ಉಲ್ಲಾಸಕರ ಹಾಡಿನ ಕೆಂಬಣ್ಣದ ಮೋಹಿನಿ
ಉಲ್ಲಾಸಕರ ಹಾಡಿನ ಕೆಂಪು ಬೆಡಗುಗಾತಿಯಿಂದ ಎಂದಾದರೂ ಎಚ್ಚರಿಸಲ್ಪಟ್ಟಿದ್ದರೋ? ನೀವು ಉತ್ತರ ಅಮೆರಿಕದಲ್ಲಿ ಜೀವಿಸುವುದಾದರೆ, ನಿಮ್ಮ ನಿದ್ರಾವಸ್ಥೆಯಿಂದ ಅತಿ ಜನಪ್ರಿಯ ಹಾಡುಹಕ್ಕಿಯ ಕಾರಣ ನೀವು ಹೊರಬರುವಿರಿ, ಇದು—ಕೆಂಬಣ್ಣದ ಸಣ್ಣ ಹಕ್ಕಿ—ತನ್ನ ಗೂಡನ್ನು ಜಗತ್ತಿನ ಈ ಭಾಗದಲ್ಲಿ ಕಟ್ಟುತ್ತದೆ. ಗಂಡು ಕೆಂಬಣ್ಣದ ಹಕ್ಕಿ ತನ್ನ ಕಾರ್ಯಕ್ಷೇತ್ರವನ್ನು ಒಂದು ಸ್ಪಷ್ಟ ಸಿಳ್ಳು ಹಾಕುವುದರಿಂದ ಪ್ರಕಟಿಸುತ್ತದೆ. ಮತ್ತು ಅವನು ಒಬ್ಬ ನಿರಂತರ ಮತ್ತು ಕಾರ್ಯಸಿದ್ಧಿಯ ಹಾಡುಗಾರನಾಗಿದ್ದಾನೆ. “ಒಂದು ಕೆಂಬಣ್ಣದ ಸಣ್ಣ ಗಂಡು ಹಕ್ಕಿಯು ಸ್ವತಂತ್ರ ಪದಗಳ ಭಿನ್ನ ಭಿನ್ನವಾದ ಸಂಯೋಜನೆಯಿಂದ 28 ಹಾಡುಗಳನ್ನು ದಾಖಲೆ ಮಾಡಿದೆ,”ಎಂದು ದ ಇಂಟರ್ನ್ಯಾಶನಲ್ ವೈಲ್ಲ್ಡೈಫ್ ಎನ್ಸೈಕ್ಲೊಪೀಡಿಯ ಹೇಳುತ್ತದೆ.
ಈ ಸುಂದರವಾದ ಹಕ್ಕಿಯು ಸುಮಾರು ಎಂಟು ಇಂಚು ಉದ್ದವಿದ್ದು, ಬೆಳಗುವ ಕೆಂಪು ಗರಿಗಳನ್ನು ಹೊಂದಿದ್ದು, ಅದರ ಕೊಕ್ಕಿನ ಸುತ್ತಲೂ ವಿಶಿಷ್ಟವಾದ ಕಪ್ಪು “ಪಟ್ಟಿ” ಇದೆ. ಆದಾಗ್ಯೂ, ಹೆಣ್ಣು ಹಕ್ಕಿಯು ಮಸಕು ಕಂದು ಬಣ್ಣದ ಗರಿಗಳ ಒಂದು ಹೊದಿಕೆಯನ್ನು ಧರಿಸಿರುತ್ತದೆ. ಇವಳು ಹಾಡುವ ಹೆಣ್ಣು ಹಕ್ಕಿಗಳಿರುವ ಕೇವಲ ಕೆಲವೇ ಜೀವಜಾತಿಗಳಲ್ಲಿ ಒಂದಕ್ಕೆ ಸೇರಿರುತ್ತಾಳೆ.
ನೀವೆಲ್ಲಿ ಜೀವಿಸಿದರೂ, ಇನ್ಮೊಮ್ಮೆ ಹಕ್ಕಿಯೊಂದರ ಓಲಿಸುವ ಧಾಟಿಯನ್ನು ನೀವು ಆಲಿಸುವ ಸಮಯದಲ್ಲಿ, ನಿಮ್ಮ ಸ್ವರ್ಗೀಯ ನಿರ್ಮಾಣಿಕನಿಗೆ ಅಥವಾ ಅವನ ಗಮನಾರ್ಹವಾದ ವಿವೇಕ ಮತ್ತು ಸಾಮರ್ಥ್ಯಕ್ಕಾಗಿ ಉಪಕಾರ ಹೇಳಿರಿ. ಹಾಡುಹಕ್ಕಿಗಳು ಬಣ್ಣ ಮತ್ತು ಉಲ್ಲಾಸದ ಅವನ ಕೊಡುಗೆಗಳಲ್ಲಿ ಒಂದಾಗಿವೆ.—ಕೀರ್ತನೆ 148:7-10.