ಏಯ್ಡ್ಸ್ನಿಂದ ಅಪಾಯಸೂಚನೆ ಇಲ್ಲದೆಹೋದದ್ದು
ಅಕ್ಟೋಬರ 3, 1984ರ ಸಂಜೆ, ಕೈಲ್ ಬಾರ್ಕ್ ಎಂಬ ಮಗು ಏಳು ವಾರಗಳ ಮುಂಚೆ ಅಪಕ್ವವಾಗಿ ಜನಿಸಿತು. ಅವನ ಅತಿಚಿಕ್ಕ ಶ್ವಾಸಕೋಶ ಯೋಗ್ಯ ಕೆಲಸಕ್ಕೆ ಅಪಕ್ವವಾಗಿದ್ದುದರಿಂದ ಅವನನ್ನು 35 ಮೈಲು ದೂರ, ಆರೆಂಜ್ ಕೌಂಟಿಯ ಮಕ್ಕಳಾಸ್ಪತ್ರೆಗೆ ಕಳುಹಿಸಲಾಯಿತು. ಇಲ್ಲಿ ಇಂಥ ತೀರಾ ಅಸೌಖ್ಯದ ಶಿಶುಗಳ ಆರೈಕೆಗೆ ಬೇಕಾದ ಉಪಕರಣಗಳಿವೆ.
ಅಲ್ಲಿ ಡಾಕ್ಟರರು, ಕೈಲ್ನ ರಕ್ತ, ರಕ್ತಪೂರಣದ ಮೂಲಕ ಭರ್ತಿಮಾಡಲ್ಪಡಬೇಕು, ಇಲ್ಲವೆ ಮಗು ಅಧಿಕಾಂಶ ಸಾಯುವ ಸಂದರ್ಭವಿದೆ ಎಂದು ಹೇಳಿದರು. ಇದು ಹೆತ್ತವರಿಗೆ ಪೇಚಾಟದ ಪರಿಸ್ಥಿತಿಯಾಗಿದ್ದರೂ ರಕ್ತಪೂರಣಕ್ಕೆ ಅನುಮತಿಸುವ ವಿಷಯದಲ್ಲಿ ತಮ್ಮ ಬೈಬಲಾಧರಿತ ನಿರ್ಧಾರದ ಕುರಿತು ಅವರು ಸ್ಥಿರನಿಂತರು. (ಆದಿಕಾಂಡ 9:4, 5: ಯಾಜಕಕಾಂಡ 17:10-14; ಅಪೊಸ್ತಲರ ಕೃತ್ಯಗಳು 15:28, 29) ಡಾಕ್ಟರರು ನಮ್ಮ ಸ್ಥಾನವನ್ನು ಗಣ್ಯಮಾಡಿ, ಸಹಕರಿಸಿದರೂ, ತೀರಾ ಕಠಿಣ ಪರಿಸ್ಥಿತಿ ಬರುವಲ್ಲಿ, ಕೋರ್ಟಿನ ಅಪ್ಪಣೆ ಪಡೆದು ರಕ್ತಕೊಡುತ್ತೇನೆಂದು ಹೇಳಿದರು.
ಗಮನಾರ್ಹವಾಗಿ ಕೈಲ್, ಒಂದೇ ಸವನೆ ಪ್ರಗತಿ ತೋರಿಸಲಾಗಿ, ಒಂಭತ್ತನೆಯ ದಿನದೊಳಗೆ ಅವನನ್ನು ಶ್ವಾಸಶೋಧಕದಿಂದ ತೆಗೆಯಲಾಯಿತು. ಎರಡು ದಿನಗಳ ಬಳಿಕ, ಹೆತ್ತವರು ಅವನನ್ನು ಮನೆಗೆ ಕೊಂಡೊಯ್ಯಲಾಗಿ, ಕೈಲ್, ನೀವು ಈ ಚಿತ್ರದಲ್ಲಿ ನೋಡುವಂತೆ, ಹರ್ಷಚಿತ್ತನಾದ, ಆರೋಗ್ಯವಂತ ಮಗುವಾಗಿ ಬೆಳೆದನು. ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ.
1989ರಲ್ಲಿ, ಲಾಸ್ಆ್ಯಂಜಲಿಸ್ನ ಟೀವೀ ಪ್ರಸಾರವೊಂದರಲ್ಲಿ, ಕೈಲ್ ಆಸ್ಪತ್ರೆಯಲ್ಲಿದ್ದ ಸಮಯ, ಆರೆಂಜ್ ಕೌಂಟಿಯ ಮಕ್ಕಳಾಸ್ಪತ್ರೆಯಲ್ಲಿದ್ದ ಅನೇಕ ಮಕ್ಕಳು ಮಲಿನ ರಕ್ತಪೂರಣದ ಕಾರಣ ಏಯ್ಡ್ಸ್ ಪೀಡಿತರಾಗಿದ್ದಾರೆಂದು ತಿಳಿಸಲಾಯಿತು. ಏಯ್ಡ್ಸ್ ಸೂಕ್ಷ್ಮ ರೋಗಾಣುವಿನ ಪರೀಕೆಗ್ಷಾಗಿ ಸುಮಾರು 3,000 ಮಕ್ಕಳ ಕುಟುಂಬಗಳನ್ನು ಸಂಪರ್ಕಿಸಲು ಆಸ್ಪತ್ರೆ ಪ್ರಯತ್ನಿಸುತ್ತಿತ್ತು.
ಒಡನೆ, ಕೈಲ್ನ ಹೆತ್ತವರು ತಮ್ಮ ಮಗುವಿಗೆ ತಮಗೆ ಗೊತ್ತಿಲ್ಲದಂತೆ ರಕ್ತಪೂರಣ ಮಾಡಲಾಗಿದೆಯೇ ಎಂದು ಗೊತ್ತುಮಾಡಲು ಆಸ್ಪತ್ರೆಯನ್ನು ಕರೆದರು. ಸ್ವಲ್ಪದರಲ್ಲಿ, ಆಸ್ಪತ್ರೆ ಅವರನ್ನು ಕರೆದು, ಅವನಿಗೆ ರಕ್ತ ಕೊಡಲಾಗಿಲ್ಲವೆಂದೂ, ಏಯ್ಡ್ಸ್ ಅಂಟುವ ಅಪಾಯವಿಲವ್ಲೆಂದೂ ಹೇಳಿತು. ಹೆತ್ತವರು ವಿವರಿಸಿದ್ದು: “ನಾವು ಪದಶಃ ಮೊಣಕಾಲೂರಿ ಯೆಹೋವನಿಗೆ ಉಪಕಾರ ಹೇಳಿದೆವು. ಆತನು ನಮಗೆ ತನ್ನ ನೀತಿಯ ನಿಯಮವನ್ನು ಕೊಟ್ಟದ್ದಕ್ಕಾಗಿಯೂ ಮತ್ತು ಇಂಥ ಪರೀಕ್ಷೆಯ ಎದುರಿನಲ್ಲಿ ಸಮಗ್ರತೆ ಕಾಪಾಡಲು ಶಕ್ತಿ ಕೊಟ್ಟದ್ದಕ್ಕಾಗಿಯೂ ಉಪಕಾರ ಹೇಳಿದೆವು.”