ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2010, ಏಪ್ರಿಲ್ 26ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2010ರ ಮಾರ್ಚ್ 1ರಿಂದ ಏಪ್ರಿಲ್ 26ರ ತನಕದ ವಾರಗಳ ನೇಮಕಗಳಲ್ಲಿ ಆವರಿಸಲಾದ ವಿಷಯಗಳ ಮೇಲೆ ಇವು ಆಧಾರಿತ. 20 ನಿಮಿಷಗಳ ಈ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
1. “ಯೆಹೋವನು ನನಗೆ ವಿರೋಧವಾಗಿ ಸಾಕ್ಷಿಹೇಳಿದ್ದಾನೆ; ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ” ಎಂದು ನೊವೊಮಿ ಹೇಳಿದ್ದರ ಅರ್ಥವೇನು? (ರೂತ. 1:21) [w05 3/1 ಪು. 27 ಪ್ಯಾರ. 2, 4]
2. ಯಾವ ಗುಣಗಳಿಂದ ರೂತಳು “ಗುಣವಂತೆ” ಆಗಿದ್ದಳು? (ರೂತ. 3:11) [w05 3/1 ಪು. 28 ಪ್ಯಾರ. 7]
3. “ನಾನು ನಿನಗೆ ಹತ್ತು ಮಂದಿ ಮಕ್ಕಳಿಗಿಂತ ಹೆಚ್ಚಾಗಿದ್ದೇನಲ್ಲಾ” ಎಂಬ ಎಲ್ಕಾನನ ಮಾತು ಅವನ ಪತ್ನಿಯಲ್ಲಿ ಹೇಗೆ ಧೈರ್ಯತುಂಬಿಸಿತು? (1 ಸಮು. 1:8) [w05 3/15 ಪು. 22 ಪ್ಯಾರ. 3]
4. ಒಬ್ಬ ಅರಸನು ಬೇಕೆಂದು ಇಸ್ರಾಯೇಲ್ಯರು ಮಾಡಿದ ಬೇಡಿಕೆ ಏಕೆ ಅನುಚಿತವಾಗಿತ್ತು? (1 ಸಮು. 8:5) [w05 9/15 ಪು. 20 ಪ್ಯಾರ. 17]
5. ಸಮುವೇಲನು “ತಲೆನರೆತ ಮುದುಕ”ನಾಗಿದ್ದರೂ ಇತರರಿಗಾಗಿ ಪ್ರಾರ್ಥಿಸುವುದರಲ್ಲಿ ಹೇಗೆ ಮಾದರಿಯನ್ನಿಟ್ಟನು? ಮತ್ತು ಇದರಿಂದ ನಮಗೇನು ಪಾಠವಿದೆ? (1 ಸಮು. 12:2, 23) [w07 6/1 ಪು. 29 ಪ್ಯಾರ. 14-15]
6. ಸೌಲನು ಕೇನ್ಯರಿಗೆ ವಿಶೇಷ ಪರಿಗಣನೆ ತೋರಿಸಿದ್ದೇಕೆ? (1 ಸಮು. 15:6) [w05 3/15 ಪು. 22 ಪ್ಯಾರ. 10]
7. ಒಂದನೇ ಸಮುವೇಲ 16:17-23ಕ್ಕನುಸಾರ ದಾವೀದನು ಯಾರೆಂದು ಸೌಲನಿಗೆ ತಿಳಿದಿತ್ತಾದರೂ, ‘ನೀನು ಯಾರ ಮಗನು’ ಎಂದು ಅವನು ದಾವೀದನಿಗೆ ಕೇಳಿದ್ದೇಕೆ? (1 ಸಮು. 17:58) [w05 3/15 ಪು. 24 ಪ್ಯಾರ. 1]
8. ಗತ್ ಊರಿನಲ್ಲಿ ಎದ್ದ ದೊಡ್ಡ ಸಮಸ್ಯೆಯನ್ನು ದಾವೀದನು ನಿಭಾಯಿಸಿದ ರೀತಿಯಿಂದ ನಾವೇನು ಕಲಿಯಬಲ್ಲೆವು? (1 ಸಮು. 21:12, 13) [w05 3/15 ಪು. 24 ಪ್ಯಾರ. 4]
9. ಸ್ನೇಹಿತನಾದ ದಾವೀದನನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ಅಗತ್ಯವಿದ್ದಾಗ ಯೋನಾತಾನನ ಪ್ರೀತಿ, ದೀನಭಾವ ಹೇಗೆ ವ್ಯಕ್ತವಾಯಿತು? (1 ಸಮು. 23:17) [lv ಪು. 32 ಪ್ಯಾರ. 10, ಪು. 34 ಪಾದಟಿಪ್ಪಣಿ]
10. ಏಂದೋರಿನ ಮಾಟಗಾತಿಯ ಬಳಿ ಸೌಲನು ಹೋದ ವೃತ್ತಾಂತದಿಂದ ನಾವೇನು ಕಲಿಯಬಲ್ಲೆವು? (1 ಸಮು. 28:8-19) [w05 3/15 ಪು. 24 ಪ್ಯಾರ. 8]