ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g90 8/8 ಪು. 28
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1990
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೊಗೆಬತ್ತಿಯ ಹೊಗೆ ಮಕ್ಕಳಿಗೆ ಅಪಾಯಕರ
  • ಪೋಪರ ಆಡಳಿತ ಪ್ರಾಂತದ ಮೇಲೆ ವರದಿ
  • ಮಾರಕ ಬೆಳೆ
  • ನಾಲ್ಕು ಕಾಲಿನ ಕೋಳಿಗಳು
  • ಥಾಯ್ಲೆಂಡಿನಲ್ಲಿ ಕಾಡು ಸಂರಕ್ಷಣೆ
  • ಸುನ್ನತಿಯಿಂದ ಪ್ರಯೋಜನಗಳು
  • ಚೈನಾದಲ್ಲಿ ಕ್ರೈಸ್ತ ಪ್ರಪಂಚ
  • ಮೀನುಗಾರಿಕೆಯ ಗ್ರಾಮದಿಂದ ಬೆಳೆದುನಿಂತ ಮಹಾ ನಗರ!
    ಎಚ್ಚರ!—2008
ಎಚ್ಚರ!—1990
g90 8/8 ಪು. 28

ಜಗತ್ತನ್ನು ಗಮನಿಸುವುದು

ಹೊಗೆಬತ್ತಿಯ ಹೊಗೆ ಮಕ್ಕಳಿಗೆ ಅಪಾಯಕರ

ಧೂಮಪಾನ ಮಾಡುವ ಹೆತ್ತವರು ವರ್ಷಕ್ಕೆ 10-20 ಆಸ್ಟ್ರೇಲಿಯನ್‌ ಮಕ್ಕಳ ಮರಣಕ್ಕೆ ಕಾರಣವಾಗಬಹುದೆಂದು ದಿ ವೀಕೆಂಡ್‌ ಆಸ್ಟ್ರೇಲಿಯನ್‌ ಪತ್ರಿಕೆ ಹೇಳಿತು. ಇನ್ನು ಸಾವಿರಾರು ಮಕ್ಕಳು ಚಿಕಿತ್ಸಾಲಯಗಳಿಗೆ ಸೇರಿಸಲ್ಪಡುತ್ತಾರೆ. ಶ್ವಾಸೋಶ್ವಾಸದ ರೋಗಗಳಿಂದ 500 ಮಕ್ಕಳು ಆಸ್ಪತ್ರೆಗೆ ಸೇರಿಸಿದ್ದರ ಒಂದು ಉದಾಹರಣೆಯನ್ನು ಲೇಖನ ಒತ್ತಿಹೇಳುತ್ತದೆ. ಅವರ ಆರೈಕೆ ಮಾಡುತ್ತಿದ್ದವರು ಸೇದುತ್ತಿದ್ದ ಸಿಗರೇಟು ಹೊಗೆಯನ್ನು ಉಸಿರಾಡಿದ್ದರಿಂದ ಮಕ್ಕಳ ಅಸ್ವಸ್ಥಕ್ಕೆ ಉತ್ತೇಜನ ದೊರೆತುದರ ರಾಸಾಯನಿಕ ರುಜುವಾತನ್ನು ಸಂಶೋಧಕನು ಕಂಡನು. ಇಂಥ ಉಸಿರಾಟ ಮತ್ತು ನ್ಯುಮೋನಿಯ, ಇನ್‌ಪ್ಲುಯೆನ್‌ಸಾ, ಮಕ್ಕಳ ಉಬ್ಬಸ, ಮತ್ತು ಸಿಡ್ಸ್‌ (ಥಟ್ಟನೆ ಸಾಯುವ ಶಿಶುರೋಗ) ಇವುಗಳ ಮಧ್ಯೆ ಸಂಬಂಧವಿದೆಯೆಂದು ಲೇಖನ ಹೇಳುತ್ತದೆ. ಅದು ಅಂತ್ಯಗೊಳಿಸುವುದು: “ಸಿಗರೇಟು ಸೇದುವ ಸ್ತ್ರೀಯರ ಸಂಖ್ಯೆಯಲ್ಲಿ ವೃದ್ಧಿಯೇ ಚಿಂತೆಗೆ ಮಹಾ ಕಾರಣವಾಗಿದೆ.”

ಪೋಪರ ಆಡಳಿತ ಪ್ರಾಂತದ ಮೇಲೆ ವರದಿ

ಈ ವರ್ಷದ ವಾರ್ಷಿಕ ಕೂಟದಲ್ಲಿ ರೋಮಿನ ಪಾದ್ರಿಗಳು ತಮ್ಮ ಬಿಶಪರಾದ ಪೋಪರಿಗೆ ನಿರುತ್ತೇಜಕ ವರದಿಯನ್ನು ಒಪ್ಪಿಸಿದರು. ಆ್ಯವನಿರೆ ಎಂಬ ಕ್ಯಾಥ್‌ಲಿಕ್‌ ಪತ್ರಿಕೆಗನುಸಾರ, ಒಬ್ಬ ಪಾದ್ರಿ, ತನ್ನ ಸಭೆಯ ಅಕ್ರೈಸ್ತತೆಯ ಕುರಿತು, ಪೂಜೆಗೆ ಕೇವಲ 3 ಸೇಕಡಾ ಮಾತ್ರ ಹಾಜರಾಗುವುದರ ಕುರಿತು ಮತ್ತು ಮದುವೆಯಾಗುವವರಲ್ಲಿ 90 ಸೇಕಡಾ ಮಂದಿಗೆ ‘ಧರ್ಮದ ವಿಷಯ ಏನೂ ಗೊತ್ತಿಲ್ಲ’ ದಿರುವದರ ಕುರಿತು ಪ್ರಲಾಪಿಸಿದರು. “ಕಳೆದ ವರ್ಷ 18 ಶವಸಂಸ್ಕಾರಗಳಿದ್ದರೂ ಯಾರೂ ಪ್ರಭುಭೋಜನ ಸಂಸ್ಕಾರಕ್ಕಾಗಿ ಕೇಳಲಿಲ್ಲ” ಎಂದು ಅವರು ಮುಂದುವರಿಸಿದರು. ಯೆಹೋವನ ಸಾಕ್ಷಿಗಳ ಸಾನಿಧ್ಯ, ಪಾದ್ರಿಗಳ ಎದುರಿರುವ ಇನ್ನೊಂದು ಸಮಸ್ಯೆ ಎಂದು ಆ್ಯವನಿರೆ ತಿಳಿಸಿತು. “ಅವರ ಬೆಳವಣಿಗೆ ವ್ಯಾಪಕ.” ಒಬ್ಬ ಚಿಂತಾಕ್ರಾಂತ ಪಾದ್ರಿ ತಪ್ಪಾಗಿ, “ಅವರು ಯುರೋಪ್‌, ಏಶ್ಯಾ ಮತ್ತು ಆಫ್ರಿಕದಲ್ಲಿ ರೋಮನ್ನು ತಮ್ಮ ಪ್ರಧಾನ ಕೇಂದ್ರವಾಗಿ” ಮಾಡಿದ್ದಾರೆಂದು ಹೇಳಿದನು.

ಮಾರಕ ಬೆಳೆ

ಅಮೇರಿಕದ ವಿದೇಶ ಮಂತ್ರಾಲಯಕ್ಕನುಸಾರ, ಲೋಕದ ಅಮಲೌಷಧದ ಉತ್ಪಾದನೆ ಹೆಚ್ಚುತ್ತಿದೆ. 1987ರಿಂದ 88ರ ವರೆಗೆ ಈ ಕೆಳಗಿನ ಕೊಯ್ಲು ಹೆಚ್ಚಾಗಿದೆ: ಮಾರಿವಾನ 22 ಸೇಕಡಾ; ಆಫೀಮು 15 ಸೇಕಡಾ; ಬಂಗಿ 11 ಸೇಕಡಾ ಮತ್ತು ನಾಲ್ಕು ದೇಶಗಳ ಕೋಕ 7.2 ಸೇಕಡಾ. ಹೆಚ್ಚಾದ ದಸ್ತಗಿರಿ, ಜಫ್ತಿ ಮತ್ತು ಈ ಬೆಳೆಯ ನಾಶನದ ಮತ್ತು ಅಂತರ್ರಾಷ್ಟ್ರೀಯ ಸಹಕಾರ ಒಪ್ಪಂದದ ಎದುರಲ್ಲೂ ಈ ಮಾರಕವಾದ ಹುಲುಸು ಬೆಳೆಯನ್ನು ಬೆಳೆಸಲಾಯಿತು. ನ್ಯೂಯೋರ್ಕ್‌ ಟೈಮ್ಸ್‌ ಪತ್ರಿಕೆಗನುಸಾರ, ವಿದೇಶ ಮಂತ್ರಾಲಯದ ಈ ವರದಿ: “ಒಂಟಿಯಾಗಿ ಈ ಅಮಲೌಷಧದ ವಿರುದ್ಧ ಹೋರಾಡಲು ಅಮೇರಿಕಕ್ಕಿರುವ ಅಸಾಮರ್ಥ್ಯದ ವಾರ್ಷಿಕ ಅಂಗೀಕಾರವಾಗಿದೆ.”

ನಾಲ್ಕು ಕಾಲಿನ ಕೋಳಿಗಳು

ಹುರಿದ ಕೋಳಿಯ ಉದ್ಯಮಕ್ಕೆ ಯಾವುದು ಆದರ್ಶಪ್ರಾಯವಾಗಿದೆಯೋ ಅದು ಜಾಪಾನಿನ ಹಿರೋಶಿಮದ ಕೆಲವು ಜ್ಯೂನಿಯರ್‌ ಹೈಸ್ಕೂಲ್‌ ಅಧ್ಯಾಪಕರಿಗೆ ಉಗ್ರ ಪರೀಕ್ಷೆಯಾಗಿ ಪರಿಣಮಿಸಿತು. ಕೋಳಿಯ ಚಿತ್ರ ಬರೆಯಲು 153 ಮಂದಿ ವಿದ್ಯಾರ್ಥಿಗಳನ್ನು ಕೇಳಿಕೊಂಡಾಗ 12 ಸೇಕಡಾಕ್ಕಿಂತಲೂ ಹೆಚ್ಚು ಮಂದಿ ನಾಲ್ಕು ಕಾಲಿನ ಕೋಳಿಯ ಚಿತ್ರ ಎಳೆದರು. ಕೊಟ್ಟಿದ್ದ ಮಾದರಿಯ ಒಂಭತ್ತು ವಿಷಯಗಳನ್ನು ಪರೀಕ್ಷಿಸಿದಾಗ “ಕೇವಲ ಮೂವರು ಮಕ್ಕಳು ಕೋಳಿಗಳನ್ನು ನಿಷ್ಕೃಷ್ಟವಾಗಿ ಬರೆದಿದ್ದರು, ಎನ್ನುತ್ತದೆ ಅಸಾಹಿ ಶಿಂಬನ್‌ ಪತ್ರಿಕೆ. ಸರ್ವೇ ಮಾಡಿದ ಅಧ್ಯಾಪಕರು ಹೇಳುವುದು: “ಈಗ ಪ್ರಕೃತಿ ಸಂಪರ್ಕ ಹಿಂದಿಗಿಂತ ಕಡಿಮೆಯಾಗಿದೆ.”

ಥಾಯ್ಲೆಂಡಿನಲ್ಲಿ ಕಾಡು ಸಂರಕ್ಷಣೆ

ಕಡಿಮೆಯಾಗುತ್ತಿರುವ ಕಾಡನ್ನು ಸಂರಕ್ಷಿಸಲಿಕ್ಕಾಗಿ ಕೊನೆಯ ಪ್ರಯತ್ನ ಮಾಡುತ್ತಾ ಥಾಯ್ಲೆಂಡ್‌ ಸರಕಾರವು ಇತ್ತೀಚೆಗೆ ಎಲ್ಲಾ ಮರ ಕಡಿಯುವದನ್ನು ನಿಲ್ಲಿಸಿತು. ಅಧಿಕಾರಿಗಳ ಅಂದಾಜೇನಂದರೆ ಈಗ ಥಾಯ್ಲೆಂಡಿನ 18 ಸೇಕಡಾ ಭಾಗದಲ್ಲಿ ಮಾತ್ರ ಕಾಡಿದೆ. 2ನೇ ಲೋಕ ಯುದ್ಧದ ಕಾಲದಲ್ಲಿ ಅದು 70 ಸೇಕಡಾವಾಗಿತ್ತು. ಸಸ್ಯ ರಕ್ಷಕರು ಇದನ್ನು 12 ಸೇಕಡಾದಷ್ಟೂ ಕೆಳಗಿಳಿಸುತ್ತಾರೆ. ದೇಶದ ದಕ್ಷಿಣ ಭಾಗದಲ್ಲಿ ಇತ್ತೀಚೆಗೆ 350 ಜನರನ್ನು ಕೊಂದ ನೆರೆ ಮತ್ತು ಜಾರು ಮಣ್ಣು ಆಶಾಸಕವಾಗಿ ಮರಕಡಿದುದರ ಫಲವೆಂದು ಹೇಳಲಾಗಿದೆ. ಮರಕಡಿಯುವ ಉದ್ಯಮದಿಂದ ಭಯಂಕರ ವಿರೋಧ ಬಂದರೂ ಈ ವಿಪತ್ತು, ಸರಕಾರ ಇದನ್ನು ನಿಷೇಧಿಸುವಂತೆ ಸಹಾಯ ನೀಡಿತು.

ಸುನ್ನತಿಯಿಂದ ಪ್ರಯೋಜನಗಳು

ಶಿಶು ಚಿಕಿತ್ಸೆಯ ಅಮೆರಿಕನ್‌ ಅಕಾಡೆಮಿಗೆ ಸುನ್ನತಿಯ ವಿಷಯದಲ್ಲಿ ತಮ್ಮ ಸ್ಥಾನ ಬದಲಾಯಿಸ ಬೇಕಾಯಿತು. 1971ರಲ್ಲಿ ಈ ಸಂಘ, ಹೊಸದಾಗಿ ಜನಿಸಿದ ಗಂಡು ಮಕ್ಕಳನ್ನು ರೂಢಿಯಾಗಿ ಸುನ್ನತಿ ಮಾಡಿಸುವುದಕ್ಕೆ “ಯಾವ ವೈದ್ಯಕೀಯ ಸಪ್ರಮಾಣವೂ ಇಲ್ಲ” ವೆಂದು ಹೇಳಿತು. ಆದರೂ ಇತ್ತೀಚಿನ ಅಧ್ಯಯನ, ಯಾವುದು ಅಪಾಯಕರವಾಗಿದೆಯೋ ಆ ಮೂತ್ರ ಜನಕಾಂಗ ಮತ್ತು ಮೂತ್ರ ಮಾರ್ಗಗಳ ರೋಗವನ್ನು ಸುನ್ನತಿಯು ತಡೆಯಬಲ್ಲದೆಂದು ತೋರಿಸಿದೆ. ಒಂದು ಅಧ್ಯಯನದಲ್ಲಿ, ಸುನ್ನತಿಯಾಗದ ಹುಡುಗರು ಸುನ್ನತಿಯಾದವರಿಗಿಂತ 11 ಪಾಲು ಹೆಚ್ಚು ಮೂತ್ರಾಂಗ ರೋಗಗಳನ್ನು ಅನುಭವಿಸಬಹುದೆಂದು ಕಂಡುಬಂತು. ಈಗ ಆ ಅಕಾಡೆಮಿ, ಸುನ್ನತಿಯಲ್ಲಿ “ವೈದ್ಯಕೀಯ ಲಾಭ ಮತ್ತು ಪ್ರಯೋಜನಗಳಿವೆ” ಎನ್ನುತ್ತದೆ. ಕ್ರೈಸ್ತರು ಸುನ್ನತಿಯನ್ನು ಅಪೇಕ್ಷಿಸುವ ಮೋಶೆಯ ಧರ್ಮಶಾಸ್ತ್ರಕ್ಕೆ ಒಳಗಾಗಿಲ್ಲವಾದರೂ ಆ ನಿಯಮ, ವಿಧೇಯರಾಗಿದ್ದ ಪ್ರಾಚೀನ ಇಸ್ರಾಯೇಲ್ಯರಿಗೆ ಪ್ರಾಯೋಗಿಕ ಪ್ರಯೋಜನವನ್ನು ಕೊಟ್ಟಿತು.

ಚೈನಾದಲ್ಲಿ ಕ್ರೈಸ್ತ ಪ್ರಪಂಚ

ನ್ಯೂಸ್‌ ಡೈಜೆಸ್ಟ್‌ ಎಂಬ ಅಧಿಕೃತ ಚೈನಿಸ್‌ ಪತ್ರಿಕೆಯನ್ನು ಉಲ್ಲೇಖಿಸುತ್ತಾ, ನ್ಯೂಜಿಲೆಂಡ್‌ ಹೆರಾಲ್ಡ್‌, “ಇತ್ತೀಚಿನ ವರ್ಷಗಳಲ್ಲಿ ಕ್ರೈಸ್ತತ್ವ ಚೀನಾದಲ್ಲಿ ಬಲವಾಗುತ್ತಾ ಬಂದಿದೆ” ಎಂದು ಹೇಳಿತು. ಮೂರು ವರ್ಷಗಳ ಹಿಂದೆ ದೇಶದಲ್ಲಿ ಕ್ರೈಸ್ತರೆನಿಸಿಕೊಳ್ಳುವವರು ವೃದ್ಧರು, ಅನಕ್ಷರಸ್ಥರು, ಮತ್ತು ಅರೆ ಅಕ್ಷರಸ್ಥರು ಎಂದು ಹೇಳಲಾಗುತಿತ್ತು. ಇತ್ತೀಚಿನ ಒಂದು ಸರ್ವೇ, ಚೈನಾದ 70 ಲಕ್ಷ ಕ್ರೈಸ್ತ ಪ್ರಪಂಚಸ್ಥರಲ್ಲಿ 25 ಸೇಕಡಾದಷ್ಟು ವ್ಯಕ್ತಿಗಳು ಡಾಕ್ಟರ್‌, ಪ್ರೊಫೆಸರ್‌, ವಿದ್ಯಾರ್ಥಿ, ಲೇಖಕ ಮತ್ತು ಇಂಜಿನಿಯರರಾಗಿದ್ದು “ಪ್ರಜ್ಞಾಶಾಲಿಗಳು” ಎಂದು ತೋರಿಸಿತು. (g89 6/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ