ಕಲಿಯೋಕೆ ಒಂದು ಕಥೆ
ಯೆಹೋವ ಕಾಪಾಡೇ ಕಾಪಾಡ್ತಾನೆ ಅನ್ನೋ ಭರವಸೆ ಬೆಳೆಸ್ಕೊಳ್ಳಿ
ಅರಣ್ಯಕಾಂಡ 13:25–14:4 ಓದಿ. ಇಸ್ರಾಯೇಲ್ಯರು ಯೆಹೋವನ ಮೇಲೆ ಯಾಕೆ ಭರವಸೆ ಇಡಲಿಲ್ಲ ಅಂತ ತಿಳ್ಕೊಳ್ಳಿ.
ಇದ್ರ ಬಗ್ಗೆ ಯೋಚಿಸಿ. ಯೆಹೋವನು ಇಸ್ರಾಯೇಲ್ಯರನ್ನ ಈಜಿಪ್ಟ್‌ನಿಂದ ಬಿಡಿಸ್ಕೊಂಡು ಬರುವಾಗ ಆತನ ಮೇಲೆ ನಂಬಿಕೆ ಇಡೋಕೆ ಅವ್ರಿಗೆ ಯಾವೆಲ್ಲ ಕಾರಣಗಳಿತ್ತು? (ಕೀರ್ತ. 78:12-16, 43-53) ಅವರು ಯೆಹೋವನ ಮೇಲೆ ನಂಬಿಕೆ ಕಳ್ಕೊಳ್ಳೋಕೆ ಕಾರಣ ಏನು? (ಧರ್ಮೋ. 1:26-28) ಯೆಹೋವ ದೇವರ ಮೇಲೆ ಭರವಸೆ ಇದೆ ಅಂತ ಯೆಹೋಶುವ ಮತ್ತು ಕಾಲೇಬ ಹೇಗೆಲ್ಲ ತೋರಿಸಿದ್ರು?—ಅರ. 14:6-9.
ಹುಡುಕಿ ನೋಡಿ. ಯೆಹೋವನ ಮೇಲೆ ನಂಬಿಕೆಯನ್ನ ಜಾಸ್ತಿ ಮಾಡ್ಕೊಳ್ಳೋಕೆ ಇಸ್ರಾಯೇಲ್ಯರು ಏನೆಲ್ಲಾ ಮಾಡಬೇಕಿತ್ತು? (ಕೀರ್ತ. 9:10; 22:4; 78:11) ಯೆಹೋವನ ಮೇಲೆ ಭರವಸೆ ಇಡಬೇಕಂದ್ರೆ ಆತನನ್ನ ಯಾಕೆ ಗೌರವಿಸಬೇಕು?—ಅರ. 14:11.
ಪಾಠ ಕಂಡುಹಿಡೀರಿ. ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ:
‘ಯಾವ ಸನ್ನಿವೇಶಗಳಲ್ಲಿ ಯೆಹೋವನ ಮೇಲೆ ಭರವಸೆ ಇಡೋಕೆ ನನಗೆ ಕಷ್ಟ ಆಗಬಹುದು?’
‘ಈಗ್ಲೂ ಮತ್ತು ಮುಂದೆನೂ ಯೆಹೋವನ ಮೇಲೆ ಭರವಸೆ ಇಡೋಕೆ ನಾನು ಏನೆಲ್ಲಾ ಮಾಡಬೇಕು?’
‘ಮಹಾ ಸಂಕಟ ಶುರು ಆದಾಗ ಯೆಹೋವನು ನನ್ನನ್ನ ಕಾಪಾಡೇ ಕಾಪಾಡ್ತಾನೆ ಅನ್ನೋ ಭರವಸೆ ನನಗಿದ್ಯಾ?’—ಲೂಕ 21:25-28.