ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜನವರಿ ಪು. 5
  • ನಿಮ್ಮ ಮದುವೆಯ ಬಂಧವನ್ನ ಕಾಪಾಡಿಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಮದುವೆಯ ಬಂಧವನ್ನ ಕಾಪಾಡಿಕೊಳ್ಳಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ನಿಮ್ಮ ವಿವಾಹ ಜೀವನವನ್ನು ಯಶಸ್ವಿಗೊಳಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ವಿವಾಹವು ಮುರಿದುಹೋಗುವ ಹಂತದಲ್ಲಿರುವುದಾದರೆ
    ಕುಟುಂಬ ಸಂತೋಷದ ರಹಸ್ಯ
  • ದಾಂಪತ್ಯದಲ್ಲಿ ಆನಂದವನ್ನು ಕಂಡುಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ನಿಮ್ಮ ವಿವಾಹ ಬಂಧವನ್ನು ಬಲಗೊಳಿಸಲು ಶ್ರಮಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜನವರಿ ಪು. 5
ಗಂಡ ತನ್ನ ಹೆಂಡತಿಯ ಪಕ್ಕದಲ್ಲಿ ನೆಲದ ಮೇಲೆ ಕೂತು ಸಂತೋಷದಿಂದ ಅವಳೊಂದಿಗೆ ಬಟ್ಟೆ ಒಗೆಯುತ್ತಿದ್ದಾನೆ.

ನಮ್ಮ ಕ್ರೈಸ್ತ ಜೀವನ

ನಿಮ್ಮ ಮದುವೆಯ ಬಂಧವನ್ನ ಕಾಪಾಡಿಕೊಳ್ಳಿ

ಯೆಹೋವ ದೇವರು ಮದುವೆಯ ಪ್ರತಿಜ್ಞೆಯನ್ನ ತುಂಬ ಗಂಭೀರವಾಗಿ ನೋಡ್ತಾನೆ. ಗಂಡ-ಹೆಂಡತಿ ಯಾವಾಗಲೂ ಜೊತೆಯಾಗಿರಬೇಕು ಅಂತ ಹೇಳಿದ್ದಾನೆ. (ಮತ್ತಾ 19:5, 6) ಯೆಹೋವನನ್ನ ಆರಾಧಿಸೋ ಅನೇಕ ದಂಪತಿಗಳು ಸಂತೋಷಕರ ವಿವಾಹ ಜೀವನವನ್ನ ನಡೆಸ್ತಾ ಒಳ್ಳೇ ಮಾದರಿಯಾಗಿದ್ದಾರೆ. ಆದ್ರೆ ಕೆಲವೊಮ್ಮೆ ಗಂಡ ಹೆಂಡತಿಯ ನಡುವೆ ಸಮಸ್ಯೆಗಳು ಬರೋದು ಸಹಜ. ಯಾಕೆಂದ್ರೆ ನಾವೆಲ್ರೂ ಅಪರಿಪೂರ್ಣರು. ಲೋಕದ ಜನ ಮದುವೆಯ ಜೀವನದಲ್ಲಿ ಸಮಸ್ಯೆಗಳು ಬಂದಾಗ ಪ್ರತ್ಯೇಕವಾಗಿ ಜೀವನ ಮಾಡೋದು ಅಥವಾ ವಿಚ್ಛೇದನ ಕೊಡೋದೇ ಪರಿಹಾರ ಅಂತ ಅಂದುಕೊಳ್ತಾರೆ. ಆದ್ರೆ ನಾವು ಆ ತರ ಯೋಚಿಸಬಾರದು. ವಿವಾಹಿತ ಕ್ರೈಸ್ತರು ತಮ್ಮ ಮದುವೆಯ ಬಂಧವನ್ನ ಹೇಗೆ ಕಾಪಾಡಿಕೊಳ್ಳಬಹುದು?

ಈ ಐದು ಹೆಜ್ಜೆಗಳನ್ನ ಪಾಲಿಸಿ.

  1. 1. ಬೇರೆಯವರೊಂದಿಗೆ ಚೆಲ್ಲಾಟ ಮತ್ತು ಅನೈತಿಕ ಮನರಂಜನೆಯಿಂದ ದೂರವಿರೋ ಮೂಲಕ ನಿಮ್ಮ ಹೃದಯವನ್ನ ಕಾಪಾಡಿಕೊಳ್ಳಿ.—ಮತ್ತಾ 5:28; 2ಪೇತ್ರ 2:14.

  2. 2. ದೇವರೊಂದಿಗೆ ನಿಮ್ಮ ಸ್ನೇಹವನ್ನ ಬಲಪಡಿಸಿ ಮತ್ತು ನಿಮ್ಮ ವಿವಾಹ ಜೀವನ ಆತನಿಗೆ ಮೆಚ್ಚಿಗೆ ಆಗೋ ತರ ಇರಲಿ.—ಕೀರ್ತ 97:10.

  3. 3. ಹೊಸ ವ್ಯಕ್ತಿತ್ವ ಹಾಕ್ಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ದಯೆಯಿಂದ ನಡೆದುಕೊಳ್ಳಿ. ಸಣ್ಣ ಪುಟ್ಟ ವಿಷಯಗಳಲ್ಲೂ ಅವರಿಗೆ ಸಹಾಯಮಾಡಿ.—ಕೊಲೊ 3:8-10, 12-14.

  4. 4. ನಿಮ್ಮ ಮಧ್ಯೆ ಒಳ್ಳೇ ಮಾತುಕತೆ ಇರಲಿ.—ಕೊಲೊ 4:6.

  5. 5. ನಿಮ್ಮ ವಿವಾಹ ಸಂಗಾತಿಗೆ ಪ್ರೀತಿ ತೋರಿಸಿ. ಅವರ ಲೈಂಗಿಕ ಅವಶ್ಯಕತೆಗಳನ್ನ ಅರ್ಥಮಾಡ್ಕೊಂಡು ಅವರಿಗೆ ಕೊಡಬೇಕಾಗಿರೋದನ್ನ ಕೊಡಿ.—1ಕೊರಿಂ 7:3, 4; 10:24.

ನಾವು ಮದುವೆಯ ಬಂಧವನ್ನ ಗೌರವಿಸಿದ್ರೆ ವಿವಾಹದ ಏರ್ಪಾಡನ್ನ ಮಾಡಿರೋ ಯೆಹೋವ ದೇವರನ್ನ ಗೌರವಿಸಿದ ಹಾಗೆ ಆಗುತ್ತೆ.

ನಾವು ‘ತಾಳ್ಮೆಯಿಂದ ಓಡಬೇಕು’—ಪಂದ್ಯದ ನಿಯಮಗಳನ್ನು ಪಾಲಿಸಿ ಅನ್ನೋ ವಿಡಿಯೋ ನೋಡಿ ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ‘ನಾವು ‘ತಾಳ್ಮೆಯಿಂದ ಓಡಬೇಕು’—ಪಂದ್ಯದ ನಿಯಮಗಳನ್ನು ಪಾಲಿಸಿ’ ವಿಡಿಯೋದಲ್ಲಿರೋ ಒಂದು ಸೀನ್‌. ರಾಜ್ಯ ಸಭಾಗೃಹದಲ್ಲಿ ತಮ್ಮ ಮದುವೆಯ ಭಾಷಣ ಮುಗಿದ ನಂತ್ರ ಸಹೋದರ ಮತ್ತು ಸಹೋದರಿ ಕ್ಯಾಲೌ ಮುಗುಳ್ನಗೆ ಬೀರುತ್ತಿದ್ದಾರೆ.

    ಮದುವೆ ಜೀವನ ಆರಂಭದಲ್ಲಿ ಚೆನ್ನಾಗಿರೋದಾದ್ರೂ ಹೋಗ್ತಾ ಹೋಗ್ತಾ ಯಾವ ಸವಾಲುಗಳು ಎದುರಾಗಬಹುದು?

  • ‘ನಾವು ‘ತಾಳ್ಮೆಯಿಂದ ಓಡಬೇಕು’—ಪಂದ್ಯದ ನಿಯಮಗಳನ್ನು ಪಾಲಿಸಿ’ ವಿಡಿಯೋದಲ್ಲಿರೋ ಒಂದು ಸೀನ್‌. ಸಹೋದರ ಮತ್ತು ಸಹೋದರಿ ಕ್ಯಾಲೌ ತಮ್ಮ ಸಮಸ್ಯೆಗಳ ಬಗ್ಗೆ ಸಮಾಧಾನದಿಂದ ಚರ್ಚಿಸುತ್ತಾರೆ. ತೆರೆದ ಬೈಬಲ್‌ ಮೇಜಿನ ಮೇಲಿದೆ.

    ‘ನಮ್ಮ ಮಧ್ಯೆ ಪ್ರೀತಿನೇ ಇಲ್ಲ’ ಅಂತ ಯೋಚಿಸೋ ದಂಪತಿಗಳಿಗೆ ಬೈಬಲ್‌ ಸಲಹೆಗಳು ಹೇಗೆ ಸಹಾಯ ಮಾಡುತ್ತೆ?

  • ‘ನಾವು ‘ತಾಳ್ಮೆಯಿಂದ ಓಡಬೇಕು’—ಪಂದ್ಯದ ನಿಯಮಗಳನ್ನು ಪಾಲಿಸಿ’ ವಿಡಿಯೋದಲ್ಲಿರೋ ಒಂದು ಸೀನ್‌. ಸಹೋದರ ಕ್ಯಾಲೌ ಅವರು ತಮ್ಮ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ‘ಬೈಬಲ್‌ ಕಥೆಗಳ ನನ್ನ ಪುಸ್ತಕ’ ಅನ್ನೋ ಪುಸ್ತಕದಿಂದ ಓದುತ್ತಿದ್ದಾರೆ.

    ಮದುವೆ ಜೀವನದಲ್ಲಿ ಸಂತೋಷ ಇರಬೇಕಂದ್ರೆ ಬೈಬಲ್‌ ಸಲಹೆಗಳನ್ನ ಪಾಲಿಸಿ

    ಯೆಹೋವ ದೇವರು ವಿವಾಹಿತರಿಗೆ ಯಾವ ನಿಯಮಗಳನ್ನ ಇಟ್ಟಿದ್ದಾನೆ?

  • ಒಂದು ಮದುವೆ ಯಶಸ್ವಿ ಆಗಬೇಕಂದ್ರೆ ಗಂಡ ಹೆಂಡ್ತಿ ಇಬ್ಬರೂ ಏನು ಮಾಡಬೇಕು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ