ನಮ್ಮ ಕ್ರೈಸ್ತ ಜೀವನ
ಧೈರ್ಯದ ಬಗ್ಗೆ ಸೃಷ್ಟಿ ಕಲಿಸೋ ಪಾಠ
ಯೆಹೋವನಲ್ಲಿ ಇರೋ ಗುಣಗಳನ್ನ ನಾವೂ ತೋರಿಸಬೇಕು. ಅದು ಹೇಗೆ ಅಂತ ಬೈಬಲಲ್ಲಿ ಇರೋ ಜನ್ರ ಉದಾಹರಣೆಗಳ ಮೂಲಕ ಯೆಹೋವನೇ ಹೇಳಿಕೊಡ್ತಾನೆ. ಅಷ್ಟೇ ಅಲ್ಲ ಸೃಷ್ಟಿಯ ಮೂಲಕ ಸಹ ಹೇಳಿಕೊಡ್ತಾನೆ. (ಯೋಬ 12:7, 8) ಸಿಂಹ, ಕುದುರೆ, ಮುಂಗುಸಿ, ಝೇಂಕಾರ ಪಕ್ಷಿ ಮತ್ತು ಆನೆಗಳಿಂದ ಧೈರ್ಯದ ಬಗ್ಗೆ ಏನು ಕಲಿಬಹುದು?
ಸೃಷ್ಟಿ ನೋಡಿ, ಧೈರ್ಯ ಕಲಿಯಿರಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
ಮರಿಗಳನ್ನು ಕಾಪಾಡುವಾಗ ಸಿಂಹಿಣಿಗಳು ಹೇಗೆ ಧೈರ್ಯ ತೋರಿಸುತ್ತವೆ?
ಯುದ್ಧದಲ್ಲಿ ಧೈರ್ಯದಿಂದ ಇರಲು ಕುದುರೆಗಳಿಗೆ ಹೇಗೆ ತರಬೇತಿ ಕೊಡಲಾಗುತ್ತೆ?
ವಿಷಕಾರಿ ಹಾವುಗಳಿಗೆ ಮುಂಗುಸಿ ಯಾಕೆ ಭಯಪಡಲ್ಲ?
ಝೇಂಕಾರ ಪಕ್ಷಿಗಳು ಗಾತ್ರದಲ್ಲಿ ಚಿಕ್ಕದಾದ್ರೂ ಹೇಗೆ ಧೈರ್ಯ ತೋರಿಸುತ್ತವೆ?
ಆನೆಗಳು ಅಪಾಯದಲ್ಲಿರೋ ಬೇರೆ ಆನೆಗಳನ್ನು ಹೇಗೆ ಧೈರ್ಯದಿಂದ ಕಾಪಾಡುತ್ತವೆ?
ಈ ಪ್ರಾಣಿಗಳಿಂದ ಧೈರ್ಯದ ಬಗ್ಗೆ ನೀವು ಯಾವ ಪಾಠ ಕಲಿತ್ರಿ?