ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಅಕ್ಟೋಬರ್‌ ಪು. 3
  • ಬೈಬಲಿನ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗುವುದು ಹೇಗೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲಿನ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗುವುದು ಹೇಗೆ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ಯೆಹೋವನು ದಾನಿಯೇಲನಿಗೆ ಒಂದು ಅದ್ಭುತಕರವಾದ ಬಹುಮಾನವನ್ನು ವಾಗ್ದಾನಿಸುತ್ತಾನೆ
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ದಾನಿಯೇಲ ಪುಸ್ತಕ ಮತ್ತು ನೀವು
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ಅಂತ್ಯಕಾಲದಲ್ಲಿ ಸತ್ಯ ಆರಾಧಕರನ್ನು ಗುರುತಿಸುವುದು
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ನಮ್ಮ ದಿನಕ್ಕಾಗಿರುವ ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಅಕ್ಟೋಬರ್‌ ಪು. 3

ನಮ್ಮ ಕ್ರೈಸ್ತ ಜೀವನ

ಬೈಬಲಿನ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗುವುದು ಹೇಗೆ?

ಪರೀಕ್ಷೆಗಳು ಎದುರಾದಾಗ ನೀವೂ ದಾನಿಯೇಲನಂತೆ ನಂಬಿಗಸ್ತರಾಗಿರಲು ಬಯಸುವಿರಾ? ದಾನಿಯೇಲನು ದೇವರ ವಾಕ್ಯವನ್ನೂ ಅದರಲ್ಲಿರುವ ಕಷ್ಟಕರವಾದ ಪ್ರವಾದನೆಗಳನ್ನೂ ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡುತ್ತಿದ್ದನು. (ದಾನಿ 9:2) ಶ್ರದ್ಧಾಪೂರ್ವಕ ಬೈಬಲ್‌ ಅಧ್ಯಯನವು ನಂಬಿಗಸ್ತರಾಗಿ ಉಳಿಯಲು ನಿಮಗೂ ಸಹಾಯ ಮಾಡುತ್ತದೆ. ಇದು ಯೆಹೋವನು ಕೊಟ್ಟ ಮಾತುಗಳು ಖಂಡಿತ ನೆರವೇರುವವು ಎಂಬ ಭರವಸೆಯನ್ನು ಹೆಚ್ಚಿಸುತ್ತದೆ. (ಯೆಹೋ 23:14) ಜೊತೆಗೆ, ದೇವರ ಮೇಲೆ ನಿಮಗಿರುವ ಪ್ರೀತಿಯನ್ನೂ ಹೆಚ್ಚಿಸುತ್ತದೆ. ಈ ಪ್ರೀತಿ ಸರಿಯಾದದ್ದನ್ನು ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ. (ಕೀರ್ತ 97:10) ಆದರೆ, ಬೈಬಲ್‌ ಅಧ್ಯಯನವನ್ನು ಎಲ್ಲಿಂದ ಪ್ರಾರಂಭಿಸಬೇಕು? ಮುಂದಿನ ಸಲಹೆಗಳನ್ನು ಪಾಲಿಸಿ:

ದೇವರ ವಾಕ್ಯವನ್ನು ದಾನಿಯೇಲನು ಅಧ್ಯಯನ ಮಾಡುತ್ತಿದ್ದಾನೆ
  • ನಾನು ಏನನ್ನು ಅಧ್ಯಯನ ಮಾಡಬೇಕು? ಒಳ್ಳೆಯ ಅಧ್ಯಯನ ರೂಢಿಯಲ್ಲಿ ಕೂಟಗಳಿಗೆ ತಯಾರಿಸುವುದು ಸಹ ಒಳಗೂಡಿದೆ. ವಾರದ ಬೈಬಲ್‌ ವಾಚನದಲ್ಲಿ ನಿಮಗೆ ಅರ್ಥವಾಗದ ವಿಷಯಗಳ ಕುರಿತು ಹೆಚ್ಚು ಅಧ್ಯಯನ ಮಾಡಿದರೆ ತುಂಬ ಪ್ರಯೋಜನಕಾರಿ ಆಗಿರುತ್ತದೆ. ಇದಕ್ಕೆ ಕೂಡಿಸಿ, ಕೆಲವರು ಬೈಬಲ್‌ ಪ್ರವಾದನೆಗಳ ಬಗ್ಗೆ, ಪವಿತ್ರಾತ್ಮದ ಫಲದ ವಿವಿಧ ಅಂಶಗಳ ಬಗ್ಗೆ, ಅಪೊಸ್ತಲ ಪೌಲನ ಮಿಷೆನರಿ ಪ್ರಯಾಣದ ಬಗ್ಗೆ ಅಥವಾ ಯೆಹೋವನ ಸೃಷ್ಟಿಕಾರ್ಯದ ಬಗ್ಗೆ ಹೆಚ್ಚನ್ನು ಕಲಿಯುತ್ತಾರೆ. ಒಂದು ಬೈಬಲ್‌ ಪ್ರಶ್ನೆ ನಿಮ್ಮ ಮನಸ್ಸಿಗೆ ಬರುವುದಾದರೆ ಅದನ್ನು ಬರೆದಿಡಿ ಮತ್ತು ಮುಂದಿನ ಬಾರಿ ಅಧ್ಯಯನ ಮಾಡುವಾಗ ಅದರ ಬಗ್ಗೆ ಸಂಶೋಧನೆ ಮಾಡಿ.

  • ಮಾಹಿತಿ ಎಲ್ಲಿ ಸಿಗುತ್ತದೆ? ಆಧ್ಯಾತ್ಮಿಕ ನಿಧಿಗಳನ್ನು ಹುಡುಕಲಿಕ್ಕಾಗಿ ಸಂಶೋಧನಾ ಸಾಧನಗಳು ಎಂಬ ವಿಡಿಯೋದಲ್ಲಿ ಕೆಲವು ಅಧ್ಯಯನ ಸಹಾಯಕಗಳ ಬಗ್ಗೆ ತಿಳಿಸಲಾಗಿದೆ. ನಿಮಗೆಷ್ಟು ಸಂಶೋಧನೆ ಮಾಡಲು ತಿಳಿದಿದೆ ಎಂದು ನೋಡಲು ದಾನಿಯೇಲ ಅಧ್ಯಾಯ 7​ರಲ್ಲಿರುವ ಮೃಗಗಳು ಯಾವ ಲೋಕಶಕ್ತಿಗಳನ್ನು ಪ್ರತಿನಿಧಿಸುತ್ತವೆಂದು ಸಂಶೋಧನೆ ಮಾಡಿ.

  • ಅಧ್ಯಯನಕ್ಕಾಗಿ ಎಷ್ಟು ಸಮಯ ವ್ಯಯಿಸಬೇಕು? ಆಧ್ಯಾತ್ಮಿಕವಾಗಿ ಆರೋಗ್ಯವಾಗಿರಬೇಕೆಂದರೆ ಕ್ರಮವಾದ ಅಧ್ಯಯನ ತುಂಬ ಮುಖ್ಯ. ಅಗತ್ಯವಿದ್ದರೆ, ಆರಂಭದಲ್ಲಿ ಸ್ವಲ್ಪ ಸಮಯ ಅಧ್ಯಯನ ಮಾಡಿ. ನಂತರ, ನಿಧಾನವಾಗಿ ಸಮಯವನ್ನು ಹೆಚ್ಚು ಮಾಡಿ. ದೇವರ ವಾಕ್ಯವನ್ನು ಅಧ್ಯಯನ ಮಾಡುವುದು ನಿಧಿಯನ್ನು ಅಗೆಯುವಂತಿದೆ. ನೀವು ಎಷ್ಟು ಹೆಚ್ಚು ನಿಧಿಯನ್ನು ಕಂಡುಕೊಳ್ಳುತ್ತೀರೋ ಅಷ್ಟು ಹೆಚ್ಚು ಅಗೆಯುತ್ತಾ ಹೋಗುತ್ತೀರಿ! (ಜ್ಞಾನೋ 2:3-6) ಹೆಚ್ಚೆಚ್ಚು ಅಧ್ಯಯನ ಮಾಡಿದಂತೆ ದೇವರ ವಾಕ್ಯಕ್ಕಾಗಿರುವ ನಿಮ್ಮ ಹಂಬಲ ಹೆಚ್ಚುವುದು. ಹೀಗೆ ಕ್ರಮವಾದ ಬೈಬಲ್‌ ಅಧ್ಯಯನವು ಒಂದು ರೂಢಿಯಾಗುವುದು.—1ಪೇತ್ರ 2:2.

    ನಿಮ್ಮ ಅಧ್ಯಯನವನ್ನು ಇನ್ನೂ ಹೆಚ್ಚು ಆನಂದಕರವಾಗಿ ಮಾಡಲು ಸಲಹೆಗಳಿಗಾಗಿ ಜುಲೈ-ಸೆಪ್ಟೆಂಬರ್‌ 2012 ಎಚ್ಚರ! ಪುಟ 12-14 ನೋಡಿ.

ದಾನಿಯೇಲ 7​ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ ಮೃಗಗಳು ಏನನ್ನು ಸೂಚಿಸುತ್ತವೆ?

  • ಒಂದು ಹದ್ದಿನ ರೆಕ್ಕೆಗಳನ್ನು ಹೊಂದಿರುವ ಸಿಂಹದಂಥ ಒಂದು ಪ್ರಾಣಿ

    ದಾನಿ 7:4

  • ತನ್ನ ಬಾಯಿಯಲ್ಲಿ ಮೂರು ಪಕ್ಕೆಲುಬುಗಳನ್ನು ಹೊಂದಿರುವ ಒಂದು ಕರಡಿ ರೀತಿಯ ಪ್ರಾಣಿ

    ದಾನಿ 7:5

  • ಒಂದು ಚಿರತೆಗೆ ನಾಲ್ಕು ತಲೆಗಳು ಮತ್ತು ಅದರ ಹಿಂದೆ ನಾಲ್ಕು ರೆಕ್ಕೆಗಳನ್ನು ಹೊಂದಿರುವ ಚಿರತೆಯಂಥ ಒಂದು ಪ್ರಾಣಿ

    ದಾನಿ 7:6

  • ದೊಡ್ಡ ಕಬ್ಬಿಣದ ಹಲ್ಲುಗಳು ಮತ್ತು ಹತ್ತು ಕೊಂಬುಗಳ ಭಯಂಕರ ಪ್ರಾಣಿ

    ದಾನಿ 7:7

ಹೆಚ್ಚಿನ ಪ್ರಶ್ನೆ:

ದಾನಿಯೇಲ 7:8, 24 ಹೇಗೆ ನೆರವೇರಿತು?

ಕಣ್ಣುಗಳು ಮತ್ತು ಬಾಯಿರುವ ಒಂದು ಸಣ್ಣ ಕೊಂಬು ಹತ್ತು ಕೊಂಬುಗಳ ಮಧ್ಯ ಹುಟ್ಟಿಕೊಂಡು, ಅದು ಮೂರು ಕೊಂಬುಗಳನ್ನು ಕಿತ್ತುಬಿಡುತ್ತದೆ

ಮುಂದಿನ ಅಧ್ಯಯನಕ್ಕಾಗಿ ಪ್ರಶ್ನೆ:

ಪ್ರಕಟನೆ 13​ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ ಮೃಗಗಳು ಏನನ್ನು ಸೂಚಿಸುತ್ತವೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ