ಎಚ್ಚರ! ನೀಡಲು ಜನರಿಗೆ ನೆರವಾಗುವ ಕಾಡು
ಸ್ವೀಡನ್ನಲ್ಲಿನ ಎಚ್ಚರ! ಬಾತ್ಮೀದಾರನಿಂದ
ನಿಮ್ಮ ಕೈಯಲ್ಲಿರುವ ಎಚ್ಚರ! ಪತ್ರಿಕೆಯ ಮುದ್ರಣವು ಕಾಡೊಂದರಲ್ಲಿ ಆರಂಭಗೊಳ್ಳುವ ಒಂದು ಪರಿಷ್ಕರಣದ ಮೇಲೆ ಅಧಿಕಾಂಶ ಹೊಂದಿಕೊಂಡಿರುತ್ತದೆ. ಮರಗಳ ಕಾಂಡಗಳು ಕಾಗದದ ಕಚ್ಛಾ ಸಾಮಗ್ರಿಯನ್ನು ಒದಗಿಸುತ್ತವೆ. ಇದು ಆರಂಭವಾಗುವ ವಿಧ ಹೀಗಿರುತ್ತದೆ. ಆದರೆ ಮರವೊಂದು ಎಚ್ಚರ!ದಂತಹ ಪತ್ರಿಕೆಯೊಂದಾಗಿ ಪರಿವರ್ತನೆಗೊಳ್ಳುವದು ಹೇಗೆಂದು ನೋಡೋಣ.
ಮೊದಲ ಚಿತ್ರದಲ್ಲಿರುವ ಸಾಧನವು ಆಧುನಿಕ ಮರ ಉರುಳಿಸುವ ಯಂತ್ರವಾಗಿದೆ, ಒಂದು ಕಾರ್ಯಾಚರಣೆಯಲ್ಲಿರುವ ಸಂಸ್ಕಾರಕ. ಇದು ಕೇವಲ ಮರಗಳನ್ನು ಕತ್ತರಿಸುವದು ಮಾತ್ರವಲ್ಲ, ಬದಲು ಅದು ಕೊಂಬೆಗಳನ್ನು ಕೂಡಾ ತೆಗೆಯುತ್ತದೆ. ಅಲ್ಲದೇ, ಅದು ಬೇಕಾದ ಅಳತೆಯ ಉದ್ದದ ಮರದ ತುಂಡುಗಳನ್ನು ಕತ್ತರಿಸುತ್ತದೆ. ಈ ಮರದ ತೊಲೆಗಳನ್ನು ಲಾರಿಗಳ ಇಲ್ಲವೇ ರೈಲುಗಳ ಮೂಲಕ ಕಾಗದದ ಯಂತ್ರಾಗಾರಕ್ಕೆ ತರಲಾಗುತ್ತದೆ. ಪೂರ್ಣವಾಗಿ ತುಂಬಿದ ಟ್ರಕ್ ಒಂದು ಸಾರಿ 20 ಟನ್ನುಗಳಷ್ಟನ್ನು ತರುತ್ತದೆ. ಈ ಲೇಖನಕ್ಕಾಗಿ ಎಚ್ಚರ! ಭೇಟಿ ಮಾಡಿದ ಕಾಗದದ ಯಂತ್ರಾಗಾರದಲ್ಲಿ, ಇಡೀ ದಿನ ಪ್ರತಿ 15 ನಿಮಿಶಗಳಿಗೊಮ್ಮೆ ಮರದ ತೊಲೆಗಳ ಒಂದು ಸರಬರಾಜು ನಡೆಯುತ್ತದೆ. 19ನೆಯ ಪುಟದಲ್ಲಿರುವ ಕೊನೆಯ ಚಿತ್ರದಲ್ಲಿ ನೋಡಬಹುದಾದ, ಬೃಹತ್ಗಾತ್ರದ ಯಾಂತ್ರಿಕ ಉಗುರುಗಳಂಥ ಕೊಕ್ಕೆಗಳಿಂದ ಒಂದು ಇಡೀ ವಿಭಾಗವನ್ನೇ ಒಂದೇ ಸಾರಿ ಕೆಳಗಿಳಿಸಬಹುದು.
ಎಚ್ಚರ!ದ ಕೇವಲ ಒಂದು ಸಂಚಿಕೆಯ ಪ್ರತಿಗಳನ್ನು ಮಾಡಲು ಅಂತಹ ಅನೇಕ ಮರಗಳು ಬೇಕಾಗುತ್ತವೆ. ಪ್ರತಿ ವರ್ಷ ಅಷ್ಟೊಂದು ಕಾಗದವು ಬೇಕಾಗುವದರಿಂದ, ಹಲವಾರು ಮರಗಳನ್ನು ಕಡಿಯಬೇಕಾಗುತ್ತದೆ. ಆದಾಗ್ಯೂ, ಸ್ವೀಡನ್ನಲ್ಲಿ ಇದು ಬಹಳ ಜಾಗರೂಕತೆಯಿಂದ ನಿಯಂತ್ರಣಕ್ಕೊಳಪಟ್ಟ ಒಂದು ಪರಿಷ್ಕರಣೆಯಾಗಿರುತ್ತದೆ. ಕಡಿಯಲ್ಪಡುವ ಪ್ರದೇಶಕ್ಕೆ ಸರಿಸಮಾನವಾಗಿರುವ ಪ್ರದೇಶದಲ್ಲಿ ಮರಗಳು ಪುನಃ ನೆಡಲ್ಪಟ್ಟಲ್ಲಿ ಮಾತ್ರ ಅಧಿಕಾರಿಗಳು ಮರ ಉರುಳಿಸಲು ಪರವಾನಗಿ ಕೊಡುತ್ತಾರೆ. ಈ ರೀತಿ ಸ್ವೀಡನ್ನಲ್ಲಿನ ಕಾಡುಗಳು ಪುನಃ ಭರ್ತಿ ಮಾಡಲ್ಪಡುತ್ತವೆ.
ಪುಟ 19ರಲ್ಲಿರುವ ರೇಖಾಕೃತಿಯು ಕಾಗದದ ಯಂತ್ರದೊಳಗಿನ ಸಂಸ್ಕರಣವನ್ನು ತೋರಿಸುತ್ತದೆ. ರುಬ್ಬಿದ ತಿರುಳು ಒಂದು ಪಕ್ಕದಿಂದ ಕೊಡಲಾಗುತ್ತದೆ ಮತ್ತು ಇನ್ನೊಂದು ಪಕ್ಕದಿಂದ ಕಾಗದವು ಹೊರಗೆ ಬರುತ್ತದೆ. ಆದರೆ ರುಬ್ಬಿದ ತಿರುಳು ಹೇಗೆ ಉತ್ಪಾದಿಸಲ್ಪಡುತ್ತದೆ?
ಮೊದಲು, ಮರವು ಬೇಕಾದ ಉದ್ದಕ್ಕೆ ಸರಿಯಾಗಿ ಕತ್ತರಿಸಲ್ಪಡುತ್ತದೆ, ಮತ್ತು ಬೃಹತ್ತಾದ ವರ್ತುಲಾಕಾರವಾಗಿ ತೊಗಟೆಗಳನ್ನು ತೆಗೆಯಲಾಗುತ್ತದೆ. ಅನಂತರ ಮರವನ್ನು ಅದರ ದಪ್ಪ ಮತ್ತು ಉದ್ದಕ್ಕನುಸಾರ ಸ್ವಯಂ-ಚಾಲಿತವಾಗಿ ವಿಂಗಡಿಸಲಾಗುತ್ತದೆ. ನಿರ್ದಿಷ್ಟ ಮಟ್ಟವನ್ನು ಮುಟ್ಟುವ ಮರಗಳನ್ನು ಅರೆಯುವ ಯಂತ್ರಗಳ (ಗ್ರೈಂಡರ್) ಮೂಲಕ ಮರಪುಡಿಯ ರುಬ್ಬಿದ ತಿರುಳು (ಗ್ರೌಂಡ್ವುಡ್ ಪಲ್ಪ್) ಆಗಿ ಬದಲಾಯಿಸಲ್ಪಡುತ್ತದೆ. ಈ ರುಬ್ಬಿದ ತಿರುಳು ಈ ಯಂತ್ರಾಗಾರದಲ್ಲಿ ಕಾಗದ ತಯಾರಿಸಲ್ಪಡುವಾಗ ಉಪಯೋಗಿಸಲ್ಪಡುವ ನಾಲ್ಕು ವಿಧಗಳಲ್ಲಿ ಒಂದಾಗಿದೆ. ಉಳಿದಿರುವ ತೊಲೆಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಉಷ್ಣಯಾಂತ್ರಿಕ ತಿರುಳು (ಥರ್ಮೊಮೆಕ್ಯಾನಿಕಲ್ ಪಲ್ಪ್) ಮತ್ತು ಸಲ್ಫೂರಸ್ ಆಮ್ಲ ಲವಣದ ತಿರುಳು (ಸಲ್ಫೈಟ್ ಪಲ್ಪ್) ಆಗಿ ಬಳಸಲ್ಪಡುತ್ತದೆ. ನಾಲ್ಕನೆಯ ವಿಧದ ರುಬ್ಬಿದ ತಿರುಳು, ಪುನಃ ಉಪಯೋಗಿಸಲ್ಪಡುವ ಕಾಗದದಿಂದ ಬರುತ್ತದೆ.
ಬಹಳ ಒತ್ತಡದ ಕೆಳಗೆ ಮತ್ತು ದೊಡ್ಡ ಅರೆಯುವ ಕಲ್ಲುಗಳ ನಡುವೆ ಮರದ ತೊಲೆಗಳನ್ನು ನೀರಿನೊಂದಿಗೆ ಅರೆಯುವುದರಿಂದ, ಮರಪುಡಿಯ ರುಬ್ಬಿದ ತಿರುಳು ಉತ್ಪಾದಿಸಲ್ಪಡುತ್ತದೆ. ಇದರ ಪರಿಣಾಮ ಒಂದು ಯಾಂತ್ರಿಕೃತವಾಗಿ ಉತ್ಪಾದಿಸಿದ ತಿರುಳು ಆಗಿರುತ್ತದೆ.
ಉನ್ನತ ಮಟ್ಟದ ಒತ್ತಡ ಮತ್ತು ತಾಪದ ಕೆಳಗೆ ಮರದ ಚಕ್ಕೆಗಳನ್ನು ನಾಜೂಕುಗೊಳಿಸುವದರ ಮೂಲಕ ನಾರುದಾರವು ಒಂದು ಇನ್ನೊಂದರಿಂದ ಪ್ರತ್ಯೇಕಿಸಲ್ಪಡುವುದರಿಂದ ಉಷ್ಣಯಾಂತ್ರಿಕ ತಿರುಳು ಉತ್ಪಾದಿಸಲ್ಪಡುತ್ತದೆ. ಇದು ಯಾಂತ್ರಿಕೃತ ಸಂಸ್ಕರಣದಿಂದಾಗುವದಕ್ಕಿಂತಲೂ ಉದ್ದವಾದ ಮತ್ತು ದೃಢವಾದ ಎಳೆಗಳನ್ನು ಕೊಡುತ್ತದೆ.
ಸಲ್ಫೂರಸ್ ಆಮ್ಲ ಲವಣದ (ಸಲ್ಫೈಟ್) ತಿರುಳು ರಾಸಾಯನಿಕವಾಗಿ ಉತ್ಪಾದಿಸಲ್ಪಡುತ್ತದೆ. ವಿಭಜಿಸಲ್ಪಟ್ಟ ಮರದ ಚಕ್ಕೆಗಳನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ, ಮಾಗ್ನೇಸಿಯಂ ಬೈ-ಸಲ್ಫೈಟ್ನಲ್ಲಿ ಕುದಿಸುವುದರ ಮೂಲಕ ಇದು ತಯಾರಿಸಲ್ಪಡುತ್ತದೆ, ಒಂದು ಪ್ರೆಷರ್ ಕುಕರ್ನಲ್ಲಿ ಬೇಯಿಸಿದಂತೆ. ಇದು ಮೊದಲ ಮೂರು ತಿರುಳುಗಳ ವಿಧಗಳಲ್ಲಿ ಅತಿ ಗಟ್ಟಿಯಾದ ತಿರುಳನ್ನು ಉತ್ಪಾದಿಸುತ್ತದೆ.
ನಾಲ್ಕನೆಯ ವಿಧ. ಪುನಃ ಉಪಯೋಗಿಸಲ್ಪಡುವ ಕಾಗದದಿಂದ ಬರುವ ತಿರುಳು, ಕಾಗದವನ್ನು ಒಮ್ಮೆ ಬಳಸಿ ಅದನ್ನು ಪುನಃ ತಿರುಳಾಗಿ ಪರಿವರ್ತಿಸಿ, ಅದನ್ನು ಶಾಯಿ ಮತ್ತು ಅಂಟು ಮುಂತಾದವುಗಳಿಂದ ಶುದ್ಧೀಕರಿಸಲ್ಪಟ್ಟದ್ದಾಗಿರುತ್ತದೆ.
ಕೊನೆಗೆ, ಸುತ್ತುಗ(ವೈಂಡರ್)ದ ಮೇಲೆ, ಗಿರಾಕಿಗಳ ನಿರ್ದಿಷ್ಟ ಆವಶ್ಯಕತೆಗನುಸಾರ ಕಾಗದದ ದೊಡ್ಡ ಉರುಳೆಗಳು ಕತ್ತರಿಸಲ್ಪಟ್ಟು ಕಟ್ಟು ಮಾಡಲ್ಪಡುತ್ತವೆ. ಪೂರ್ಣಗೊಂಡ ಉರುಳೆಗಳು ಹೋಗುವ ಸ್ಥಳಕ್ಕನುಸಾರ ವಿಂಗಡಿಸಲ್ಪಟ್ಟು, ಟ್ರಕ್, ರೈಲು ಇಲ್ಲವೇ ಹಡಗುಗಳ ಮೂಲಕ ಗಿರಾಕಿಗಳಿಗೆ ಕಳುಹಿಸಲ್ಪಡುತ್ತವೆ.
ಈಗ ಕಾಗದವು ಅರ್ಬೊಗದಲ್ಲಿನ ಮುದ್ರಣಾಲಯಕ್ಕೆ ತಲುಪಿದೆ. ಇಲ್ಲಿ ಉರುಳೆಯು ಒಂದು ಯಂತ್ರಕ್ಕೆ ಕೊಡಲಾಗುತ್ತದೆ, ಅದು ಸ್ವೀಡನ್ನ ಹೊಸ ಪೂರ್ಣ ವರ್ಣದ ಹಾಳೆಒದಗಣೆಯ ಮುದ್ರಣಯಂತ್ರಕ್ಕೆ ಬೇಕಾದ ತಕ್ಕ ಆಕಾರದಲ್ಲಿ ಕಾಗದವನ್ನು ಕತ್ತರಿಸುತ್ತದೆ. ಈ ಹೊಸ ಮುದ್ರಣ ಯಂತ್ರವು ಗಂಟೆಯೊಂದಕ್ಕೆ 15,000 ಅಚ್ಚುಗಳನ್ನು ಮುದ್ರಿಸುವ ಸಾಮರ್ಥ್ಯ ಹೊಂದಿರುತ್ತದೆ.
ಸ್ವೀಡನ್ ಮತ್ತು ವಿದೇಶಗಳಲ್ಲಿರುವ ಚಂದಾದಾರರಿಗೆ ಪ್ರತಿಯೊಂದು ಸಂಚಿಕೆಯನ್ನು ಕಳುಹಿಸಲಾಗುತ್ತದೆ. ಇದಲ್ಲದೆ, ದೇಶದಲ್ಲೆಡೆ ಇರುವ ಯೆಹೋವನ ಸಾಕ್ಷಿಗಳ ನೂರಾರು ಸಭೆಗಳಿಗೆ ಸಾರ್ವಜನಿಕ ವಿತರಣೆಗಾಗಿ ಪ್ರತಿಗಳ ಮೂಟೆಗಳು (ಬಂಡಲ್ಸ್) ಕಳುಹಿಸಲ್ಪಡುತ್ತವೆ. ಈ ಮೂಟೆಗಳಿಂದ ಸಾವಿರಾರು ಪ್ರತಿಗಳನ್ನು ಯೆಹೋವನ ಸಾಕ್ಷಿಗಳು ಜನರ ಮನೇಬಾಗಲಿಗೆ ಸಂದರ್ಶನ ನೀಡಿದಾಗ ಇಲ್ಲವೇ ಜನರನ್ನು ಬೇರೆಡೆಗಳಲ್ಲಿ ಭೇಟಿಯಾದಾಗ ನೀಡುತ್ತಾರೆ.
ಹೌದು, ಕಾಡಿನಲ್ಲಿದ್ದ ಆ ಮರದ ಕಾಂಡವು ಅದರ ಕೊನೆಯ ಸ್ಥಾನವನ್ನು ತಲುಪಿದೆ—ಎಚ್ಚರ! ಪತ್ರಿಕೆ. ದಯಮಾಡಿ ಗಮನಿಸಿರಿ, ಬೈಬಲಿನ ಪ್ರವಾದನೆಯ ಬೆಳಕಿನಲ್ಲಿ ಲೋಕದ ಘಟನೆಗಳ ಅರ್ಥವನ್ನು ವಾಚಕರಿಗೆ ತಿಳಿಸಲಿಕ್ಕಾಗಿ ಮತ್ತು ಎಚ್ಚರಿಸಲಿಕ್ಕಾಗಿ ಎಚ್ಚರ!ದಲ್ಲಿ ಲೇಖನಗಳು ಒಳಗೂಡಿರುತ್ತವೆ. ಈ ರೀತಿಯಲ್ಲಿ ಮಾನವನ ನಿರ್ಮಾಣಿಕನ ಕುರಿತಾಗಿ ಮತ್ತು ನಮ್ಮ ದಿನಗಳಿಗಾಗಿ ಅವನ ಉದ್ದೇಶವನ್ನು ಕಲಿಯಲಿಕ್ಕಾಗಿ ಅದು ವಾಚಕರಿಗೆ ನೆರವಾಗುತ್ತದೆ. ಅಂತಹ ಜ್ಞಾನವು, ನಮ್ಮ ದಿನಗಳಲ್ಲಿ ಏನು ಸಂಭವಿಸುವುದರ ಅರ್ಥವನ್ನು ತಿಳಿಯಲು ಮತ್ತು ಒಂದು ಉತ್ತಮ ಭವಿಷ್ಯಕ್ಕಾಗಿ ದೃಢವಾದ ನಿರೀಕ್ಷೆಯನ್ನು ಕಟ್ಟಲು ನಿಮಗದು ಸಹಾಯ ಮಾಡುತ್ತದೆ. (g90 2/8)
[ಪುಟ 25 ರಲ್ಲಿರುವ ಚೌಕ/ಚಿತ್ರಗಳು]
ಕಾಗದ ಯಂತ್ರ
ಎ. ಕಾಗದ ಯಂತ್ರಕ್ಕೆ ತಲುಪುವ ತಿರುಳು ತೆಳುವಾದ ಗಂಜಿಯಂತೆ ಇರುತ್ತದೆ ಮತ್ತು ಹಲವಾರು ಗಜ ಅಗಲದ ತಂತಿಜಾಲರಿ ಸಾಗಣೆ ಪಟ್ಟಿಯ ಮೇಲೆ ಒಂದು ಪದರದೋಪಾದಿ ಹರಡಲ್ಪಟ್ಟಿರುತ್ತದೆ. ಈ ಬಿಂದುವಿನಲ್ಲಿ ತಿರುಳುನಲ್ಲಿ ಸುಮಾರು 99 ಶೇಕಡ ನೀರು ಇರುತ್ತದೆ. ಸುಮಾರು 230 ಅಡಿ ಉದ್ದವಿರುವ ಈ ಯಂತ್ರದ ಮೇಲಿನ ಪ್ರಯಾಣದಲ್ಲಿ ಇದರ ಅಧಿಕಾಂಶ ನೀರು ತೆಗೆಯಲ್ಪಡುತ್ತದೆ.
ಬಿ. ಒತ್ತುವಿಕೆಯ ವಿಭಾಗದಲ್ಲಿ ಸುಮಾರು 60 ಶೇಕಡ ನೀರು ಕಡಿಮೆಗೊಳಿಸಲ್ಪಡುತ್ತದೆ. ಯಾಂತ್ರಿಕೃತವಾಗಿ, ಕೆಲವೊಮ್ಮೆ ನಿರ್ವಾತ ಹೀರುಗೊಳವೆಯಿಂದ, ನೀರನ್ನು ಒತ್ತಲಾಗುತ್ತದೆ.
ಸಿ. ಒಣಗಿಸುವ ವಿಭಾಗದಲ್ಲಿ, ಕಾಗದದ ಹಾಳೆಗಳನ್ನು ಉಗಿ-ಶಾಖದ ಉರುಳೆಗಳ (ಸಿಲಿಂಡರ್ಸ್) ಮೂಲಕ ಒಣಗಿಸಲಾಗುತ್ತದೆ.
ಡಿ. ಮೆರಗುಗೊಳಿಸುವಿಕೆಯು (ಪೊಲಿಶಿಂಗ್) ಕಾಗದವನ್ನು ನಯಗೊಳಿಸುತ್ತದೆ, ಮತ್ತು ಇದನ್ನು ಉರುಳೆಗಳ ನಡುವೆ ಕಾಗದವು ದಾಟಿ ಹೋಗುವಂತೆ ಮಾಡುವದರಿಂದ ನಡಿಸಲಾಗುತ್ತದೆ. ಉರುಳೆಗಳಾಗಿ ಕೊನೆಗೆ ಸುತ್ತಲ್ಪಡುವಾಗ ಕಾಗದದಲ್ಲಿ ಕೇವಲ 5 ಶೇಕಡ ಮಾತ್ರ ನೀರು ಉಳಿದಿರುತ್ತದೆ.
[ಚಿತ್ರ] (For fully formatted text, see publication)
ತಲೇ ಪೆಟ್ಟಿಗೆ ತಂತಿ ವಿಭಾಗ ಒದ್ದೆ ಕೊನೆ ಒತ್ತುವಿಕೆ ವಿಭಾಗ ಒಣಗಿಸುವಿಕೆ ವಿಭಾಗ
ಗಾಜುಮೈಕೊಡುವಿಕೆ ಸುತ್ತುವಿಕೆ
[ಪುಟ 26 ರಲ್ಲಿರುವಚಿತ್ರ]
ಅರ್ಬೊಗಾ, ಸ್ವೀಡನ್ನ ಶಾಖೆಯು
ಕಾಗದದ ಉರುಳೆಗಳು ಶೇಖರಿಸಲ್ಪಟ್ಟಿವೆ