ಕ್ರೈಸ್ತ ಜೀವನ
ಯೆಹೋವ ಶಾಶ್ವತ ಪ್ರೀತಿ ತೋರಿಸ್ತಾನೆ ಅಂತ ನಂಬಿ
ಯೆಹೋವನಿಗೆ ನೀವು ತುಂಬ ಅಮೂಲ್ಯ. (ಯೆಶಾ 43:4) ಆತನು ನಿಮ್ಮನ್ನ ತನ್ನ ಕಡೆಗೆ ಮತ್ತು ತನ್ನ ಸಂಘಟನೆ ಕಡೆಗೆ ಸೆಳೆದಿದ್ದಾನೆ. ನೀವು ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ತಗೊಂಡಿರೋದ್ರಿಂದ ನೀವೀಗ ಯೆಹೋವನಿಗೆ ಸೇರಿದವರು. ನಿಮ್ಮನ್ನ ಆಸ್ತಿ, ಮುತ್ತುರತ್ನಗಳ ತರ ಜೋಪಾನವಾಗಿ ನೋಡಿಕೊಳ್ತಾನೆ. ನಿಮಗೆ ಕಷ್ಟ ಬಂದಾಗಲೂ ನಿಮ್ಮ ಕೈಬಿಡಲ್ಲ. ತನ್ನ ಸಂಘಟನೆಯನ್ನ ಉಪಯೋಗಿಸಿ ಶಾಶ್ವತ ಪ್ರೀತಿ ತೋರಿಸ್ತಾನೆ.—ಕೀರ್ತ 25:10.
ಇತ್ತೀಚೆಗೆ ನೈಸರ್ಗಿಕ ವಿಪತ್ತುಗಳಾದಾಗ ಸಂಘಟನೆ ಸಹಾಯ ಮಾಡಿದ ರೀತಿಯನ್ನ ನೋಡುವಾಗ ಯೆಹೋವನ ಶಾಶ್ವತ ಪ್ರೀತಿ ಗೊತ್ತಾಗುತ್ತೆ.
2019ರ ಕೋಆರ್ಡಿನೇಟರ್ಸ್ ಕಮಿಟಿಯ ವರದಿ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ವಿಪತ್ತುಗಳು ಬರೋಕೆ ಮುಂಚೆನೇ ಕೋಆರ್ಡಿನೇಟರ್ಸ್ ಕಮಿಟಿ ಎಲ್ಲಾ ಬ್ರಾಂಚ್‌ಗಳನ್ನ ಹೇಗೆ ಸಿದ್ಧ ಮಾಡಿತು?
ಇಂಡೋನೇಶಿಯಾ ಮತ್ತು ನೈಜೀರಿಯಾಗೆ ಯೆಹೋವನ ಸಂಘಟನೆ ಹೇಗೆ ನಿರ್ದೇಶನ ಕೊಟ್ಟಿತು ಮತ್ತು ಸಹಾಯ ಮಾಡಿತು?
ಕೋವಿಡ್ ಮಹಾ ಪಿಡುಗಿನ ಸಮಯದಲ್ಲಿ ಸಂಘಟನೆ ತಗೊಂಡ ಹೆಜ್ಜೆಗಳಲ್ಲಿ, ಕೊಟ್ಟ ನಿರ್ದೇಶನಗಳಲ್ಲಿ ನಿಮಗೆ ಯಾವುದು ಇಷ್ಟ ಆಯ್ತು?