ನಮ್ಮ ಕ್ರೈಸ್ತ ಜೀವನ
ಯೆಹೋವನು ಶುದ್ಧ ಜನರನ್ನು ಪ್ರೀತಿಸುತ್ತಾನೆ
“ಕೈ ತೊಳಿ. ನಿನ್ನ ರೂಮ್ ಕ್ಲೀನ್ ಮಾಡು. ಕಸ ಗುಡ್ಸು. ಕಸ ಬಿಸಾಕು” ಅಂತ ಹೆತ್ತವರು ತಮ್ಮ ಮಕ್ಕಳಿಗೆ ಹೇಳುತ್ತಾರೆ. ಹೀಗೆ, ಶುಚಿಯಾಗಿ ಇರಲು ಕಲಿಸುತ್ತಾರೆ. ಆದರೆ, ನಾವು ಈ ರೀತಿ ಇರಬೇಕು ಅಂತ ನಮ್ಮೆಲ್ಲರಿಗೆ ಕಲಿಸಿದ್ದು ನಮ್ಮ ದೇವರಾದ ಯೆಹೋವನು. (ವಿಮೋ 30:18-20; ಧರ್ಮೋ 23:14; 2ಕೊರಿಂ 7:1) ನಾವು ನಮ್ಮ ಶರೀರವನ್ನು, ವಸ್ತುಗಳನ್ನು ಶುಚಿಯಾಗಿ ಇಟ್ಟುಕೊಂಡಾಗ ಯೆಹೋವನಿಗೆ ಘನತೆ ತೋರಿಸಿದಂತೆ ಆಗುತ್ತೆ. (1ಪೇತ್ರ 1:14-16) ಆದರೆ ನಮ್ಮ ಮನೆ ಮತ್ತು ಅದರ ಸುತ್ತಮುತ್ತಲಿರುವ ಜಾಗವನ್ನು ಹೇಗೆ ಇಟ್ಟುಕೊಳ್ಳುತ್ತೇವೆ? ಕೆಲವು ಜನರು ರೋಡಲ್ಲಿ, ಪಾರ್ಕಲ್ಲಿ ಕಸ ಎಸೆಯುತ್ತಾರೆ, ಉಗುಳುತ್ತಾರೆ. ಆದರೆ, ಕ್ರೈಸ್ತರು ಆ ರೀತಿ ಇಲ್ಲ. ಅವರು ಮನೆಯಂತಿರುವ ಈ ಭೂಮಿಯನ್ನು ಶುಚಿಯಾಗಿ ಇಡಲು ತುಂಬ ಪ್ರಯತ್ನಿಸುತ್ತಾರೆ. (ಕೀರ್ತ 115:16; ಪ್ರಕ 11:18) ಚಾಕಲೇಟ್ ಕವರ್‌ಗಳು, ನೀರಿನ ಅಥವಾ ಜ್ಯೂಸ್ ಬಾಟಲ್‌ಗಳು, ಚಿಂಗಮ್ ಇಂತಹ ಸಣ್ಣ ಸಣ್ಣ ವಸ್ತುಗಳನ್ನು ಎಸೆಯುವಾಗಲೂ ಜಾಗ್ರತೆವಹಿಸಬೇಕು. ಇದು ನಮಗೆ ಶುಚಿತ್ವದ ಕಡೆಗೆ ಎಂಥ ಮನೋಭಾವವಿದೆ ಎಂದು ತೋರಿಸುತ್ತೆ. ನಾವು ಎಲ್ಲಾ ಸಮಯದಲ್ಲಿ “ದೇವರ ಶುಶ್ರೂಷಕರಾಗಿ ನಮ್ಮನ್ನು ಶಿಫಾರಸ್ಸು ಮಾಡಿಕೊಳ್ಳುತ್ತಿದ್ದೇವೆ” ಎಂದು ತೋರಿಸಲು ಬಯಸುತ್ತೇವೆ.—2ಕೊರಿಂ 6:3, 4.
ಶುದ್ಧ ಜನರು ದೇವರ ಪ್ರೀತಿಗೆ ಪಾತ್ರರು ಎಂಬ ವಿಡಿಯೋ ನೋಡಿ. ನಂತರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:
ತಮ್ಮ ವಸ್ತುಗಳನ್ನು ಶುಚಿಯಾಗಿ ಇಡದಿರುವುದಕ್ಕೆ ಕೆಲವರು ಯಾವೆಲ್ಲಾ ನೆಪಗಳನ್ನು ಕೊಡಬಹುದು?
ಶುಚಿತ್ವದ ಕಡೆಗೆ ಯೆಹೋವನಿಗಿರುವ ನೋಟದ ಬಗ್ಗೆ ಧರ್ಮಶಾಸ್ತ್ರದಿಂದ ಏನು ಗೊತ್ತಾಗುತ್ತೆ?
ನಾವು ಏನೂ ಮಾತಾಡದೆನೇ ಯೆಹೋವನ ಬಗ್ಗೆ ಹೇಗೆ ಸಾಕ್ಷಿ ಕೊಡಬಹುದು?
ಶುಚಿತ್ವದ ಬಗ್ಗೆ ಯೆಹೋವನಿಗೆ ಇರುವ ನೋಟ ನನಗೂ ಇದೆಯಾ? ಇದೆ ಅಂತ ನಾನು ಹೇಗೆ ತೋರಿಸಬಹುದು?