ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ಜನವರಿ ಪು. 14-15
  • ಫೆಬ್ರವರಿ 24–ಮಾರ್ಚ್‌ 2

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 24–ಮಾರ್ಚ್‌ 2
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ಜನವರಿ ಪು. 14-15

ಫೆಬ್ರವರಿ 24–ಮಾರ್ಚ್‌ 2

ಜ್ಞಾನೋಕ್ತಿ 2

ಗೀತೆ 35 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ವೈಯಕ್ತಿಕ ಅಧ್ಯಯನ ಯಾಕೆ ಪ್ರಾಮುಖ್ಯ?

(10 ನಿ.)

ನಾವು ಸತ್ಯಕ್ಕೆ ಎಷ್ಟು ಬೆಲೆ ಕೊಡ್ತೀವಿ ಅಂತ ತೋರಿಸೋಕೆ (ಜ್ಞಾನೋ 2:3, 4; ಕಾವಲಿನಬುರುಜು22.08 ಪುಟ 18 ಪ್ಯಾರ 16)

ಒಳ್ಳೇ ನಿರ್ಧಾರ ಮಾಡೋಕೆ (ಜ್ಞಾನೋ 2:5-7; ಕಾವಲಿನಬುರುಜು22.10 ಪುಟ 19 ಪ್ಯಾರ 3-4)

ನಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ (ಜ್ಞಾನೋ 2:11, 12; ಕಾವಲಿನಬುರುಜು16.09 ಪುಟ 23 ಪ್ಯಾರ 2-3)

ಒಬ್ಬ ಇಸ್ರಾಯೇಲ್ಯ ವ್ಯಕ್ತಿ ಗುಹೆಯೊಳಗೆ ಪಿಕಾಸಿ ಉಪಯೋಗಿಸ್ತಾ ಇದ್ದಾನೆ.

ನಿಮ್ಮನ್ನೇ ಕೇಳಿಕೊಳ್ಳಿ: ‘ವೈಯಕ್ತಿಕ ಅಧ್ಯಯನನ ಚೆನ್ನಾಗಿ, ತಪ್ಪಿಸದೇ ಮಾಡೋಕೆ ನಾನು ಇನ್ನೂ ಏನೆಲ್ಲಾ ಮಾಡಬಹುದು?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 2:7—ಯೆಹೋವ “ತಪ್ಪು ಮಾಡದವ್ರಿಗೆ ಗುರಾಣಿಯಾಗಿ ಇರ್ತಾನೆ,” ಹೇಗೆ? (it-1-E ಪುಟ 1211 ಪ್ಯಾರ 4)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಜ್ಞಾನೋ 2:1-22 (ಪ್ರಗತಿ ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(4 ನಿ.) ಮನೆ-ಮನೆ ಸೇವೆ: ಗಂಡ-ಹೆಂಡತಿಗೆ ಸಹಾಯ ಮಾಡೋ ಮಾಹಿತಿನ jw.orgನಲ್ಲಿ ಹೇಗೆ ಹುಡುಕೋದು ಅಂತ ತೋರಿಸಿ. (ಪ್ರೀತಿಸಿ-ಕಲಿಸಿ ಪಾಠ 1ರ ಪಾಯಿಂಟ್‌ 3)

5. ಮತ್ತೆ ಭೇಟಿ ಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ: ಹೋದ ಸಲ ಆಸಕ್ತಿ ತೋರಿಸಿದ ವಿಷ್ಯದ ಬಗ್ಗೆ ಒಂದು ಪತ್ರಿಕೆ ಕೊಡಿ. (ಪ್ರೀತಿಸಿ-ಕಲಿಸಿ ಪಾಠ 9ರ ಪಾಯಿಂಟ್‌ 3)

6. ಭಾಷಣ

(5 ನಿ.) ಪ್ರೀತಿಸಿ-ಕಲಿಸಿ ಪರಿಶಿಷ್ಟ ಎ ಪಾಯಿಂಟ್‌ 8—ವಿಷ್ಯ: ಗಂಡ-ಹೆಂಡ್ತಿ ಒಬ್ರಿಗೊಬ್ರು ನಿಯತ್ತಾಗಿ ಇರಬೇಕು. (ಪ್ರಗತಿ ಪಾಠ 13)

ನಮ್ಮ ಕ್ರೈಸ್ತ ಜೀವನ

ಗೀತೆ 94

7. ನಿಧಿ ಹುಡುಕೋಕೆ ನಿಮಗೆ ಇಷ್ಟನಾ?

(15 ನಿ.) ಚರ್ಚೆ.

ಮಕ್ಕಳೇ, ನಿಧಿ ಹುಡುಕೋಕೆ ನಿಮಗೆ ಇಷ್ಟನಾ? ಹಾಗಿದ್ರೆ ಇಡೀ ವಿಶ್ವದಲ್ಲೇ ಬೆಲೆಕಟ್ಟೋಕೆ ಆಗದಂಥ ಒಂದು ನಿಧಿ ಬಗ್ಗೆ ಬೈಬಲ್‌ ಹೇಳುತ್ತೆ. ಅದು ಯಾವುದು? ದೇವರ ಬಗ್ಗೆ ಇರೋ ಸತ್ಯನೇ ಆ ನಿಧಿ! (ಜ್ಞಾನೋ 2:4, 5) ನೀವು ಪ್ರತಿದಿನ ಬೈಬಲ್‌ ಓದೋಕೆ, ಓದಿದ ವಿಷ್ಯದ ಬಗ್ಗೆ ಸಂಶೋಧನೆ ಮಾಡೋಕೆ ಸಮಯ ಮಾಡ್ಕೊಂಡ್ರೆ ಆ ಅಮೂಲ್ಯ ನಿಧಿ ನಿಮಗೆ ಸಿಗುತ್ತೆ. ಇದ್ರಿಂದ ಖುಷಿ ಸಿಗುತ್ತೆ, ಪ್ರಯೋಜನನೂ ಆಗುತ್ತೆ!

  • ಬೈಬಲ್‌ ಓದುವಾಗ ನೀವು ಯಾವ ಪ್ರಶ್ನೆಗಳನ್ನ ಕೇಳ್ಕೊಬೇಕು? (ಕಾವಲಿನಬುರುಜು24.02 ಪುಟ 32 ಪ್ಯಾರ 2-3)

  • ಉತ್ರ ತಿಳ್ಕೊಳ್ಳೋಕೆ ಯಾವ ಸಾಧನಗಳನ್ನ ಬಳಸಬಹುದು?

ಒಬ್ಬ ಚಿಕ್ಕ ಹುಡುಗ ನಿಧಿ ಹುಡುಕೋ ಬಟ್ಟೆಯನ್ನ ಹಾಕಿಕೊಂಡು ನಿಧಿ ಇರೋ ಪೆಟ್ಟಿಗೆನ ಆಶ್ಚರ್ಯದಿಂದ ತೆಗೀತಿದ್ದಾನೆ

ಬೈಬಲಲ್ಲಿ ಓದಿದ ವಿಷ್ಯನ ಧ್ಯಾನಿಸೋದು ಹೇಗೆ ಅಂತ ಅರ್ಥಮಾಡ್ಕೊಳ್ಳೋಕೆ ಯೆಹೋವನ ಸ್ನೇಹಿತರಿಂದ ಕಲಿಯಿರಿ ಅನ್ನೋ ಸರಣಿ ವಿಡಿಯೋಗಳು ನಿಮಗೆ ಸಹಾಯ ಮಾಡುತ್ತೆ.

ಒಬ್ಬ ಯುವ ಸಹೋದರ ವೈಯಕ್ತಿಕ ಅಧ್ಯಯನ ಮಾಡ್ತಿದ್ದಾನೆ. “ಜೀವವು ಸೃಷ್ಟಿಸಲ್ಪಟ್ಟಿತೋ?” ಅನ್ನೋ ಬ್ರೋಷರ್‌ ಅವನ ಟೇಬಲ್‌ ಮೇಲಿದೆ.

ಯೆಹೋವನ ಸ್ನೇಹಿತರಿಂದ ಕಲಿಯಿರಿ—ಹೇಬೆಲ ಅನ್ನೋ ವಿಡಿಯೋ ಹಾಕಿ.

ಆದಿಕಾಂಡ 4:2-4 ಮತ್ತು ಇಬ್ರಿಯ 11:4 ಓದಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಹೇಬೆಲ ತಾನು ಯೆಹೋವನ ಫ್ರೆಂಡ್‌ ಅಂತ ಹೇಗೆ ತೋರಿಸಿದ?

  • ಹೇಬೆಲ ಯೆಹೋವನ ಮೇಲೆ ನಂಬಿಕೆನ ಹೇಗೆ ಜಾಸ್ತಿ ಮಾಡ್ಕೊಂಡ?

  • ನೀವು ಹೇಗೆ ನಂಬಿಕೆ ಜಾಸ್ತಿ ಮಾಡ್ಕೊಳ್ಳಬಹುದು?

ಹೀಗೆ ಮಾಡಿ

ಬೈಬಲ್‌ ಓದುವಾಗ ಅದ್ರಲ್ಲಿ ಹೇಳಿರೋ ವ್ಯಕ್ತಿ, ಜಾಗ ಮತ್ತು ವಿಷ್ಯಗಳ ಬಗ್ಗೆ ಸಂಶೋಧನೆ ಮಾಡಿ. ನಿಮಗೆ ಆ ವಿಷ್ಯಗಳು ಚೆನ್ನಾಗಿ ಗೊತ್ತಿದ್ರೂ ಸಂಶೋಧನೆ ಮಾಡಿ. ಹೀಗೆ ಮಾಡಿದ್ರೆ ಓದಿದ ವಿಷ್ಯಗಳು ನಿಮ್ಮ ಕಣ್ಮುಂದೆನೇ ನಡೆಯೋ ತರ ಅನಿಸುತ್ತೆ, ಖುಷಿನೂ ಸಿಗುತ್ತೆ!

8. ಸಭಾ ಬೈಬಲ್‌ ಅಧ್ಯಯನ

(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 23ರ ಪ್ಯಾರ 1-8 ಮತ್ತು ವಿಭಾಗ 8ರ ಪರಿಚಯ

ಸಮಾಪ್ತಿ ಮಾತುಗಳು (3 ನಿ.) | ಗೀತೆ 101 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ