ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 8-9
ಯೆಹೋವನ ಆಶೀರ್ವಾದದ ರುಜುವಾತು
ಹೊಸದಾಗಿ ನೇಮಿಸಲ್ಪಟ್ಟ ಯಾಜಕರಾದ ಆರೋನ ಮತ್ತು ಅವನ ಮಕ್ಕಳು ಮೊದಲ ಸಲ ಯಜ್ಞಗಳನ್ನ ಅರ್ಪಿಸಿದಾಗ ಯೆಹೋವನು ಸ್ವರ್ಗದಿಂದ ಬೆಂಕಿ ಕಳಿಸಿದ. ಇದು ಯಾಜಕತ್ವದ ಏರ್ಪಾಡನ್ನ ಯೆಹೋವನು ಮೆಚ್ಚಿದನು ಮತ್ತು ಅದಕ್ಕೆ ಅವನ ಬೆಂಬಲ ಇದೆ ಅಂತ ತೋರಿಸಿತು. ಹೀಗೆ ಅಲ್ಲಿ ಕೂಡಿಬಂದ ಎಲ್ಲಾ ಇಸ್ರಾಯೇಲ್ಯರು ಯಾಜಕರಿಗೆ ತಮ್ಮ ಸಂಪೂರ್ಣ ಬೆಂಬಲ ಕೊಡಬೇಕು ಅಂತ ಯೆಹೋವನು ಪ್ರೋತ್ಸಾಹಿಸಿದ. ಇಂದು ಯೆಹೋವನು ಯೇಸು ಕ್ರಿಸ್ತನನ್ನ ಮಹಾ ಯಾಜಕನಾಗಿ ಉಪಯೋಗಿಸುತ್ತಿದ್ದಾನೆ. (ಇಬ್ರಿ 9:11, 12) ಯೇಸು ಇಸವಿ 1919 ರಲ್ಲಿ ಅಭಿಷಿಕ್ತ ಕ್ರೈಸ್ತರ ಒಂದು ಚಿಕ್ಕ ಗುಂಪನ್ನ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನಾಗಿ’ ನೇಮಿಸಿದ. (ಮತ್ತಾ 24:45) ಈ ನಂಬಿಗಸ್ತ ಆಳನ್ನ ಯೆಹೋವನು ಆಶೀರ್ವದಿಸುತ್ತಿದ್ದಾನೆ, ಬೆಂಬಲಿಸುತ್ತಿದ್ದಾನೆ ಮತ್ತು ಅದನ್ನ ಮೆಚ್ಚುತ್ತಾನೆ ಅನ್ನೋದಕ್ಕೆ ಯಾವ ರುಜುವಾತಿದೆ?
ವಿಪರೀತ ಹಿಂಸೆ ವಿರೋಧ ಇದ್ರೂ ನಂಬಿಗಸ್ತ ಆಳು ಆಧ್ಯಾತ್ಮಿಕ ಆಹಾರ ಕೊಡೋದನ್ನ ಮುಂದುವರಿಸಿದೆ
ಮೊದಲೇ ಮುಂತಿಳಿಸಿದಂತೆ ಸುವಾರ್ತೆಯನ್ನ “ನಿವಾಸಿತ ಭೂಮಿಯಾದ್ಯಂತ” ಸಾರಲಾಗುತ್ತಿದೆ.—ಮತ್ತಾ 24:14
ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿಗೆ ನಮ್ಮ ಸಂಪೂರ್ಣ ಬೆಂಬಲ ಹೇಗೆ ಕೊಡಬಹುದು?