷಣದ ಶೀರ್ಷಿಕೆಯು “ದೇವರ ಹೊಸ ಲೋಕ—ಅದನ್ನು ಪ್ರವೇಶಿಸಲು ಯಾರು ಅರ್ಹರಾಗುವರು?” ಎಂದಾಗಿದೆ.
◼ ಏಪ್ರಿಲ್ ತಿಂಗಳಿನ ಒಂದು ಸೇವಾ ಕೂಟದಲ್ಲಿ ಯುವಜನರು ಪ್ರಶ್ನಿಸುವುದು—ನಾನು ನನ್ನ ಜೀವಿತವನ್ನು ಹೇಗೆ ಉಪಯೋಗಿಸುವೆ? (ಇಂಗ್ಲಿಷ್) ಎಂಬ ವಿಡಿಯೋ ಕಾರ್ಯಕ್ರಮವನ್ನು ಪರಿಗಣಿಸಲಾಗುವುದು. ಈ ವಿಡಿಯೋವಿನ ಪ್ರತಿಗಳ ಅವಶ್ಯವಿದ್ದಲ್ಲಿ, ಸಭೆಯ ಮೂಲಕ ಆದಷ್ಟು ಬೇಗನೆ ವಿನಂತಿಸತಕ್ಕದ್ದು.
◼ ಚೀನೀ ಭಾಷೆಯ ನಮ್ಮ ಸಾಹಿತ್ಯಗಳನ್ನು ಎರಡು ರೀತಿಯ ಲಿಪಿಗಳಲ್ಲಿ ಪ್ರಕಾಶಿಸಲಾಗಿವೆ. ಹಾಂಗ್ ಕಾಂಗ್ ಮತ್ತು ಟೈವಾನ್‌ನಲ್ಲಿರುವ ಜನರು ಸಾಮಾನ್ಯವಾಗಿ ಬಳಸುವ ಸಾಂಪ್ರದಾಯಿಕ ಶೈಲಿಯ ಲಿಪಿಯನ್ನು “ಚೈನೀಸ್” (CH) ಎಂದು ಸೂಚಿಸಲಾಗಿದೆ. ಅಧಿಕಾಂಶ ಚೀನೀಯರು ಓದುವ ಸರಳೀಕೃತ ಲಿಪಿಯನ್ನು “ಸರಳೀಕೃತ ಚೈನೀಸ್” (CHS) ಎಂದು ಸೂಚಿಸಲಾಗಿದೆ. ಒಬ್ಬ ವ್ಯಕ್ತಿಯು ಕ್ಯಾಂಟನೀಸ್, ಮ್ಯಾಂಡರೀನ್ ಅಥವಾ ಇತರ ಭಾಷಾರೂಪವನ್ನು ಮಾತಾಡುವುದು ಅವನು ಓದುವ ಲಿಪಿಗೆ ಸಂಬಂಧಿಸದಿರುವುದರಿಂದ ಅವನು ಓದುವುದಕ್ಕಾಗಿ ಬಳಸುವ ಲಿಪಿಯನ್ನು ಖಚಿತಪಡಿಸಿಕೊಳ್ಳುವುದು ಪ್ರಾಮುಖ್ಯ. ಇದರಿಂದ, ಸರಿಯಾದ ಲಿಪಿಯ ಸಾಹಿತ್ಯಗಳನ್ನು ವಿನಂತಿಸಿಕೊಳ್ಳಲು ಸಾಧ್ಯವಾಗುವುದು.
◼ ಈ ವರ್ಷ ಏಪ್ರಿಲ್ 2ರ ಸೋಮವಾರದಂದು ಸೂರ್ಯಾಸ್ತಮಾನದ ಅನಂತರ ಜ್ಞಾಪಕಾಚರಣೆಯನ್ನು ಆಚರಿಸಲಿಕ್ಕಾಗಿ ಸಭೆಗಳು ಸೂಕ್ತವಾದ ಏರ್ಪಾಡುಗಳನ್ನು ಮಾಡಿಕೊಳ್ಳತಕ್ಕದ್ದು. ಭಾಷಣವು ತುಸು ಮುಂಚಿತವಾಗಿ ಆರಂಭವಾಗಬಹುದಾದರೂ, ಕುರುಹುಗಳನ್ನು ದಾಟಿಸುವುದನ್ನು ಸೂರ್ಯಾಸ್ತಮಾನಕ್ಕೆ ಮುಂಚೆ ಆರಂಭಿಸಬಾರದು. ನಿಮ್ಮ ಪ್ರದೇಶದಲ್ಲಿ ಸೂರ್ಯಾಸ್ತಮಾನದ ಸಮಯದ ಕುರಿತು ತಿಳಿಯಲು ಸ್ಥಳಿಕ ಮೂಲಗಳನ್ನು ಸಂಪರ್ಕಿಸಿರಿ. ಪ್ರತಿಯೊಂದು ಸಭೆಯು ತನ್ನದೇ ಆದ ಜ್ಞಾಪಕಾಚರಣೆಯನ್ನು ನಡೆಸಲು ಪ್ರಯತ್ನಿಸಬೇಕು. ಆದರೂ, ಇದು ಯಾವಾಗಲೂ ಸಾಧ್ಯವಾಗದೆ ಇರಬಹುದು. ಸಾಮಾನ್ಯವಾಗಿ ಹಲವಾರು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸುತ್ತಿರುವ ಸ್ಥಳಗಳಲ್ಲಿ, ಒಂದು ಅಥವಾ ಹೆಚ್ಚಿನ ಸಭೆಗಳು ಆ ಸಂಜೆಗಾಗಿ ಬೇರೊಂದು ಸೌಕರ್ಯವನ್ನು ಉಪಯೋಗಿಸಲಿಕ್ಕಾಗಿ ಏರ್ಪಾಡುಮಾಡಸಾಧ್ಯವಿದೆ. ಜ್ಞಾಪಕಾಚರಣೆಯ ಬಳಿಕ ಸಹವಾಸದಿಂದ ಎಲ್ಲರೂ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಸಾಧ್ಯವಿರುವಲ್ಲಿ ಕಾರ್ಯಕ್ರಮಗಳ ನಡುವೆ ಕಡಿಮೆಪಕ್ಷ 40 ನಿಮಿಷಗಳಷ್ಟು ಅಂತರವಿರುವುದು ಉತ್ತಮವೆಂದು ನಾವು ಸಲಹೆ ನೀಡುತ್ತೇವೆ. ಪ್ರಯಾಣಿಕರನ್ನು ಇಳಿಸುವುದು ಹಾಗೂ ಹತ್ತಿಸಿಕೊಳ್ಳುವುದನ್ನು ಸೇರಿಸಿ, ವಾಹನ ಸಂಚರಣೆ ಮತ್ತು ನಿಲ್ಲುಗಡೆಯ ವಿಷಯದಲ್ಲೂ ಗಮನಹರಿಸಬೇಕು. ಸ್ಥಳಿಕವಾಗಿ ಯಾವ ಏರ್ಪಾಡುಗಳು ಉತ್ತಮವಾಗಿರುವವು ಎಂಬುದನ್ನು ಹಿರಿಯರ ಮಂಡಲಿಯು ನಿರ್ಧರಿಸಬೇಕು.
◼ ಸಭೆಯಲ್ಲಿರುವ ಪ್ರತಿ ರೆಗ್ಯುಲರ್ ಪಯನೀಯರರ ನೇಮಕಾತಿ ಪತ್ರಗಳು (S-202) ಇವೆಯೆಂಬುದನ್ನು ಸಭಾ ಕಾರ್ಯದರ್ಶಿಯು ಖಚಿತಪಡಿಸಿಕೊಳ್ಳಬೇಕು. ಅವು ಇಲ್ಲದಿರುವಲ್ಲಿ ಬ್ರಾಂಚ್ ಆಫೀಸಿಗೆ ಬರೆದು ತಿಳಿಸಬೇಕು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (29 ಗೀತೆಗಳು) —ಬಂಗಾಲಿ