ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp21 ನಂ. 1 ಪು. 3-4
  • ಪ್ರಾರ್ಥನೆ ಬಗ್ಗೆ ಜನರ ಅಭಿಪ್ರಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಾರ್ಥನೆ ಬಗ್ಗೆ ಜನರ ಅಭಿಪ್ರಾಯ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಅನುರೂಪ ಮಾಹಿತಿ
  • ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಪ್ರಾರ್ಥನೆ ಮಾಡುವುದರಿಂದ ಪ್ರಯೋಜನ ಇದೆಯೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ದೇವರು ಕೊಟ್ಟಿರುವ ಪ್ರಾರ್ಥನೆ ಎಂಬ ವರ
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಯೆಹೋವನಿಗೆ ಆಪ್ತರಾಗಲು ಪ್ರಾರ್ಥನೆ ಮಾಡಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
wp21 ನಂ. 1 ಪು. 3-4
ಲೋಕದ ಬೇರೆಬೇರೆ ಕಡೆ ಇರೋ ಜನರು ಪ್ರಾರ್ಥಿಸುತ್ತಿದ್ದಾರೆ ಮತ್ತು ದೇವರ ಮಾರ್ಗದರ್ಶನಕ್ಕಾಗಿ ಮುನ್ನೋಡುತ್ತಿದ್ದಾರೆ.

ಪ್ರಾರ್ಥನೆ ಬಗ್ಗೆ ಜನರ ಅಭಿಪ್ರಾಯ

“ನಾನು ಪ್ರಾರ್ಥಿಸುವಾಗ ದೇವರು ನನ್ನ ಪಕ್ಕದಲ್ಲೇ ಇದ್ದು ನನ್ನ ಕೈ ಹಿಡ್ಕೊಂಡು ಸರಿಯಾದ ದಾರಿಯಲ್ಲಿ ನಡೆಸ್ತಿದ್ದಾರೆನೋ ಅಂತ ಅನ್ಸುತ್ತೆ.”—ಮಾರಿಯಾ.

“ನನ್ನ ಹೆಂಡ್ತಿ ಕ್ಯಾನ್ಸರ್‌ ವಿರುದ್ಧ 13 ವರ್ಷ ಹೋರಾಡಿ ತೀರಿಹೋದಳು. ಆ ಸಮಯದಲ್ಲಿ ದೇವರ ಹತ್ರ ದಿನಾ ಪ್ರಾರ್ಥಿಸ್ತಿದ್ದೆ. ದೇವರು ನನ್ನ ಪ್ರಾರ್ಥನೆ ಕೇಳ್ತಿದ್ದಾರೆ ಅಂತ ಯೋಚಿಸಿದಾಗೆಲ್ಲ ಮನಸ್ಸಿಗೆ ನೆಮ್ಮದಿ ಸಿಗ್ತಿತ್ತು.”—ರಾಲ್‌.

“ಪ್ರಾರ್ಥನೆ ದೇವರಿಂದ ಸಿಕ್ಕಿರೋ ಒಂದು ಅದ್ಭುತ ವರ.”—ಅರ್ನಾ.

ಇದೇ ತರ ತುಂಬಾ ಜನರಿಗೆ ಪ್ರಾರ್ಥನೆ ಒಂದು ಅದ್ಭುತ ವರ ಅಂತ ಅನ್ಸುತ್ತೆ. ಪ್ರಾರ್ಥನೆ ಮೂಲಕ ದೇವರ ಹತ್ರ ಮಾತಾಡಬಹುದು, ಥ್ಯಾಂಕ್ಸ್‌ ಹೇಳಬಹುದು ಮತ್ತು ಸಹಾಯ ಕೇಳಬಹುದು ಅಂತ ಅವರು ಹೇಳ್ತಾರೆ. “ದೇವರ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆಂಬ ಭರವಸೆಯು ಆತನ ವಿಷಯವಾಗಿ ನಮಗುಂಟು” ಅಂತ ದೇವರ ವಾಕ್ಯ ಹೇಳೋದನ್ನ ಅವರು ನಂಬ್ತಾರೆ.—1 ಯೋಹಾನ 5:14.

ಆದರೆ ಇನ್ನು ಕೆಲವರಿಗೆ ಪ್ರಾರ್ಥನೆ ಮಾಡೋದ್ರಿಂದ ಯಾವ ಪ್ರಯೋಜನನೂ ಇಲ್ಲ ಅನ್ಸುತ್ತೆ. ಇದೇ ಅಭಿಪ್ರಾಯ ಸ್ಟೀವ್‌ ಅನ್ನೋ ಯುವಕನಿಗೆ ಸಹ ಇತ್ತು. ಅವನು ಹೀಗೆ ಹೇಳ್ತಾನೆ, “ನನಗೆ 17 ವರ್ಷ ಇದ್ದಾಗ ನನ್ನ ಮೂರು ಸ್ನೇಹಿತರು ತೀರಿಕೊಂಡ್ರು. ಒಬ್ಬ ಕಾರ್‌ ಆಕ್ಸಿಡೆಂಟಲ್ಲಿ ಸತ್ತುಹೋದ. ಇನ್ನಿಬ್ರು ಸಮುದ್ರದಲ್ಲಿ ಮುಳುಗಿ ಸತ್ತುಹೋದರು. ಆ ಸಮಯದಲ್ಲಿ ನಾನು ಪ್ರಾರ್ಥನೇಲಿ ದೇವರ ಹತ್ರ ಇದೆಲ್ಲಾ ಯಾಕೆ ಆಗಬೇಕಿತ್ತು ಅಂತ ಕೇಳ್ದೆ. ಆದರೆ ನನ್ನ ಪ್ರಾರ್ಥನೆಗೆ ಯಾವುದೇ ಉತ್ರ ಸಿಗಲಿಲ್ಲ, ಆಗ ನಂಗೆ ಪ್ರಾರ್ಥನೆ ಮಾಡಿ ಏನ್‌ ಪ್ರಯೋಜನ ಅಂತ ಅನಿಸ್ತು.” ಸ್ಟೀವ್‌ ತರ ಪ್ರಾರ್ಥನೆ ಮಾಡಿದಾಗ ಉತ್ರ ಸಿಗದಿದ್ರೆ ಪ್ರಾರ್ಥನೆ ಮಾಡಿ ಏನ್‌ ಪ್ರಯೋಜನ ಅಂತ ಅನಿಸೋದು ಸಹಜ.

ಇನ್ನೂ ಕೆಲವರಿಗೆ ‘ನಮ್ಮ ಜೀವನದಲ್ಲಿ ಏನೆಲ್ಲಾ ನಡೀತಿದೆ, ನಮಗೆ ಏನೇನು ಬೇಕು ಅಂತ ದೇವರಿಗೆ ಗೊತ್ತು, ಹಾಗಾಗಿ ಪ್ರಾರ್ಥನೆ ಮಾಡೋ ಅವಶ್ಯಕತೆ ಏನಿದೆ’ ಅಂತ ಅನ್ಸುತ್ತೆ.

ಇನ್ನು ಸ್ವಲ್ಪ ಜನ ‘ಹಿಂದೆ ನಾವೇನೋ ತಪ್ಪು ಮಾಡಿದ್ರಿಂದ ದೇವರು ನಮ್ಮ ಪ್ರಾರ್ಥನೆ ಕೇಳ್ತಿಲ್ಲ’ ಅಂತ ಅಂದುಕೊಳ್ತಾರೆ. ಜೆನ್ನಿ ಅನ್ನೋ ಸ್ತ್ರೀ ಹೀಗೆ ಹೇಳ್ತಾಳೆ, “ದೇವರಿಗೆ ಪ್ರಾರ್ಥನೆ ಮಾಡುವಷ್ಟು ಯೋಗ್ಯತೆ ನಂಗಿಲ್ಲ ಅನ್ಸುತ್ತೆ, ಯಾಕೆಂದ್ರೆ ನಾನು ತುಂಬಾ ತಪ್ಪು ಮಾಡಿದ್ದೀನಿ. ಅದಕ್ಕೆ ದೇವರು ನನ್ನ ಪ್ರಾರ್ಥನೆನ ಕೇಳಲ್ಲ.”

ಚರ್ಚಿನಲ್ಲಿ ಇರೋರು ತಲೆ ಬಗ್ಗಿಸಿ ಪ್ರಾರ್ಥಿಸುತ್ತಿದ್ರೆ ಒಬ್ಬ ಮಹಿಳೆ ಮಾತ್ರ ತಲೆ ಎತ್ತಿ ಮೇಲೆ ನೋಡುತ್ತಾ ಪ್ರಾರ್ಥಿಸುತ್ತಿದ್ದಾಳೆ.

ಪ್ರಾರ್ಥನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಪ್ರಾರ್ಥನೆ ಮಾಡೋದ್ರಿಂದ ಏನೂ ಪ್ರಯೋಜನ ಇಲ್ಲ ಅಂತ ನಿಮಗೆ ಅನ್ಸುತ್ತಾ? ನಿಮ್ಮ ಮನಸ್ಸಿಗೆ ಈ ಕೆಳಗಿನ ಪ್ರಶ್ನೆಗಳು ಸಹ ಬಂದಿರಬಹುದು:

  • ದೇವರು ನಿಜವಾಗಲೂ ನಮ್ಮ ಪ್ರಾರ್ಥನೆಗಳನ್ನ ಕೇಳ್ತಾನಾ?

  • ಕೆಲವು ಪ್ರಾರ್ಥನೆಗಳಿಗೆ ದೇವರು ಯಾಕೆ ಉತ್ರ ಕೊಡಲ್ಲ?

  • ಹೇಗೆ ಪ್ರಾರ್ಥಿಸಿದ್ರೆ ದೇವರು ಉತ್ರ ಕೊಡ್ತಾನೆ?

  • ಪ್ರಾರ್ಥನೆ ಮಾಡೋದ್ರಿಂದ ಯಾವ ಪ್ರಯೋಜನಗಳು ಸಿಗುತ್ತೆ?

ಪವಿತ್ರ ಗ್ರಂಥವಾದ ಬೈಬಲಿನಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಉತ್ರ ಇದೆ ಮತ್ತು ಅದನ್ನ ನಾವು ನಂಬಬಹುದು.a

a ಬೈಬಲಿನಲ್ಲಿ ದೇವರ ಸೇವಕರು ಮಾಡಿರೋ ಅನೇಕ ಪ್ರಾರ್ಥನೆಗಳ ಬಗ್ಗೆ ಇದೆ. ಜೊತೆಗೆ ಯೇಸು ಕ್ರಿಸ್ತ ಮಾಡಿದ ಪ್ರಾರ್ಥನೆ ಬಗ್ಗೆನೂ ಇದೆ. ಹಳೇ ಒಡಂಬಡಿಕೆಯಲ್ಲಿ ಅಂದ್ರೆ ಬರೀ ಹೀಬ್ರು ಶಾಸ್ತ್ರಗ್ರಂಥದಲ್ಲೇ 150ಕ್ಕಿಂತ ಹೆಚ್ಚು ಪ್ರಾರ್ಥನೆಗಳ ಬಗ್ಗೆ ಇದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ