ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/07 ಪು. 3
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2007 ನಮ್ಮ ರಾಜ್ಯದ ಸೇವೆ
2007 ನಮ್ಮ ರಾಜ್ಯದ ಸೇವೆ
km 11/07 ಪು. 3

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ​—⁠ನವೆಂಬರ್‌: ಬೈಬಲ್‌ ಕಥೆಗಳ ನನ್ನ ಪುಸ್ತಕ. ಮನೆಯವರು ತಮಗೆ ಮಕ್ಕಳಿಲ್ಲವೆಂದು ಹೇಳುವಲ್ಲಿ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಿರಿ. ಡಿಸೆಂಬರ್‌: ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ. ಬದಲಿ ನೀಡುವಿಕೆಯಾಗಿ ಯೆಹೋವನ ಸಮೀಪಕ್ಕೆ ಬನ್ನಿರಿ ಅಥವಾ ಕುಟುಂಬ ಸಂತೋಷದ ರಹಸ್ಯ ಪುಸ್ತಕಗಳನ್ನು ಉಪಯೋಗಿಸಬಹುದು. ಜನವರಿ: ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕ ಅಥವಾ 1991ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಯಾವುದೇ ಪುಸ್ತಕ. ಇಂಥ ಪುಸ್ತಕಗಳು ಇಲ್ಲದಿರುವ ಸಭೆಗಳು, ಜ್ಞಾನ ಪುಸ್ತಕ (ಲಭ್ಯವಿರುವಲ್ಲಿ) ಅಥವಾ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಬಹುದು. ಫೆಬ್ರವರಿ: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್‌) ಅಥವಾ ಕುಟುಂಬ ಸಂತೋಷದ ರಹಸ್ಯ.

◼ ಡಿಸೆಂಬರ್‌ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವುದರಿಂದ, ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲು ಇದೊಂದು ಅತ್ಯುತ್ತಮ ತಿಂಗಳಾಗಿರುವುದು.

◼ ವಿಭಿನ್ನ ಸಂಸ್ಕೃತಿ ಮತ್ತು ಧಾರ್ಮಿಕ ಹಿನ್ನೆಲೆಗಳ ಜನರಿಗೆ ಸಾಕ್ಷಿ ನೀಡಲಿಕ್ಕಾಗಿ ರಚಿಸಲ್ಪಟ್ಟ ಹಲವಾರು ಬೈಬಲ್‌ ಆಧಾರಿತ ಪ್ರಕಾಶನಗಳು ಲಭ್ಯವಿವೆ. ಈ ಸಹಾಯಕರ ಪ್ರಕಾಶನಗಳ ಪಟ್ಟಿ ಸಾಹಿತ್ಯ ಸೇವಕನ ಬಳಿಯಿರುತ್ತದೆ.

◼ ಲೋಕವ್ಯಾಪಕ ಕೆಲಸಕ್ಕಾಗಿ ಜಿಲ್ಲಾ ಅಧಿವೇಶನಗಳಲ್ಲಿ ಕಾಣಿಕೆಯಾಗಿ ಕೊಡಲ್ಪಡುವ ಚೆಕ್‌ಗಳಲ್ಲಿ ಮತ್ತು ಬ್ರಾಂಚ್‌ ಆಫೀಸಿಗೆ ಕಳುಹಿಸಲ್ಪಡುವ ಚೆಕ್‌ಗಳಲ್ಲಿ “The Watch Tower Bible and Tract Society of India” ಇವರಿಗೆ ಸಂದಾಯವಾಗಬೇಕು ಎಂದು ಗುರುತಿಸಬೇಕು. ಅದರೊಂದಿಗೆ, ದಾನಿಯ ಹೆಸರು, ಪೂರ್ಣ ವಿಳಾಸ ಮತ್ತು ತಮ್ಮ ಸ್ವಂತ ಹಣದಿಂದ ಸಂಘಟನೆಯ ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆ ನೀಡುವುದರ ಉದ್ದೇಶವನ್ನು ಸೂಚಿಸುವ ಪತ್ರವೊಂದನ್ನು ಕಳುಹಿಸಬೇಕು. ದಾನವು ರೂ. 50,000ಕ್ಕಿಂತಲೂ ಹೆಚ್ಚಿರುವಲ್ಲಿ ದಯವಿಟ್ಟು ನಿಮ್ಮ ಆದಾಯ ತೆರಿಗೆಯ ಪರ್ಮನೆಂಟ್‌ ಅಕೌಂಟ್‌ ನಂಬರನ್ನು ನೀಡಿರಿ. ಇದು ನಮ್ಮ ಆಯವ್ಯಯ ವರದಿಗಾಗಿದೆ. ದಯವಿಟ್ಟು ಇದನ್ನು ಈ ವಿಳಾಸಕ್ಕೆ ಕಳುಹಿಸಿರಿ: The Watch Tower Bible and Tract Society of India, 927/1, A V Pura, Post Box 6441, Yelahanka, Bangalore - 560 064.

◼ ಡ್ಯೂರಬ್ಲ್‌ ಪವರ್‌ ಆಫ್‌ ಅಟರ್ನಿ (ಡೀಪೀಏ) ಕಾರ್ಡನ್ನು ಇನ್ನೂ ಯಾರಾದರೂ ಭರ್ತಿಮಾಡದಿರುವಲ್ಲಿ ಈಗ ಅದನ್ನು ಭರ್ತಿಮಾಡುವಂತೆ ಪ್ರಚಾರಕರೆಲ್ಲರನ್ನು ಉತ್ತೇಜಿಸುತ್ತೇವೆ. ಈ ಡೀಪೀಏ ಕಾರ್ಡ್‌ ರಕ್ತಪೂರಣವನ್ನು ನಿರಾಕರಿಸಲು ನಿಮಗಿರುವ ಹಕ್ಕನ್ನು ಸಮರ್ಥಿಸುವುದು. ಅಗತ್ಯವಿರುವ ವೈಯಕ್ತಿಕ ನೆರವನ್ನು ಹಿರಿಯರು ನೀಡುವರು.​—⁠2006ರ ನವೆಂಬರ್‌ ತಿಂಗಳ ನಮ್ಮ ರಾಜ್ಯದ ಸೇವೆಯ ಪುರವಣಿಯನ್ನು ನೋಡಿರಿ.

◼ ಇನ್ನು ಮುಂದೆ ಪ್ರಚಾರಕರು ಪ್ರತಿ ತಿಂಗಳಲ್ಲಿ ನಡೆಸುವ ಎಲ್ಲ ಮನೆ ಬೈಬಲ್‌ ಅಧ್ಯಯನಗಳ ಸ್ಟಡಿ ರಿಪೋರ್ಟ್‌ (S-3) ಅನ್ನು ನೀಡಬೇಕಾಗಿಲ್ಲ. ಆದರೆ ನಡೆಸಲ್ಪಟ್ಟ ವಿವಿಧ ಬೈಬಲ್‌ ಅಧ್ಯಯನಗಳ ಸಂಖ್ಯೆಯನ್ನು ಫೀಲ್ಡ್‌ ಸರ್ವಿಸ್‌ ರಿಪೋರ್ಟ್‌ನ (S-4) ಸೂಕ್ತ ಕಾಲಮ್‌ನಲ್ಲಿ ಸೂಚಿಸಬೇಕು. ಇಂದಿನಿಂದ ಆರಂಭಿಸಿ S-3 ಫಾರ್ಮನ್ನು ಸಭಾ ಕೂಟಗಳ ಹಾಜರಿಯನ್ನು ದಾಖಲಿಸಲಿಕ್ಕಾಗಿ ಮಾತ್ರ ಉಪಯೋಗಿಸಲಾಗುತ್ತದೆ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ವಾಚ್‌ ಟವರ್‌ ಪಬ್ಲಿಕೇಷನ್‌ ಇಂಡೆಕ್ಸ್‌ 2006 ​—⁠ಇಂಗ್ಲಿಷ್‌

ಶಾಂತಿಭರಿತ ಹೊಸ ಲೋಕದಲ್ಲಿ ಜೀವನ (ಟ್ರ್ಯಾಕ್ಟ್‌ ನಂ. 15) ​—⁠ಚೈನೀಸ್‌, ಪರ್ಷೀಯನ್‌, ಪೋರ್ಟ್ಯುಗೀಸ್‌, ಫ್ರೆಂಚ್‌

ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು? (ಟ್ರ್ಯಾಕ್ಟ್‌ ನಂ. 16) ​—⁠ಆ್ಯರಬಿಕ್‌, ಚೈನೀಸ್‌, ಪರ್ಷೀಯನ್‌, ಪೋರ್ಟ್ಯುಗೀಸ್‌, ಫ್ರೆಂಚ್‌

ಮನಗುಂದಿದವರಿಗೆ ಸಾಂತ್ವನ (ಟ್ರ್ಯಾಕ್ಟ್‌ ನಂ. 20) ​—⁠ಚೈನೀಸ್‌, ಪರ್ಷೀಯನ್‌, ಪೋರ್ಟ್ಯುಗೀಸ್‌, ಫ್ರೆಂಚ್‌

ಎಲ್ಲ ಕಷ್ಟಸಂಕಟಗಳು ಬೇಗನೆ ಕೊನೆಗೊಳ್ಳಲಿವೆ! (ಟ್ರ್ಯಾಕ್ಟ್‌ ನಂ. 27) ​—⁠ಚೈನೀಸ್‌, ಪರ್ಷೀಯನ್‌, ಪೋರ್ಟ್ಯುಗೀಸ್‌, ಫ್ರೆಂಚ್‌

◼ ಪುನಃ ಲಭ್ಯವಿರುವ ಪ್ರಕಾಶನಗಳು:

ಚರ್ಚೆಗಾಗಿ ಬೈಬಲ್‌ ವಿಷಯಗಳು ​—⁠ತೆಲುಗು, ಪಂಜಾಬಿ, ಬಂಗಾಲಿ, ಮರಾಠಿ, ಹಿಂದಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ