ಯುವ ಜನರು ಪ್ರಶ್ನಿಸುವದು. . .
ಒಂದು ವೇಳೆ ಜನರು ನನ್ನ ಕುರಿತು ಹರಟೆ ಮಾತಾಡಿದರೆ ನಾನೇನು ಮಾಡಲಿ?
“ನನ್ನ ಹೈಸ್ಕೂಲಿನಲ್ಲಿ 95 ಸೇಕಡಾ ಜನರು ಹರಟೆ ಮಾತನಾಡುತ್ತಾರೆ” ಎಂದು ನ್ಯೂಯೋರ್ಕ್ ಹೈಸ್ಕೂಲಿನ (ದ್ವಿತೀಯ) ಒಬ್ಬ ಎರಡನೆಯ ವರ್ಷದ ವಿದ್ಯಾರ್ಥಿ ಹೇಳುತ್ತಾನೆ. ಹರಟೆ ಮಾತಿನ ಮುಖ್ಯ ವಿಷಯ? “ಇತರ ವಿದ್ಯಾರ್ಥಿಗಳು: ಅವರ ವ್ಯಕ್ತಿತ್ವಗಳು. ಅವರು ಹೇಗೆ ತೋರುತ್ತಾರೆ, ಯಾರು ಯಾರನ್ನು ಮೆಚ್ಚುತ್ತಾರೆ ಮತ್ತು ಒಬ್ಬರು ಇನ್ನೊಬ್ಬರ ಕುರಿತಾಗಿ ಅವರು ಏನು ಹೇಳುತ್ತಾರೆ.”—ಸವಂಟಿನ್ ಮ್ಯಾಗಜೀನ್, ಜುಲೈ 1983.
ಆದಾಗ್ಯೂ, ಹಲವು ಸಂದರ್ಭಗಳಲ್ಲಿ, ಹರಟೆಮಾತು ನಕಾರಾತ್ಮಕ ದಿಕ್ಕಿಗೆ ತಿರುಗುತ್ತದೆ ಮತ್ತು ಫಲಿತಾಂಶವಾಗಿ ಇತರರ ಗೌರವಕ್ಕೆ ಅತೀ ಕೆಡುಕನ್ನುಂಟುಮಾಡುತ್ತದೆ.a ಮತ್ತು ಹರಟೆ ಮಾತು ತರುಣರಲ್ಲಿ ಹಾಗೂ ವಯಸ್ಕರಲ್ಲಿ ಇಷ್ಟು ಆಚರಣೆಯಲ್ಲಿದೆ, ನೀವು ಸ್ವತಃ ನೋವನ್ನುಂಟುಮಾಡುವ ಹರಟೆ ಮಾತಿಗೆ ಬಲಿಯಾಗುತ್ತಿರುವ (ಅಥವಾ ಮುಂದಿನ ಒಂದು ದಿನ) ಹೆಚ್ಚಿನ ಸಂಭವವಿದೆ. ಹಾಗಿದ್ದರೆ, ನೀವೇನು ಮಾಡಬಹುದು? ನೋವನ್ನುಂಟುಮಾಡುವ ಹರಟುವಿಕೆಯನ್ನು ನಿಲ್ಲಿಸಲು ಯಾವುದಾದರೂ ಮಾರ್ಗವಿದೆಯೇ?
ಹರಟೆ ಮಾತಿನ ನೋವು
ಇದರ ಕುರಿತು ಸಂಶಯವಿಲ್ಲ: ವೈಯಕ್ತಿಕ ವಿಷಯಗಳು ಇತರರಿಗೆ ಬಹಿರಂಗಮಾಡಿದಾಗ ಅಥವಾ ಒಂದು ಸುಳ್ಳು ಸುದ್ದಿಗೆ ನೀವು ಬಲಿಯಾದಾಗ ಅದು ನಿಜವಾಗಿ ನೋವನ್ನುಂಟುಮಾಡುತ್ತದೆ. ಸಿಟ್ಟಿನ ಭಾವನೆಗಳು ಮತ್ತು ಪ್ರತೀಕಾರವು ನೋವನ್ನು ಮತ್ತು ಖಿನ್ನತೆಯ ಕಾಲಾವಧಿಯನ್ನು ಜತೆಗೂಡಿಸಬಹುದು. “ಇದು ಆ ವ್ಯಕ್ತಿಗೆ ನೋವನ್ನುಂಟುಮಾಡಬೇಕೆಂಬ ಇಚ್ಛೆಯಾಗುವಂತಹ ಭಾವನೆಗಳನ್ನು ನಿಮ್ಮಲ್ಲಿ ಉಂಟುಮಾಡುತ್ತದೆ” ಎಂದು ಹರಟೆ ಮಾತಿಗೆ ಬಲಿಯಾದ ಒಬ್ಬರು ಹೇಳಿದರು. ಇನ್ನೊಬ್ಬರು ಹೇಳಿದ್ದು: “ಜಜ್ಜಲ್ಪಟ್ಟಂತೆ ನಿಮಗನಿಸುತ್ತದೆ. ಇದು ಬೆನ್ನಿನಲ್ಲಿ ತಿವಿದ ಸ್ಥಿತಿಯಂತಿದೆ. ಅವರೊಂದಿಗೆ ಪುನಃ ಮಾತನಾಡಲು ಇಚ್ಛೆಯಿಲ್ಲದ ಭಾವನೆಯನ್ನು ಉಂಟುಮಾಡಸಾಧ್ಯವಿದೆ. ನಿಮ್ಮ ಭರವಸೆಯು ಹೋಗುತ್ತದೆ ಮತ್ತು ನೀವು ಈ ಸಮಸ್ಯೆಯ ಕುರಿತು ಯೋಚಿಸುವುದನ್ನು ನಿಲ್ಲಿಸಲು ಮಾತ್ರ ಸಾಧ್ಯವಿಲ್ಲ.”
ನಿಜವಾಗಿ, ಹರಟೆ ಮಾತು ಹಲವು ತರುಣರು ಕಂಗೆಡಿಸುವಿಕೆಯಿಂದ ಸ್ಥಗಿತರಾಗುವಂತೆ ಕಾರಣವಾಗಿದೆ. ಒಬ್ಬ ತರುಣಿಯು ಅವಳ ಕುರಿತು ಅಸಹ್ಯವಾದ ಸುದ್ದಿಯನ್ನು ಹರಡಿಸುವಂತೆ ಭಾಗಿಗಳಾದ ತರುಣರನ್ನು ಎದುರಿಸುವ ಬದಲು ಇನ್ನೊಂದು ಶಾಲೆಗೆ ವರ್ಗಾಯಿಸಿಕೊಂಡಳು. ಆದರೂ, ಸೇಡು, ಸಿಟ್ಟು, ಇಲ್ಲವೇ ಶಕ್ತಿಗುಂದಿಸುವ ಕಂಗೆಡಿಸುವಿಕೆಯಿಂದ ಸ್ಥಿತಿಯು ಸ್ವಲ್ಪವೂ ಪ್ರಗತಿಯಾಗದು. ವಿರುದ್ಧ ಮಾತುಗಳೊಂದಿಗೆ ವ್ಯವಹರಿಸಲು ಹೆಚ್ಚು ಪರಿಣಾಮಕಾರಿಯಾದ ಮಾರ್ಗಗಳು ಇವೆ.
ಅತಿಯಾಗಿ ಪ್ರತಿಕ್ರಿಯಿಸುವುದನ್ನು ತಪ್ಪಿಸಿರಿ
ಏನನ್ನಾದರೂ ಮಾಡುವ ಮೊದಲು, ಜ್ಞಾಪಿಸಿರಿ: “ಮುಂಗೋಪಿಯು ಬುದ್ಧಿಗೆಡುವನು.” (ಜ್ಞಾನೋಕ್ತಿ 14:17) ಸಂದೇಶವೇನು? ಅತಿಯಾದ ಪ್ರತಿಕ್ರಿಯೆ ತೋರಿಸದಿರ್ರಿ! ದುಡುಕಿನ ವರ್ತನೆಗಳು ಪರಿಹಾರಕ್ಕಿಂತಲೂ ಕೆಲವೊಮ್ಮೆ ಹೆಚ್ಚಿನ ಸಮಸ್ಯೆಗಳನ್ನು ಉದ್ಭವಿಸುತ್ತವೆ. ಬೈಬಲ್ ಎಚ್ಚರಿಸುವುದು: “ನಿನ್ನ ಮನಸ್ಸು ಕೋಪಕ್ಕೆ ಆತುರ ಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ.” ಏಕೆ? ಒಂದು ವಿಷಯವೇನಂದರೆ ಇತರರ ಕುರಿತು ಜನರು ಮಾತಾಡುವುದನ್ನು ನೀವು ತಡೆಯಲಾರಿರಿ. ಇತರರ ಕುರಿತು ಮಾತಾಡುವುದು ಜೀವನದ ಒಂದು ಅಂಗವಾಗಿದೆ. ಸೊಲೊಮೋನನು ಮುಂದಕ್ಕೆ ಉಪದೇಶಿಸುವದು: “ಆಡುವ ಪ್ರತಿಯೊಂದು ಮಾತುಗಳನ್ನು ಲಕ್ಷ್ಯಕ್ಕೆ ತಾರದಿರು; . . .ನೀನೂ, ಅನೇಕ ವೇಳೆ ಇತರರನ್ನು ಶಪಿಸಿದ್ದೀ ಎಂಬದಕ್ಕೆ ನಿನ್ನ ಮನಸ್ಸೇ ಸಾಕ್ಷಿ.”—ಪ್ರಸಂಗಿ 7:9, 21, 22.
ನಕಾರಾತ್ಮಕ ಹರಟೆಯನ್ನು ಸೊಲೊಮೋನನು ಸಮರ್ಥಿಸುವುದಿಲ್ಲ. ಅವನು ಇದು ಜೀವನದ ಕೇವಲ ವಸ್ತುಸ್ಥಿತಿಯಾಗಿದೆ ಎಂದು ಅಂಗೀಕರಿಸುತ್ತಾನೆ. ನಿಮ್ಮಿಂದಾದ ಮಟ್ಟಿಗೆ ನೀವೂ ಇತರರ ಕುರಿತು ಮಾತಾಡುವುದನ್ನು ಬಯಸುವುದಿಲ್ಲವಾದರೂ, ಇತರರ ಬಗ್ಯೆ ಪ್ರಾಯಶಃ ಹೇಳಿದಂತಹ ವಿಷಯಗಳನ್ನು ಹೇಳದೆ ಇದ್ದಿದ್ದರೆ ಎಷ್ಟೋ ಒಳ್ಳೆಯದಿತ್ತು ಎನ್ನುವುದೂ ನಿಜವಲ್ಲವೇ?
ಗೊಸಿಪ್(ಹರಟೆ) ಎಂಬ ತನ್ನ ಪುಸ್ತಕದಲ್ಲಿ, ಪೆಟ್ರಿಶಿಯಾ ಮೆಯರ್ ಸ್ಪೆಕ್ಸ್ ಗಮನಿಸಿದ್ದು: “ಹೆಚ್ಚು ಸಾಮಾನ್ಯವಾಗಿ ಹರಟೆಯು ಉದ್ದೇಶಪೂರ್ವಕ ದ್ವೇಷದಿಂದ ಹೊರಡುವುದಿಲ್ಲ. ಆದರೆ . . . ಯೋಚನೆಯ ಕೊರತೆಯಿಂದ . . . ಅತೀ ಅಗಾಧವಾದ ವಿಮರ್ಶನೆಯಿಲ್ಲದೇ ಏನನ್ನೋ ಹೇಳಬೇಕೆಂಬ, ಗಮನ ನೀಡದ ಆಶೆಯಿಂದ ಇದು ಉತ್ಪನ್ನವಾಗುತ್ತದೆ. ಉದ್ದೇಶಪೂರ್ವಕವಲ್ಲದ ಸಂಕಲ್ಪನೆಯಿಂದ, ಹರಟೆಗಾರರು ಮಾತುಗಳನ್ನು ಚರ್ಚಿಸುತ್ತಾರೆ ಮತ್ತು ಇತರ ಜನರ ಕುರಿತು ಇನ್ನೂ ಪ್ರಕಟವಾಗದಿರುವ ವಿಷಯಗಳನ್ನು ಪ್ರಕಟಿಸುತ್ತಾರೆ.” ಇದನ್ನು ತಿಳುಕೊಳ್ಳುವುದು ನಿಮ್ಮ ರೋಷವನ್ನು ತಗ್ಗಿಸಲು ಸಹಾಯಮಾಡುವುದು.
ಹರಟೆಯೊಂದಿಗೆ ವ್ಯವಹರಿಸುವ ತಂತ್ರಗಳು
ಜ್ಞಾನೋಕ್ತಿ 14:15 ಹೇಳುವುದು: “ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” ಹರಟೆಯೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುವ ತಂತ್ರಗಳನ್ನು ಶಾಂತವಾಗಿ ವ್ಯವಸ್ಥೀಕರಿಸುವಂತೆ ಇದು ಸೂಚಿಸುತ್ತದೆ.
ಹರಟೆಯು ಎಷ್ಟು ಗಂಭೀರವಾಗಿದೆ ಎಂದು ಗಮನಿಸುವುದರಿಂದ ನೀವು ಆರಂಭಿಸಬಹುದು. ಪ್ರಾಯಶಃ ನಿಮ್ಮ ಕುರಿತು ಹೆಣೆದಿರುವ ಕಥೆಯು, ಕಂಗೆಡಿಸುವ ಅಥವಾ ಅಸತ್ಯವಾಗಿರುವುದಾದರೂ ಯಥಾರ್ಥವಾಗಿ ಹಾಸ್ಯಮಯ ಅಥವಾ ನಿಮ್ಮ ಗುಣಲಕ್ಷಣಕ್ಕೆ ನಿಜವಾಗಿ ಕೆಸರೆರಚದ್ದಾಗಿರಬಹುದು. ಇನ್ನೊಂದು ಮಾತಿನಲ್ಲಿ, ಬಿರುಗಾಳಿ ಮಳೆ ಬಂದಾಗ ನೀವೇ ಮನೆಗೆ ಬೀಗ ಹಾಕಿ ಹೊರಗೆ ಉಳಿದದ್ದು ಯಾ ವ್ಯಾಯಾಮ ಮಾಡುವಾಗ ನಿಮ್ಮ ಚಡ್ಡಿಯೂ ಹರಿದದ್ದು, ಇದೆಲ್ಲಾ ಲೋಕಕ್ಕೆ ಗೊತ್ತಾಗಬಾರದು ಎಂದು ನೀವು ಇಚ್ಛಿಸಿದ್ದರೂ, ಸುದ್ದಿಯು ಬಹಿರಂಗವಾಗಿದೆ, ಇದು ನಿಜವಾಗಿಯೂ ಅಂತಹ ಒಂದು ವಿಪತ್ತೋ? ಪ್ರಾಯಶಃ ಗಾಳಿಮಾತನ್ನು ನಶಿಸುವಂತೆ ಬಿಡುವ ಒಂದು ಅತ್ಯುತ್ತಮ ಮಾರ್ಗ ನಾವು ವಿನೋದಪ್ರವೃತ್ತಿಯುಳ್ಳವರಾಗಿರುವುದೇ ಆಗಿದೆ.
ಆದಾಗ್ಯೂ, ಕಲ್ಪಿಸಿಕೊಳ್ಳಿ, ಗಾಳಿಮಾತು ನಿಜವಾಗಿ ಅಗೌರವ ಅಥವಾ ಅವಮಾನಕರವಾದದ್ದಾಗಿರುವುದಾದರೆ ಆಗೇನು? ನಿಮ್ಮ ಸತ್ಕೀರ್ತಿಗೆ ಶಾಶ್ವತ ಹಾನಿಯನ್ನು ತರುವಂತೆ ನಿಜವಾಗಿ ಇದು ಕಾರಣವಾಗುತ್ತದೋ — ಅಥವಾ ಬಲುಬೇಗನೇ ಅಳಿದು ಹೋಗುವ ಸಂಭಾವ್ಯತೆಯಿದೆಯೋ? ಒಂದು ವೇಳೆ, ಕೊನೆಯದ್ದು ಸತ್ಯವೆಂದು ತೋರಿದರೆ, ಅಂತಹ ಬಿರುಗಾಳಿಯನ್ನು ಸರಳವಾಗಿ ಕೇವಲ ದಾಟಿಸಿಬಿಡುವುದು ಅತ್ಯುತ್ತಮ. ಮುನಿಸಿಕೊಂಡು ಅಥವಾ ದೋಷಿಯಾಗಿ ತೋರಿ ಅಲೆದಾಡುವುದಕ್ಕಿಂತ —ಯಥಾ ಪ್ರಕಾರ ‘ವ್ಯವಹಾರಮಗ್ನ’ ವರ್ತನೆಯು — ಗಾಳಿಮಾತುಗಳಿಗೆ ನೀವು ಎಣ್ಣೆ ಸುರಿಯುವುದನ್ನು ಸ್ವಲ್ಪವಾದರೂ ತಡೆಗಟ್ಟುತ್ತದೆ. ಜ್ಞಾನೋಕ್ತಿ 26:20 ಹೇಳುವುದು: “ಕಟ್ಟಿಗೆ ಇಲ್ಲದಿದ್ದರೆ ಬೆಂಕಿ ಆರುವುದು, ಚಾಡಿಕೋರನು ಇಲ್ಲದಿದ್ದರೆ ಜಗಳ ಶಮನವಾಗುವುದು.”
ಆದಾಗ್ಯೂ, ಕೆಲವು ಸಲ ವಿಷಯವು ಅಲಕ್ಷ್ಯಮಾಡದಷ್ಟು ಗಂಭೀರವಾಗಿರುತ್ತದೆ. ವೈಯಕ್ತಿಕ ಅಪಮಾನವನ್ನು ಸುಳ್ಳು ಸುದ್ದಿಯಂತಹ ರೀತಿಗಳಲ್ಲಿ ಮಾಡಿದರೆ ಏನು ಮಾಡಬೇಕೆಂದು ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಸಲಹೆ ಕೊಟ್ಟಿದ್ದಾನೆ: “ನೀನು ಹೋಗಿ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು.”(ಮತ್ತಾಯ 18:15) ಆಗ ಹಾನಿಕರವಾದ ಮಾತಿನ ಮೂಲವನ್ನು ಕಂಡುಹಿಡಿಯಲು ಮತ್ತು ಗಾಳಿಮಾತನ್ನು ಪ್ರಾರಂಭಿಸಲು ಜವಾಬ್ದಾರನಾದ ವ್ಯಕ್ತಿಯೊಂದಿಗೆ ವಿಷಯವನ್ನು ಶಾಂತವಾಗಿ ಚರ್ಚಿಸಲು ಸಾಧ್ಯವಾಗುವುದು.
ನಿಜ, ಆ ವ್ಯಕ್ತಿಯು ಒಬ್ಬ ಕ್ರೈಸ್ತನಾಗಿರಲಿಕ್ಕಿಲ್ಲ. ಆದರೆ ಒಂದು ವೇಳೆ ಅವನು ವಿವೇಚನಾಪರನೆಂದು ನಿಮಗೆ ತಿಳಿದಿದ್ದರೆ, ಪ್ರಾಯಶಃ ಅವನು ಅಥವಾ ಅವಳು ಫಲಪ್ರದವಾದ ಪ್ರತಿಕ್ರಿಯೆ ತೋರಿಸುವರು. ಸಂಪೂರ್ಣ ವಿಷಯವು ಕೆಲವು ಗಂಭೀರ ತಪ್ಪು ತಿಳುವಳಿಕೆಯ ಫಲಿತಾಂಶವಾಗಿತ್ತು ಎಂದು ತಿಳಿದು ಬರಬಹುದು. ಒಂದು ವೇಳೆ ಮೂಲದಲ್ಲಿ ದ್ವೇಷವಿದ್ದಿರುವುದಾದರೆ, ಪ್ರಾಯಶಃ ವಿಷಯವನ್ನು ನಿಮ್ಮ ಮಧ್ಯೆ ಸರಿಪಡಿಸಿಕೊಳ್ಳಬಹುದು.
ಕೆಲವೊಮ್ಮೆ ಗಾಳಿಮಾತಿನ ಮೂಲದ ಸುಳಿವನ್ನು ಶೋಧಿಸಲು ತುಂಬಾ ಕಷ್ಟಕರ ಮತ್ತು ಒಂದು ವೇಳೆ ನಿಮಗೆ ಸಾಧ್ಯವಾದರೂ ಕೂಡಾ, ಜವಾಬ್ದಾರನಾದವನು ಅವಿವೇಚನೆಗಾಗಿ ತಪೊಪ್ಪಿಕೊಳ್ಳಲು ಇಚ್ಛಿಸಲಾರನು. ಆಗ ಏನು? ಯೇಸು ಕ್ರಿಸ್ತನು “ವಿರುದ್ಧ ಮಾತಿಗೆ” ಬಲಿಯಾಗಿದ್ದನು ಎಂದು ನೆನಪಿಸಿಕೊಳ್ಳಿರಿ. (ಇಬ್ರಿಯ 12:3) ಯೇಸು, ಹಾಗಿದ್ದರೂ ಕೂಡಾ, ತನ್ನ ಪ್ರಚಾರ ಕಾರ್ಯವನ್ನು ಅವನು ತ್ಯಜಿಸುವಷ್ಟು ಕ್ಷೋಭೆಗೊಳಪಡಲಿಲ್ಲ ಮತ್ತು ತೊಂದರೆಗೊಳಪಡಿಸಿದ ಮಾತನ್ನು ಆರಂಭಿಸಿದವರು ಯಾರು ಎಂದು ಕಂಡುಹಿಡಿಯಲು ಅವರ ಬೆನ್ನಟ್ಟಲಿಲ್ಲ. ಬದಲಾಗಿ, ಅವನಂದದ್ದು: “ವಿವೇಕವು ತನ್ನ ಕೆಲಸಗಳಿಂದ ವಿವೇಕವೇ ಎಂದು ಗೊತ್ತಾಗುವುದು.” —ಮತ್ತಾಯ 11:19,NW.
ಯಾರು ನ್ಯಾಯಪರರಿದ್ದಾರೋ, ಅವರು ಅವನ ಒಳ್ಳೆಯ ಕಾರ್ಯಗಳನ್ನು ಗಮನಿಸುವರು ಮತ್ತು ನೋಯಿಸುವ ಮಾತು ಆಧಾರವಿಲ್ಲದ್ದು ಎಂಬ ತೀರ್ಮಾನಕ್ಕೆ ಬರುವರು ಎಂದು ಯೇಸು ತಿಳಿದಿದ್ದನು. ತದ್ರೀತಿಯಲ್ಲಿ ನಿಮ್ಮ ನಡತೆಯು ಹರಟೆಯ ವಿರುದ್ಧವಾಗಿ ಉತ್ತಮ ರಕ್ಷೆಯಾಗಿರಲಿ. ನಿಮ್ಮ ನಿಜ ಮಿತ್ರರು ನಿಮ್ಮ ಕುರಿತು ಸತ್ಯವನ್ನು ತಿಳಿದಿರುವ ತನಕ, ಅವರು ವಿಲಕ್ಷಣ ಕಥೆಗಳನ್ನು ನಂಬಲಾರರು. ಆದರೂ, ನಿಮ್ಮ ಕುರಿತಾಗಿ ಒಂದು ಸುಳ್ಳು ಪ್ರಚಾರದಲ್ಲಿದೆ ಎಂಬುದನ್ನು ಅವರಿಗೆ ತಿಳಿಯುವಂತೆ ಮಾಡಸಾಧ್ಯವಿದೆ. ತಪ್ಪಾದ ವಿಷಯ ಪಡೆದ ಯಾವನನ್ನೇ ಅವರು ಕೆಲವೊಮ್ಮೆ ಭೇಟಿಯಾದಾಗ ಅವನನ್ನು ಅವರು ಸರಿಪಡಿಸುವುದರಿಂದ ಗಾಳಿಮಾತನ್ನು ಕೊನೆಗೊಳಿಸುವಂತೆ ಅವರು ಹೆಚ್ಚು ಸಹಾಯ ಮಾಡಬಲ್ಲರು.
ಒಂದು ವೇಳೆ ಕಥೆಯು ಈಗಾಗಲೇ ವಿಸ್ತಾರವಾಗಿ ಹಬ್ಬಿರುವುದಾದರೆ ಆಗೇನು? ಸಾಮಾನ್ಯವಾಗಿ ನೀವು ಯೋಚಿಸುವಷ್ಟು ಅದು ಕೆಟ್ಟದ್ದಾಗಿರಲಿಕ್ಕಿಲ್ಲ. ಅಲ್ಲದೇ, ಜನರು ಯಾವುದೇ ಸಂಗತಿಯನ್ನು ಸದಾಕಾಲ ಮಾತಾಡುವುದಿಲ್ಲ. ಬೇಗನೇ ಅಥವಾ ತಡವಾಗಿ ಗಮನಕೇಂದ್ರವಾಗಿರುವ ನಿಮ್ಮಿಂದ ಅವರು ತಮ್ಮ ದೃಷ್ಟಿಯನ್ನು ಬದಲಾಯಿಸುವಂತಹ ಘಟನೆಗಳು ಯಾವಾಗಲೂ ನಡೆಯುತ್ತಿರುತ್ತವೆ. ಆದಾಗ್ಯೂ ತನ್ಮಧ್ಯೆ ಮೌನತೆಯಿಂದ ವೇದನೆಪಡಬೇಡಿರಿ. ನಿಮ್ಮ ಭಾವನೆಗಳನ್ನು ಹೆತ್ತವರೊಂದಿಗೋ, ಇನ್ನೊಬ್ಬ ಬಲಿತವರೊಂದಿಗೋ ಯಾಕೆ ಹಂಚಿಕೊಳ್ಳಬಾರದು? ಹಲವು ಸಲ, ವಿಷಯಗಳನ್ನು ಹೊರಗೆಡಹುವುದರಿಂದ ಸಮಸ್ಯೆಯನ್ನು ಯಥಾ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಹಾಯಮಾಡುತ್ತದೆ.
ಕಲಿಯುವ ಒಂದು ಅನುಭವ
ಹರಟೆ ಮಾತಿಗೆ ಬಲಿಯಾಗುವಿಕೆಯು ಕೆಲವು ಅಮೂಲ್ಯ ಪಾಠಗಳನ್ನು ಕಲಿಯುವಂತೆ ಕೂಡಾ ಸಂದರ್ಭಗಳನ್ನು ನಿಮಗೆ ಒದಗಿಸುತ್ತದೆ. ಉದಾಹರಣೆಗೆ, ಜವಾಬ್ದಾರಿರಹಿತ ಮಾತು ಹೇಗೆ ಕೇವಲ ಕೆಡುಕನ್ನುಂಟುಮಾಡುತ್ತದೆ ಎಂದು ವೈಯಕ್ತಿಕವಾಗಿ ಅನುಭವಿಸಿದ್ದರಿಂದ, ಗಾಳಿಮಾತನ್ನು ಹರಡುವುದಕ್ಕೆ ನೀವು ಎಂದೂ ಒಂದು ಪಕ್ಷವಾಗಿರಲೇಬಾರದು ಎಂದು ಏಕೆ ನಿರ್ಧರಿಸಬಾರದು?
ಹರಟೆ ಮಾತಿಗೆ ನೀವು ಒಳಗಾದಾಗ, ನಿಮ್ಮ ವ್ಯಕ್ತಿತ್ವದಲ್ಲಿನ ಲೋಪದೋಷಗಳನ್ನು ಅಂದರೆ ಸೇಡನ್ನು ತೀರಿಸುವ ಪ್ರವೃತ್ತಿಯನ್ನು ಹೊರಗೆಡಹಬಹುದು. ಅಧವಾ ಗಾಳಿಮಾತಿಗಿಂತ ನಿಮ್ಮ ಹೆಮ್ಮೆಯು ಹೆಚ್ಚಿನ ಸಮಸ್ಯೆಯೆಂದು ಸಾಬೀತಾಗಬಹುದು. ನಿಮ್ಮ ತೋರಿಕೆಯ ಕುರಿತು ಅನಾವಶ್ಯಕ ಪರಿಗಣನೆಯು ‘ನಿಮ್ಮನ್ನು ನಿಮ್ಮ ಯೋಗ್ಯತೆಗೆ ಮೀರಿ ಭಾವಿಸಿಕೊಳ್ಳುವಂತೆ’ ಕಾರಣವಾಗಿರಬಹುದು. (ರೋಮಾಪುರ 12:3) ಈಗ ನಿಮ್ಮನ್ನು ಕೊಂಚ ಕಡಿಮೆ ಗಂಭೀರವಾಗಿ ವೀಕ್ಷಿಸಿಕೊಳ್ಳಲು ಕ್ರಿಯೆಗೈಯ್ಯಲು ಸಮಯವಾಗಿರುತ್ತದೆ.
ಹಿನ್ನೋಟದಲ್ಲಿ, ನಿಮ್ಮ ವತಿಯಿಂದ ಸರಿಯಲ್ಲದ ತೀರ್ಮಾನವು ಗಾಳಿಮಾತಿನ ಹಬ್ಬುವಿಕೆಗೆ ನೆರವಾಗಿದೆ ಎಂದು ಕೂಡಾ ನೀವು ತಿಳಿಯಬಹುದು. ಉದಾಹರಣೆಗೆ, ನೀವು, ನಿಮ್ಮ ಆಂತರಿಕ ವಿಚಾರಗಳನ್ನು “ತನ್ನ ತುಟಿಗಳನ್ನು ಅಗಲವಾಗಿ ತೆರೆಯುವುದಕ್ಕೆ” ಪ್ರಖ್ಯಾತನಾದ ತರುಣನಿಗೆ ವಿಶ್ವಾಸದಿಂದ ಹೇಳಿದ್ದೀರೋ? (ಜ್ಞಾನೋಕ್ತಿ 13:3) ಹಾಗಿದ್ದರೆ, ಪ್ರಾಯಶಃ ಇನ್ನೊಮ್ಮೆ ನಿಮ್ಮ ಆಪ್ತ ಮಿತ್ರನನ್ನು ಕೊಂಚ ಜಾಗರೂಕತೆಯಿಂದ ನೀವು ಆಯ್ಕೆಮಾಡುವಿರಿ. ಹರಟೆ ಮಾತಿಗೆ ಯಾವುದೇ ಸಾಧನವನ್ನು ಇತರರಿಗೆ ಕೊಡದೆ, ತಪ್ಪು ಮಾಡದಿರಲು ನಿಮ್ಮ ನಡತೆಯಲ್ಲಿ ನೀವು ಜಾಗರೂಕರಾಗಿರುವಿರಿ.—1 ಪೇತ್ರ 2:15 ಹೋಲಿಸಿರಿ.
ಹೌದು, ವಿಷಯಗಳನ್ನು ಶಾಂತವಾಗಿ ಮತ್ತು ದಯೆಯಿಂದ ನಿರ್ವಹಿಸಿ ಮತ್ತು ಹುಚ್ಚು ಗಾಳಿಮಾತುಗಳಿಗಿಂತಲೂ ಮೇಲೆ ನೀವು ಏರ ಸಾಧ್ಯವಿದೆ—ಮತ್ತು ಪ್ರಾಯಶಃ ಅವುಗಳನ್ನು ತಡೆಯಲೂ ಶಕ್ತರಾಗಬಹುದು. (g89 7/22)
[ಅಧ್ಯಯನ ಪ್ರಶ್ನೆಗಳು]
a “ಹರಟೆ—ಅದರಿಂದೇನು ಹಾನಿ?”—ಎಚ್ಚರ! ಪತ್ರಿಕೆಯ ಒಕ್ಟೋಬರ 8, 1990ರ ಸಂಚಿಕೆಯನ್ನು ನೋಡಿರಿ.
[ಪುಟ 23 ರಲ್ಲಿರುವಚಿತ್ರ]
ಕೆಲವೊಮ್ಮೆ ಗಾಳಿಸುದ್ದಿಯ ಮೂಲವನ್ನು ಕಂಡುಹಿಡಿಯಲು ಮತ್ತು ಚಾಡಿಕೋರನೊಂದಿಗೆ ಮುಖಾಮುಖಿ ಚರ್ಚಿಸಲು ಸಾಧ್ಯವಾಗಬಹುದು