ಹೊಚ್ಚ ಹೊಸ ಸಂಶೋಧನಾ ಸಾಧನ
ಲೋಕವ್ಯಾಪಕವಾಗಿ ಲಕ್ಷಗಟ್ಟಲೆ ಪ್ರಚಾರಕರು ಸಂಶೋಧನೆ ಮಾಡಲು ವಾಚ್ ಟವರ್ ಪಬ್ಲಿಕೇಶನ್ಸ್ ಇಂಡೆಕ್ಸನ್ನು ಉಪಯೋಗಿಸಿದ್ದಾರೆ. ಆದರೆ ಇದರಲ್ಲಿ ಹೆಚ್ಚು ಮಾಹಿತಿ ಇರುವುದರಿಂದ ಇದು ಕೆಲವೇ ಭಾಷೆಗಳಲ್ಲಿ ಲಭ್ಯವಿದೆ. ಆದ್ದರಿಂದ ಅನೇಕರಿಗೆ ಸಹಾಯವಾಗಲೆಂದು ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನವನ್ನು 170 ಭಾಷೆಗಳಲ್ಲಿ ಲಭ್ಯಗೊಳಿಸಲಾಗಿದೆ. ಈ ಭಾಷೆಗಳಲ್ಲಿ ಅಮೆರಿಕನ್ ಸನ್ನೆ ಭಾಷೆ, ಬಂಗಾಲಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮರಾಠಿ, ಮಲಯಾಳಂ, ನೇಪಾಲಿ, ಪಂಜಾಬಿ, ತಮಿಳು, ತೆಲುಗು ಭಾಷೆಗಳೂ ಸೇರಿವೆ. ಸಂಶೋಧನಾ ಸಾಧನದಲ್ಲಿ ಕೊಡಲಾಗಿರುವ ಪ್ರಕಾಶನಗಳು ಇಸವಿ 2000ದಿಂದ ಬಂದ ಪ್ರಕಾಶನಗಳಾಗಿವೆ. ಇಂಡೆಕ್ಸ್ ಪುಸ್ತಕ ಯಾವೆಲ್ಲಾ ಭಾಷೆಗಳಲ್ಲಿ ಲಭ್ಯವಿದೆಯೋ ಆ ಭಾಷೆಗಳಲ್ಲಿ ಸಂಶೋಧನಾ ಸಾಧನವನ್ನು ಮುದ್ರಿಸಲಾಗಿಲ್ಲ. ಆದರೆ ವಾಚ್‌ಟವರ್ ಲೈಬ್ರರಿ ಮತ್ತು ವಾಚ್‌ಟವರ್ ಆನ್‌ಲೈನ್ ಲೈಬ್ರರಿಯಲ್ಲಿ ಈ ಸಾಧನ ಲಭ್ಯವಿದೆ. ಬೈಬಲ್ ಕುರಿತ ಪ್ರಶ್ನೆಗಳಿಗೆ, ವ್ಯಕ್ತಿಗತ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮತ್ತು ಕೂಟ ಹಾಗೂ ಕುಟುಂಬ ಆರಾಧನೆಗೆ ತಯಾರಿಸಲು ಸಂಶೋಧನಾ ಸಾಧನ ಸಹಾಯವಾಗುತ್ತದೆ.