ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/12 ಪು. 4
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2012 ನಮ್ಮ ರಾಜ್ಯದ ಸೇವೆ
2012 ನಮ್ಮ ರಾಜ್ಯದ ಸೇವೆ
km 1/12 ಪು. 4

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ ಜನವರಿ: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮೊದಲ ಭೇಟಿಯಲ್ಲೇ ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಮನೆಯವನ ಬಳಿ ಈಗಾಗಲೇ ಈ ಪುಸ್ತಕವಿದ್ದಲ್ಲಿ ಮತ್ತು ಬೈಬಲ್‌ ಅಧ್ಯಯನ ಬೇಡವೆಂದಲ್ಲಿ, ಆ ವ್ಯಕ್ತಿಯ ಆಸಕ್ತಿಗೆ ತಕ್ಕಂಥ ಯಾವುದೇ ಹಿಂದಿನ ಹಳೇ ಪತ್ರಿಕೆ ಅಥವಾ ಬ್ರೋಷರನ್ನು ಪ್ರಚಾರಕರು ನೀಡಬಹುದು. ಫೆಬ್ರವರಿ: ಕುಟುಂಬ ಸಂತೋಷದ ರಹಸ್ಯ. ಮಾರ್ಚ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮೊದಲ ಭೇಟಿಯಲ್ಲೇ ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಮನೆಯವನ ಬಳಿ ಈಗಾಗಲೇ ಈ ಪುಸ್ತಕವಿದ್ದಲ್ಲಿ ಮತ್ತು ಬೈಬಲ್‌ ಅಧ್ಯಯನ ಬೇಡವೆಂದಲ್ಲಿ, ಆ ವ್ಯಕ್ತಿಯ ಆಸಕ್ತಿಗೆ ತಕ್ಕಂಥ ಯಾವುದೇ ಹಿಂದಿನ ಹಳೇ ಪತ್ರಿಕೆ ಅಥವಾ ಬ್ರೋಷರನ್ನು ಪ್ರಚಾರಕರು ನೀಡಬಹುದು. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಆಸಕ್ತಿ ತೋರಿಸಿದವರಿಗೆ, ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಟ್ರ್ಯಾಕ್ಟ್‌ ನೀಡಿ ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿದ್ದರೂ ಯೇಸುವಿನ ಮರಣದ ಸ್ಮರಣೆ ಮತ್ತು ಸಮ್ಮೇಳನ, ಅಧಿವೇಶನಗಳಂಥ ವಿಶೇಷ ಕೂಟಗಳಿಗೆ ಹಾಜರಾಗುವವರನ್ನು ಮತ್ತು ಇತರ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್‌ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನ ಆರಂಭಿಸಲು ಪ್ರಯತ್ನಿಸಿ.

◼ ಫೆಬ್ರವರಿ ತಿಂಗಳಿಂದ ಸರ್ಕಿಟ್‌ ಮೇಲ್ವಿಚಾರಕರು ನೀಡಲಿರುವ ಹೊಸ ಸಾರ್ವಜನಿಕ ಭಾಷಣದ ಶೀರ್ಷಿಕೆ: “ಯೆಹೋವ ದೇವರ ಮೇಲೆ ನಿಮಗೆ ಭರವಸೆ ಇದೆಯೇ?”

◼ ಬೆಂಗಳೂರಿನಲ್ಲಿರುವ ಬ್ರಾಂಚ್‌ ಆಫೀಸಿಗೆ 15ಕ್ಕಿಂತ ಹೆಚ್ಚು ಮಂದಿಯ ಗುಂಪು ಭೇಟಿ ಮಾಡಲಿರುವಲ್ಲಿ ಕಡಿಮೆಪಕ್ಷ ಎರಡು ವಾರಗಳ ಮುಂಚೆ ಬೆತೆಲಿಗೆ ಪತ್ರ ಬರೆದು ತಿಳಿಸಬೇಕು. ಎಷ್ಟು ಮಂದಿ, ಯಾವ ದಿನ, ಯಾವ ಸಮಯ ಬರುವಿರೆಂದು ದಯವಿಟ್ಟು ಅದರಲ್ಲಿ ತಿಳಿಸಿ. ಬೆತೆಲನ್ನು ಭೇಟಿಮಾಡುವ ಮೊದಲು ದಯವಿಟ್ಟು ಮಾರ್ಚ್‌ 2008ರ ನಮ್ಮ ರಾಜ್ಯ ಸೇವೆಯಲ್ಲಿನ ಪ್ರಶ್ನಾ ಚೌಕವನ್ನು ಓದಿ. ಬೆಳಗ್ಗೆ 8:00/10:00 ಘಂಟೆಗೆ, ಮಧ್ಯಾಹ್ನ 1:00/3:00 ಘಂಟೆಗೆ ಬೆತೆಲನ್ನು ನೋಡುವ ಏರ್ಪಾಡು ಇದೆ. ಮೇ 25ರ ಶುಕ್ರವಾರದಂದು ಬೆತೆಲಿಗರೆಲ್ಲರಿಗೂ ತಮ್ಮ ತಮ್ಮ ಕೋಣೆಗಳನ್ನು ಶುಚಿಗೊಳಿಸುವ ಕೆಲಸ ಇರುತ್ತದೆ. ಈ ದಿನ ಹಾಗೂ ಜನವರಿ 26, ಮೇ 1, ಆಗಸ್ಟ್‌ 15, 30, 31, ಅಕ್ಟೋಬರ್‌ 2ರಂದು ಸಂದರ್ಶಕರ ಭೇಟಿಗೆ ಅವಕಾಶವಿಲ್ಲ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ—ನೇಪಾಳಿ

ದೇವರ ಮಾತನ್ನು ಆಲಿಸಿ ಮತ್ತು ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ—ನೇವಾರಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ