ಬೈಬಲಿನ ನುಡಿಮುತ್ತು
ಚೆನ್ನಾಗಿ ಪ್ರೋತ್ಸಾಹಿಸಿ
ನಮ್ಮ ಸಹೋದರ ಸಹೋದರಿಯರು ಕೊಡೋ ಪ್ರೋತ್ಸಾಹ ಅಂದ್ರೆ ನಮಗೆ ತುಂಬ ಇಷ್ಟ, ಅದನ್ನ ನಾವು ಅಮೂಲ್ಯವಾಗಿ ನೋಡ್ತೀವಿ. ಆದ್ರೆ ಪ್ರೋತ್ಸಾಹ ಕೊಡೋದಂದ್ರೆ ಬರೀ ಒಬ್ರ ಜೊತೆ ಇದ್ರೆ ಸಾಕಾಗಲ್ಲ. ನಮ್ಮೆಲ್ರಿಗೂ ಬೇರೆಯವ್ರನ್ನ ಪ್ರೋತ್ಸಾಹಿಸಿ, ಅವ್ರ ನಂಬಿಕೆ ಬಲಪಡಿಸೋ ಸಾಮರ್ಥ್ಯ ಇದೆ ಅಂತ ಬೈಬಲ್ ಹೇಳುತ್ತೆ. ಇದು ನಮಗೆ ‘ದೇವರು ಕೊಟ್ಟಿರೋ ಉಡುಗೊರೆಯಾಗಿದೆ.’ (ರೋಮ. 1:11, 12) ಈ ಉಡುಗೊರೆನ ನಾವು ಹೇಗೆ ಚೆನ್ನಾಗಿ ಬಳಸಬಹುದು?
ನಿಮ್ಮ ಮಾತಿನ ಮೂಲಕ. ನೀವು ಕೂಟಗಳಲ್ಲಿ ಉತ್ರ ಕೊಡ್ವಾಗ ಬೇರೆಯವ್ರ ಗಮನ ನಿಮ್ಮ ಕಡೆ ಸೆಳೆಯೋ ತರ ಮಾಡಬೇಡಿ. ಬದ್ಲಿಗೆ ಯೆಹೋವನ ಕಡೆ, ಆತನ ವಾಕ್ಯ ಮತ್ತು ಆತನ ಜನ್ರ ಕಡೆ ಗಮನ ಸೆಳೀರಿ. ಅಷ್ಟೇ ಅಲ್ಲ ಬೇರೆಯವ್ರ ಜೊತೆ ಮಾತಾಡ್ವಾಗ್ಲೂ ಅವ್ರಿಗೆ ಪ್ರೋತ್ಸಾಹ ಕೊಡೋ ತರ ಮಾತ್ರ ಮಾತಾಡಿ.
ನಿಮ್ಮ ಮಾದರಿ ಮೂಲಕ. ಕೆಲವರು ಕಷ್ಟ-ತೊಂದ್ರೆ ಇದ್ರೂ ಬಿಡದೇ ಪೂರ್ಣಸಮಯದ ಸೇವೆ ಮಾಡ್ತಿದ್ದಾರೆ. ಇನ್ನು ಕೆಲವರು ಬೆಳಗಿಂದ ಸಂಜೆವರೆಗೂ ಕೆಲ್ಸ ಮಾಡಿ ಸುಸ್ತಾಗಿದ್ರೂ ಅಥವಾ ಕಾಯಿಲೆಯಿಂದ ಕಷ್ಟಪಡ್ತಿದ್ರೂ ತಪ್ಪದೇ ಕೂಟಗಳಿಗೆ ಬರ್ತಾರೆ.
ನಿಮ್ಮ ಮಾತು ಮತ್ತು ನಡತೆ ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸ್ತಾ ಇದ್ಯಾ? ಅವರು ಕೊಡೋ ಪ್ರೋತ್ಸಾಹನ ನೀವು ಪಡ್ಕೊತಿದ್ದೀರಾ?