ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಸೆಪ್ಟೆಂಬರ್ ಮತ್ತು ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ನವೆಂಬರ್ ಮತ್ತು ಡಿಸೆಂಬರ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಅಥವಾ ಈ ಕೆಳಕಂಡ ಕರಪತ್ರಗಳನ್ನು ನೀಡಿ: ಪರದೈಸಿಗೆ ಹೋಗುವ ದಾರಿಯನ್ನು ಕಂಡುಕೊಳ್ಳುವ ವಿಧ, ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ? ಸರ್ವಶ್ರೇಷ್ಠ ಹೆಸರು, ಯೆಹೋವನ ಸಾಕ್ಷಿಗಳು ಯಾರು? ಮತ್ತು ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ?
◼ 2015ರ ಯೇಸುವಿನ ಮರಣದ ಸ್ಮರಣೆಯ ಸಮಯಾವಧಿಯಲ್ಲಿ ನೀಡಲಾಗುವ ವಿಶೇಷ ಭಾಷಣವನ್ನು ಏಪ್ರಿಲ್ 6ನೇ ವಾರದಲ್ಲಿ ಸಾದರಪಡಿಸಲಾಗುವುದು. ಅದರ ಶೀರ್ಷಿಕೆಯನ್ನು ನಂತರ ಪ್ರಕಟಿಸಲಾಗುವುದು. ಯಾವುದಾದರೂ ಸಭೆಗೆ ಅದೇ ವಾರದಲ್ಲಿ ಸರ್ಕಿಟ್ ಮೇಲ್ವಿಚಾರಕರ ಭೇಟಿ ಅಥವಾ ಸಮ್ಮೇಳನ ಇರುವುದಾದರೆ ವಿಶೇಷ ಭಾಷಣವನ್ನು ಅದರ ಮುಂದಿನ ವಾರದಲ್ಲಿ ನೀಡಬೇಕು. ಯಾವ ಸಭೆಯೂ ಏಪ್ರಿಲ್ 6ಕ್ಕಿಂತ ಮುಂಚೆ ಈ ವಿಶೇಷ ಭಾಷಣವನ್ನು ನೀಡಬಾರದು.
◼ ಸೆಪ್ಟೆಂಬರ್ ತಿಂಗಳಿಂದ ಸರ್ಕಿಟ್ ಮೇಲ್ವಿಚಾರಕರು ಸಾದರಪಡಿಸುವ ಸಾರ್ವಜನಿಕ ಉಪನ್ಯಾಸದ ವಿಷಯ: “ದೈವಿಕ ವಿವೇಕದಿಂದ ನಮಗೆ ಯಾವ ಪ್ರಯೋಜನಗಳಿವೆ?”
◼ ಸಭಾ ಸೆಕ್ರೆಟರಿ ಮತ್ತು ಸೇವಾ ಮೇಲ್ವಿಚಾರಕನು ಎಲ್ಲಾ ರೆಗ್ಯುಲರ್ ಪಯನೀಯರರ ಚಟುವಟಿಕೆಯನ್ನು ಪರಿಶೀಲಿಸಬೇಕು. ಅವರಲ್ಲಿ ಯಾರಿಗಾದರೂ ತಾಸುಗಳನ್ನು ಪೂರ್ಣಗೊಳಿಸಲು ಕಷ್ಟಕರವಾಗಿರುವುದಾದರೆ, ನೆರವನ್ನು ನೀಡಲಿಕ್ಕಾಗಿ ಹಿರಿಯರು ಏರ್ಪಾಡು ಮಾಡಬೇಕು.
◼ ಸಭೆಯಲ್ಲಿ ಪುನಃಸ್ಥಾಪಿಸಲ್ಪಡಲು ಇಷ್ಟಪಡುವ ಯಾವುದೇ ಬಹಿಷ್ಕೃತ ಅಥವಾ ಬೇರ್ಪಡಿಸಿಕೊಂಡ ವ್ಯಕ್ತಿಗಳ ಕುರಿತಾಗಿ 1992, ಫೆಬ್ರವರಿ 15ರ ಕಾವಲಿನಬುರುಜುವಿನ 19-23ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸಲಹೆಸೂಚನೆಗಳನ್ನು ಅನುಸರಿಸುವಂತೆ ಹಿರಿಯರಿಗೆ ಜ್ಞಾಪಿಸಲಾಗಿದೆ.