“ಧೂಮ್ರಪಾನ ನಿಷೇಧ”ದಲ್ಲಿಯೂ ಆರೋಗ್ಯ ಹಾನಿ
ದ ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಎಸೋಸಿಯೇಷನ್(JAMA) ಫೆಬ್ರವರಿ 10, 1989ರಲ್ಲಿ ಹೇಳಿದ್ದು: “ವಿಜ್ಞಾನದ ರಾಷ್ಟ್ರೀಯ ಅಕಾಡೆಮಿ ಅನಾಸಕ್ತ ಸೇದುವಿಕೆಯ ಆಧಾರಾಂಶಗಳನ್ನು. . .ವಿಮಾನಗಳ ಪರಿಸರವನ್ನು ವಿಶೇಷವಾಗಿ ಸಂಬೋಧಿಸಿ ಪುನರ್ವಿಮರ್ಶಿಸಿತು.” ಮಾಡಿದ ಶಿಫಾರಸು. “ನಾಲ್ಕು ಮುಖ್ಯ ಕಾರಣಗಳಿಗಾಗಿ ಎಲ್ಲಾ ಸ್ವದೇಶಿ ವ್ಯಾಪಾರಿ ವಿಮಾನಗಳಲ್ಲಿ ಧೂಮ್ರಪಾನ ನಿಷೇಧಿಸಬೇಕು: ಕಡಿಮೆ ಕಿರುಕುಳಕ್ಕಾಗಿ, ಆರೋಗ್ಯಹಾನಿಯನ್ನು ಕಡಿಮೆ ಮಾಡಲಿಕ್ಕಾಗಿ, ಬೆಂಕಿಯ ಹಾವಳಿ ಕಡಿಮೆ ಮಾಡಲಿಕ್ಕಾಗಿ ಮತ್ತು ವಿಮಾನದ ಗಾಳಿಯ ಗುಣವನ್ನು ಇತರ ಮುಚ್ಚಲ್ಪಟ್ಟ ಸ್ಥಳಗಳ ಗಾಳಿಯ ಗುಣಕ್ಕೆ ಸಮಾನ ಮಾಡಲಿಕ್ಕಾಗಿ.”
ಅಕಾಡೆಮಿಯ ಆಳವಾದ ಅಧ್ಯಯನ ತಿಳಿಸಿದ್ದು: “ವಿಮಾನ ಹಾರಾಟದ ಸಮಯ ವೈಯಕ್ತಿಕ ಯಂತ್ರಗಳಿಂದ ಮಾಡಿದ ನಿಕೊಟಿನಿನ ಅಳತೆ ವಿವಿಧತೆಯನ್ನು ತೋರಿಸಿದವು. ಕೆಲವು ನಾನ್ಸ್ಮೊಕಿಂಗ್ ಕ್ಷೇತ್ರಗಳಲ್ಲಿ ನಿಕೊಟಿನ್ ಮಟ್ಟ ಸ್ಮೊಕಿಂಗ್ ಕ್ಷೇತ್ರಗಳಷ್ಟೇ ಇತ್ತು. ನಾನ್ಸ್ಮೊಕಿಂಗ್ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿದ್ದ ಸೇವಕರಿಗೆ ಹೊಗೆಯಿಂದ ರಕ್ಷಣೆ ದೊರೆಯಲಿಲ್ಲ.”
“ನಿಕೊಟಿನಿನ ಗಾಳಿಮಟ್ಟ ತೀರಾ ಅಸ್ಥಿರ. ಕೆಲವು ನಾನ್ಸ್ಮೊಕಿಂಗ್ ಕ್ಷೇತ್ರಗಳು ಸ್ಮೊಕಿಂಗ್ ಕ್ಷೇತ್ರಗಳಿಗಿಂತಲೂ ಹೆಚ್ಚು ಉನ್ನತಮಟ್ಟವನ್ನು ತೋರಿಸುತ್ತವೆ” ಎಂದು ಅಧ್ಯಯನ ತೋರಿಸುತ್ತಾ ವಾಚಕರಿಗೆ ಜ್ಞಾಪಕ ಹುಟ್ಟಿಸಿದ್ದು: “ಅನಾಸಕ್ತ ಅಥವಾ ಅನೈಚ್ಛಿಕವಾಗಿ ಹೊಗೆ ತಕ್ಕೊಳ್ಳುವವರ ಮೇಲೆ ಬರುವ ಅನಾರೋಗ್ಯದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮತ್ತು ಉಸಿರಾಟದ ರೋಗಗಳು ಸೇರಿವೆ.”
ಜಮ ಪತ್ರಿಕೆಯ ಇದೇ ಸಂಚಿಕೆ, ನಿಕೊಟಿನಿನ ಚಟಹಿಡಿಸುವ ಶಕ್ತಿಯನ್ನು ರುಜುಪಡಿಸಿದ ಒಂದು ಅಧ್ಯಯನದ ಕುರಿತು ವರದಿಮಾಡಿತು: “ಅಮಲೌಷಧವನ್ನು ಬಿಡಲು ಚಿಕಿತ್ಸೆ ತಕ್ಕೊಳ್ಳುವವರು ತಮಗೆ ಸಿಗರೇಟಿನ ಶೃದ್ಧೆ ಮತ್ತು ಅದನ್ನು ಬಿಟ್ಟುಬಿಡುವ ಕಷ್ಟವು ತಮ್ಮ ಮುಖ್ಯ ಸಮಸ್ಯೆ [ಮದ್ಯ, ಕೊಕೇನ್, ಹಿರೊಯಿನ್]ಗಳನ್ನು ಬಿಡುವ ಕಷ್ಟದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಎಂದು ನಂಬುತ್ತಾರೆ.”
1987ರಲ್ಲಿ ಕೆನಡಾ, 2 ತಾಸು ಅಥವಾ ಕಡಿಮೆ ಸಮಯದ ಪ್ರಯಾಣಗಳಲ್ಲಿ ಹೊಗೆಬತ್ತಿ ಸೇವನೆಯನ್ನು ನಿಷೇಧಿಸಿತು. ಕೆನಡಾದ ಎರಡು ದೊಡ್ಡ ವಿಮಾನ ಕಂಪೆನಿಗಳು ಇದನ್ನು ವಿಸ್ತರಿಸಿ ಉತ್ತರ ಅಮೇರಿಕದ ಎಲ್ಲಾ ಯಾನಗಳಲ್ಲಿ ಹೊಗೆಬತ್ತಿ ಸೇದುವುದನ್ನು ನಿಲ್ಲಿಸಿದವು. ಅಮೇರಿಕದಲ್ಲಿ ಫೆಡರಲ್ ನಿಯಮ ಸಮೀಪ ಹಾರಾಟಗಳಲ್ಲಿ ಸೇದುವುದನ್ನು ನಿಷೇಧಿಸಿತ್ತು, ಮತ್ತು “ಒಂದು ಅಮೇರಿಕದ ವಿಮಾನ ಕಂಪೆನಿಯು ತಾನಾಗಿಯೇ ಅಮೇರಿಕದೊಳಗೆ ನಡೆಯುವ ಎಲ್ಲಾ ಹಾರಾಟಗಳಲ್ಲಿ—ಹವಾಯಿಗೆ ಮತ್ತು ಹವಾಯಿಯಿಂದ ಬರುವ ವಿಮಾನಗಳನ್ನು ಬಿಟ್ಟು—ಸೇದುವುದನ್ನು ನಿಷೇಧಿಸಿತ್ತು.” ಇನ್ನೂ ಹೆಚ್ಚು ವಿಮಾನ ಕಂಪೆನಿಗಳು ಇಂಥ ಧೋರಣೆಗಳನ್ನು ಕೈಕೊಂಡರೆ ಹಾರಾಟದಲ್ಲಿ ಅಪಾಯವನ್ನು ಕಡಿಮೆಮಾಡಲು ಸಹಾಯ ದೊರೆಯುವುದು. (g89 7/22)