ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 12-13
ಶಿಸ್ತು—ಯೆಹೋವನ ಪ್ರೀತಿಯ ರುಜುವಾತು
ಶಿಸ್ತು ನೀಡುವುದು ಅಂದರೆ ತಿದ್ದುವುದು, ಸರಿಪಡಿಸುವುದು, ಉಪದೇಶಿಸುವುದು, ಮತ್ತು ತರಬೇತಿ ಕೊಡುವುದು ಆಗಿದೆ. ಒಬ್ಬ ಪ್ರೀತಿಯ ತಂದೆ ಹೇಗೆ ತನ್ನ ಮಕ್ಕಳಿಗೆ ಶಿಸ್ತು ಕೊಡುತ್ತಾನೋ ಅದೇ ರೀತಿ ಯೆಹೋವನು ನಮಗೆ ಶಿಸ್ತು ಕೊಡುತ್ತಾನೆ. ಈ ಕೆಳಗಿನ ವಿಧಾನಗಳ ಮೂಲಕ ಯೆಹೋವನು ನಮಗೆ ಶಿಸ್ತು ಕೊಡುತ್ತಾನೆ:
ಬೈಬಲ್ ಓದುವಿಕೆ, ವೈಯಕ್ತಿಕ ಅಧ್ಯಯನ, ಕೂಟಗಳು ಮತ್ತು ಧ್ಯಾನದ ಮೂಲಕ
ಒಬ್ಬ ಸಹೋದರ ಅಥವಾ ಸಹೋದರಿ ಕೊಡುವ ಸಲಹೆ ಮತ್ತು ತಿದ್ದುಪಾಟಿನ ಮೂಲಕ
ನಮ್ಮ ತಪ್ಪಿನಿಂದ ಆದ ಕಹಿ ಅನುಭವಗಳ ಮೂಲಕ
ನ್ಯಾಯನಿರ್ಣಾಯಕ ಸಮಿತಿ ನೀಡುವ ತಿದ್ದುಪಾಟು ಅಥವಾ ಬಹಿಷ್ಕಾರದ ಮೂಲಕ
ಯೆಹೋವನು ಅನುಮತಿಸುವ ಪರೀಕ್ಷೆಗಳ ಅಥವಾ ಹಿಂಸೆಯ ಮೂಲಕ.—ಕಾವಲಿನಬುರುಜು15 9/15 ಪುಟ 21 ಪ್ಯಾರ 13; it-1-E ಪುಟ 629