ನಿಮ್ಮ ದೇಶವು ಮುಖ್ಯ ಗುರಿಯೋ?
ಬ್ರೆಜಿಲ್ ಮತ್ತು ಜಿಂಬಾಬ್ವೆ ಅಗ್ಗದಲ್ಲಿ ತಂಬಾಕನ್ನು ಖರೀದಿಸುವದರಿಂದ, ಅಮೆರಿಕದಲ್ಲಿ ತಂಬಾಕು ಮಿಗುತಾಯವಿದೆ. ಆದ್ದರಿಂದ ತಂಬಾಕುವಿನ ಭಾರೀ ವ್ಯಾಪಾರಿಯು ಅದನ್ನೆಲ್ಲಿ ಮಾರಶಕ್ತನು? ಆಫ್ರಿಕಾ ಮತ್ತು ಏಶ್ಯಾ ದೇಶಗಳಲ್ಲಿ. ಆದಕಾರಣ, ಏಶ್ಯಾ ವೀಕ್ ಪತ್ರಿಕೆಯು ವರದಿಸುವುದು: “ಬ್ರಿಟನ್ ಮತ್ತು ಪಶ್ಚಿಮ ಜರ್ಮನಿಯ ಮುಂದಾಳುತನದ ಮಾರುಕಟ್ಟೆಯ ಬದಲಾಗಿ ಏಶ್ಯಾ ದೇಶಗಳು ಅಮೆರಿಕದ ಹೊರದೇಶದ ತಂಬಾಕು ಮಾರಾಟದಲ್ಲಿ 50 ಶೇಕಡಾ ಬಳಸುತ್ತವೆ.”
ಮತ್ತು ತಂಬಾಕು ಮಾರಾಟಗಾರರ ಮುಂದೆ ಎಂತಹ ವಿಫುಲ ಬಹುಮಾನವು ತೂಗಾಡುತ್ತದೆ! ಮುಂದಿನ 20 ವರ್ಷಗಳಲ್ಲಿ ಸುಮಾರು 200 ಕೋಟಿ ಜನಸಂಖ್ಯೆಯಾಗಲು ಸಾಧ್ಯವಿರುವ ಒಂದು ಮಾರುಕಟ್ಟೆ. ಚೈನಾ ಮತ್ತು ಭಾರತದ ಸದ್ಯದ ಜನಸಂಖ್ಯೆಯೇ ತತ್ತರಿಸುವಂಥಾದ್ದು—ಒಟ್ಟಿಗೆ ಜುಮ್ಲಾ 180 ಕೋಟಿ! ವರ್ಲ್ಡ್ ಹೆಲ್ತ್ ಹೇಳಿದಂತೆ ಅದು ಇದೆ: “ವಾರ್ಷಿಕವಾಗಿ ಶೇಕಡಾ 1ರಷ್ಟು ತಂಬಾಕು ಮಾರುಕಟ್ಟೆಯು ಪಶ್ಚಿಮದಲ್ಲಿ ಇಳಿಯುತ್ತಿರುವಾಗ, ಧೂಮಪಾನ ಮಾಡುವಿಕೆಯು ಪ್ರಗತಿಶೀಲ ದೇಶಗಳಲ್ಲಿ ವಾರ್ಷಿಕವಾಗಿ ಶೇಕಡಾ 2ರಷ್ಟು ವೃದ್ಧಿಯಾಗುತ್ತದೆ.” ಮತ್ತು ನೆನಪಿನಲ್ಲಿಡಿರಿ, ಅವನತಿಯಾಗುವ ಮಾರುಕಟ್ಟೆಯ ಜನಸಂಖ್ಯೆಯು, ಪೂರ್ವದಲ್ಲಿ ಕರೆಗೊಡುವ ಸಂಭಾವ್ಯ ಮಾರುಕಟ್ಟೆಗಿಂತ ಎಷ್ಟೋ ಕಿರಿದಾಗಿದೆ. 2000 ವರ್ಷದೊಳಗೆ ಅಮೆರಿಕದ ತಂಬಾಕು ಉದ್ದಿನೆಯು ಏಶಿಯಾದಲ್ಲಿ ಮಾರಾಟವನ್ನು 18 ಶೇಕಡಾ ವರ್ಧಿಸಲಿದೆ. ಆದರೆ ಕಡಿಮೆಪಕ್ಷ ಅಲ್ಲಿ ಒಂದು ತಡೆಯಿದೆ. ಸುಂಕಗಳು.
ರೋಗ ಮತ್ತು ಮರಣವನ್ನು ಹಬ್ಬಿಸುವುದರಲ್ಲಿ ಇಬ್ಬಗೆಯ ಧೋರಣೆ
ತಮ್ಮ ಮಿಗತೆ ಸಿಗರೇಟುಗಳನ್ನು ಇತರ ದೇಶಗಳು ಸ್ವೀಕರಿಸುವಂತೆ ಅಮೆರಿಕನ್ ತಂಬಾಕು ಕಂಪೆನಿಗಳು ಮಾಡಶಕ್ತವಾಗುವುದು ಹೇಗೆ? ಅರ್ಥವಿಲ್ಲದ್ದಾಗಿ ಕಂಡರೂ, ತನ್ನ ಸ್ವಂತ ಸಾರ್ವಜನಿಕರನ್ನು ಧೂಮಪಾನದ ಅಪಾಯಗಳ ವಿರುದ್ಧವಾಗಿ ಎಚ್ಚರಿಸುವ ಅದೇ ಸಮಯದಲ್ಲಿ, ಇತರ ದೇಶಗಳಲ್ಲಿ ಮಾರಾಟವನ್ನು ಸಚೇತಕವಾಗಿ ಪ್ರವರ್ಧಿಸುವ ಒಬ್ಬ ಮಿತ್ರನು ಅವರಿಗಿದ್ದಾನೆ. ಅವನಾರು? ಅಮೆರಿಕ ಸರಕಾರ!
ಏಶಿಯಾ ವೀಕ್ ವಿವರಿಸುವುದು: “ಪರರನ್ನು ಬಲಿಮಾಡುವ ತಂಬಾಕು ರಫ್ತಿನ ಈ ಮುಂಚಾಲನೆಗೆ ಅಮೆರಿಕ ಸರಕಾರದ ಬೆಂಬಲ ಹಿಂದಿನಿಂದ ಇದೆ. . . . ಅಮೆರಿಕದ ವ್ಯಾಪಾರ ಪ್ರತಿನಿಧಿಯ ಆಫೀಸು . . . ವ್ಯಾಪಾರಕ್ಕಿರುವ ಅಡ್ಡಿಗಳನ್ನೆಲ್ಲಾ ಇಲ್ಲದಂತೆ ಮಾಡಲು ಸರ್ವ ಪ್ರಯತ್ನ ಮಾಡುತ್ತದೆ ಮತ್ತು ಅಮೆರಿಕದ ಕಂಪೆನಿಗಳಿಗಾಗಿ ಏಶ್ಯಾದ ಸಂಪರ್ಕ ಮಾಧ್ಯಮವನ್ನು ಒತ್ತಡಕ್ಕೆ ಹಾಕುತ್ತದೆ, ಅಮೆರಿಕದ ಗಾಳಿಯಲೆಯಲ್ಲಿ ಸಿಗರೇಟು ಜಾಹೀರಾತು ಬಹಳ ಹಿಂದೆಯೇ ನಿಷೇಧಿಸಲ್ಪಟ್ಟಿರುವುದಾದರೂ.” ವರ್ಲ್ಡ್ ಹೆಲ್ತ್ ಪತ್ರಿಕೆಯು ವರದಿಮಾಡುವುದು: “ಅಮೆರಿಕದ ತಂಬಾಕು ಕಂಪೆನಿಗಳ ಹತ್ತಿರ ಗಮನಾರ್ಹ ರಾಜಕೀಯ ಪ್ರಭಾವವಿರುತ್ತದೆ. ಅಮೆರಿಕದ ತಂಬಾಕು ಉತ್ಪಾದನೆಗಳ ಜಾಹೀರಾತು ಮತ್ತು ಮಾರಾಟಗಳಿಗೆ ತಮ್ಮ ಮಾರುಕಟ್ಟೆಯನ್ನು ಅವರು ತೆರೆಯದೆ ಇದ್ದರೆ, ವಾಣಿಜ್ಯ ಸಮ್ಮತಿಗಳನ್ನು ಯಾ ಅವುಗಳ ನಿಷೇಧ ಬೆದರಿಕೆಗಳನ್ನು ಹಾಂಗ್‌ಕಾಂಗ್, ತೈವಾನ್, ಜಪಾನ್ ಮತ್ತು ಕೊರಿಯದ ವಿರುದ್ಧ ಮಾಡಲಾಗಿತ್ತು.”
ಇನ್ನೂ ಕೆಟ್ಟದ್ದು ಅಂದರೆ, ಏಶಿಯಾದಲ್ಲಿ ತಂಬಾಕು ಕಂಪೆನಿಗಳು ತಮ್ಮ ಉತ್ಪಾದನೆಯನ್ನು ಮಾರುವದು ಮಾತ್ರವಲ್ಲ, ಬಾರೀ ಒತ್ತಡದ ಜಾಹೀರಾತುಗಳಿಂದ ಮಾರಾಟವನ್ನು ಏರಿಸುತ್ತಾರೆ. ತೈವಾನ್ ಮತ್ತು ದಕ್ಷಿಣ ಕೊರಿಯದಂತಹ ಕೆಲವು ದೇಶಗಳು, ಒತ್ತಡದಿಂದಾಗಿ, ತಂಬಾಕು ಜಾಹೀರಾತಿನ ಮೇಲಣ ತಮ್ಮ ನಿಷೇಧವನ್ನೂ ತೆಗೆದಿದ್ದಾರೆ! ಅಮೆರಿಕದ ಸಿಗರೇಟು ಉತ್ಪಾದಕರ ಗುರಿಹೊಡೆಯುವ ಪಟ್ಟಿಯಲ್ಲಿ ಚೈನಾವು ಈಗ ಮುಂದಿದೆ. ಒಬ್ಬ ತಂಬಾಕು ಕಂಪೆನಿಯ ಕಾರ್ಯನಿರ್ವಾಹಕನು ಈ ರೀತಿ ಹೇಳಿದ್ದರಲ್ಲೇನೂ ಆಶ್ಚರ್ಯವಿಲ್ಲ: “ನಮಗೇನು ಬೇಕೆಂದು ನಿಮಗೆ ಗೊತ್ತೋ? ನಮಗೆ ಏಶಿಯಾ ಬೇಕು.” ಆದರೆ ಅಮೆರಿಕದ ಈ ಅತಿ ಒತ್ತಡದ ತಂತ್ರಗಳನ್ನು ಕೆಲವರು ಹೇಗೆ ವೀಕ್ಷಿಸುತ್ತಾರೆ?
ನ್ಯೂಯೋರ್ಕ್ ಟೈಮ್ಸ್‌ನ ಒಬ್ಬ ಸುದ್ದಿಗಾರನಿಗನುಸಾರ, “ಕೊರಿಯದ ಜನರ ಮೇಲೆ ಅಮೆರಿಕದ ಸಿಗರೇಟುಗಳನ್ನು ದಬ್ಬುವ ಅಮೆರಿಕನ್ ಅನೈತಿಕತೆಯ ವಿರುದ್ಧ” ಒಬ್ಬ ಕೊರಿಯನ್ ವ್ಯಾಪಾರಸ್ಥನು ತೆಗಳಿದನು. ಮತ್ತು ಅವನಲ್ಲಿ ಸಕಾರಣವಿತ್ತು. ಬೇರೆ ಕೆಲವು ಆರ್ಥಿಕತೆಗಳಿಗೆ ಮೂಲವಾಗಿರುವ ಕೊಕೈಯ್ನ್ ಮತ್ತು ಹಿರೊಯಿನ್‌ನ ಆಮದಿನ ವಿರುದ್ಧ ಅಮೆರಿಕ ಯುದ್ಧ ಹೂಡುವಾಗ, ತನ್ನ ಸ್ವಂತ ವಿಷಕಾರಿ ಸಾಮಗ್ರಿಯನ್ನು ಬೇರೆ ರಾಷ್ಟ್ರಗಳ ಮೇಲೆ ಹೇರಲು ಬಯಸುತ್ತದೆ. ಅಮೆರಿಕವು ತಾನು ಉನ್ನತ ನೈತಿಕ ಮಟ್ಟವುಳ್ಳದೆಂದು ವಾದಿಸುವಾಗ, ತೀರಾ ಆರ್ಥಿಕ ಮುಗ್ಗಟ್ಟಿನಲ್ಲಿರುವ ಬೇರೆ ರಾಷ್ಟ್ರಗಳ ಮೇಲೆ, ಈ ಅಪಾಯಕಾರಿ ತಂಬಾಕು ಉತ್ಪಾದನೆಗಳ ಮಿಗತೆಗಳನ್ನು ಮೋಸದಿಂದ ಹೊರಿಸುವದು ನ್ಯಾಯವೋ?
ಕೆಲವರು ಪ್ರತಿವಿರುದ್ಧ ಹೋರಾಡುತ್ತಾರೆ
ಗಾಂಬಿಯ, ಮುಜಾಂಬಿಕ್ ಮತ್ತು ಸೆನೆಗಲ್‌ನಂತಹ ಕೆಲವು ಆಫ್ರಿಕನ್ ದೇಶಗಳು ಸಿಗರೇಟು ಜಾಹೀರಾತನ್ನು ನಿಷೇಧಿಸಿವೆ. ಕಳೆದ ವರ್ಷ ನೈಜೀರಿಯದ ಸ್ವಾಸ್ಥ್ಯ ಮಂತ್ರಿ ಹೇಳಿದ್ದೇನಂದರೆ, ನೈಜೀರಿಯನ್ ಸರಕಾರವು “ವಾರ್ತಾಪತ್ರಗಳಲ್ಲಿ, ರೇಡಿಯೋ, ಟೆಲಿವಿಶನ್, ಭಿತ್ತಿಪತ್ರ ಫಲಕಗಳ ಜಾಹೀರಾತುಗಳನ್ನೆಲ್ಲಾ ನಿಷೇಧಿಸಲಿದೆ. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವಾಹನಗಳಲ್ಲಿ ಧೂಮಪಾನ ಮಾಡುವದನ್ನು ನಾವು ನಿಷೇಧಿಸುವೆವು.” ನೈಜೀರಿಯದ ಸಮಾಚಾರ ಆಫೀಸರನೊಬ್ಬನು ಈ ವಿಷಯ ಇನ್ನೂ ಚರ್ಚೆಯಲ್ಲಿದೆ ಎಂದು (ಜನವರಿ, 1989)ರಲ್ಲಿ ಎವೇಕ್!ಗೆ ತಿಳಿಸಿದನು.
ಚೈನಾ 24 ಕೋಟಿ ಧೂಮಪಾನಿಗಳಿರುವ ಒಂದು ರಾಷ್ಟ್ರ. 2025ನೆಯ ವರ್ಷದೊಳಗೆ ಧೂಮಪಾನಿ ಸಂಬಂಧಿತ ರೋಗಗಳಿಂದಾಗಿ ಪ್ರತಿವರ್ಷ 20 ಲಕ್ಷ ಜನರು ಸಾಯಲಿರುವರೆಂದು ವೈದ್ಯಕೀಯ ಅಧಿಕಾರಿಗಳ ನಿರೀಕ್ಷೆ. ಚೈನಾಕ್ಕೆ ಬಾರೀ ಗಾತ್ರದ ಸಮಸ್ಯೆಯಿದೆಂದು ಒಪ್ಪುತ್ತಾ ಚೈನಾ ರಿಕನ್‌ಸ್ಟ್ರಕ್ಟ್ ಪತ್ರಿಕೆ ಹೇಳಿದ್ದು: “ಸಿಗರೇಟು ಜಾಹೀರಾತುಗಳ ಮೇಲೆ ಚೈನಾ ಸರಕಾರದ ನಿಷೇಧವಿರುವದಾದರೂ, ವಾರ್ತಾಪತ್ರಗಳು ಮತ್ತು ಪತ್ರಿಕೆಗಳು ಧೂಮಪಾನದ ಹಾನಿಕರ ಪರಿಣಾಮಗಳ ಎಚ್ಚರಿಕೆಯನ್ನು ನೀಡುವುದಾದರೂ ಮತ್ತು ಸಿಗರೇಟಿನ ಕ್ರಯ ಏರುತ್ತಾ ಹೋಗುವದಾದರೂ, ಚೈನಾದಲ್ಲಿ ಧೂಮಪಾನಿಗಳ ಸಂಖ್ಯೆಯು ಏರುತ್ತಾ ಹೋಗುತ್ತಿದ್ದೆ.” ಇದರಿಂದಾಗುವ ಒಂದು ಫಲಿತಾಂಶ ಯಾವುದು? “ಕ್ಯಾನ್ಸ್‌ರ್, ಹೃದಯನಾಳದ ಮತ್ತು ಶ್ವಾಸಕೋಶದ ರೋಗಗಳು ಚೈನಾದಲ್ಲಿ ಈಗ ಮುಖ್ಯ ಕೊಲೆಗಾರರಾಗಿವೆ.”
ಅತಿಥಿಗಳನ್ನು ಸುಸ್ವಾಗತಿಸುವಾಗ ಸಿಗರೇಟುಗಳನ್ನು ನೀಡುವುದು ಅತಿಥಿ ಸತ್ಕಾರದ ಗುರುತೆಂದು ಚೈನಾದ ಕೆಲವು ಭಾಗಗಳಲ್ಲಿ ಪರಿಗಣಿಸುತ್ತಾರೆ ಮತ್ತು ಚೀನೀಯರು ತೆರುವ ಬೆಲೆಯೆಷ್ಟು! ಚೈನಾ ರಿಕನ್‌ಸ್ಟ್ರಕ್ಟ್ ವರದಿಸುವದು: “ಬಹಳ ಪ್ರಮಾಣದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಂಭವಗಳು ಏರುತ್ತಾ ಇವೆಯೆಂದು ವೈದ್ಯಕೀಯ ನಿಪುಣರು ಎಚ್ಚರಿಸಿದ್ದಾರೆ.” ಒಬ್ಬ ಚೈನೀಸ್ ತಜ್ಞನಿಗನುಸಾರ: “ನಾವು ಈಗಾಗಲೇ ಬಹಳ ದುಬಾರಿ ಬೆಲೆ ತೆರುತ್ತಾ ಇದ್ದೇವೆ.”
ಆದಾಗ್ಯೂ, ತಂಬಾಕು ಜಾಹೀರಾತುದಾರರ ಶಕ್ತಿಯಲ್ಲಿ ಇನ್ನೊಂದು ಅಪಾಯವಿದೆ—ಸಂಪರ್ಕ ಮಾಧ್ಯಮದ ಮೇಲೆ ಅವರ ನಿಗೂಢ ಪ್ರಭಾವ. (g89 7/8)
[ಪುಟ 10 ರಲ್ಲಿರುವಚಿತ್ರ]
ಹಾಂಗ್‌ಕಾಂಗ್‌ನಲ್ಲಿ ಧೂಮಪಾನ ನಿರೋಧ ಜಾಹೀರಾತು