ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ನವೆಂಬರ್‌ ಪು. 3
  • ಮದುವೆಗಾಗಿ ಪ್ಲಾನ್‌ ಮಾಡುವಾಗ, ಬೇರೆಯವರಿಂದ ಪ್ರಭಾವಿತರಾಗಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮದುವೆಗಾಗಿ ಪ್ಲಾನ್‌ ಮಾಡುವಾಗ, ಬೇರೆಯವರಿಂದ ಪ್ರಭಾವಿತರಾಗಬೇಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಯೆಹೋವನನ್ನು ಘನಪಡಿಸುವ ಸಂತೋಷದ ವಿವಾಹಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಯೆಹೋವನಿಗೆ ಘನತೆ ತರುವ ವಿವಾಹಗಳು
    ಕಾವಲಿನಬುರುಜು—1997
  • ಯೆಹೋವನ ಸಾಕ್ಷಿಗಳ ಮದುವೆ ಹೇಗಿರುತ್ತೆ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ನವೆಂಬರ್‌ ಪು. 3
ಮದುವೆಯಲ್ಲಿ ತಗೊಂಡ ಒಂದು ಫ್ಯಾಮಿಲಿ ಫೋಟೋ

ನಮ್ಮ ಕ್ರೈಸ್ತ ಜೀವನ

ಮದುವೆಗಾಗಿ ಪ್ಲಾನ್‌ ಮಾಡುವಾಗ, ಬೇರೆಯವರಿಂದ ಪ್ರಭಾವಿತರಾಗಬೇಡಿ

ಕ್ರೈಸ್ತರು ತಮ್ಮ ಮದುವೆಯ ಪ್ಲಾನ್‌ ಮಾಡುವಾಗ ಹಲವಾರು ತೀರ್ಮಾನಗಳನ್ನು ಮಾಡಬೇಕಾಗುತ್ತೆ. ಕೆಲವೊಮ್ಮೆ ಹೊರಗಿನವರ ತರ ಆಡಂಭರದ ಮದುವೆ ಮಾಡಿಕೊಳ್ಳಬೇಕೆಂದು ಪರಿಚಯಸ್ಥರು ಒತ್ತಡ ಹಾಕಬಹುದು. ಅಷ್ಟೇ ಅಲ್ಲ ಕುಟುಂಬದವರು, ಸ್ನೇಹಿತರು ಕೂಡ ಮದುವೆ ಹೀಗೀಗೇ ನಡೆಯಬೇಕು ಅಂತ ತುಂಬ ಪ್ಲಾನ್‌ಗಳನ್ನು ಮಾಡಿರಬಹುದು. ಈ ವಿಶೇಷ ದಿನಕ್ಕಾಗಿ ಹೇಗೆ ಪ್ಲಾನ್‌ ಮಾಡಬೇಕು ಅಂತ ಬೈಬಲ್‌ನಲ್ಲಿ ಸಲಹೆಗಳು ಇವೆ. ಈ ಸಲಹೆಗಳನ್ನು ಪಾಲಿಸಿದರೆ, “ನಾವು ಅದ್ಧೂರಿ ಮದುವೆ ಆಗಬಾರದಿತ್ತು” ಅಂತ ಮುಂದೆ ಕೊರಗೋ ಪರಿಸ್ಥಿತಿ ಬರಲ್ಲ. ನಮ್ಮ ಮನಸ್ಸಾಕ್ಷಿಯೂ ಶುದ್ಧವಾಗಿರುತ್ತೆ. ಈ ಬೈಬಲ್‌ ಸಲಹೆಗಳು ಯಾವುವು?

ಯೆಹೋವನಿಗೆ ಮಹಿಮೆ ತರುವ ಮದುವೆ ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಬೈಬಲ್‌ ಸಲಹೆಗಳನ್ನು ಪಾಲಿಸಿದ್ದರಿಂದ ನಿಕ್‌ ಮತ್ತು ಜ್ಯೂಲಿಯಾನಾಗೆ ಹೇಗೆ ಸಹಾಯ ಆಯ್ತು?

    • 1ಕೊರಿಂ 10:31

    • 1ಯೋಹಾ 2:15, 16

    • ಗಲಾ 5:19-21

    • 1ತಿಮೊ 2:9

  • ವಧು-ವರರು, ಮದುವೆಯ ಏರ್ಪಾಡುಗಳನ್ನು ನೋಡಿಕೊಳ್ಳಲು ‘ಔತಣದ ಮೇಲ್ವಿಚಾರಕನನ್ನಾಗಿ’ ಆಧ್ಯಾತ್ಮಿಕವಾಗಿ ಪ್ರೌಢನಾದ ಕ್ರೈಸ್ತ ಸಹೋದರನನ್ನೇ ಯಾಕೆ ಆರಿಸಿಕೊಳ್ಳಬೇಕು?—ಯೋಹಾ 2:9, 10.

  • ನಿಕ್‌ ಮತ್ತು ಜ್ಯೂಲಿಯಾನ ಸರಳವಾಗಿ ಮದುವೆ ಆಗಲು ಯಾಕೆ ನಿರ್ಧರಿಸಿದರು?

  • ಮದುವೆಯ ಕಾರ್ಯಕ್ರಮ ಹೇಗಿರಬೇಕು ಅಂತ ನಿರ್ಧರಿಸುವ ಜವಾಬ್ದಾರಿ ಯಾರಿಗಿದೆ?—ಕಾವಲಿನಬುರುಜು06 11/1 ಪುಟ 18 ಪ್ಯಾರ 10.

ಕೊಲಾಜ್‌: ‘ಯೆಹೋವನಿಗೆ ಮಹಿಮೆ ತರುವ ಮದುವೆ’ ಎಂಬ ವಿಡಿಯೋದ ತುಣುಕುಗಳು. ಕ್ರೈಸ್ತರಾದ ನಿಕ್‌ ಮತ್ತು ಜ್ಯೂಲಿಯಾನ ತಮ್ಮ ಮದುವೆಯ ತಯಾರಿ ಮಾಡುತ್ತಿದ್ದಾರೆ. ಹಾಗಾಗಿ ಅವರು ಹಲವಾರು ನಿರ್ಣಗಳನ್ನು ಮಾಡಬೇಕಾಗಿದೆ. 1. ವಧು-ವರರು ವೈಯಕ್ತಿಕವಾಗಿ ತಮ್ಮ ತಮ್ಮ  ಪ್ರಾರ್ಥನೆ ಮಾಡುತ್ತಿದ್ದಾರೆ. 2. ಟ್ಯಾಬ್‌ ಮತ್ತು ಸಾಹಿತ್ಯಗಳನ್ನು ಉಪಯೋಗಿಸಿ ಸಂಶೋಧನೆ ಮಾಡುತ್ತಿದ್ದಾರೆ. 3. ಕುಟುಂಬದೊಂದಿಗೆ  ತಮ್ಮ ಪ್ಲಾನ್ಸ್‌ ಬಗ್ಗೆ ಮಾತಾಡುತ್ತಿದ್ದಾರೆ. 4. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿ ಇನ್ವಿಟೇಷನ್‌ ಕಾರ್ಡ್ಸ್‌ ಕಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ